ದೈನಂದಿನ ಅಪರಾದ ವರದಿ.
ದಿನಾಂಕ 05.09.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0. |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-09-2014ರಂದು 16-30ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರೋಶನಿ ರವು ಮಗಳಿಗೆ ಬಟ್ಟೆ ಕೊಡಲು ಹೋದಾಗ ಆರೋಪಿತನಾದ ರಾಜೇಶ್ ಸಿರಿಯಾನ್ ರವರ ಬಕೇಟಿಗೆ ಪಿರ್ಯಾದಿದಾರಳ ಕಾಲು ತಾಗಿ ಕೆಳಗೆ ಬಿದ್ದುದ್ದಕ್ಕೆ ಕೋಪಗೊಂಡ ಆರೋಪಿತನು ಪಿರ್ಯಾದಿದಾರಳನ್ನು ಉದ್ದೇಶಿಸಿ "ಯಾಕೆ ನನ್ನ ಬಕೇಟ್ ಬಿಳಿಸಿದ್ದಿಯಾ" ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು ಪ್ಲಾಸ್ಟೀಕ್ ಚೇರ್ನಿಂದ ಪಿರ್ಯಾದಿದಾರಳ ಹಣೆಯ ಎಡ ಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುವುದಾಗಿದೆ. ಆರೋಪಿತರು ಹಾಗೂ ಪಿರ್ಯಾದಿದಾರರು ಅಡುಗೆ ಬೇರೆ ಮಾಡುತ್ತಾ ಒಂದೇ ಮನೆಯಲ್ಲಿ ವಾಸ್ತವ್ಯವಿದ್ದು ಒಂದೇ ಬಾತ್ರೂಮ್ ಹಾಗೂ ಟಾಯ್ಲೇಟ್ನ್ನು ಉಪಯೋಗಿಸುತ್ತಿರುವುದಾಗಿದೆ.
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂಜೀತ್ ಸಾಲ್ಯಾನ್ ರವರ ಬಾಬ್ತು ಆರ್ ಸಿ ಮಾಲಕತ್ವದ ಕೆಎ-01ಎಂಒ-2518ನೇ ಮೀನು ಹಿಡಿಯುವ ದುರ್ಗಾ ಕೃಪಾ ಬೋಟನ್ನು ದಿನಾಂಕ: 04-03-14 ರಂದು ರಾತ್ರಿ 7-00 ಗಂಟೆ ಸಮಯಕ್ಕೆ ತೋಟ ಬೆಂಗ್ರ ಕರ್ಕೇರ ಮನೆಯ ಬಳಿ ಫಲ್ಗುಣಿ ನದಿಯ ಉತ್ತರ ಬದಿಯಲ್ಲಿ ನಿಲ್ಲಿಸಿದ್ದು, ಮರು ದಿನ ಅಂದರೆ ದಿನಾಂಕ: 05-03-14 ರಂದು ಬೆಳಿಗ್ಗೆ 05-00 ಗಂಟೆಗೆ ಬೋಟನ್ನು ಹೋಗಿ ನೋಡಲಾಗಿ ಬೋಟಿನಲ್ಲಿದ್ದ ಬೋಟಿನ ಇಂಜಿನ್ ಯಮಹಾ-99 ಇಂಜಿನ್ ನಂಬ್ರ 1008544 ನ್ನು ಯಾರೋ ಕಳ್ಳರು ಅಂದು ರಾತ್ರಿ ಸಮಯ ಕಳವು ಗೈದು ಕೊಂಡು ಹೋಗಿದ್ದು, ಅದರ ಬೆಲೆ 1,20,000/- ಆಗಿದ್ದು, ಪಿರ್ಯಾದಿ ಮತ್ತು ಇತರರು ಈ ವರೆಗೆ ಸದ್ರಿ ಕಳವಾದ ಬೋಟ್ ಮಿಶನನ್ನು ಪತ್ತೆಯ ಬಗ್ಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದಲ್ಲಿ ಸಿಗದೇ ಇದ್ದು, ಇದೀಗ ತಡವಾಗಿ ಠಾಣೆಗೆ ಬಂದು ಪಿರ್ಯಾದಿ ನೀಡಿರುವುದಾಗಿದೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಿಗೆ 2013 ರಿಂದ ಆರೋಪಿತರು ಸಹ ಕುಟುಂಬಿಕರಾಗಿದ್ದು, ಜಾಗವನ್ನು ಕಬಳಿಸುವ ಉದ್ದೇಶದಿಂದ ಉದ್ದೇಶ ಪೂರ್ವಕವಾಗಿ ಗೂಂಡಗಳೊಂದಿಗೆ ಸೇರಿ ಜಾಗಕ್ಕೆ ಕಾನೂನು ಬಾಹಿರವಾಗಿ ಅಕ್ರಮ ಪ್ರವೇಶವಾಗಿ ತಡೆದು, ಹಲ್ಲೆ ನಡೆಸಿ ಅಶ್ಲೀಲವಾಗಿ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-09-2014 ರಂದು ಬೆಳಿಗ್ಗೆ 7-30 ಗಂಟೆಗೆ ಕಂಕನಾಡಿ ಮಾರ್ಕೆಟ್ ಬಳಿ ಪಿರ್ಯಾದುದಾರರಾದ ಶ್ರೀ ಸದ್ದಾಂ ಹುಸೈನ್ ರವರು ಕೋಳಿ ಸಾಗಾಣಿಕೆಯ ಲಾರಿ ನಂ KA-19 AA 4026 ರಲ್ಲಿ ಕೋಳಿ ಸಾಗಾಣಿಕೆಗೆಂದು ಬಂದಿದ್ದಾಗ ಆರೋಪಿ ಅಮ್ಮಿ @ ಅಮೀರ್ ಎಂಬಾತನು ಇತರೆ 3 ಜನರೊಂದಿಗೆ 2 ಮೋಟಾರ್ ಸೈಕಲ್ ನಲ್ಲಿ ಬಂದು ಪಿರ್ಯಾದಿಯ ಅಣ್ಣ ಕೊಟ್ಟ ಹಣವನ್ನು ಕೇಳಿದ ಕಾರಣಕ್ಕಾಗಿ ಕೋಳಿ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ ಲಾರಿಯ ಮುಂಭಾಗ ಎಡಬಾಗದಲ್ಲಿ ಕುಳಿತ್ತಿದ್ದ ಪಿರ್ಯಾದಿಯನ್ನು ಹಿಡಿದು ಕೆಳಗೆ ಎಳೆದು ದೂಡಿ ಅವಾಚ್ಯ ಶಬ್ದದಿಂದ ಬೈದು ಕಾಲುಗಳಿಂದ ತುಳಿದು ಕೈಯಿಂದ ಹೊಡೆದಿದ್ದು ಇತರೆ 3 ಜನರು ಅವಾಚ್ಯವಾಗಿ ಬೈದು ಅಮೀರ್ ನ ವಿಷಯಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು, ನಂತರ ಅಮೀರ್ ನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿಯ ಎರಡೂ ಕೈಗಳಿಗೆ ಗೀರಿ ರಕ್ತ ಗಾಯ ಉಂಟು ಮಾಡಿ ಈ ಬಗ್ಗೆ ಪೊಲೀಸ್ ಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿ ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿ ಹೋಗಿರುತ್ತಾರೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03-09-2014 ರಂದು ಸಂಜೆ ಸುಮಾರು 4-00 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ನಿತಿನ್ ಪೂಜಾರಿ ರವರು ಮತ್ತು ಅವರ ಸ್ನೇಹಿತರಾದ ಅರುಣ್ ಮತ್ರು ಹರೀಶ್ ರವರು