ದೈನಂದಿನ ಅಪರಾದ ವರದಿ.
ದಿನಾಂಕ 16.09.2014 ರ 14:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 2 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 0 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ಶ್ರೀಮತಿ ವಿನಯಾ ರವರ ಗಂಡ ರಮೇಶ್ (38) ರವರು ಐದು ವರ್ಷಗಳ ಹಿಂದೆ, ಮದುವೆಯಾಗಿದ್ದು ಮೂರುವರೇ ವರ್ಷದ ಗಂಡು ಮಗು ಯಜ್ಷೇಶ್ ನೊಂದಿಗೆ ಒಳ್ಳೆಯ ರೀತಿಯಿಂದ ಸಂಸಾರ ಸಾಗಿಸುತ್ತಿದ್ದು ಪ್ರಸ್ತುತ ಎರಡು ವರ್ಷಗಳಿಂದ ಕೆಲಸಕ್ಕೆ ಹೋಗದೇ ಮನೆಗೆ ಬೇಕಾಗುವ ಸಾಮಾಗ್ರಿಗಳನ್ನು ತಂದು ಹಾಕದೇ ಇದ್ದು 15 ದಿವಸಕ್ಕೊಮ್ಮೆ ಅವರ ಅಕ್ಕನ ಮನೆ ಗೋಣಿಕೊಪ್ಪಕ್ಕೆ ಹೋಗಿಬರುತ್ತಿದ್ದು ಎರಡು ತಿಂಗಳ ಹಿಂದೆ ಗೋಣಿಕೊಪ್ಪಕ್ಕೆ ಹೋದವರು ದಿನಾಂಕ 03-08-2014 ರಂದು ಅವರ ಅಕ್ಕನ ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ ಇದ್ದು ಈವರೆಗೆ ಮನೆಗೆ ಬಂದಿರುವುದಿಲ್ಲ .
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 15-09-2014 ರಂದು ರಾತ್ರಿ 8-45 ಗಂಟೆಗೆ ಫಿರ್ಯಾದುದಾರರಾದ ಶೋಬಿತಾ ನಾಯ್ಕ್ ರವರು ಕಾಪಿಕಾಡ್ ಡಾಕ್ಟರ್ ಕ್ಲೀನಿಕ್ನಿಂದ ಅವರ ಮನೆ ಕಡೆ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಬಂದ ಮೋಟಾರು ಸೈಕಲಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಫಿರ್ಯಾದುದಾರರ ಬಳಿ ತಲುಪಿದಾಗ ಮೋಟಾರು ಸೈಕಲನ್ನು ಮೆಲ್ಲನೆ ಮಾಡಿದ್ದು ಹಿಂದುಗಡೆ ಕುಳಿತ ವ್ಯಕ್ತಿಯು ಫಿರ್ಯಾದುದಾರರ ಕೈಯಲ್ಲಿದ್ದ ಪರ್ಸ್ ನ್ನು ಕಸಿದುಕೊಂಡು ಮೋಟಾರು ಸೈಕಲಿನ ಲೈಟನ್ನು ಆರಿಸಿ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಕಡೆಗೆ ಪರಾರಿಯಾಗಿರುತ್ತಾರೆ. ಪರ್ಸ್ನಲ್ಲಿ ಸುಮಾರು ರೂ. 200/- ನಗದು ಹಣ, ಡ್ರೈವಿಂಗ್ ಲೈಸನ್ಸ್ ಹಾಗೂ ಎಸ್.ಬಿ.ಎಂ ಬ್ಯಾಂಕಿನ ಎ.ಟಿ.ಎಂ ಕಾರ್ಡ್ ಇರುವುದಾಗಿದೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಫಿರ್ಯಾದುದಾರರಾದ ಶ್ರೀ ಚರಣ್ ರವರು ದಿನಾಂಕ 14-09-2014 ರಂದು ಬೆಳಿಗ್ಗೆ ತನ್ನ ಸ್ನೇಹಿತರಾದ ಪ್ರಸನ್ನ, ಅವಿನಾಶ್, ಪ್ರಶಾಂತ್, ರಾಜು @ ಜಪಾನ್ ರವರೊಂದಿಗೆ ಕಾರ್ಯಕ್ರಮದ ನಿಮಿತ್ತ ಕಾರಿನಲ್ಲಿ ಮಂಗಳೂರಿಗೆ ಹೋಗಿ ಸಂಜೆ ವಾಪಾಸು ತಮ್ಮ ಮನೆಯ ಕಡೆಗೆ ಬರುತ್ತಾ ಸಂಜೆ 4-00 ಗಂಟೆಗೆ ಮರಕಡ ಜಂಕ್ಷನ್ ತಲುಪಿ ಅಲ್ಲಿ ರಾಜು @ ಜಪಾನ್, ಅವಿನಾಶ್ ಎಂಬವರ ಮೋಟಾರು ಸೈಕಲ್ ತೆಗೆದುಕೊಳ್ಳುವರೆ ಕಾರನ್ನು ನಿಲ್ಲಿಸಿ ಫಿರ್ಯಾಧುದಾರರು, ರಾಜು @ ಜಪಾನ್ ಮತ್ತು ಅವಿನಾಶ್ ಕಾರಿನಿಂದ ಇಳಿದು ಕಾರಿನ ಬಳಿ ನಿಂತುಕೊಂಡಿದ್ದಾಗ ಅಲ್ಲಿಗೆ ಮಿಥುನ್, ಶರತ್ ಮತ್ತು ಅವರ ಸ್ನೇಹಿತ (ಹೆಸರು ತಿಳಿದಿಲ್ಲ) ರವರು ಫಿರ್ಯಾದುದಾರರ ಬಳಿ ಬಂದು ಮಾತನಾಡಿ ಅವರನ್ನು ಗುರಾಯಿಸಿದ್ದು, ಆಗ ಮಾತಿನ ಚಕಮಕಿಯಾಗಿ ಮಿಥುನ್ ಮತ್ತು ಶರತ್ ಕೈಯಿಂದ ಹೊಡೆದಿದ್ದು, ಹೆಸರು ಗೊತ್ತಿಲ್ಲದ ವ್ಯಕ್ತಿಯು ಫಿರ್ಯಾದುದಾರರಿಗೆ ಅಲ್ಲಿ ಬಿದ್ದಿದ್ದ ಒಂದು ಜಲ್ಲಿಕಲ್ಲಿನಿಂದ ಬಲ ಕಿವಿಯ ಬಳಿ ಹೊಡೆದ ಪರಿಣಾಮ ಕಿವಿಯ ಬಳಿ ರಕ್ತಗಾಯವಾಗಿದ್ದು, ನಂತರ ಅವರುಗಳು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಂದ ಹೋಗಿದ್ದು, ಫಿರ್ಯಾದುದಾರರು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದೇರೆಬೈಲು ಗ್ರಾಮದ ಮೋಸ್ಟ್ ಹೋಲಿ ರೆಡಿಮರ್ ಚರ್ಚ್ ನಲ್ಲಿ ಶೋಕಮಾತೆಯ ಹಬ್ಬದ, 6 ದಿನದ ಪ್ರಾರ್ಥನಾ ವಿಧಿಯ ನಿಮಿತ್ತ ಕಾಣಿಕೆ ಡಬ್ಬಿಯನ್ನು ಇರಿಸಿದ್ದು, ದಿನಾಂಕ 15-09-2014 ಬೆಳಿಗ್ಗೆ ನೋಡುವಾಗ ಕಾಣಿಕೆ ಡಬ್ಬಿಯು ಕಾಣೆಯಾಗಿದ್ದು, ಪಿರ್ಯಾದಿದಾರರಾದ ಶ್ರೀ ಪೀಟರ್ ಡಿ'ಸೋಜಾ ರವರ ತಮ್ಮ ಸಿ.ಸಿ ಕ್ಯಾಮರಾದಲ್ಲಿ ನೋಡಿದಾಗ ದಿನಾಂಕ 14-09-2014 ರಂದು ಮಧ್ಯಾಹ್ನದ 12-05 ರ ಹೊತ್ತಿಗೆ 50 ರಿಂದ 60 ವರ್ಷದ ಪ್ರಾಯದ ಎಣ್ಣೆ ಕಪ್ಪು ಬಣ್ಣದ ಯಾರೋ ಒಬ್ಬ ವ್ಯಕ್ತಿಯು ಕಾಣಿಕೆ ಡಬ್ಬಿಯನ್ನು ತೆಗೆದುಕೊಂಡು ಹೋಗುವ ದೃಶ್ಯ ಕಂಡು ಬಂದಿದ್ದು, ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು ಅಂದಾಜು 2500/- ರೂಪಾಯಿ ಹಣ ಕಳವು ಆಗಿರುವುದಾಗಿದೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಮಂಗಳೂರು ನಗರದ ಬಲ್ಮಠದ ಆರ್ಯ ಸಮಾಜ ರಸ್ತೆಯಲ್ಲಿರುವ ಡೋರ್.