Friday, September 26, 2014

Mangalore North Cheating Case:02 Arrested

ವಂಚನೆ ಆರೋಪಿಗಳ ಸೆರೆ

               ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಯುಟಿಲಿಟಿ ರಾಯಲ್ ಟವರ್ಸ್ ನ 2 ನೇ ಮಹಡಿಯಲ್ಲಿರುವ ವ್ರಕ್ಷ ಬಿಸ್ ನೆಸ್ ಸೊಲ್ಯುಷನ್ ಸಂಸ್ಥೆಯ ಡೈರೆಕ್ಟರ್ ಗಳು ಏಜೆಂಟ್ ಮುಖಾಂತರ ಸಾರ್ವಜನಿಕರಿಂದ ಕೋಟ್ಯಾಂತರ  ರೂಪಾಯಿ ಸಂಗ್ರಹಿಸಿ ಬಳಿಕ ಹಣವನ್ನು ಮರುಪಾವತಿ ಮಾಡದೆ ವಂಚಿಸಿರುತ್ತಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 172/2014 ಕಲಂ 406, 409, 418, 420, 421, 422 ಜೊತೆಗೆ 34 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ಆರೋಪಿಗಳಾದ 1) ಜೀವರಾಜ್ ಪುರಾಣಿಕ್ (55) ತಂದೆ: ಎ.ಜಿ.ಪುರಾಣಿಕ್, ವಾಸ: ಬಿಲ್ಲವ ಸಂಘದ ಎದುರು, ಸುಲ್ತಾನ್ ಬತ್ತೇರಿ, 2) ರೋಷನ್ ಡಿ ಸೋಜಾ  ತಂದೆ : ಕ್ಸೇಚವಿಯರ್ ಡ ಸೋಜಾ ವಾಸ:  ಕೋಡಿಕಲ್ ಮಂಗಳೂರು ಎಂಬವರನ್ನು ದಿನಾಂಕ 26-09-2014 ರಂದು ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ , ಪೊಲೀಸ್ ಉಪ ಆಯುಕ್ತರು ಅಪರಾಧ , ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪ ವಿಭಾಗ ರವರ ಮಾರ್ಗದರ್ಶನದಂತೆ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. 

 

ಜೀವರಾಜ್ ಪುರಾಣಿಕ್

ರೋಷನ್ ಡಿ ಸೋಜಾ 

No comments:

Post a Comment