Monday, September 8, 2014

2 Robbers Arrested : Property Recovered

ಪಾಂಡೇಶ್ವರ ಠಾಣಾ ಪೊಲೀಸರಿಂದ ಸರ ಸುಲಿಗೆ, ವಾಹನ ಹಾಗೂ ಮನೆ ಕಳ್ಳರ  ಬಂಧನ

     ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ಇವರಿಗೆ ದಿನಾಂಕ 06-09-2014ರಂದು ಮಂಗಳೂರು ನಗರದ ಪಾಂಡೇಶ್ವರದ ಶಿವನಗರ ಎಂಬಲ್ಲಿ KA 19 EK 8707 ನೊಂದಣಿ ಸಂಖ್ಯೆಯ ಯಮಹಾ ಕಂಪನಿಯ F-Z ದ್ಚಿಚಕ್ರ ವಾಹನದಲ್ಲಿ ಇಬ್ಬರು ಯುವಕರು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತಂತೆ ಕೂಡಲೇ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರೊಂದಿಗೆ ಶಿವನಗರ ಪರಿಸರಕ್ಕೆ ತಲುಪಿದಾಗ ಎದುರುಗಡೆಯಿಂದ ಮಾಹಿತಿಯಲ್ಲಿ ದೊರೆತ ಬೈಕ್ ನಲ್ಲಿ ಇಬ್ಬರು ಯುವಕರು ಬರುತ್ತಿರುವುದನ್ನು ಕಂಡು ಪೊಲೀಸ್ ಜೀಪನ್ನು  ಅವರ ಬೈಕ್ ಗೆ ಅಡ್ಡ ಇಟ್ಟು ತಡೆದು ನಿಲ್ಲಿಸಿ ಕೂಡಲೇ ಅವರನ್ನು ಸುತ್ತುವರಿದು ಅವರಲ್ಲಿ ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದಾಗ  ಅವರುಗಳ ಪೈಕಿ ಬೈಕ್ ಚಾಲಕ ತನ್ನ ಶರ್ಟ್ ನ ಕಿಸೆಗೆ ಕೈ ಹಾಕಿ ಕಿಸೆಯಿಂದ ಒಂದು ಆರ್. ಸಿ. ಯ ಜೆರಾಕ್ಸ್ ಪ್ರತಿಯನ್ನು ತೆಗೆದು ಹಾಜರುಪಡಿಸಿರುತ್ತಾನೆ. ಅದನ್ನು ಪರಿಶೀಲಿಸಿ ನೋಡಿದಾಗ ಅದರಲ್ಲಿ ನಮೂದಿಸಿರುವ ನೊಂದಣಿ ಸಂಖ್ಯೆ ಗೂ ಅವರು ಚಲಾಯಿಸುತ್ತಿದ್ದ ದ್ಚಿಚಕ್ರ ವಾಹನದ ನೊಂದಣೆ ಸಂಖ್ಯೆಗೂ  ಒಂದಕ್ಕೊಂದು ಹೊಂದಾಣಿಕೆಯಾಗಿರುವುದಿಲ್ಲ. ಅವರ ಮೇಲೆ ಸಂಶಯಗೊಂಡು ಅವರುಗಳನ್ನು ಅರೆಸ್ಟ್  ಮಾಡಿ  ತೀವ್ರವಾಗಿ ಪ್ರಶ್ನಿಸಿದಾಗ ದಿನಾಂಕ  07/08-08-2014ರಂದು ಮುನೀರ್ ಹಾಗೂ ಶೈರಾಜ್ ಹಾಗೂ ಇತರ ಸಹಚರ ಜೊತೆ ಸೇರಿಕೊಂಡು ಮಧ್ಯರಾತ್ರಿಯಲ್ಲಿ  ವೇಳೆ ಕೋಣಾಜೆಯ ಪಜೀರ್ ಎಂಬಲ್ಲಿರುವ ಇಂಪೋಸಿಸ್ ಹತ್ತಿರದ ಒಂದು ಮನೆಯ ಹಂಚು ತೆಗೆದು ಒಳಗಡೆ ಇಳಿದು ನಗದು ಹಣ 5000/- ಹಾಗೂ ಹಿತ್ತಾಳೆಯ ಗಿಂಡೆ ಕಳವು ಮಾಡಿದ್ದು ಹಾಗೂ ಕಳವು ಮಾಡಿ ವಾಪಾಸು ಬರುತ್ತಿದ್ದ ವೇಳೆ ಕೈರಂಗಳ ಎಂಬಲ್ಲಿರುವ BCM ಹಾಸ್ಟೇಲ್ ಕಂಪೌಂಡಿನಿಂದ ಬೈಕ್ ಕಳವು ಮಾಡಿಕೊಂಡು ಬಂದಿರುವ ಬಗ್ಗೆ ಹಾಗೂ ದಿನಾಂಕ 18-08-2014ರಂದು  ಮುನೀರ್ ಮುತ್ತು ಶೈನಾಜ್ ಜೊತೆಯಾಗಿ KA 19 EK 8707 ನೊಂದಣೆ ಸಂಖ್ಯೆಯ ಬೈಕ್ ನಲ್ಲಿ ಸುರತ್ಕಲ್ ನ ಕಾಟಿಪಳ್ಳ 3ನೇ ಬ್ಲಾಕ್ ನಲ್ಲಿ ಮೊಸರು ಕುಡಿಕೆ ದಿನದಂದು ರಸ್ತೆಯಲ್ಲಿ ಎರಡು ಕಡೆಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯವರ ಕುತ್ತಿಗೆಯಿಂದ ಒಂದೇ ದಿನ ಎರಡು ಕಡೆಗಳಲ್ಲಿ ಚಿನ್ನದ ಮಾಂಗಲ್ಯ ಸರವನ್ನು ಸುಲಿಗೆ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ.

