Tuesday, September 2, 2014

Daily Crime Reports 02-09-2014

ದೈನಂದಿನ ಅಪರಾದ ವರದಿ.

ದಿನಾಂಕ 02.09.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-08-2014 ರಂದು ಸುಮಾರು 18-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಜೆಪ್ಪು ಮಾರ್ನಮಿಕಟ್ಟೆ ದೂರವಾಣಿ ಕೇಂದ್ರದ ಎದುರು ಕೆಎ-19-ಎಂ.-476 ನಂಬ್ರದ ಕಾರನ್ನು ಆರೋಪಿಯು ವೆಲೆನ್ಸಿಯಾ ಕಡೆಯಿಂದ ಮಾರ್ನಮಿಕಟ್ಟೆ ಕಡೆಗೆ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ಶ್ರೀ ಎಸ್. ಯಶವಂತ ಕೊಟ್ಟಾರಿ ರವರಿಗೆ ಮತ್ತು ಅವರ ಪತ್ನಿ ಮೀನಾಕ್ಷಿ ರವರಿಗೆ ಹಿಂದಿನಿಂದ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ಮತ್ತು ಅವರ ಪತ್ನಿ ಮೀನಾಕ್ಷಿ ರವರು ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲಕಾಲಿನ ಪಾದದ ಅಡಿಗೆ ಚರ್ಮಕಿತ್ತುಕೊಂಡ ಗಾಯ, ಬಲಕಾಲಿನ ಪಾದಕ್ಕೆ ಹಾಗೂ ಪಾದದ ಮೇಲಿನ ಗಂಟಿಗೆ ರಕ್ತಗಾಯ, ಎಡಕೈಗೆ ರಕ್ತಗಾಯ, ಎಡಕಾಲು ಮೊಣಗಂಟಿಗೆ ರಕ್ತಗಾಯ, ಎಡಕಾಲು ಬೆರಳಿಗೆ ತರಚಿದ ಗಾಯ, ಬಲಕೈ ಮೊಣಗಂಟಿಗೆ ತರಚಿದ ಗಾಯ ಹಾಗೂ ಸೊಂಟಕ್ಕೆ ಗಂಭೀರ ಸ್ವರೂಪದ ಗುದ್ದಿದ ನೊಂವುಂಟಾಗಿರುತ್ತದೆ ಅಲ್ಲದೇ ಮೀನಾಕ್ಷಿ ಯವರ ತಲೆಯ ಎಡಭಾಗಕ್ಕೆ ರಕ್ತಗಾಯ, ಎಡಭುಜಕ್ಕೆ ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.

 

2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ ಮಾನಸ ಎಂಬಲ್ಲಿ ದಿನಾಂಕ 31.08.2014 ರಂಸು ಸಂಜೆ 4:40 ಗಂಟೆಗೆ ದೇರಳಕಟ್ಟೆ ಕಡೆಯಿಂದ ಅಸೈಗೋಳಿ ಕಡೆಗೆ ಮೋಟಾರ್ ಸೈಕಲ್ನಂಬ್ರ ಕೆಎ-19ಇಜಿ-1698 ನೇಯದನ್ನು ತಸ್ರೀನ್ರವರು ಚಲಾಯಿಸಿಕೊಂಡು ಸಹ ಸವಾರನಾಗಿ ಫಿರ್ಯಾದಿದಾರರಾದ ನೌಫಾಲ್ರವರನ್ನು ಕುಳ್ಳಿರಿಸಿಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಕಾರ್ನಂಬ್ರ ಕೆಎಲ್-17ಎಲ್‌-8816 ನೇಯದನ್ನು ಅದರ ಚಾಲಕ ಮಾಥ್ಯೂ ಕ್ರಿಷ್ಟ್ ಜಾರ್ಜ್ಎಂಬವರು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್ಸೈಕಲನ್ನು ಓವರ್ಟೇಕ್ಮಾಡಿ ಒಮ್ಮೆಲೇ ಕಾರನ್ನು ಬಲಕ್ಕೆ ತಿರುಗಿಸಿದಾಗ ಕಾರ್ ಹಿಂದಿನ ಬಾಗಿಲನ  ಬಾಡಿಯು ಮೋಟಾರ್ಸೈಕಲಿನ ಹ್ಯಾಂಡಲ್ಗೆ ತಾಗಿ ಮೋಟಾರ್ಸೈಕಲ್ಎಡ ಮಗ್ಗುಲಿಗೆ ಮಗುಚಿ ಕಾರಿಗೆ ಸಿಲುಕಿಕೊಂಡ ಫಿರ್ಯಾದಿದಾರರ ಬಲಕಾಲಿನ ಕೋಲು ಕಾಲಿಗೆ ಕೀಲು ಮುರಿತದ ತೀವ್ರ ಗಾಯವಾಗಿದ್ದು, ಸವಾರ ತಸ್ರೀನ್ರವರಿಗೆ ಎಡ ಅಂಗೈಗೆ ಮತ್ತು ಮೈ ಕೈಗೆ ರಕ್ತದ ಗಾಯವಾಗಿರುತ್ತದೆ. ಗಾಯಾಳುಗಳು ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-07-2014 00-00 ಗಂಟೆಯಿಂದ ದಿನಾಂಕ: 31-08-2014 18-00 ಗಂಟೆಯ ಮಧ್ಯೆ ಮಂಗಳೂರು ನಗರದ ಬಲ್ಮಠದ ಆರ್ಯ ಸಮಾಜ ರಸ್ತೆಯಲ್ಲಿರುವ 'ಸವೇರಾ' ಎಂಬ ಹೆಸರಿನ ಪಿರ್ಯಾದಿದಾರರಾದ ಶ್ರೀ ಮೆರ್ವಿನ್ ಫರ್ನಾಂಡಿಸ್ ರವರ ವಾಸದ ಮನೆಯ ಕಿಟಕಿ ಗ್ರಿಲ್ ನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ತುಂಡರಿಸಿ ಬೆಂಡ್ ಮಾಡಿ ಮೂಲಕ ಒಳಪ್ರವೇಶಿಸಿ ಮನೆಯಲ್ಲಿನ ಕಪಾಟುಗಳನ್ನು ಬೆಲೆ ಬಾಳುವ ಸೊತ್ತುಗಳಿಗಾಗಿ ಹುಡುಕಾಡಿ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು, ಮನೆಯಲ್ಲಿನ ನೀರಿನ ನಳ್ಳಿಗಳನ್ನು ಕಿತ್ತು ತೆಗೆದು ಹಾಗೂ ಕಪಾಟಿನಲ್ಲಿರಿಸಿದ್ದ ಸಿಲ್ಕ್ ಸೀರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ. 87,000/- ರೂ ಆಗಬಹುದು.

 

4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಕೃಷ್ಣನಗರ ಎಂಬಲ್ಲಿ ಪಿರ್ಯಾದುದಾರರಾದ ಶ್ರೀಮತಿ ರವಿಕಲಾ ರವರ ಪಕ್ಕದ ಮನೆಯ ಶ್ರೀಮತಿ ರಾಜೀವಿ ಎಂಬವರ ಮನೆಯಲ್ಲಿ ಮದುವೆ ಕಾರ್ಯಕ್ರಮದ ಸಲುವಾಗಿ ದಿನಾಂಕ 31-08-2014 ರಂದು ಸಂಜೆ 6-00 ಗಂಟೆಗೆ ಡಿ.ಜೆ. ಇಟ್ಟಿದ್ದು, ರಾತ್ರಿ 9-00 ಗಂಟೆಗೆ ಅಲ್ಲಿಗೆ  ಸುಮಾರು ಜನರು ಸೇರಿ ಡ್ಯಾನ್ಸು ಮತ್ತು ಬೊಬ್ಬೆ ಹಾಕುತ್ತಿದ್ದುದರಿಂದ ಡಿ.ಜೆ ಶಬ್ದವನ್ನು ಕಡಿಮೆ ಮಾಡುವಂತೆ ಶ್ರೀಮತಿ. ರಾಜೀವಿಯವರ ಮಕ್ಕಳಾದ ಸಂತೋಷ್ಮತ್ತು ಮಹೇಶ್ರವರಲ್ಲಿ ಪಿರ್ಯಾದುದಾರರು ಕೇಳಿಕೊಂಡಾಗ ಅವರು ಪಿರ್ಯಾದುದಾರರಲ್ಲಿ ಉಡಾಫೆಯಾಗಿ ಮಾತನಾಡಿ, ಶಬ್ದ ಕಡಿಮೆ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿರುತ್ತಾರೆ. ನಂತರ ಅಲ್ಲಿ ಸೇರಿದ್ದ ಇತರು ಉದ್ರೇಕಗೊಂಡ ಡಿ.ಜೆಯನ್ನು ಇನ್ನಷ್ಟು ಜೋರಾಗಿ ಇಟ್ಟುಕೊಂಡು ದಿನಾಂಕ 01-09-2014 01-30 ತನಕ ಇಟ್ಟಿರುತ್ತಾರೆ. ಅಲ್ಲದೇ 02-00 ಗಂಟೆ ಹೊತ್ತಿಗೆ ಡಿ.ಜೆ ಯಲ್ಲಿದ್ದ ಕವಿತ್ಮತ್ತು ಅವಿನಾಶ್ಎಂಬವರು ಪಿರ್ಯಾದುದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಕಲ್ಲುಗಳನ್ನು ಪಿರ್ಯಾದಿಯ ಮನೆಗೆ ಎಸೆದು ಕಿಟಕಿ ಗಾಜನ್ನು ಪುಡಿ ಮಾಡಿರುತ್ತಾರೆ. ಇದರಿಂದ ಸುಮಾರು 1,000/- ರೂಪಾಯಿ ನಷ್ಟ ಸಂಭವಿಸಿರುತ್ತದೆ.

No comments:

Post a Comment