ದೈನಂದಿನ ಅಪರಾದ ವರದಿ.
ದಿನಾಂಕ 13.09.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 2 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-09-2014 ರಂದು ಪಿರ್ಯಾದಿದಾರರಾದ ಶ್ರೀ ಮಾದವ ಕೊಟ್ಯಾನ್ ರವರು ಅವರ ಬಾಬ್ತು ಸ್ಕೂಟರ್ ನಂಬ್ರ KA 19 Y 6218 ನೇದರಲ್ಲಿ ಮಂಗಳೂರು ಕಡೆಯಿಂದ ಅವರ ಮನೆ ಕಡೆಗೆ ಹೋಗುತ್ತಿರುವಾಗ ರಾತ್ರಿ ಸುಮಾರು 9-50 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕುಳಾಯಿ ಗ್ರಾಮದ ಕುಳಾಯಿ ಸಂತೋಷ ಐತಾಳರ ಮನೆಯ ಸ್ವಲ್ಪ ಹಿಂದೆ ರಾ.ಹೆ 66 ಏಕಮುಖ ರಸ್ತೆಗೆ ವಿರುದ್ದವಾಗಿ ವೀರ ಮಾರುತಿ ಎಂಬುದಾಗಿ ಎದುರುಗಡೆ ಬರೆದಿರುವ 3 ಚಕ್ರದ ಟೆಂಪೋವನ್ನು ಅದರ ಚಾಲಕನು ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿ ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತಾ ರಸ್ತೆಗೆ ಬಿದ್ದು ತೀವ್ರ ತರಹದ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಆರೋಪಿ ಟೆಂಪೋ ಚಾಲಕನು ಟೆಂಪೋವನ್ನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10-09-2014 ರಂದು ರಾತ್ರಿ ಸುಮಾರು 8-30 ಗಂಟೆಗೆ ಮಂಗಳೂರು ನಗರದ ಜೆಪ್ಪು ಸೈಂಟ್ ಜೊರೊಸಾ ಹೈಸ್ಕೂಲ್ ಎದುರು ಬಸ್ ಸ್ಟಾಪ್ ಬಳಿ ರಸ್ತೆಯ ಬದಿಯಲ್ಲಿ ಪಿರ್ಯಾದುದಾರರಾದ ಶ್ರೀ ಫ್ರಾನ್ಸಿಸ್ ಡಿ'ಸೋಜಾ ರವರು ನಿಂತುಕೊಂಡಿದ್ದ ವೇಳೆ ವೆಲೆನ್ಸಿಯಾ ಕಡೆಯಿಂದ ಮಂಗಳಾದೇವಿ ಕಡೆಗೆ ಸ್ಕೂಟರೊಂದನ್ನು ಅದರ ಸವಾರ ಮೊಹಮ್ಮದ್ ಇರ್ಫಾನ್ ಎಂಬಾತನು ಶಾಹಿರ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಭಾಗದಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದುದಾರರಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ಕಾಂಕ್ರೀಟ್ ರಸ್ತೆಗೆ ಬಿದ್ದು, ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ಮತ್ತು ಮುಖದ ಎಡಬದಿಗೆ ರಕ್ತಗಾಯ ಹಾಗೂ ಎರಡೂ ಕೈ ಮತ್ತು ಕಾಲುಗಳಿಗೆ ತರಚಿದ ಗಾಯವಾಗಿದ್ದು, ಸ್ಕೂಟರ್ ಸವಾರ ಮತ್ತು ಸಹಸವಾರನಿಗೂ ಗಾಯವಾಗಿರುತ್ತದೆ. ಗಾಯಾಳುಗಳು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಪಘಾತದ ವೇಳೆ ಪಿರ್ಯಾದುದಾರರಿಗೆ ಸ್ಕೂಟರ್ ನಂಬ್ರ ನೋಡಲು ಸಾದ್ಯವಾಗಿರುವುದಿಲ್ಲ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12-09-2014 ರಂದು ಬೆಳಿಗ್ಗೆ 08:40 ಗಂಟೆಗೆ ಮಂಗಳೂರು ನಗರದ ನಂದಿಗುಡ್ಡೆ ಸರ್ಕಲ್ ಬಳಿ ಜಾಸ್ಪರ್ ಸೋಜ ಎಂಬವರು ಅವರ ಬಾಬ್ತು ಕೆಎ-19-ಕ್ಯೂ-6200 ನಂಬ್ರದ ಮೋಟಾರು ಸೈಕಲ್ ನಲ್ಲಿ ಸುಪ್ರಿಂ ಮೋಟಾರ್ಸ್ ಕಡೆಯಿಂದ ನಂದಿಗುಡ್ಡೆ ಸರ್ಕಲ್ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಅತ್ತಾವರ ಕಡೆಯಿಂದ ಬರುತ್ತಿರುವ ಕಾರೊಂದನ್ನು ಕಂಡು ತನ್ನ ವಾಹನವನ್ನು ನಿಲ್ಲಿಸಿ ಕಾರು ಮುಂದೆ ಹೋಗಲು ಕಾಯುತ್ತಿದ್ದ ವೇಳೆ ಕೆಎ-19-ಡಬ್ಲ್ಯೂ-8880 ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ಆರೋಪಿ ನವೀನ್ ಎಂಬಾತನು ಮಂಗಳಾದೇವಿ ಕಡೆಯಿಂದ ಹಾದುಬರುವ ಮುಖ್ಯ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಾಸ್ಪರ್ ಸೋಜಾ ರವರ ಬೈಕಿನ ಬಲಬದಿ ಹಿಂಬದಿಗೆ ಢಿಕ್ಕಿಪಡಿಸಿದ ಪರಿಣಾಮ ಜಾಸ್ಪರ್ ಸೋಜಾ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಅವರ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು, ಎರಡೂ ಕೈಗಳಿಗೆ ತರಚಿದ ಗಾಯಗಳಾಗಿದ್ದು ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುತ್ತಾರೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.09.2014 ರಂದು ಸಂಜೆ ಸುಮಾರು 6.15 ರಂದು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ರಹಿಮಾನ್ ರವರು ಮೋಟಾರು ಸೈಕಲ್ ಮಹಾವೀರ ಕಾಲೇಜಿನ ಕೊಡಂಗಲ್ ಎಂಬಲ್ಲಿ ತಲಪಿದಾಗ ಒಂದು ರಿಕ್ಷಾದಲ್ಲಿ ಬಂದ ರಿಕ್ಷಾಚಾಲಕ ಇಮ್ತಿಯಾಜ್ ಹಾಗೂ ರಿಕ್ಷಾ ಒಳಗೆ ಕುಳಿತಿದ್ದ ನಝೀರ್, ರಜಾಕ್, ಸಿದ್ದಿಕ್ ರವರು ರಿಕ್ಷಾವನ್ನು ಬೈಕಿಗೆ ಅಡ್ಡ ನಿಲ್ಲಿಸಿ ತಡೆದು ರಿಕ್ಷಾ ಚಾಲಕ ಇಮ್ತಿಯಾಜ್ ಅವನ ಕೈಯಲ್ಲಿದ್ದ ಚೂರಿಯಿಂದ ಎಡಕೈ ರಿಸ್ಟ್ ನ ಮೇಲೆ ತಿವಿದು ನಂತರ ಇತರರು ಕೈಗಳಿಂದ ಹೊಡೆದು ಎದೆಗೆ ಗುದ್ದಿ, ಕಾಲುಗಳಿಂದ ತುಳಿದು ಅವಾಚ್ಯ ಶಬ್ದಗಳಿಂದ "ಮಸೀದಿಯ ಜಮಾತಿನ ವಿಷಯದಲ್ಲಿ ನೀನು ಬಂದರೆ ನಿನ್ನ ಕೈ, ಕಾಲು ಮುರಿದು ಹಾಕುವುದಾಗಿ" ಬೆದರಿಸಿದ್ದು, ಆ ಸಮಯ ಬೊಬ್ಬೆ ಹೊಡೆದಾಗ ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಇಲಿಯಾಸ್ ಬಳಿಗೆ ಬಂದು ಬಿಡಿಸಲು ಪ್ರಯತ್ನಿಸಿದಾಗ ಅಕ್ಕಪಕ್ಕದ ಜನರು ಬರುತ್ತಿರುವುದನ್ನು ನೋಡಿ ಅವರೆಲ್ಲಾ ರಿಕ್ಷಾದಲ್ಲಿ ಹೊರಟು ಹೋದರು. ಹಲ್ಲೆ ನಡೆಸಿದ ಪರಿಣಾಮ ಪಿರ್ಯಾದಿದಾರರ ಕೈಯಲ್ಲಿ ರಕ್ತ ಗಾಯವಾಗಿದ್ದು, ಎದೆ ಹಾಗೂ ಮೈ, ಕೈ ಗೆ ನೋವುಂಟಾಗಿದ್ದು, ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿರುವುದಾಗಿದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-09-2014 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹರಿಶ್ ರವರು ಹಾಗೂ ಮನೆಯವರೆಲ್ಲರೂ ಮಂಗಳೂರು ಸೂಟರ್ ಪೇಟೆಯ 2 ನೇ ಕ್ರಾಸ್ ಭುವನೇಶ್ವರಿ ಟೆಂಪಲ್ ಬಳಿಯ ನವೀನ್ ಪ್ರವೀಣ್ ಕಂಪೌಂಡ್ ಮನೆಯಲ್ಲಿ ಚಿಲಕ ಹಾಕಿ ಮಲಗಿದ್ದು, ದಿನಾಂಕ 12-09-2014 ರಂದು ಬೆಳಗ್ಗೆ 05-30 ಗಂಟೆಗೆ ಎದ್ದು ನೋಡಿದಾಗ, ಪಿರ್ಯಾದಿದಾರರ ಮನೆಯ ಹಾಲ್ ನ ಎದುರಿನ ಕೋಣೆಯ ಮರದ ಕಿಟಿಕಿಯನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ, ಅವರ ನಾದಿನಿಯ ಮಗಳಾದ ಕುಮಾರಿ ಅಕ್ಷತಾಳ ಬ್ಯಾಗ್ ನ್ನು ತೆರೆದು ಅದರೊಳಗೆ ಇಟ್ಟಿದ್ದ ಒಂದು ಜೊತೆ ಬಂಗಾರದ ಜುಮ್ಕಿ [6 ಗ್ರಾಂ] ಹಾಗೂ ಗೋದ್ರೇಜ್ ಕಪಾಟಿನಲ್ಲಿಟ್ಟಿದ್ದ ಸುಮಾರು 10 ಗ್ರಾಂ ತೂಕದ ಒಂದು ಬಂಗಾರದ ಬಳೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಮೌಲ್ಯ ರೂಪಾಯಿ 24,000/- ಆಗಬಹುದು.