ದೈನಂದಿನ ಅಪರಾದ ವರದಿ.
ದಿನಾಂಕ 17.09.2014 ರ 06-00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರಿ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿ.ಜಯಪ್ರಕಾಶ್ರವರು ದಿನಾಂಕ 15-09-2014 ರಂದು ಎಮ್ .ಆರ್ ಪಿ,ಎಲ್ ನಿಂದ ಮನೆ ಕಡೆಗೆ ನಡೆದುಕೊಂಡು ಹೋಗುತ್ತಾ ಸಂಜೆ ಸುಮಾರು 07.30 ಗಂಟೆಗೆ ಗಣೇಶಪುರ ದೇವಸ್ಥಾನ ದ ಬಳಿಗೆ ತಲುಪಿದಾಗ ಆರೋಪಿ ಕೆ.ಎ 19.ಇಜಿ.4723 ನೇ ಮೋಟಾರ್ ಸೈಕಲನ್ನು ಸವಾರ ಇಬ್ರಾಹಿಂ ಎಂಬವರು ಎಮ್ .ಆರ್ .ಪಿ.ಎಲ್ ಕಡೆಯಿಂದ ಕಾಟಿಪಳ್ಳ ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ರಸ್ತೆಯ ಬದಿಯಲ್ಲಿ ಹೋಗುತ್ತಿದ್ದ ಪಿರ್ಯಾದಿ ಜಯಪ್ರಕಾಶ್ ಎಂಬವರಿಗೆ ಢಿಕ್ಕಿಪಡಿಸಿದ್ದು ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಗಂಭೀರ ಸ್ವರೂಪದ ಮೂಳೆ ಮುರಿತದ ಗಾಯವಾಗಿ ಪದ್ಮಾವತಿ ಆಸ್ಪತ್ರೆ ಸುರತ್ಕಲ್ ಮಂಗಳೂರು ಇಲ್ಲಿ ಒಳರೋಗಿ ದಾಖಲಾಗಿರುತ್ತಾರೆ.
2.ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ಎ,ಮಹಮ್ಮದ್ ಮಗಳು ಮೈಮುನಾ 20 ವರ್ಷ ಎಂಬವಳು ತನ್ನ ಮನೆಯಾದ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಕಟ್ಟ ಪುಣಿ ಎಂಬಲ್ಲಿಂದ ಗುರುಪುರಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ಸಂಜೆಯಾದರೂ ಮನೆಗೆ ಬಾರದೇ ಇದ್ದು, ಅವಳನ್ನು ಗುರುಪುರ, ಕೈಕಂಬ, ಹಾಗೂ ಇತರ ಕಡೆಗಳಲ್ಲಿ ಮತ್ತು ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಈ ವರೆಗೂ ಪತ್ತೆಯಾಗದೇ ಇರುತ್ತಾರೆ.
3.ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದುದಾರರಾದ ಶ್ರೀಮತಿ ಜಯಂತಿ ಸೊಸೆ ಯಶೋಧಾಳೊಂದಿಗೆ ದಿನಾಂಕ 15-9-2014 ರಂದು ಪೊಳಲಿ ದೇವಸ್ಥಾನಕ್ಕೆಂದು ಹೋಗಲು ಬಸ್ ಸ್ಟಾಪ್‌ಗೆ ಬರುವರೇ ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದಂತೆ ಕೆನರಾ ಬ್ಯಾಂಕಿನ ಸ್ವಲ್ಪ ಮುಂದೆ ಬೆಳಿಗ್ಗೆ ಸುಮಾರು 11-30 ಗಂಟೆಗೆ ಅಟೋ ರಿಕ್ಷಾ ನಂಬ್ರ ಕೆಎ 19 ಸಿ 2224 ನೇ ಅಟೋ ರಿಕ್ಷಾ ಚಾಲಕ ತನ್ನ ಅಟೋ ರಿಕ್ಷಾವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಅವರುಗಳು ರಸ್ತೆ ಬದಿಯ ನೀರು ಹೋಗುವ ತೋಡಿಗೆ ಎಸೆಯಲ್ಪಟ್ಟು, ಪಿರ್ಯಾದುದಾರರ ಬಲಕಾಲಿನ ಮೊಣಕಾಲಿಗೆ, ಬಾಯಿಯ ಮೇಲ್ಬಾಗಕ್ಕೆ, ಹಲ್ಲುಗಳು ಉದುರಿ ಹೋಗಿ, ಹಣೆಗೆ ರಕ್ತಗಾಯವಾಗಿರುತ್ತದೆ. ಹಾಗೂ ಯಶೋಧಾರವರ ಎಡಕಾಲಿನ ಮೊಣಗಂಟಿಗೆ, ಎಡಕೈಗೆ, ಬಲ ಗಲ್ಲಕ್ಕೆ ರಕ್ತಗಾಯವಾಗಿರುತ್ತದೆ. ಈ ಅಪಘಾತಕ್ಕೆ ಕೆಎ 19 ಸಿ 2224 ನೇ ಅಟೊ ರಿಕ್ಷಾ ಚಾಲಕನು ತನ್ನ ರಿಕ್ಷಾವನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ ಅಲ್ಲದೇ ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರಿಗೂ ರಕ್ತಗಾಯವಾಗಿರುತ್ತದೆ.