ಕೊಳವೂರು ಗ್ರಾಮದ ಕುಪ್ಪೆಪದವು ಎಂಬಲ್ಲಿರುವ ಬಾರೊಂದರಲ್ಲಿ ಊಟ ಮಾಡಿ ಹೊರಗೆ ಬರುತ್ತಿದ್ದಾಗ, ಫಿರ್ಯಾದಿದಾರರ ಮೈ ಒಬ್ಬ ವ್ಯಕ್ತಿಗೆ ತಾಗಿದ ಸಮಯ ಆತನು ಫಿರ್ಯಾದಿದಾರರನ್ನು ಉದ್ದೇಶಿಸಿ, ನೀನು ಹರೀಶನ ಜನವಾ? ಎಂದು ಅವಾಚ್ಯ ಶಬ್ದಗಳಿಂದ ಬೈದುದ್ದಲ್ಲದೇ ನಿನ್ನನ್ನು ಹರೀಶನು ಕಳುಹಿಸಿರುತ್ತಾನಾ? ಎಂದು ಹೇಳಿ ಫಿರ್ಯಾದಿದಾರರಿಗೆ ಆರೋಪಿ ಅಣ್ಣು @ ಸತೀಶನು ಕೈಯಿಂದ ಹೊಡೆದಾಗ, ಅಲ್ಲಿ ಸೇರಿದವರು ಸಮಾಧಾನ ಮಾಡಿ ಕಳುಹಿಸಿದ್ದು, ಹಾಗೇ ಹೋಧ ಅಣ್ಣು ಮತ್ತು ಇತರ ಆರೋಪಿಗಳು ರಾತ್ರಿ ಸುಮಾರು 8-00 ಗಂಟೆಗೆ ಫಿರ್ಯಾದಿದಾರರು ಮನೆಗೆ ಹೋಗುವ ಸಮಯ ಕುಪ್ಪೆಪದವು ಬಸ್ಸು ನಿಲ್ದಾಣದ ಬಳಿ ಅಣ್ಣು @ ಸತೀಶ ಮತ್ತು ಒಬ್ಬ ಹೆಂಗಸು ಸಹಿತ 4-5 ಮಂದಿ ಆರೋಪಿಗಳು ತಕ್ಷೀರು ನಡೆಸುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಫಿರ್ಯಾದಿದಾರರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದುದ್ದಲ್ಲದೇ ಸೋಡಾ ಬಾಟಲಿಯಿಂದ ಎದೆಗೆ, ಎಡಕಿವಿಗೆ ಹೊಡೆದುದ್ದಲ್ಲದೇ ಅಣ್ಣು @ ಸತೀಶನು ಕೋಳಿ ಬಾಳಿನಿಂದ ಫಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಎದೆಗೆ ತಿವಿದಾಗ, ಫಿರ್ಯಾದಿದಾರರು ತನ್ನ ಎಡ ಕೈಯನ್ನು ಅಡ್ಡ ಹಿಡಿದ ಪರಿಣಾಮ, ಎಡ ಕೈ ಬೆರಳಿಗೆ ತಾಗಿದ್ದಲ್ಲದೇ ಪುನಃ ಎದೆಗೆ ತಿವಿದಾಗ, ತಪ್ಪಿಸಿದರೂ ಎದೆಯ ಎಡಭಾಗಕ್ಕೆ ಕೋಳಿ ಬಾಳಿನ ಗಾಯವಾಗಿ ಫಿರ್ಯಾದಿದಾರರಿಗೆ ತೀವ್ರ ಜಖಂ ಆಗಿದ್ದು, ಅವರನ್ನು ಚಿಕಿತ್ಸೆಯ ಕುರಿತು ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅಣ್ಣು ಎಂಬವರು ಪರಿಶಿಷ್ಟ ಜಾತಿಯವರಾಗಿದ್ದು, ದಿನಾಂಕ: 03-09-2014 ರಂದು ಕೆಲಸ ಮುಗಿಸಿ ಸಂಜೆ ಮನೆಯಿಂದ ಕುಪ್ಪೆ ಪದವು ಪೇಟೆಗೆ ಬಂದು ಅಲ್ಲಿಂದ ಮನೆಗೆ ಬೇಕಾದ ಸಾಮಾಗ್ರಿಗಳನ್ನು ತೆಗೆದುಕೊಂಡು ವಾಪಸು ಹೋಗುತ್ತಾ ಮಂಗಳೂರು ತಾಲೂಕಿನ, ಬಜಪೆ ಠಾಣಾ ಸರಹದ್ದಾದ, ಕೊಳವೂರು ಗ್ರಾಮದ ಬೊಳಿಯ ರಸ್ತೆಯಲ್ಲಿ ಶ್ರೀ ನಾರಾಯಣ ಗುರು ಮಂದಿರದ ಬಳಿ 7-00 ಗಂಟೆಗೆ ಫಿರ್ಯಾದಿದಾರರು ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿಗಳು ಮೋಟಾರು ಸೈಕಲ್ ನಲ್ಲಿ ಬಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆರೋಪಿಗಳಾದ ಮೂರು ಮಂದಿ ಫಿರ್ಯಾದಿದಾರರ ಬಳಿ ಬಂದು, ಅಪರಿಚಿತ ಆರೋಪಿಯು ಫಿರ್ಯಾದಿದಾರರ ಅಂಗಿಯನ್ನು ಹಿಡಿದು ಅವಾಚ್ಯ ಶಬ್ದದಿಂದ ಬೈದು ಜಾತಿ ನಿಂದನೆ ಮಾಡಿದ್ದು, ಅಲ್ಲಿಯೇ ಇದ್ದ ಕಲ್ಲಿನಿಂದ ಎಡ ಕೆನ್ನೆಗೆ ಹೊಡೆಯಲು ಹೋದಾಗ, ಫಿರ್ಯಾದಿದಾರರು ಎಡ ಕೈ ಅಡ್ಡ ಹಿಡಿದುದರಿಂದ ಫಿರ್ಯಾದಿದಾರರ ಉಂಗುರ ಬೆರಳಿಗೆ, ಎಡ ಕೆನ್ನೆಗೆ ತರಚಿದ ಗಾಯವಾದುದ್ದಲ್ಲದೇ ಬಲಕೈಗೆ ಕೂಡಾ ತರಚಿದ ಗಾಯವಾಗಿದ್ದು, ಆರೋಪಿಗಳಾದ ನಾಗೇಶ ಮತ್ತು ಹರೀಶ @ ಕುಟ್ಟಿ ಹರೀಶ ಇವರು ಕೂಡಾ ಸಾರ್ವಜನಿಕ ಸ್ಥಳದಲ್ಲಿ ಫಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ಉದ್ದೇಶ ಪೂರ್ವಕವಾಗಿ ಜಾತಿ ನಿಂದನೆ ಮಾಡಿರುವುದಾಗಿದೆ. ಫಿರ್ಯಾದಿದಾರರು ಅವರಿಗಾದ ಜಖಂ ನ ಬಗ್ಗೆ ಮೂಡಬಿದ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03/04.09.2014 ರಂದು ರಾತ್ರಿ ಸಮಯ ಮಂಗಳೂರು ನಗರ ಪದವು ಗ್ರಾಮದ ಕುಲಶೆಖರ ಎಂಬಲ್ಲಿರುವ ಶ್ರೀ.ವೀರನಾರಾಯಣ ದೇವಸ್ಥಾನದ ಮುಂಭಾಗದ ಕಿಟಕಿಯ ಎರಡು ರೀಪುಗಳನ್ನು ತೆಗೆದು ಯಾರೋ ಕಳ್ಳರು ಒಳಪ್ರವೇಶಿಸಿ ದೇವಸ್ಥಾನದ ಗರ್ಭಗುಡಿಯ ಮುಂಭಾಗ ಅಳವಡಿಸಿದ್ದ ಕ್ಯಾಮೆರಾ ಹಾಗೂ ಕಚೇರಿಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ಅದರೊಳಗಿದ್ದ ಸಿಸಿ ಕ್ಯಾಮೆರಾಕ್ಕೆ ಸಂಬಂಧಪಟ್ಟ ಉಪಕರಣಗಳನ್ನು ಕಳವು ಮಾಡಿರುವುದಲ್ಲದೆ ನಾಲ್ಕು ಕಾಣಿಕೆ ಡಬ್ಬಿಗಳಿಗೆ ಅಳವಡಿಸಿದ್ದ ಬೀಗವನ್ನು ಕೂಡಾ ಮುರಿದು ಅದರಲ್ಲಿದ್ದ ಕಾಣಿಕೆ ಹಣವನ್ನು ಮತ್ತು ದೇವಸ್ಥಾನದ ಹೊರಗಡೆ ಅಳವಡಿಸಿದ್ದ ಇನ್ನೊಂದು ಸಿಸಿ ಕ್ಯಾಮೆರಾವನ್ನು ಕೂಡಾ ಕಳವು ಮಾಡಿಕೊಂಡು ಹೋಗಿರುವುದಾಗಿಯೂ, ಕಳವಾದ ವಸ್ತುಗಳ ಪೈಕಿ ಸಿಸಿ ಕ್ಯಾಮೆರಾಗಳ ಅಂದಾಜು ಮೌಲ್ಯ ರೂ 25000/- , ಇಲೆಕ್ಟ್ರಿಕ್ ಉಪಕರಣಗಳ ಅಂದಾಜು ಮೌಲ್ಯ ರೂಪಾಯಿ 10,000/- ಕಾಣಿಕೆ ಡಬ್ಬಿಗಳಲ್ಲಿದ್ದ ಅಂದಾಜು ನಗದು ಹಣ ರೂಪಾಯಿ 10,000/- ಒಟ್ಟು ವಸ್ತುಗಳ ಹಾಗೂ ನಗದು ಹಣಗಳ ಅಂದಾಜು ಮೌಲ್ಯ 45,000/- ಆಗಬಹುದು.