ಪಾಂಡೇಶ್ವರ ಠಾಣಾ ಪೊಲೀಸರಿಂದ ಕಾರು ಹಾಗೂ ಮನೆ ಕಳ್ಳರ ಬಂಧನ
ಮಂಗಳೂರು ನಗರದ ಅತ್ತಾವರ ಸ್ಟರಕ್ ರಸ್ತೆಯಲ್ಲಿರುವ ಎಂ. ಶರಫ್-ಉದ್-ದಿನ್ ಎಂಬವರ ಮನೆಯಲ್ಲಿ ದಿನಾಂಕ 22-02-2014ರಂದು ಮಧ್ಯಾಹ್ನ 2-30 ಗಂಟೆಯಿಂದ ದಿನಾಂಕ 23-02-2014 ರಂದು 8-30 ಗಂಟೆಯ ಮದ್ಯೆ ಯಾರೋ ಕಳ್ಳರು ಮನೆಯ ಎದುರು ಬಾಗಿಲನ್ನು ಬಲತ್ಕಾರವಾಗಿ ಮೀಟಿ ಮುರಿದು ಒಳಗಡೆ ಪ್ರವೇಶಿಸಿ ಒಳಗಡೆಯಿಂದ ಬೆಲೆ ಬಾಳುವ ವಾಚ್ ಹಾಗೂ ಹೊರಗಡೆ ಪಾರ್ಕ್ ಮಾಡಿಟ್ಟಿದ್ದ KA 19 MD 755 ನೊಂದಣಿ ಸಂಖ್ಯೆಯ ಕಾರು ಸೇರಿ ಒಟ್ಟು 9,22,000/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ಕೇರಳ ಮೂಲದ ಐದು ಜನ ವ್ಯಕ್ತಿಗಳು ಮಂಗಳೂರು ನಗರದ ಸ್ಟರಕ್ ರಸ್ತೆಯಲ್ಲಿರುವ ಎಂ. ಶರಫ್-ಉದ್-ದಿನ್ ರವರ ಮನೆಯಲ್ಲಿ ಕಳವು ಕೃತ್ಯದಲ್ಲಿ ಬಾಗಿಯಾಗಿದ್ದು ಅವರುಗಳು ಕೇರಳ ಕೇಸ್ ನಲ್ಲಿ ಕೊಯಿಕೊಡ್ ಜೈಲ್ ನಲ್ಲಿ ಇರುವ ಮಾಹಿತಿ ಲಭ್ಯವಾದ ಪ್ರಕಾರ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ಇವರು ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಪೊಲೀಸ್ ಭದ್ರಿಕೆಗೆ ನೀಡುವಂತೆ ಮಾನ್ಯ ಮಂಗಳೂರು 2ನೇ ಹೆಚ್ಚುವರಿ ಸಿ.ಜೆ.ಎಂ. ನ್ಯಾಯಾಲಯಕ್ಕೆ ಕೋರಿಕೊಂಡ ಮೇರೆಗೆ ಮಾನ್ಯ ನ್ಯಾಯಾಲಯವು ನೀಡಿದ ಅನುಮತಿಯಂತೆ ಸಿಬ್ಬಂದಿಯವರೊಂದಿಗೆ ಕೇರಳ ರಾಜ್ಯದ ಕೊಯಿಕೊಡ್ ಗೆ ತೆರಳಿ ಕೊಯಿಕೊಡ್ ಜೈಲ್ ನಲ್ಲಿದ್ದ ಮೂರು ಜನ ಆರೋಪಿಗಳನ್ನು ಪೊಲೀಸ್ ಭದ್ರಿಕೆಗೆ ