ದಿನಾಂಕ 26.09.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:24/09/2014 ರಂದು ರಾತ್ರಿ ಸುಮಾರು 8:30 ಗಂಟೆಗೆ ಮಂಗಳೂರು ನಗರದ ಕಂಕನಾಡಿ ಐಡಿಬಿಐ ಬ್ಯಾಂಕ್ ಕಟ್ಟಡದ ಎದುರು ಕಂಕನಾಡಿ- ಪಳ್ನೀರ್ ಕಾಂಕ್ರಿಟ್ ರಸ್ತೆಯಲ್ಲಿ ಕೆಎ-19-ಇಸಿ-3812 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಕಂಕನಾಡಿ ಕಡೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಶ್ರೀ ಉಮರಬ್ಬಾ ರವರ ಜೊತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಅಣ್ಣನ ಮಗ ಮಹಮ್ಮದ್ ಅಲ್ತಾಫ್ (19) ಎಂಬಾತನಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಹಮ್ಮದ್ ಅಲ್ತಾಫ್‌ನು ತಲೆಗೆ, ಕಣ್ಣಿನ ಬಳಿ ಮೂಗಿಗೆ, ಬಲಕೈಗೆ, ಮತ್ತು ಬಲಕಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು, ಗಾಯಾಳು ಮಂಗಳೂರಿನ ಫಳ್ನೀರ್ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-09-2014 ರಂದು ಬೆಳಿಗ್ಗೆ 11:30 ಗಂಟೆಗೆ, ಪಿರ್ಯಾದಿದಾರರಾದ ಶ್ರೀ ಬದ್ರುದ್ದೀನ್ ರವರು ಟವೇರಾ ಕಾರು ನಂಬ್ರ ಕೆಎ-19-ಪಿ-5562 ನೇದನ್ನು ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ಮದಕ ಶಾಲೆಯ ಬಳಿ ಚಲಾಯಿಸಿಕೊಂಡು ಬರುತ್ತಿರುವಾಗ, ಎದುರುಗಡೆಯಿಂದ ಬರುತ್ತಿದ್ದ ಬಸ್ ನಂಬ್ರ ಕೆಎ-19-ಎ-9374 ನೇದನ್ನು ಅದರ ಚಾಲಕ ಸಿಯಾಬ್ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಜಖಂಗೊಂಡಿದ್ದು, ಬಸ್ ಕೂಡಾ ಜಖಂಗೊಂಡಿರುತ್ತದೆ. ಇದರಿಂದ ಯಾವುದೇ ಗಾಯ ನೋವು ಆಗಿರುವುದಿಲ್ಲ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.09.2014 ರಂದು ಫಿರ್ಯಾದಿದಾರರಾದ ಡಾ. ಕೆ.ವಿ. ಜಗದೀಶ್, ಪೊಲೀಸ್ ಉಪ-ಆಯುಕ್ತರು(ಕಾ&ಸು), ಮಂಗಳೂರು ನಗರ ರವರು ಕೊಣಾಜೆ ಠಾಣಾ ಸರಹದ್ದಿನಲ್ಲಿ ಸಂಚರಿಸುತ್ತಿರುವಾಗ 01:30 ಗಂಟೆಗೆ ಬಂಟ್ವಾಳ ತಾಲೂಕು, ಫಜೀರು ಗ್ರಾಮದ ಗ್ರಾಮಚಾವಡಿ ಎಂಬಲ್ಲಿ ಲಾರಿ ನಂಬ್ರ ಕೆಎ-25ಬಿ-9400 ನೇಯದನ್ನು ಪರಿಶೀಲಿಸಲಾಗಿ ಆರೋಪಿ 1, 2 ಮತ್ತು 3ನೇ ಆರೋಪಿಗಳು ಸೇರಿಕೊಂಡು ಸುಮಾರು ರೂ. 25,000/- ಬೆಲ ಬಾಳುವ ಸುಮಾರು 16 ಟನ್ ಮರಳನ್ನು ಎಲ್ಲಿಂದೂ ಕಳವು ಮಾಡಿ ತಂದು ಅದಕ್ಕೆ ಸಿಮೆಂಟ್ ಹುಡಿ ಸೇರಿಸಿ ರೆಡಿಮಿಕ್ಸ್ ತಯಾರಿಸಿ ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿ, ಕರ್ನಾಟಕ ಸರಕಾರಕ್ಕೆ ಸೂಕ್ತ ರಾಜಧನವನ್ನು ಪಾವತಿಸದೇ, ಯಾವುದೇ ದಾಖಲೆ ಪತ್ರಗಳಿಲ್ಲದೇ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಹೊರ ಜಿಲ್ಲೆಗೆ ಅಥವಾ ಹೊರ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮಹಜರು ಮೂಲಕ sಸ್ವಾಧೀನ ಪಡಿಸಿಕೊಂಡು, ಆರೋಪಿಗಳಲ್ಲಿ ಅಶ್ರಫ್ ಮತ್ತು ಅಶೋಕ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮದ ಬಗ್ಗೆ ವರದಿ ಸಮೇತ ಕೊಣಾಜೆ ಪೊಲೀಸ್ ಠಾಣೆಗೆ ಹಾಜರು ಪಡಿಸಿರುವುದಾಗಿದೆ.
