ದೈನಂದಿನ ಅಪರಾದ ವರದಿ.
ದಿನಾಂಕ 03.09.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0. |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 0 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-09-2014 ರಂದು ಬೆಳಿಗ್ಗೆ 08.45 ರ ವೇಳೆಗೆ ಕೆ ಎ19 ಎ ಎ 3483 ನೇಯದರ ಚಾಲಕ ಅಬ್ದುಲ್ ಜಲೀಲ್ ರವರು ಎನ್ ಎಮ್ ಪಿ ಟಿ ಕೆ ಕೆ ಗೇಟ್ ಮೂಲಕ ನವ ಮಂಗಳೂರು ಬಂದರಿನ ಯಾರ್ಡ್ ನಿಂದ ಸುಮಾರು 18500/- ರೂ ಮೌಲ್ಯದ ಕೋಕ್ ನ್ನು ಯಾವುದೇ ಪರವಾನಗಿ ಇಲ್ಲದೇ ಕದ್ದು ಒಯ್ಯುತ್ತಿದ್ದವರನ್ನು ವಶಕ್ಕೆ ತೆಗೆದುಕೊಂಡು ಟಿಪ್ಪರ್ ಲಾರಿ ಸೇರಿದಂತೆ ತೂಕ ಮಾಡಲಾಗಿ ಒಟ್ಟು ತೂಕ 17420 ಕೆಜಿ ಆಗಿದ್ದು, ಲಾರಿ ಮತ್ತು ಸ್ವತ್ತು ಸಮೇತ ಠಾಣೆಗೆ ತಂದು ಹಾಜರುಪಡಿಸಿರುವುದಾಗಿದೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಶೋಕ ಕುಮಾರ್ ಬಿ.ವಿ. ರವರು ಮಂಗಳೂರಿನ ಕೂಳೂರಿನ ಕಾಮರ್ಸ್ ಸೆಂಟರ್ ಕಟ್ಟಡದ 2 ನೇ ಮಹಡಿಯಲ್ಲಿರುವ ಸಿಕಲ್ ಲೋಜಿಸ್ಟಿಕ್ ಲಿ ಸಂಸ್ಥೆಯ ಲೀಗಲ್ ಮ್ಯಾನೇಜರ್ ಆಗಿದ್ದು, ಮನೋಜ್ ಮತ್ತು ಇತರರನ್ನು ಚಾಲಕರುಗಳಾಗಿ ಒಂದು ವರ್ಷದ ಕರಾರಿನಲ್ಲಿ ಸಂಸ್ಥೆಯ ವಾಹನಗಳಿಗೆ ಏಜೆನ್ಸಿ ಮೂಲಕ ನೇಮಿಸಿಕೊಂಡಿದ್ದು, ಕರಾರು ಮುಗಿದ ಬಳಿಕ ಚಾಲಕರನ್ನು ಕೆಲಸದಲ್ಲಿ ಮುಂದುವರೆಸದೇ, ಬೇರೆ ಚಾಲಕರನ್ನು ಕಂಪೆನಿಯ ನಿಯಮದಂತೆ ನೇಮಕ ಮಾಡಿಕೊಂಡಿದ್ದು, ಇದರಿಂದ ಕೋಪಗೊಂಡ ಆರೋಪಿಗಳಲ್ಲಿ ಒಬ್ಬನಾದ ಮನೋಜ್ ಮತ್ತು ಇತರ ಇಬ್ಬರು 2014 ರ ಜೂನ್ ತಿಂಗಳ ಮೊದಲನೇ ವಾರದಲ್ಲಿ ಕಛೆರಿಗೆ ಅಕ್ರಮ ಪ್ರವೇಶ ಮಾಡಿ ಕಛೇರಿಯ ಮ್ಯಾನೇಜರ್ ಶಿವಮೂರ್ತಿಯವರಿಗೆ ಬೆದರಿಸಿ, ಮತ್ತು ಕ್ಯಾಶಿಯರ್ ನಿಗೂ ಜೀವ ಬೆದರಿಕೆ ಒಡ್ಡಿ ರೂ 25,000 /- ವನ್ನು ಬಲಾತ್ಕಾರದಿಂದ ಪಡೆದುಕೊಂಡಿರುತ್ತಾರೆ.
3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಅನಿತಾ ರವರ ಮನೆಯಲ್ಲಿ ಕೆಲಸ ಮಾಡಲು ಜುಲಾಯಿ 2012 ರಲ್ಲಿ ಸರೋಜಾ, ಪ್ರಾಯ 22 ವರ್ಷ ಎಂಬ ಹುಡುಗಿಯನ್ನು ಮೈಸೂರಿನಲ್ಲಿರುವ ನವೀನ್ ಬಾಬು ಎಂಬವರ ಮುಖಾಂತರ ಬಂದು ಕೆಲಸಕ್ಕೆ ಸೇರಿದ್ದಳು. ದಿನಾಂಕ 28-08-2014 ರಂದು ಫಿರ್ಯಾದಿದಾರರು ಕೆಲಸಕ್ಕೆ ಹೋದ ಸಮಯ ಸುಮಾರು 9-00 ಗಂಟೆಯಿಂದ ಸಂಜೆ 3-30 ಗಂಟೆಯ ಮಧ್ಯಂತರದಲ್ಲಿ ಸರೋಜಾ ಎಂಬವರು ಕಾಣೆಯಾಗಿರುತ್ತಾರೆ. ನಂತರ ಸರೋಜಾ ಎಂಬವಳನ್ನು ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10/11-07-2014 ರಂದು ರಾತ್ರಿ ಸಮಯ ಯಾರೋ ಕಳ್ಳರು, ಮಂಗಳೂರು ತಾಲೂಕಿನ , ಪೆರ್ಮುದೆ ಗ್ರಾಮದ , ಪೆರ್ಮುದೆ ರೆಯ್ಯಾನ್ ಮ್ಯಾರೇಜ್ ಹಾಲ್ ನ ಬಳಿಯಿರುವ ಸಿಮ್ರಾ ಎಂಬ ಹೆಸರಿನ ಮೆಡಿಕಲ್ ಶಾಪ್ ನ ಶಟರ್ ಬಾಗಿಲಿನ ಬೀಗ ಮುರಿದ ಯಾರೋ ಕಳ್ಳರು ಒಳ ನುಗ್ಗಿ ಒಳಗಿದ್ದಂತಹ ಒಂದು ಸಣ್ಣ ಶೀತಲೀಕರಣ ಯಂತ್ರ ಮತ್ತು ಕೆಲವು ಔಷಧಿಗಳು ಅಂದರೆ ಸುಮಾರು 10000/- ರೂ ಮೌಲ್ಯದ ಸೊತ್ತುಗಳನ್ನು ಮತ್ತು ಫಿರ್ಯಾದಿದಾರರಾದ ಶ್ರೀ ಶಪಕತ್ ಅಲಿ ರವರ ಹೆಂಡತಿ ಶ್ರೀಮತಿ ಸಜಿನಾ ಬಾನುರವರು ಸಹಿ ಮಾಡಿ ಇಟ್ಟ ಸಿಂಡಿಕೇಟ್ ಬ್ಯಾಂಕ್ ನ ಬಾಬ್ತು 50000/- ರೂಪಾಯಿಯ ಚಕ್ ನ್ನು ಕಳವು ಮಾಡಿಕೊಂಡು ಹೋಗಿ, ಈ ಚಕ್ಕನ್ನು ಡೆಲ್ಲಿಯ ಸೆಂಟ್ರಲ್ ಮಾರ್ಕೆಟ್ ಪಂಜಾಬಿ ಬಾಗ್ ಸಿಂಡಿಕೇಟ್ ಬ್ಯಾಂಕ್ ನಲ್ಲಿ ವಿಕಾಸ್ ಶರ್ಮ ಮತ್ತು ಪ್ರಮೋದ್ ಶರ್ಮ ಎಂಬವರು ಅವರ ಅಕೌಂಟ್ ಗೆ ಚಕ್ ಹಾಕಿ ಫಿರ್ಯಾದಿದಾರರ ಹೆಂಡತಿಯ ಬಾಬ್ತು ಜೋಕಟ್ಟೆ ಸಿಂಡಿಕೇಟ್ ಬ್ಯಾಂಕ್ ಬ್ರಾಂಚ್ ನಿಂದ ಹಣವನ್ನು ಡೆಲ್ಲಿಯ ಬ್ಯಾಂಕ್ ಗೆ ವರ್ಗಾಯಿಸಿರುವುದಾಗಿದೆ.
No comments:
Post a Comment