ದೈನಂದಿನ ಅಪರಾದ ವರದಿ.
ದಿನಾಂಕ 31.08.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0. |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-08-2014 ರಂದು ಪಿರ್ಯಾದಿದಾರರಾದ ಶ್ರೀ ಫೆಡ್ರಿಕ್ ಮಾರ್ಟಿಸ್ ರವರು ತನ್ನ ಬಾಬ್ತು KA 19 J 8619 ಬಜಾಜ್ ಚೇತಕ ಸ್ಕೂಟರನ್ನು ಬಿಜೈಯಿಂದ ಕೆ ಎಸ್ ಆರ್ ಟಿ ಸಿ ಕಡೆಗೆ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ದೇವು ಪೂಜಾರಿರವರ ಮನೆಯ ಎದುರು ಸಾರ್ವಜನಿಕ ರಸ್ತೆಯ ಬದಿಯಲ್ಲಿ ಪಾರ್ಕ ಮಾಡಿದ KA 19 MC 5301 ಸ್ವೀಪ್ಟ ಕಾರಿನ ಬಾಗಿಲನ್ನು ಅದರ ಚಾಲಕನು ಅಜಾಗರೂಕತೆಯಿಂದ ಏಕಾಏಕಲಿ ತೆರೆದುದ್ದರಿಂದ ಬಾಗಿಲು ಪಿರ್ಯಾಧಿದಾರರ ತಲೆಗೆ ತಾಗಿ ಕೆಳಗೆ ಬಿದ್ದು ಬಲಭುಜ ಹಾಗೂ ತಲೆಹಿಂಬದಿಗೆ ತೀವ್ರ ರಕ್ತಗಾಯವಾಗಿರುವುದಾಗಿದೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-08-2014 ರಂದು ಫಿರ್ಯಾಧುದಾರರಾದ ಶ್ರೀ ಧೀರಜ್ ಕುಮಾರ್ ರವರು ಚೌತಿ ಹಬ್ಬದ ಕಾರ್ಯಕ್ರಮವನ್ನು ವೀಕ್ಷಿಸಲು ಶಾಂತಿನಗರಕ್ಕೆ ಹೋಗಿದ್ದು, ಅಲ್ಲಿ ಅವರ ಪರಿಚಯದ ಪ್ರಿಯಾಸ್ ಭಂಡಾರಿಯು ಫಿರ್ಯಾಧುದಾರರಲ್ಲಿ "ನಿನನ್ ತೂಪೆಯಾ" ಎಂದು ಹೇಳಿ ಹೋಗಿದ್ದು, ನಂತರ ಫಿರ್ಯಾಧುದಾರರು ಅಲ್ಲಿಂದ ತನ್ನ ಮೋಟಾರು ಸೈಕಲ್ ನಂಬ್ರ. ಕೆಎ-21-ಜೆ-8797ನೇದರಲ್ಲಿ ತನ್ನ ಮನೆಯ ಕಡೆ ಹೋಗುತ್ತಾ ರಾತ್ರಿ 22-00 ಗಂಟೆಗೆ ವಿದ್ಯಾನಗರದ ಎಂ.ವಿ.ಶೆಟ್ಟಿ ಕಾಲೇಜಿನ ಎದುರು ತಲುಪಿದಾಗ ಅವರ ಹಿಂದುಗಡೆಯಿಂದ ನ್ಯಾನೋ ಕಾರು ನಂಬ್ರ ಕೆಎ-19-ಎಂ.ಬಿ-3749 ರಲ್ಲಿ ಪ್ರಿಯಾಸ್ ಭಂಡಾರಿ ಯು ಆತನ ಸ್ನೇಹಿತ ಜಗ್ಗು @ ದೀಪಕ್ ನನ್ನು ಪಕ್ಕದ ಸೀಟಿನಲ್ಲಿ ಮತ್ತು ಶೈಲೇಶ್ ನನ್ನು ಹಿಂಬದಿ ಸೀಟಿನಲ್ಲಿ ಕುಳ್ಳಿರಿಕೊಂಡು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧುದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾಧುದಾರರು ಮೋಟಾರು ಸೈಕಲ್ ಸಮೇತಾ ಪಲ್ಟಿಯಾಗಿ ಬಿದ್ದಿದ್ದು, ಫಿರ್ಯಾಧುದಾರರು ಬಿದ್ದಲ್ಲಿಗೆ ಪ್ರಿಯಾಸ್ ಭಂಡಾರಿಯು ತನ್ನ ಕಾರನ್ನು ಚಲಾಯಿಸಿಕೊಂಡು ಬಂದು "ಈ ಇತ್ತೆ ಬದುಕಿಯಾ, ನಿನ್ನನ್ ದೆಪ್ಪಾಂದ್ ಬುಡಯೆ" ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದು, ಈ ಘಟನೆಯಿಂದ ಫಿರ್ಯಾಧುದಾರರ ಬಲಭುಜಕ್ಕೆ, ಬಲಕೈ ರಿಸ್ಟ್ ಗೆ ಬಲಕಾಲಿನ ಕೋಲು ಕಾಲಿಗೆ ರಕ್ತಗಾಯವಾಗಿದ್ದು, ಬೆನ್ನಿಗೆ ಗುದ್ದಿದ ಗಾಯವಾಗಿದ್ದು, ಪೂರ್ವ ದ್ವೇಷದಿಂದ ಆರೋಪಿ ಪ್ರಿಯಾಸ್ ಭಂಡಾರಿಯು ಫಿರ್ಯಾಧುದಾರರನ್ನು ಹಿಂಬಾಲಿಸಿಕೊಂಡು ಬಂದು ಕೊಲ್ಲುವ ಉದ್ದೇಶದಿಂದಲೇ ಫಿರ್ಯಾಧುದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಮಾಡಿ ಗಾಯಗೊಳಿಸಿದ್ದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-08-2014ರಂದು ಮಧ್ಯಾಹ್ನ ಸಮಯ ಸುಮಾರು 12-15 ಗಂಟೆಯಿಂದ ಸಂಜೆ 15-15 ಗಂಟೆಯ ಮಧ್ಯೆ ಮಂಗಳೂರು ನಗರದ ಕರಂಗಲ್ಪಾಡಿ ಕ್ರಾಸ್ ರಸ್ತೆಯಲ್ಲಿರುವ ಪ್ರೆಸಿಡೆನ್ಸಿ ಕ್ರೌನ್ ಕೋರ್ಟ್ ಅಪಾರ್ಟಮೆಂಟಿನಲ್ಲಿರುವ ಪಿರ್ಯಾದಿದಾರರಾದ ಶ್ರೀ ಜಿ. ಸುಧಾಕರ ಭಟ್ ರವರ ಬಾಬ್ತು ಫ್ಲಾಟ್ ನ ಎದುರಿನ ಬಾಗಿಲಿಗೆ ಹಾಕಿದ್ದ ಬೀಗವು ಇಲ್ಲದೇ ಇದ್ದು, ಪಿರ್ಯಾದಿದಾರರು ಒಳಪ್ರವೇಶಿಸಿ ಪರಿಶೀಲಿಸಿದಾಗ ಮನೆಯ ಬೆಡ್ ರೂಮ್ ನ ಕಬ್ಬಿಣದ ಕಪಾಟಿನಲ್ಲಿ ಇರಿಸಿದ್ದ ನಗದು ಮತ್ತು ವಿವಿಧ ನಮೂನೆಯ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಒಟ್ಟು ಮೌಲ್ಯ 13,20,000/- ರೂ ಆಗಬಹುದು.
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಉಮ್ಮರ್ ಫಾರೂಕ್ ರವರು ಮಂಗಳೂರು ಸಿಟಿ ಪ್ಯಾಲೇಸ್ ಬಟ್ಟೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಫಾಲ್ ಎಂಬಾತನ ನಡತೆ ಸರಿಯಿಲ್ಲದ ಕಾರಣ ಅಂಗಡಿ ಮಾಲಕರು ಆತನನ್ನು ಕೆಲಸದಿಂದ ತೆಗೆದು ಹಾಕಿದ್ದದರು. ಇದೇ ದ್ವೇಷದಿಂದ ದಿನಾಂಕ 28-08-2014 ರಂದು 22-15 ಗಂಟೆಗೆ ಪಿರ್ಯಾದಿಯು ಮಂಗಳೂರು ತೊಕ್ಕೊಟ್ಟು ಸಾಗರ್ ಸ್ವೀಟ್ಸ್ ಬೇಕರಿ ಬಳಿ ಇದ್ದಾಗ ಆರೋಪಿತ ನೌಫಾಲ್ ಮತ್ತು ಇತರ ಇಬ್ಬರು ಅಲ್ಲಿಗೆ ಬಂದು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿರುತ್ತಾರೆ. ಇದರಿಂದ ಪಿರ್ಯಾದಿಯ ತಲೆಗೆ, ಮೊಣಕೈಗೆ ಗುದ್ದಿಗಾಯ ಮತ್ತು ಎಡಕೈಬೆರಳಿಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದುದಾರರು ಮಂಗಳೂರು ಕೊಲೋಸೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲುಗೊಂಡಿರುತ್ತಾರೆ.
No comments:
Post a Comment