4. ಮೂಲ್ಕಿ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 16-09-2014 ರಂದು 12-00 ಗಂಟೆಗೆ ಪಿರ್ಯಾದಿದಾರರಾದ ಜಯಂತಿ ರವರಿಗೆ ಅವರ ಅಣ್ಣ ಮಾಧವ ರವರು ಜಾಗದ ವಿಚಾರದಲ್ಲಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ಮರದ ಸೋಂಟೆಯನ್ನು ಹಿಡಿದು ಬೆದರಿಸಿ ಜಾಗದ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ.
5. ಕಾವೂರು ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದುದಾರರಾದ ಪೀಟರ್ ಡಿಸೋಜ ದೇರೆಬೈಲು ಗ್ರಾಮದ ಮೋಸ್ಟ್ ಹೋಲಿ ರೆಡಿಮರ್ ಚರ್ಚನಲ್ಲಿ ಶೋಕಮಾತೆಯ ಹಬ್ಬದ, 6 ದಿನದ ಪ್ರಾರ್ಥನಾ ವಿಧಿಯ ನಿಮಿತ್ತ ಕಾಣಿಕೆ ಡಬ್ಬಿಯನ್ನು ಇರಿಸಿದ್ದು, ದಿನಾಂಕ 15-09-2014 ಬೆಳಿಗ್ಗೆ ನೋಡುವಾಗ ಕಾಣಿಕೆ ಡಬ್ಬಿಯು ಕಾಣೆಯಾಗಿದ್ದು, ಪಿರ್ಯಾದಿಯು ತಮ್ಮ ಸಿ.ಸಿ ಕ್ಯಾಮರಾದಲ್ಲಿ ನೋಡಿದಾಗ ದಿನಾಂಕ 14-09-2014 ರಂದು ಮಧ್ಯಾಹ್ನದ 12-05 ರ ಹೊತ್ತಿಗೆ 50 ರಿಂದ 60 ವರ್ಷದ ಪ್ರಾಯದ ಎಣ್ಣೆ ಕಪ್ಪು ಬಣ್ಣದ ಯಾರೋ ಒಬ್ಬ ವ್ಯಕ್ತಿಯು ಕಾಣಿಕೆ ಡಬ್ಬಿಯನ್ನು ತೆಗೆದುಕೊಂಡು ಹೋಗುವ ದೃಶ್ಯ ಕಂಡು ಬಂದಿದ್ದು, ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು ಅಂದಾಜು 2500/- ರೂಪಾಯಿ ಹಣ ಇರುತ್ತದೆ.
6. ಕಾವೂರು ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದುದಾರರಶ್ರಿ ಅನಿಲ್ ಕುಮಾರ್ ತಮ್ಮ ಬಸವರಾಜ್ ಎಂಬವರು ತನ್ನ ಮನೆಯಾದ ಕುಂಜತ್ತಬೈಲು ಗ್ರಾಮದ ಜ್ಯೋತಿನಗರದಿಂದ ಪಿರ್ಯಾದುದಾರರ ಪತ್ನಿಯವರಲ್ಲಿ ದಿನಾಂಕ 15-09-2014 ಮಧ್ಯಾಹ್ನ 12-30 ಗಂಟೆಗೆ ಊಟ ಮಾಡಿ ನಾನು ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೇಳಿ ಮಂಗಳಾ ಅಸ್ಪತ್ರೆ ಕಡೆಗೆ ಹೋಗಿದ್ದು, ಈ ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.
No comments:
Post a Comment