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜೆ. ಬಿ. ಸಿಕ್ವೇರಾ ಎಂಬವರು ಸುಮಾರು 25 ವರ್ಷಗಳಿಂದ " ಅವರ್ ಲೇಡಿ ಆಫ್ ಪೋಂಪೈ ಮತ್ತು ಸೈಂಟ್ ಲಾರೆನ್ಸ್ ಇಂಡಿಯನ್ ಸ್ಕೂಲ್ ಕಿನ್ನಿಗೋಳಿ ಈ ಸಂಸ್ಥೆಗಳನ್ನು ನಡೆಸುತ್ತಿದ್ದು, 85 ವರ್ಷದ ಪ್ರಾಯದವರಾಗಿರುತ್ತಾರೆ. ಪಿರ್ಯಾದಿದಾರರು 1990 ನೇ ಇಸವಿಯಲ್ಲಿ ಭಾರತ ಮಾತಾ ಎಜ್ಯುಕೇಶನ್ ಸೊಸೈಟಿ ಎಂಬ ಸಂಸ್ಥೆಯನ್ನು ಆರಂಭಿಸಿದ್ದು, ಅದರ ಸಂಚಾಲಕರೂ ಕೂಡಾ ಆಗಿರುತ್ತಾರೆ. ದಿನಾಂಕ: 15-10-2013 ರಂದು ಆರೋಪಿ ವಾಲ್ಟರ್ ಸ್ಟೆಫನ್ ಮೆಂಡೀಸ್ ಎಂಬವರು ಪಿರ್ಯಾದಿದಾರರನ್ನು ಭೇಟಿ ಮಾಡಿ " ತಾನು ಭಾರತ್ ಮಾತಾ ಟ್ರಸ್ಟ್ ನಲ್ಲಿ ಟ್ರಸ್ಟಿಯಾಗಿ ಸೇರಿಕೊಳ್ಳುತ್ತೇನೆ. ಹಾಗೂ ಹಣದ ಸಹಾಯ ಕೂಡಾ ಮಾಡುತ್ತೇನೆ. ಪ್ರಾಯಸ್ಥರಾದ ನಿಮಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತೇನೆ. ಶಾಲೆಗಳ ಸಂಚಾಲಕರು ನೀವೆ ಆಗಿರುತ್ತೀರಿ. ನೀವೇ ಟ್ರಸ್ಟ್ ನ ಮುಖ್ಯಸ್ಥರು ನಿಮಗೆ ಶಾಲೆಯಲ್ಲಿ ಲಾಭ ಬಂದಾಗ ಮಾತ್ರ ನನಗೆ ಹಣ ನೀಡಿದರೆ ಸಾಕು ಎಂದು ಆರೋಪಿ ಹಾಗೂ ಅವರ ಹೆಂಡತಿ ಸುಳ್ಳು ಆಶ್ವಾಸನೆ ನೀಡಿ ನಿಮಗೆ ಸಂಪೂರ್ಣವಾದ ಸಹಕಾರ ಕೊಡುತ್ತೇನೆ ಎಂದು ನಂಬಿಕೆ ಮಾತನ್ನು ಆಡಿದಾಗ, ಪಿರ್ಯಾದಿದಾರರು ಅವರ ನಯ ವಿನಯದ ಮಾತನ್ನು ನಂಬಿ, ದಿನಾಂಕ:15-10-2013 ರಂದು ಆರೋಪಿ ವಾಲ್ಟರ್ ಸ್ಟಿಫನ್ ಮೆಂಡೀಸ್ ಎಂಬವರನ್ನು ಟ್ರಸ್ಟಿಯನ್ನಾಗಿ ನೇಮಿಸಿರುತ್ತಾರೆ. ಆ ನಂತರ ಆರೋಪಿಯು ಪಿರ್ಯಾದಿದಾರರನ್ನು ಪ್ರತಿಯೊಂದು ಕಾರ್ಯಕ್ರಮಗಳಲ್ಲೂ, ದೂರಕ್ಕೆ ತಳ್ಳಿ, ಪಿರ್ಯಾದಿದಾರರ ಮಾತಿಗೆ ಬೆಲೆ ಕೊಡದೇ ಸರ್ವಾಧಿಕಾರದಿಂದ ವರ್ತಿಸಿದ್ದು, ಆರೋಪಿಯ ದ್ರೋಹ ಹಾಗೂ ದುರುದ್ದೇಶದ ಸಂಚು ಕಪಟತನ ನಂಬಿಕೆ ದ್ರೋಹ ಎಲ್ಲಾ ವಂಚನೆಗಳು ಬಯಲಿಗೆ ಬಂದ ನಂತರ ದಿನಾಂಕ:22-11-2013 ರಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಟ್ರಸ್ಟ್ ನ ರಕ್ಷಣೆಗಾಗಿ, ಆರೋಪಿ ವಾಲ್ಟರ್ ಸ್ಟೀಫನ್ ಮೆಂಡಿಸ್ ರವರನ್ನು ಟ್ರಸ್ಟ್ ನಿಂದ ತೆಗೆದು ಹಾಕಲು, ಸೆಟ್ಲ್ ಮೆಂಟ್ ಡೀಡ್ ಮಾಡುವರೇ ನಿರ್ಧಾರ ಮಾಡಿ ತಿದ್ದುಪಡಿ ಮಾಡಲು ಟ್ರಸ್ಟ್ ನ ಸಂಚಾಲಕನಾಗಿರುವ ಪಿರ್ಯಾದಿದಾರರಿಗೆ ಅನುಮತಿ ನೀಡಲಾಯಿತು. ಆ ಪ್ರಕಾರ ದಿನಾಂಕ: 03-12-2013 