ನಂ.15-7-401ನೇ ಚೈತನ್ಯ ಎಂಬ ಹೆಸರಿನ ಪಿರ್ಯಾದಿದಾರರಾದ ಶ್ರೀ ಎ. ರಾಘವ ರವರ ಬಾಬ್ತು ವಾಸದ ಮನೆಯ ಕಂಪೌಂಡ್ ನ ಒಳಗೆ ಇರಿಸಿದ್ದ ಸುಮಾರು ಒಟ್ಟು 10×4 ಅಡಿ ಉದ್ದ-ಎತ್ತರದ ಮೂರು ಸ್ತರಗಳಾಗಿ ಮಡಚಬಹುದಾದ ಕಬ್ಬಿಣದ ಹಳೇ ಗೇಟನ್ನು ದಿನಾಂಕ: 14-09-2014ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ: 15-09-2014ರಂದು ಬೆಳಿಗ್ಗೆ 07-30 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ಕಳವಾದ ಕಬ್ಬಿಣದ ಗೇಟಿನ ಅಂದಾಜು ಮೌಲ್ಯ ರೂ. 15,000/- ಆಗಬಹುದು.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 131/2013ಕ್ಕೆ ಸಂಬಂದಿಸಿದಂತೆ ಪಿರ್ಯಾದುದಾರರಾದ ಶ್ರೀಮತಿ ನಿಶಾ ಎಸ್ ಕುಮಾರ್ ಎಂಬುವರ ಹೆಸರಿನಲ್ಲಿ 2005-2007 ನೆ ಇಸವಿಯ ಮಧ್ಯೆ ಶಾಗಿಲ್ ಸಂಸ್ಥೆಯ ಮಾಲಕ ಶೈಲೇಶ್ ಕುಮಾರ್, ಅದರ ಮ್ಯಾನೇಜರ್ ಬಿ.ಕೆ.ನಾರಾಯಣ್ ಮತ್ತು ಸಿಬ್ಬಂದಿಗಳು ಹಾಗೂ ಸಿಂಡಿಕೇಟ್ ಬ್ಯಾಂಕ್ ಕಂಕನಾಡಿ ಶಾಖೆಯ ಮ್ಯಾನೇಜರ್ ಹಾಗೂ ಸದರಿ ಶಾಖೆಯ ಸಿಬ್ಬಂದಿಗಳು ಸೇರಿಕೊಂಡು ಸಾಲ ಪಡೆದುಕೊಂಡಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಿ ನಿಜವಾಗಿ ಸಂಬುವಂತಹ ಸಹಿಗಳನ್ನು ಮಾಡಿ ಪಿರ್ಯಾದಿದಾರರಿಗೆ ವಿಶ್ವಾಸ ದ್ರೋಹ, ಮೋಸ, ವಂಚನೆ ಮಾಡಿರುತ್ತಾರೆ.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 15-09-2014 ರಂದು 17.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಝೀಯಾ-ಉಲ್-ಹಕ್ ರವರು ತನ್ನ ಬಾಬ್ತು ಕಾರು ನಂಬ್ರ ಕೆಎ 19 ಎಂಡಿ 0548 ನ್ನು ಗಂಜಿಮಠ ಕಡೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ್ ನಲ್ಲಿ ತನ್ನ ಕಚೇರಿ ಕಡೆಗೆ ನಿಧಾನವಾಗಿ ಯು ಟರ್ನ್ ಮಾಡುತ್ತಿದ್ದ ಸಮಯ ಪಿರ್ಯಾದುದಾರರ ಕಾರಿನ ಹಿಂದಿನಿಂದ ಅಂದರೆ, ಗಂಜಿಮಠ ಕಡೆಯಿಂದ ಕೈಕಂಬ ಜಂಕ್ಷನ್ ಕಡೆಗೆ ಪದ್ಮಾವತಿ ಹೆಸರಿನ ಬಸ್ಸು ನಂಬ್ರ ಕೆಎ 19 ಡಿ 3572 ನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿನ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿಯ ಬಲಭಾಗ ಜಖಂಗೊಳ್ಳಲು ಕಾರಣರಾಗಿರುತ್ತಾರೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 12-09-2014 ರಂದು 21-45 ಗಂಟೆಯಿಂದ ದಿನಾಂಕ 15-09-2014 ರಂದು 18-30 ಗಂಟೆಯ ಮಧ್ಯೆ, ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ ಸರಳಾಯ ಗುಡ್ಡೆ, ಕುಂಪಲದಲ್ಲಿರುವ ಪಿರ್ಯಾದುದಾರರಾದ ಶ್ರೀ ಎಂ. ಶೀನಾ ಮೂಲ್ಯ ರವರ ಬಾಬ್ತು ಮನೆನಂಬ್ರ 2-138 (ಬಿ) ನೇಯದರ ಮುಂಬಾಗಿಲನ್ನು ಯಾರೋ ಕಳ್ಳರು ಬಲತ್ಕಾರವಾಗಿ ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಪ್ರವೇಶಿಸಿ ಬೆಡ್ರೂಮಿನಲ್ಲಿರುವ ಮರದ ಕಪಾಟಿನಲ್ಲಿ ಎರಡು ಪೆಟ್ಟಿಗೆಯಲ್ಲಿ ಇಟ್ಟಿದ್ದ ಸುಮಾರು 11 ಲಕ್ಷ ಬೆಲೆಬಾಳುವ 56 ಪವನ್ ಚಿನ್ನಾಭರಣಗಳನ್ನು ಮತ್ತು 12,000/- ನಗದು ಹಣವನ್ನು ಕಳವು ಮಾಡಿರುತ್ತಾರೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ: 15.09.2014 ರಂದು ಪಿರ್ಯಾದಿದಾರರಾದ ಶ್ರೀ ಇಬ್ರಾಹಿಂ ರವರು ತನ್ನ ಬಾಬ್ತು ಸ್ಕೂಟರ್ನಲ್ಲಿ ಸ್ನೇಹಿತನ ಮನೆಗೆ ಹೋಗಿ ಮರಳಿ ವಾಪಾಸು ತನ್ನ ಮನೆಗೆ ಬರುತ್ತಾ ಬೆಳಿಗ್ಗೆ ಸುಮಾರು 9.30 ಗಂಟೆಗೆ ಮಲ್ಲೂರು ಬದ್ರಿಯಾ ನಗರ ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ನೌಫಲ್ ಮತ್ತು ಆತನ ತಮ್ಮ ಜುನೈದ್ ಎಂಬವರು ಒಂದು ಮಾರುತಿ ಓಮ್ನಿ ಕಾರಿನ ಬಳಿ ನಿಂತಿದ್ದು ಅವರ ಪೈಕಿ ನೌಫಲ್ ಎಂಬಾತನು ಪಿರ್ಯಾಧಿದಾರರಲ್ಲಿ ಸ್ಕೂಟರ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದಾಗ ಪಿರ್ಯಾದಿದಾರರು ಸ್ಕೂಟರ್ ನಿಲ್ಲಿಸದೇ ಮುಂದೆಕ್ಕೆ ಚಲಾಯಿಸಿಕೊಂಡು ಹೋದಾಗ ಆರೋಪಿ ನೌಫಲನು ರಸ್ತೆಯ ಬದಿಯಲ್ಲಿದ್ದ ಕಲ್ಲೊಂದನ್ನು ತೆಗೆದು ಪಿರ್ಯಾದಿದಾರರಿಗೆ ಎಸೆದಿದ್ದು ಸದ್ರಿ ಕಲ್ಲು ಪಿರ್ಯಾಧಿದಾರರ ಕಿವಿಗೆ ತಾಗಿ ರಕ್ತಗಾಯವಾದುದರಿಂದ ಪಿರ್ಯಾಧಿದಾರರು ತನ್ನ ಸ್ಕೂಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದಾಗ ಆರೋಪಿಗಳಾದ ನೌಫಲ್ ಮತ್ತು ಜುನೈದ್ ಪಿರ್ಯಾಧಿದಾರರ ಬಳಿಗೆ ಓಡಿ ಬಂದು ಅವರನ್ನು ಅವಾಚ್ಯ ಶಬ್ದಗಳಿಂದ ಬೈದು , ನೀನು ಪೊಲೀಸ್ ಠಾಣೆಗೆ ದೂರು ನೀಡುತ್ತೀಯಾ ಎಂದು ಹೇಳುತ್ತಾ ನೌಫಲ್ ಎಂಬವನು ತನ್ನ ಕೈಯಲ್ಲಿದ್ದ ಮರದ ಸೋಂಟೆಯಿಂದ ಪಿರ್ಯಾದಿದಾರರ ತಲೆಗೆ ಹಾಗೂ ಬಲಭುಜಕ್ಕೆ ಹೊಡೆದು ಆರೋಪಿ ಜುನೈದನು ಪಿರ್ಯಾದಿದಾರರ ಸ್ಕೂಟರನ್ನು ದೂಡಿ ಕೆಳಗೆ ಹಾಕಿ ಹಾನಿ ಮಾಡಿರುತ್ತಾರೆ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದಲ್ಲಿ ಪಿರ್ಯಾದಿದಾರರ ಕೈ ಕಾಲು ಮುರಿದು ಹಾಕುವುದಾಗಿ ಬೆದರಿಕೆ ಒಡ್ಡಿರುತ್ತಾರೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ಶ್ರೀ ಶಿವರಾಮ್ ಪೂಜಾರಿ ರವರ ಬಾವನ ಮಗ ಪುಷ್ಪರಾಜ ಎಂಬಾತನು MCF ನಲ್ಲಿ ಗಣೇಶ್ ಎಂಟರ್‌ಪ್ರೈಸಸ್ ಎಂಬ ಕಾಂಟ್ರಾಕ್ಟರ್ ನ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಸದ್ರಿಯವರು ದಿನಾಂಕ: 13.09.2014 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದವರು ಸಂಜೆ ಸುಮಾರು 5 ಗಂಟೆಗೆ ತನ್ನ ಬಾಬ್ತು ಕೆಎ-19-ಕ್ಯು-5050 ಹೀರೋ ಹೋಂಡಾ ಮೋಟಾರ್ ಸೈಕಲ್‌ನಲ್ಲಿ ಹೊರಗಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವನು ರಾತ್ರಿಯಾದರು ಮನೆಗೆ ಮರಳಿ ಬಾರದೇ ಕಾಣೆಯಾಗಿದ್ದು ಅವರ ಮೊಬೈಲ್ ಫೋನ್ಗೆ ಕರೆ ಮಾಡಿದಲ್ಲಿ ಸಂಪರ್ಕಕ್ಕೆ ಸಿಗದೇ ಇದ್ದು ಅವರ ಪತ್ತೆಯ ಬಗ್ಗೆ ಅವರು ಕೆಲಸ ಮಾಡುವಲ್ಲಿ ಮತ್ತು ಸಂಬಂಧಿಕರಲ್ಲಿ ಹಾಗೂ ಇತರ ಕಡೆಗಳಲ್ಲಿ ವಿಚಾರಿಸಿದಲ್ಲಿ ಕಾಣೆಯಾದ ಪುಷ್ಪರಾಜನ ಬಗ್ಗೆ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಕಾಣೆಯಾದ ಪುಷ್ಪರಾಜ್ ರವರ ಚಹರೆ: ಹೆಸರು: ಪುಷ್ಪರಾಜ, ವಯಸ್ಸು: 35 ವರ್ಷ, ಬಣ್ಣ: ಗೋದಿ ಮೈ ಬಣ್ಣ ಸಾಧಾರಣ ಮೈಕಟ್ಟು, ಕೋಲು ಮುಖ, ಗುಂಗುರು ತಲೆಕೂದಲು, ದಪ್ಪ ಮೀಸೆ, ಭಾಷೆ: ತುಳು, ಕನ್ನಡ, ಹಿಂದಿ, ಮಾತನಾಡುತ್ತಾರೆ.
No comments:
Post a Comment