Saturday, September 6, 2014

Daily Crime Reports 06-09-2014

ದೈನಂದಿನ ಅಪರಾದ ವರದಿ.

ದಿನಾಂಕ 06.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04-09-2014 ರಂದು ಸಂಜೆ ಸುಮಾರು 4-45 ಗಂಟೆ ಸಮಯಕ್ಕೆ ಮಂಗಳೂರು ನಗರದ ಬಂಟ್ಸ್ ಹಾಸ್ಟೇಲ್ ಬಳಿ ಕೆಎ-19-ಎಂ.ಡಿ-1246 ನಂಬ್ರದ ಕಾರನ್ನು ಆರೋಪಿಯು ಪಿ.ವಿ.ಎಸ್ ಕಡೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ಜ್ಯೋತಿ ಕಡೆಯಿಂದ ಬರುತ್ತಿದ್ದ ಕೆಎ-19-.ಬಿ-4793 ನಂಬ್ರದ ಮೋಟಾರು ಸೈಕಲಿಗೆ ಢಿಕ್ಕಿಪಡಿಸಿ ಹಿಂದುಗಡೆಯಿಂದ ಬರುತ್ತಿದ್ದ ಇನ್ನೊಂದು ಕೆಎ-04-.ಎಸ್-2849 ನಂಬ್ರದ ಮೋಟಾರು ಸೈಕಲಿಗೆ ಢಿಕ್ಕಿಪಡಿಸಿದ ಪರಿಣಾಮ ಎರಡೂ ಮೋಟಾರು ಸೈಕಲುಗಳು ರಸ್ತೆಗೆ ಬಿದ್ದು, ಪಿರ್ಯಾದುದಾರರಾದ ಸುಧಾಕರ ರಾವ್ ರವರ ಎಡಕಣ್ಣಿನ ಮೇಲ್ಬಾಗ ರಕ್ತಗಾಯ, ಎಡಕೈಗೆ ತರಚಿದ ಗಾಯ, ತಲೆಗೆ ರಕ್ತಗಾಯ, ಬಲಕಾಲಿನ ತೊಡೆ ಹಾಗೂ ಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ ಹಾಗೂ ಮೋಟಾರು ಸೈಕಲ್ ನಂ. ಕೆಎ-04-.ಎಸ್-2849 ನೇದರ ಸವಾರ ಜೋನ್ಸನ್ ರವರ ಎಡಕೈ ತಟ್ಟಿಗೆ ಗುದ್ದಿದ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಮತ್ತು ಎಡಕಾಲಿನ ಮೊಣಗಂಟಿಗೆ ಹಾಗೂ ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ ಹಾಗೂ ಸಹಸವಾರಳಾಗಿ ಪ್ರಯಾಣಿಸುತ್ತಿದ್ದ ಶೋಭಾ ರವರಿಗೆ ಸೊಂಟಕ್ಕೆ ಮತ್ತು ಕೈಕಾಲುಗಳಿಗೆ ತರಚಿದ ಗಾಯವಾಗಿ ಮಂಗಳೂರು ವಿಜಯ ಕ್ಲೀನಿಕ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.

 

2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05.09.2014 ರಂದು ಫಿರ್ಯಾದಿದಾರರಾದ ಶ್ರೀ ಅಬ್ದುಲ್ರಹಿಮಾನ್ರವರು ದೇರಳಕಟ್ಟೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ತನ್ನ ಅಳಿಯ ಸರ್ಫುದ್ದೀನ್ರವರೊಂದಿಗೆ ಮನೆಗೆ ಹೋಗುವರೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಬಸ್ನಿಲ್ದಾಣದ ಕಡೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ ಸುಮಾರು 2:40 ಗಂಟೆ ಸಮಯಕ್ಕೆ ಕುತ್ತಾರು ಕಡೆಯಿಂದ ಮೋಟಾರ್ಸೈಕಲ್ನಂಬ್ರ ಕೆಎ-19ಎಕ್ಸ್‌-8706 ನೇಯದನ್ನು ಅದರ ಸವಾರ ಪ್ರವೀಣ್ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಫಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯ, ಎಡಕೈ ತಟ್ಟಿಗೆ, ಎಡಕಾಲಿನ ಕೆಳಗಡೆ ಗುದ್ದಿದ ಗಾಯ ಉಂಟಾಗಿದ್ದು ಗಾಯಾಳು ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-09-2014  ರಂದು ಪಿರ್ಯಾದಿದಾರರಾದ ಶ್ರೀ ಬಾಲಕೃಷ್ಣ ರವರ ಚಿಕ್ಕಪ್ಪ ಮಗ  ಜನಾರ್ಧನರವರು ಅವರ ಬಾಬ್ತು ಕೆಎ-19 ಇಡಿ -4316 ನೇ ಮೋಟಾರ್ ಸೈಕಲ್ ನಲ್ಲಿ ಮೂಡಬಿದ್ರೆಯಿಂದ ತನ್ನ ಮನೆಯಾದ ಮುಚ್ಚೂರು  ಕಡೆಗೆ ಅತೀ ವೇಗ ಹಾಗೊ ಅಜಾಗರೂಕತೆಯಿಂದ ಚಲಾಯಿಸಿ ಮೂಡಬಿದ್ರೆ ಸಮಗಾರ ಗುಂಡಿ ಎಂಬಲ್ಲಿ ಸವಾರನ ಎಡಬದಿ ಇರುವ ಹೋಟೇಲಿನ ಹೊರಗಡೆ ಇರುವ ಕೆಂಪುಕಲ್ಲಿನ ಗಾರೆ ಮಾಡಿರುವ ಕುಳಿತುಕೊಳ್ಳಲು ಅನುಕೂಲವಾಗುವ ಕಟ್ಟೆಗೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ನಿಂದ ಎಸೆಯಲ್ಪಟ್ಟು ತೀವ್ರ ಸ್ವರೂಪದ ಗಾಯ ಉಂಟಾಗಿ ಚಿಕಿತ್ಸೆಯ ಬಗ್ಗೆ ಇಂಡಿಯನ್ ಅಸ್ಪತ್ರಗೆ ದಾಖಾಲಾಗಿರುತ್ತಾರೆ.

 

4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಪವಿತ್ರ ಆನಂದ್ ಇವರ ಸುರತ್ಕಲ್ ಆಕ್ಸಿಸ್ ಬ್ಯಾಂಕ್ ಅಕೌಂಟ್ ನಂಬ್ರ 914010012076283 ನೇದರಿಂದ ದಿನಾಂಕ 07-08-14 ರಂದು ರೂ. 1470/- ಮತ್ತು ದಿನಾಂಕ: 10-08-14 ರಂದು ರೂ. 17,409.70/- ನ್ನು ಯಾರೋ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಅಕೌಂಟ್ ಡೆಬಿಟ್ ಕಾರ್ಡ್ ನ್ನು ಹ್ಯಾಕ್ ಮಾಡಿ ಮೋಸದಿಂದ ಹಣ ಪಡೆದುಕೊಂಡಿದ್ದು ಅಲ್ಲದೇ ಪಿರ್ಯಾದಿದಾರರ ಕರ್ನಾಟಕ ಬ್ಯಾಂಕ್ ಪಣಂಬೂರು ಇದರ ಅಕೌಂಟ್ ನಂಬ್ರ 7557 ನ್ನು ನೇದರ ಡೆಬಿಟ್ ಕಾರ್ಡ್ ನ್ನು ಕೂಡಾ ಹ್ಯಾಕ್ ಮಾಡಿ ದಿನಾಂಕ 03-09-14 ರಂದು 12-30 ಗಂಟೆಗೆ ರೂ 2200/- ಮತ್ತು ರೂ. 968 ನ್ನು ಡ್ರಾ ಮಾಡಿರುವುದಾಗಿದೆ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05/09/2014 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಥಾನಲ್ ಸಂದೀಪ್ ರವರು ತನ್ನ ಬಾಬ್ತು ಕಾರು ನಂಬ್ರ KA 04 MB 2561 ನ್ನು ಕೆಂಜಾರು ವಿಮಾನ ನಿಲ್ದಾಣ ಕಡೆಯಿಂದ ಕಟೀಲು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಮಂಗಳೂರು ತಾಲೂಕು ಬಜಪೆ ಗ್ರಾಮದ ಭಟ್ರಕೆರೆ ಡೈಮಂಡ್ ಹೌಸ್ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಕಾರಿನ ಎದುರಿನಿಂದ ಹೋಗುತ್ತಿದ್ದ ಸ್ಕೂಟರ್ ಸವಾರನು ಒಮ್ಮೆಲೇ ಬ್ರೇಕ್ ಹಾಕಿದ್ದು, ಅದನ್ನು ಕಂಡ ಪಿರ್ಯಾದಿದಾರರು ತನ್ನ ಕಾರನ್ನು ನಿಲ್ಲಿಸುವರೇ ಬ್ರೇಕ್ ಹಾಕಿದಾಗ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಕಾರು ನಂಬ್ರ KA 19 MC 3666 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಜಖಂಗೊಂಡಿರುತ್ತದೆ.