ರಂದು ತಿದ್ದುಪಡಿ ಮಾಡಲಾದ ಡೀಡನ್ನು ನೋಂದಾವಣೆ ಮಾಡಲಾಯಿತು. ಆರೋಪಿ ಸ್ಟಿಫನ್ ಮೆಂಡೀಸ್ ರವರ ಟ್ರಸ್ಟ್ ನ ಎಲ್ಲಾ ಅಧಿಕಾರಗಳನ್ನು ತೆಗೆದು ಹಾಕಲಾಗಿರುತ್ತದೆ. ದಿನಾಂಕ:15-10-2013 ರಂದು ಮಾಡಲಾದ ಸಪ್ಲಿಮೆಂಟರಿ ಡೀಡನ್ನು ವಜಾ ಮಾಡಲಾಯಿತು. ಟ್ರಸ್ಟ್ ನಲ್ಲಿ ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಕೂಡಾ, ಆರೋಪಿಯು ಉದ್ದೇಶ ಪೂರ್ವಕವಾಗಿ ಭಾರತ್ ಮಾತಾ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಗೆ ಸೇರಿದ ಕೋಟ್ಯಾಂತರ ಮೌಲ್ಯವಿರುವ ಕಟ್ಟಡಗಳಿರುವ ನಾಲ್ಕು ಎಕ್ರೆ ಜಾಗ ಪಿರ್ಯಾದಿದಾರರಿಗೆ ಸೇರಿದ ಆಸ್ತಿಗಳನ್ನು ಕಬಳಿಸುವ ದುರುದ್ದೇಶದಿಂದ ದಿನಾಂಕ:26-03-2014 ರಂದು ಆರೋಪಿಯು ಮಂಗಳೂರು ರಿಜಿಸ್ಟರ್ ಕಛೇರಿಯಲ್ಲಿ ಸ್ವತಃ ಹಾಜರಾಗಿ ಹೆಚ್ಚುವರಿ ಸೆಪ್ಲಿಮೆಂಟರಿ ಡೀಡ್ ಎಂಬ ನಕಲಿ ದಾಖಲೆ ಸೃಷ್ಟಿಸಿ, ಈ ನಕಲಿ ದಾಖಲೆಗಳಲ್ಲಿ ಪಿರ್ಯಾದಿದಾರರ ಒಪ್ಪಿಗೆ ಇಲ್ಲದೇ ಪಿರ್ಯಾದಿದಾರರ ಹೆಸರು ಮತ್ತು ಅವರ ಮಗನ ಹೆಸರನ್ನು ಸೇರಿಸಿ ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-09-2014 ರಂದು ರಾತ್ರಿ 9-30 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಯೂಸುಫ್ ರವರು ಪರಿಚಯದ ಶ್ರೀಮತಿ ಶಮಾ ಎಂಬಾಕೆಯನ್ನು ತನ್ನ ಹೊಸ ಕಾರಿನಲ್ಲಿ ಕುಳ್ಳಿರಿಸಿ ಪಾಂಡೇಶ್ವರ ಫಿಜಾ ಮಾಲ್ ನಿಂದ ಮಂಗಳಾದೇವಿ ಸಮೀಪ ಇರುವ ಮೆಟ್ರೋ ಸೂಪರ್ ಮಾರ್ಕೆಟ್ ಬಳಿ ಇರುವ ಆಕೆಯ ಮನೆಗೆ ಬಿಟ್ಟು ವಾಪಾಸು ಹೊರಟಾಗ ಶ್ರೀಮತಿ ಶಮಾಳ ಸಹಚರರಾದ ನವಾಜ್ ಹಾಗೂ ಇತರ 6 ಜನರು ಫಿರ್ಯಾದಿದಾರರ ಕಾರಿನ ಬಳಿ ಬಂದು ಫಿರ್ಯಾದಿದಾರರನ್ನು ಚಾಲಕನ ಸೀಟಿನಿಂದ ಮಧ್ಯಕ್ಕೆ ದೂಡಿ ಸುತ್ತ ಮುತ್ತ ಅವರೆಲ್ಲ ಕುಳಿತು ಎಮ್ಮೆಕೆರೆ ಮೈದಾನದ ಬಳಿ ಕರೆದುಕೊಂಡು ಹೋಗಿ ನೀನು ಶಮಾಳಿಗೆ ಮಾಡಿದ ಅನೈತಿಕ ಚಟುವಟಿಕೆ ನಮಗೆ ತಿಳಿದಿದೆ. ಇದನ್ನು ಸರಿ ಮಾಡಲು ನೀನು ನಮಗೆ 25 ಲಕ್ಷ ನೀಡಬೇಕು ಇಲ್ಲವಾದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಕೈಗಳಿಂದ ಮುಖಕ್ಕೆ, ಹೊಟ್ಟೆಗೆ, ಬೆನ್ನಿಗೆ ಎಲ್ಲರೂ ಸೇರಿ ಹೊಡೆದು ನಂತರ ಗೂಡ್ ಶೆಡ್ ವಠಾರದಲ್ಲಿ ಸುತ್ತಿಸಿ ರಾತ್ರಿ ಗಂಟೆ 2-00 ಸಮಯಕ್ಕೆ RTO ಕಛೇರಿ ಬಳಿಯಲ್ಲಿ ಫಿರ್ಯಾದಿದಾರರನ್ನು ಕಾರು ಸಮೇತಾ ಬಿಟ್ಟ ಆರೋಪಿಗಳು ಬಿಳಿ ಬಣ್ಣದ ಆಲ್ಟೋ ಕಾರು ನಂಬ್ರ KA 19 W 1789 ಹಾಗೂ ಎರಡು ಮೋಟಾರು ಸೈಕಲ್ KA 19 MB 4241 ಹಾಗೂ ಇನ್ನೊಂದು ಹೊಸ ಬೈಕ್ ಗಳಲ್ಲಿ ಪರಾರಿಯಾಗಿರುತ್ತಾರೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-11-2012 ರಂದು ರಾತ್ರಿ ಸಮಯ ಸುಮಾರು 11-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸ್ಟೀವನ್ ಡಿ'ಸೋಜಾ ರವರು ಮತ್ತು ಅವರ ಅಣ್ಣ ಬಾಸಿಲ್ ಡಿಸೋಜ ಮೀನುಗಾರಿಕೆಯಿಂದ ವಾಪಾಸು ಬಂದು ತಮ್ಮ ದೋಣಿಯನ್ನು ಅದಕ್ಕೆ ಅಳವಡಿಸಿದ ಇಂಜಿನ್ ಸಮೇತ ಪೆರ್ಮನ್ನೂರು ಗ್ರಾಮದ ಉಳ್ಳಾಲ ಹೊಯಿಗೆ ನೇತ್ರಾವತಿ ನದಿಯ ದಡದಲ್ಲಿ ಅಂದರೆ ಉಳ್ಳಾಲ ಹೊಯಿಗೆ ರೈಲ್ವೆ ಸೇತುವೆಯ ಬಳಿ ನಿಲ್ಲಿಸಿ ಮನೆಗೆ ಬಂದಿದ್ದು ಮರುದಿನ ಬೆಳಿಗ್ಗೆ ಸುಮಾರು 06-00 ಗಂಟೆಗೆ ನಿಲ್ಲಿಸಿದ್ದ ದೋಣಿಯ ಬಳಿ ಹೋಗಿ ನೋಡಿದಾಗ ಪಿರ್ಯಾದುದಾರರ ದೋಣಿಗೆ ಅಳವಡಿಸಿದ ಯಮಹಾ ಕಂಪನಿಯ 8 ಹೆಚ್‌ಪಿ ಇಂಜಿನ್ ಕಾಣೆಯಾಗಿದ್ದು ಅದನ್ನು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ನಂತರ ದಿನಾಂಕ 11-11-2012 ರಂದು ಉಳ್ಳಾಲ ಪೊಲೀಸ್ ಠಾಣೆಗೆ ಬಂದು ಮೀನುಗಾರಿಗಾರಿಕಾ ದೋಣಿಗೆ ಅಳವಡಿಸಿದ್ದ ಯಮಹಾ ಕಂಪೆನಿಯ 8ಹೆಚ್‌ಪಿ ಇಂಜಿನ್ ಕಾಣೆಯಾಗಿರುವ ವಿಚಾರದಲ್ಲಿ ದೂರು ನೀಡಿದ್ದು ಅದರಂತೆ ಉಳ್ಳಾಲ ಠಾಣೆಯಲ್ಲಿ ಸಿಮಿಸ್ ನಂಬ್ರ 265/2012 ರಲ್ಲಿ ನೊಂದಾಯಿಸಿರುವುದಾಗಿದೆ ಇತ್ತೀಚೆಗೆ ಪಡುಬಿದ್ರಿ ಪೊಲೀಸ್ ನವರು ಮೀನುಗಾರಿಕಾ ದೋಣಿಯ ಯಂತ್ರಗಳನ್ನು ಕಳವು ಮಾಡಿದ ಆರೋಪಿಗಳನ್ನು ಸೊತ್ತು ಸಮೇತ ಹಿಡಿದಿರುವ ಬಗ್ಗೆ ಪೋಟೊ ಸಮೇತ ಇರುವ ವಿಷಯವನ್ನು ದಿನಪತ್ರಿಕೆ ಮತ್ತು ಟಿವಿಯಲ್ಲಿ ನೋಡಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿರುವ ಮೀನುಗಾರಿಕಾ ದೋಣಿಯ ಯಂತ್ರವನ್ನು ಪಿರ್ಯಾದುದಾರರಿಗೆ ತೋರಿಸಿದ್ದು