 

ಆರೋಪಿಗಳಿಂದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ಎರಡು ಚಿನ್ನದ ಮಾಂಗಲ್ಯ ಸರ ಹಾಗೂ ಮನೆ ಕಳವಿಗೆ ಸಂಬಂಧಿಸಿದ ಹಿತ್ತಾಳೆಯ ಗಿಂಡಿ, ಕಳವು ಮಾಡಿದ ವಾಹನಕ್ಕೆ ಸಂಬಂಧಿಸಿದ ದಾಖಲೆಯ ಪ್ರತಿ ಇತ್ಯಾದಿ ಸೊತ್ತುಗಳನ್ನು ಹಾಗೂ ಸರ ಸುಲಿಗೆ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ನ್ನು ಸ್ವಾಧೀನಪಡಿಸಲಾಗಿದೆ.

 

ಆರೋಪಿಗಳ ಹೆಸರು ವಿಳಾಸ

1.   ಮುನೀರ್, ಪ್ರಾಯ 21 ವರ್ಷ, ತಂದೆ- ಅಬ್ದುಲ್ ರಜಾಕ್, ಮನೆ ನಂಬ್ರ 5-6838, ಶಾಂತಿಗುಡ್ಡೆ, ಕಲ್ಲೋಣಿ, ಬಜಪೆ, ಮಂಗಳೂರು ತಾಲೂಕು.

2.  ಶೈರಾಜ್, ಪ್ರಾಯ 20 ವರ್ಷ, ತಂದೆ- ಬಿ. ಬಾವ, ವಾಸ-ಅಸ್ಪಕ್ ಮಂಜೀಲ್, ಬದ್ರಿಯಾ ಮಸೀದಿ ಬಳಿ ಮನೆ, ಅಂಗಾರಗುಂಡಿ, ಬೈಕಂಪಾಡಿ, ಮಂಗಳೂರು ತಾಲೂಕು

 

       ಪತ್ತೆ ಕಾರ್ಯಾಚಾರಣೆ :-

    ಮಾನ್ಯ ಆರ್. ಹಿತೇಂದ್ರ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ. ವಿ. ಜಗಧೀಶ್, ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ರವರು ಆರೋಪಿಯನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿದ್ದು ಪಾಂಡೇಶ್ವರ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಅನಂತ ಮುರ್ಡೇಶ್ವರ ಹಾಗೂ ಹಾಗೂ ಸಿಬ್ಬಂದಿಯವರು. ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.

No comments:

Post a Comment