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.09.2014 ರಂದು ರೀಯಾಜ್ ತನ್ನ ಮನೆ ವಾಮಂಜೂರು ಚೆಕ್ ಪೋಸ್ಟ್ ಎಂಬಲ್ಲಿಂದ ವಾಮಂಜೂರು ಪೇಟೆಗೆ ಬರುವರೇ NH 169 ರಸ್ತೆ ಬದಿಯಲ್ಲಿ ನಡೆದುಕೊಂಡು ವಾಮಂಜೂರು-ಗುರುಪುರ ಬಸ್ನಿಲ್ದಾಣದ ಎದುರು ಸಾರ್ವಜನಿಕ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿರುವ ವೇಳೆ ಸುಮಾರು ಸಂಜೆ 07.30 ಗಂಟೆಗೆ, ಗುರುಪುರ ಕಡೆಯಿಂದ ಮಂಗಳೂರು ಕಡೆ ಹೋಗುವರೇ KA-19 EE 2791 ನೇ ಬಜಾಜ್ ಪ್ಲಾಟಿನಾ ಮೋಟಾರು ಬೈಕ್ನ್ನು ಅದರ ಸವಾರ ಮಹಮ್ಮದ್ ಮುಸ್ತಾಫ್ ಎಂಬವರು ಅತೀವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿ ರೀಯಾಜ್ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರೀಯಾಜ್ ರಸ್ತೆಗೆ ಬಿದ್ದು ಬಲ ಕೈಯ ಅಂಗೈಗೆ ಮತ್ತು ಹಣೆಗೆ ರಕ್ತ ಗಾಯವಾಗಿದ್ದು ಇವರನ್ನು ಒಂದು ರೀಕ್ಷಾದಲ್ಲಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗಾಯಕ್ಕೆ ಚಿಕಿತ್ಸೆಯನ್ನು ನೀಡಿ ಬಲಕೈಗೆ ಪ್ಲಾಸ್ಟರ್ ಹಾಕಿ ಮನೆಗೆ ಕೋಟ್ಟಿದ್ದು ದಿನಾಂಕ 05.09.2014 ರಂದು 00.30 ಗಂಟೆಗೆ ರೀಯಾಜ್ ರಿಗೆ ಅಪಘಾತದಲ್ಲಿ ಉಂಟಾದ ನೋವು ಅತೀ ಉಲ್ಬಣಗೊಂಡು ವಾಂತಿ ಮಾಡಲು ಪ್ರಾರಂಭವಾಗಿ ಅವರನ್ನು ವಾಪಸ್ಸು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾದೀಕಾರಿಯವರಲ್ಲಿ ಹಾಜರುಪಡಿಸಿದಾಗ ರಿಯಾಜ್ ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಅಪಘಾತಕ್ಕೆ KA-19 EE 2791 ನೇ ಬೈಕ್ ಸವಾರ ಮಹಮ್ಮದ್ ಮುಸ್ತಾಫ್ ತನ್ನ ಬೈಕ್ನ್ನು ಸಾರ್ವಜನಿಕ ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿರುವುದೇ ಕಾರಣವಾಗಿರುತ್ತದೆ.
No comments:
Post a Comment