ಪಿರ್ಯಾದುದಾರರ ದೋಣಿಯ ಯಮಹಾ ಕಂಪೆನಿಯ 8 ಹೆಚ್ಪಿ ಯಂತ್ರ ಕೂಡಾ ಇದ್ದುದನ್ನು ನೋಡಿ ಗುರುತಿಸಿರುವುದಾಗಿದೆ. ಕಳುವಾದ ಮೀನುಗಾರಿಕಾ ದೋಣಿಯ ಇಂಜಿನ್‌ನ ವಿವರ: 1) ಯಮಹಾ ಕಂಪೆನಿಯ 8 ಹೆಚ್ಪಿ (ಇಕೆ8ಡಿಎಂಹೆಚ್‌ಎಲ್) 2) ಇಂಜಿನ್ ನಂಬ್ರ 680ಕೆಎಲ್- 1009302 3) ಕಾರ್ಟುನ್ ನಂಬ್ರ.373939 4) ಅಂದಾಜು ಮೌಲ್ಯ ರೂ. 1,15,949-00 ಆಗಿರುತ್ತದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2014 ರ ರಾತ್ರಿ 08-00 ಗಂಟೆಯಿಂದ ದಿನಾಂಕ 27-03-2014ರ ಬೆಳಿಗ್ಗೆ 05-30 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಕೋಟೆಪುರ ನೇತ್ರಾವತಿ ನದಿ ಕಿನಾರೆಯಲ್ಲಿ ಫಿರ್ಯಾದಿದಾರರಾದ ಶ್ರೀ ಬಾವಾ ರವರು ನಿಲ್ಲಿಸಿದ್ದ ಮೀನುಗಾರಿಕಾ ದೋಣಿಯಲ್ಲಿ ಅಳವಡಿಸಿರುವ ಯಮಹಾ 8 ಹೆಚ್‌ಪಿ ಇಂಜಿನ್ ಕಾಣೆಯಾಗಿರುವ ವಿಚಾರದಲ್ಲಿ ಫಿರ್ಯಾದುದಾರರು ದಿನಾಂಕ 27-03-2014 ರಂದು ಠಾಣೆಯಲ್ಲಿ ದೂರು ನೀಡಿದಂತೆ ಉಳ್ಳಾಲ ಠಾಣೆಯಲ್ಲಿ ಎನ್‌ಸಿಆರ್ ನಂಬ್ರ. 134/2014 ರಲ್ಲಿ ನೊಂದಾಯಿಸಿಕೊಳ್ಳಲಾಗಿರುತ್ತದೆ. ಇತ್ತೀಚೆಗೆ ಮೀನುಗಾರಿಕಾ ದೋಣಿಯ ಇಂಜಿನ್ ಮತ್ತು ಆರೋಪಿಯನ್ನು ಪಡುಬಿದ್ರೆ ಪೊಲೀಸರು ಪತ್ತೆ ಹಚ್ಚಿದ ವಿಚಾರವನ್ನು ದಿನಪತ್ರಿಕೆ ಹಾಗೂ ಟಿವಿಯಲ್ಲಿ ನೋಡಿ ತಿಳಿದುಕೊಂಡ ಫಿರ್ಯಾದುದಾರರು ಪಡುಬಿದ್ರೆ ಪೊಲೀಸ್ ಠಾಣೆಗೆ ಹೋಗಿ ಫಿರ್ಯಾದಿದಾರರ ಮೀನುಗಾರಿಕಾ ದೋಣಿಯ ಇಂಜಿನನ್ನು ಪತ್ತೆ ಮಾಡಿದ್ದನ್ನು ಗುರುತಿಸಿಕೊಂಡಿದ್ದಲ್ಲದೆ ಆರೋಪಿಗಳ ಪೋಟೋವನ್ನು ನೋಡಿ ಅವರುಗಳ ಹೆಸರು ವಿಳಾಸ ತಿಳಿದುಕೊಂಡು ಫಿರ್ಯಾದಿದಾರರು ದಿನಾಂಕ 12-09-2014 ರಂದು ಠಾಣೆಗೆ ಬಂದು ಕಳುವಾದ ತನ್ನ ದೋಣಿಯ ಇಂಜಿನ್‌ನ ಪತ್ತೆಗೆ ಸಹಕರಿಸುವಂತೆ ಹಾಗೂ ಆರೋಪಿಗಳ ವಿರುದ್ದ ಸೂಕ್ತ ಕ್ತಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ. ಕಳುವಾದ ಮೀನುಗಾರಿಕಾ ದೋಣಿಯ ಇಂಜಿನ್‌ನ ವಿವರ; 1) ಯಮಹಾ ಕಂಪೆನಿಯ 8 ಹೆಚ್ಪಿ (ಇಕೆ8ಡಿಎಂಹೆಚ್‌ಎಲ್) 2) ಇಂಜಿನ್ ನಂಬ್ರ 680ಕೆಎಲ್- 1009302 3) ಕಾರ್ಟುನ್ ನಂಬ್ರ.373939 4) ಅಂದಾಜು ಮೌಲ್ಯ ರೂ. 