4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಮಹಮ್ಮದ್ ರಿಜ್ವಾನ್ ರವರು ದಿನಾಂಕ 24-09-2014 ರಂದು ರಾತ್ರಿ 9-20 ಗಂಟೆಗೆ ಮೂಡುಶೆಡ್ಡೆಯ ಪಂಚಾಯತ್ ಕಚೇರಿ ಜಂಕ್ಷನ್ ಬಳಿ ನಿಂತುಕೊಂಡು ತನ್ನ ಸ್ನೇಹಿತನಿಗಾಗಿ ಕಾಯುತ್ತಿದ್ದಾಗ ಅಲ್ಲಿಗೆ ಮುಡುಶೆಡ್ಡೆಯ ವಾಸಿಗಳಾದ ಚರಣ್, ಪಚ್ಚು @ ಪ್ರಶಾಂತ್, ರವಿ, ಸಂತು @ ಪೇದ್ರು ಮತ್ತು ಈಗ ಗುರುಪುರದಲ್ಲಿರುವ ಸಂದೀಪ್ ರವರು ಬಂದು ಅವರ ಪೈಕಿ ಚರಣ್ ಎಂಬಾತನು ಫಿರ್ಯಾಧುದಾರರಲ್ಲಿ ನೀನು ಏನು ಇಲ್ಲಿ ನಿಂತಿರುವುದು ಎಂದು ಕೇಳಿದಾಗ ಫಿರ್ಯಾಧುದಾರರು ತಾನು ತನ್ನ ಸ್ನೇಹಿತನಿಗಾಗಿ ಕಾಯುವುದಾಗಿ ಹೇಳುತ್ತಿದ್ದಂತೆಯೇ ಚರಣ್ ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಫಿರ್ಯಾದುದಾರರ ತಲೆಗೆ ಹೊಡೆದಾಗ ಫಿರ್ಯಾಧುದಾರರು ಗಾಬರಿಯಿಂದ ತನ್ನ ಎಡಕೈ ಅಡ್ಡ ಹಿಡಿದಾಗ ಏಟು ಫಿರ್ಯಾಧುದಾರರ ಎಡ ಕೈಗೆ ಬಲವಾಗಿ ಬಿದ್ದಿದ್ದು, ಫಿರ್ಯಾಧುದಾರರು ಚರಣ್ ನನ್ನು ಬಲವಾಗಿ ದೂಡಿ ಅಲ್ಲಿಂದ ಓಡಲು ಪ್ರಯತ್ನಿಸುತ್ತಿದ್ದಂತೆಯೇ ಸಂದೀಪ್ ಆತನ ಕೈಯಲ್ಲಿದ್ದ ರಾಡ್ ನಿಂದ ಫಿರ್ಯಾಧುದಾರರ ಬಲಕಾಲಿನ ಮೊಣಗಂಟಿಗೆ ಹೊಡದಿದ್ದು, ಫಿರ್ಯಾಧುದಾರರು ಅಲ್ಲಿಂದ ಮುಂದಕ್ಕೆ ಓಡುತ್ತಿದ್ದಂತೆಯೇ ಸಂದೀಪ್ ಪುನಃ ರಾಡ್ನಿಂದ ಫಿರ್ಯಾಧುದಾರರ ಬೆನ್ನಿಗೆ ಹೊಡೆದಿದ್ದು, ಫಿರ್ಯಾಧುದಾರರು ಅಲ್ಲಿಂದ ಓಡಿ ಮಸೀದಿ ಒಳಗಡೆ ಹೋಗಿದ್ದು, ಈ ಘಟನೆ ನಡೆಯುವ ಸಮಯ ಫಿರ್ಯಾಧುದಾರರ ಜೊತೆ ಇದ್ದ ಬಾತಿಷ ರವರು ಫಿರ್ಯಾಧುದಾರರಿಗೆ ಹೊಡೆಯುವುದನ್ನು ತಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗದೇ ಇದ್ದು, ಅವರು ಕೂಡಾ ಅಲ್ಲಿಂದ ಓಡಿ ಹೋಗಿದ್ದು, ಈ ಹಲ್ಲೆಯಿಂದ ಫಿರ್ಯಾಧುದಾರರ ಎಡಕೈಗೆ, ಬಲಕಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು, ಬೆನ್ನಿಗೆ ತರಚಿದ ಗಾಯವಾಗಿದ್ದು, ಚಿಕಿತ್ಸೆಗಾಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.09.2014 ರಂದು ಪಿರ್ಯಾದಿದಾರರಾದ ಶ್ರೀ ನಿರ್ಮಲ್ ಕುಮಾರ್ ರವರು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ: KA-21-L-4316 ನೇ ದರಲ್ಲಿ ಆಲಂಗಾರ್ ನಿಂದ ಮೂಡಬಿದ್ರೆ ಪೇಟೆ ಕಡೆ ಬರುತ್ತಿರುವ ಸಮಯ ಸುಮಾರು ಮದ್ಯಾಹ್ನ 14.00 ಗಂಟೆಗೆ ಮೂಡಬಿದ್ರೆ ಬಸ್ ನಿಲ್ದಾಣಕ್ಕೆ ತಿರುಗುವ ಡಾಮಾರು ರಸ್ತೆಗೆ ತಲುಪುವಾಗ ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಹಿಂದಿನಿಂದ ಬರುತ್ತಿದ್ದ ಬಸ್ ನಂಬ್ರ : KA-19-B-7607 ನೇ ದರ ಚಾಲಕ ರಾಜವರ್ಮ ಎಂಬವರು ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಮೂಗು ಮತ್ತು ತುಟಿಗೆ, ಹಲ್ಲಿಗೆ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-09-2014 ರಂದು ರಾತ್ರಿ ಸುಮಾರು 11-30 ಗಂಟೆ ಸಮಯಕ್ಕೆ ಈ ಪ್ರಕರಣದ ಪಿರ್ಯಾದಿದಾರರಾದ ಶ್ರೀ ಪಿ. ಸಂತೋಷ್ ಐತಾಳ್ ಇವರು ತನ್ನ ಕಛೇರಿಯ ಬಾಗಿಲಗೆ ಬೀಗ ಹಾಕಿ ಕಛೇರಿಯ ಹಿಂಬದಿಯಲ್ಲಿರುವ ಮನೆಗೆ ಹೋಗಿದ್ದು, ದಿನಾಂಕ 25-09-2014 ರಂದು ಬೆಳಿಗ್ಗೆ ಸುಮಾರು 06-15 ಗಂಟೆ ಸಮಯಕ್ಕೆ ಕಛೇರಿಗೆ ಬಂದಾಗ ಕಛೇರಿಯ ಬಾಗಿಲಿನ ಬೀಗ ಮುರಿದು ಬಾಗಿಲು ಸ್ವಲ್ಪ ತೆರೆದಿರುವುದನ್ನು ಕಂಡು ಯಾರೋ ಕಳ್ಳರು ಕಛೇರಿಯ ಒಳಗಡೆ ಹೋಗಿರಬಹುದೆಂದು ಸಂಶಯಿಸಿ, ಈ ವಿಚಾರವನ್ನು ತನ್ನ ಸಂಬಂದಿಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆಯ ನಂತರ ಪಿರ್ಯಾದಿದಾರರು ಕಛೇರಿಯ ಒಳಗಡೆ ಹೋಗಿ ನೋಡಿದಾಗ ಕಛೇರಿಯ ಒಳಗಡೆ ತನ್ನ ಕಕ್ಷಿದಾರರಿಂದ ದಾಖಲಾತಿಗಳ ನೊಂದಣಿ ಬಗ್ಗೆ ಪಡೆದುಕೊಂಡಿದ್ದ ನಗದು ಕಳವಾಗದೆ ಇದ್ದು, ಕಛೇರಿಯ ಒಳಗಡೆ ಯಾವುದೇ ವಸ್ತುಗಳು ಕಳ್ಳತನ ಆಗಿರುವುದಿಲ್ಲವಾಗಿದೆ.
No comments:
Post a Comment