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅರ್ಜುನ್ ರವರು, ರಾಜನ್ ಮತ್ತು ರಾಜ ಎಂಬವರ ಜೊತೆ ಮಂಗಳೂರು ತಾಲೂಕು, ಕೊಳಂಬೆ ಗ್ರಾಮದ ನಂದ ಬೆಟ್ಟು ಎಂಬಲ್ಲಿ ನಿತಿನ್ ಕನ್ಸ್ಟ್ರಕ್ಷನ್ ರವರ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದು, ಅಲ್ಲಿ ಸೈಟಿನ ಮಧ್ಯೆ ವಿದ್ಯುತ್ ಸಂಪರ್ಕಕ್ಕಾಗಿ ಕಬ್ಬಿಣದ ಪೈಪ್ ಗಳನ್ನು ಅಳವಡಿಸಿ ಅದಕ್ಕೆ  ವಯರುಗಳನ್ನು ಕಟ್ಟಿದ್ದು, ಅದರ ಮೂಲಕ ಹರಿಯುತ್ತಿದ್ದ ವಿದ್ಯುತ್ ಸೋರಿಕೆಯಾಗಿ ದಿನಾಂಕ: 05-09-2014 ರಂದು 12-15 ಗಂಟೆಗೆ  ಕಬ್ಬಿಣದ ಪೈಪಿನ ಮೂಲಕ ಹರಿದು ಬಂದುದರಿಂದ ಅದು ರಾಜನ್ ಮತ್ತು ರಾಜ ಕಾಮಗಾರಿಗಾಗಿ ತೆಗೆದುಕೊಂಡು ಹೋಗುತ್ತಿದ್ದ ಸೆಂಟ್ರಿಂಗ್ ರಾಡ್ ಗೆ ತಗುಲಿ  ಶಾಕ್ ಹೊಡೆದು, ಅಸ್ವಸ್ಥಗೊಂಡವರನ್ನು ಆಸ್ಪತ್ತೆಗೆ ಸಾಗಿಸಿದಾಗ, ರಾಜ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು, ರಾಜನ್ .ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಅವಘಡಕ್ಕೆ ನಿತಿನ್ ಕನ್ಸ್ಟ್ರಕ್ಷನ್ ಮಾಲಕರಾದ ನಿತಿನ್ ಮತ್ತು ಇಂಜಿನಿಯರ್ ಅಬ್ಬಾಸ್ ರವರು ನಿರ್ಲಕ್ಷ್ಯತನದಿಂದ ಕಬ್ಬಿಣದ ಪೈಪಿಗೆ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ವಿದ್ಯುತ್ ವಯರುಗಳನ್ನು ಅಳವಡಿಸಿದ್ದೇ ಕಾರಣವಾಗಿರುತ್ತದೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-09-2014 ರಂದು 14-30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಚಂದ್ರಶೇಖರ ರವರು ತನ್ನ ಬಾಬ್ತು KA 19 U 9940 ನೇ ಆಕ್ಟಿವ್ಹೊಂಡಾ ದ್ವಿಚಕ್ರ ವಾಹನದಲ್ಲಿ ಕೋಟೆಕಾರು ಬೀರಿ ಕಡೆಯಿಂದ ರಾ.ಹೆ. 66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ, ಮಂಗಳೂರು ತಾಲೂಕು, ಕೋಟೆಕಾರು ಗ್ರಾಮದ ರಾ.ಹೆ. 