1,15,949-00 ಆಗಿರುತ್ತದೆ.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 11-9-2014 ರಂದು ಸಂಜೆ 6-30 ರಿಂದ ದಿನಾಂಕ 12-9-2014 ರಂದು ಬೆಳಿಗ್ಗೆ 8-45 ಗಂಟೆಯ ಮದ್ಯೆ ಮಂಗಳೂರು ತಾಲೂಕು ಕೋಟೆಕಾರು ಅಂಚೆಯ ಸೋಮೇಶ್ವರ ಉಚ್ಚಿಲ ಎಂಬಲ್ಲಿರುವ ಸರಕಾರಿ ಪ್ರೌಢ ಶಾಲೆಯ ಬೀಗವನ್ನು ಯಾರೋ ಕಳ್ಳರು ಒಡೆದು ಒಳಪ್ರವೇಶಿಸಿ ಕಪಾಟುಗಳ ಬೀಗ ಒಡೆದಿದ್ದು, ಕಪಾಟಿನೊಳಗೆ ಇಟ್ಟಿದ್ದ 1)ಕ್ಯಾನನ್ ಕಂಪೆನಿಯ ಡಿಜಿಟಲ್ ಕ್ಯಾಮರ-1 2)ಕಪ್ಪು ಬಣ್ಣದ ರೀಲ್ ಹಾಕುವ ಕ್ಯಾಮರ ಹಾಗೂ ಶಾಲೆಗೆ ಸಂಬಂಧಿಸಿದ ದಾಖಲೆ ಪತ್ರಗಳು, ಉತ್ತರ ಪತ್ರಿಕೆಗಳು, ಪುಸ್ತಕಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 10,000-00 ಆಗಬಹುದು.
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ರಿಯಾಜ್ ರವರು ಕೆಎ 19 ಡಿ 869 ನೇ ನಂಬ್ರದ ಟಾಟಾ ಎಸಿ ವಾಹನವನ್ನು ಇಟ್ಟುಕೊಂಡು ಬಾಡಿಗೆಗೆ ನಡೆಸಿ ಜೀವನ ಸಾಗಿಸುತ್ತಿದ್ದು, ಸುಮಾರು ಒಂದು ವಾರದ ಹಿಂದೆ ಶೇಖ್ ಎಂಬವರು ಮಂಗಳೂರು ತಾಲೂಕು, ಕೋಟೆಕಾರ್ ಗ್ರಾಮದ ಬಾಡಿಗೆ ಮನೆಯನ್ನು ಬಿಟ್ಟು ಬೀರಿಗೆ ತನ್ನ ಮನೆ ಸಾಮಾನುಗಳನ್ನು ಪಿರ್ಯಾದುದಾರರ ವಾಹನದಲ್ಲಿ ಸಾಗಿಸಿದ್ದು, ಅದರ ಬಾಡಿಗೆ ಹಣ ಪಿರ್ಯಾದುದಾರರಿಗೆ ನೀಡಲು ಬಾಕಿಯಿರುತ್ತದೆ. ಇದೇ ವಿಚಾರದಲ್ಲಿ ಪಿರ್ಯಾದುದಾರರು ಆತನ ಮಗ ನಿಶಾನ್ ಎಂಬಾತನಲ್ಲಿ ಕೇಳುತ್ತಿದ್ದು, ದಿನಾಂಕ 12-09-2014 ರಂದು ರಾತ್ರಿ 9-00 ಗಂಟೆಗೆ ಪಿರ್ಯಾದುದಾರರನ್ನು ನಿಶಾನ್ ಕೋಟೆಕಾರ್ ಬೀರಿ ಬರುವರೆ ತಿಳಿಸಿದಂತೆ ಪಿರ್ಯಾದುದಾರರು ಅಲ್ಲಿಗೆ ಹೋದಾಗ ನಿಶಾನ್ ಇತರ ಇಬ್ಬರ ಜೊತೆ ಬಂದು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಶಾನ್ ಆತನ ಕೈಯಲ್ಲಿದ್ದ ಚುರಿಯಂತಹ ಆಯುಧದಿಂದ ಪಿರ್ಯಾದಿಯ ಹೊಟ್ಟೆಗೆ, ತಲೆಗೆ ಎಡ ಕಾಲಿಗೆ ಹಣೆಗೆ ತಿವಿದು ರಕ್ತಗೊಳಿಸಿದ್ದು, ಇದೇ ಸಮಯ ಇತರ ಇಬ್ಬರು ಪಿರ್ಯಾದಿಗೆ ಕೈಯಿಂದ ಹಲ್ಲೆ ನಡೆಸಿರುತ್ತಾರೆ.
No comments:
Post a Comment