66 ಪಾರೆಸ್ಟ್ಬಳಿ ತಲುಪುತ್ತಿದ್ದಂತೆ ಅವರ ಹಿಂಬದಿಯಿಂದ ಯಾವುದೋ ವಾಹನವೊಂದನ್ನು ಅದರ ಚಾಲಕ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ಪಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದುದರಿಂದ ಪಿರ್ಯಾದುದಾರರು ರಸ್ತೆ ಬಿದ್ದು, ಅವರ ಬಲಭಾಗದ ತಲೆಗೆ ಮತ್ತು ಕಣ್ಣಿನ ಬಳಿ ಗುದ್ದಿದ ಮತ್ತು ರಕ್ತಗಾಯ, ಬಲಕೈಗೆ, ಅಂಗೈಗೆ ತರಚಿದ ಮತ್ತು ರಕ್ತಗಾಯ, ಬಲಕಾಲಿನ ಮೊಣಗಂಟಿಗೆ, ಪಾದಕ್ಕೆ ಗಾಯವಾಗಿರುತ್ತದೆ. ಅಪಘಾತ ನಡೆಸಿದ ವಾಹನ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಗಾಯಾಳು ಪಿರ್ಯಾದುದಾರರನ್ನು ಅಲ್ಲಿ ಸೇರಿದ ಜನರು ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಅಶ್ರಫ್ ರವರು ಶ್ರೀನಿವಾಸ ಎಂಬವರ ಬಾಬ್ತು KA-19-AA-1987ನೇ ನಂಬ್ರದ ಆಟೋರಿಕ್ಷಾದಲ್ಲಿ ಚಾಲಕರಾಗಿ ದುಡಿಯುತ್ತಿದ್ದು ದಿನಾಂಕ: 05.09.2014 ರಂದು ಸದ್ರಿ ಆಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಪಂಪ್ ವೆಲ್ ನಲ್ಲಿರುವ ಇಂಡಿಯಾನ ಆಸ್ಪತ್ರೆ ಕಡೆಗೆ ರಿಕ್ಷಾವನ್ನು ಚಲಾಯಿಸಿಕೊಂಡು ಬಂದು ಇಂಡಿಯಾನ ಆಸ್ಪತ್ರೆಯ ಬಳಿ ಪ್ರಯಾಣಿಕರನ್ನು ಇಳಿಸಿ ಮಧ್ಯಾಹ್ನ ಸುಮಾರು 1:50 ಗಂಟೆ ಸಮಯಕ್ಕೆ ಇಂಡಿಯಾನ ಆಸ್ಪತ್ರೆಯ ಎದುರು NH-66 ರಸ್ತೆಯನ್ನು ದಾಟುವರೇ ರಸ್ತೆ ಅಂಚಿನಲ್ಲಿ ಸದ್ರಿ ಆಟೋರಿಕ್ಷಾವನ್ನು ನಿಲ್ಲಿಸಿಕೊಂಡಿರುವ ಸಮಯ ಪಂಪ್ ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ KL-11-X-4923ನೇ ನಂಬ್ರದ ಲಾರಿಯನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಎಡಕಾಲಿನ ಮೊಣಗಂಟಿನ ಬಳಿ ತೀವ್ರ ತರಹದ ಜಜ್ಜಿದ ಗಾಯ, ಮೂಗಿನ ಬಳಿ ಜಜ್ಜಿದ ಮತ್ತು ರಕ್ತ ಗಾಯ, ಎಡಕಣ್ಣಿನ ಹುಬ್ಬಿನ ಬಳಿ ಸಣ್ಣ ರಕ್ತ ಗಾಯಗೊಂಡವರು ಇಂಡಿಯಾನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದು ತದನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಆಟೋರಿಕ್ಷಾದ ಎದುರಿನ ಭಾಗ ಜಖಂಗೊಂಡಿರುವುದಾಗಿದೆ.

No comments:

Post a Comment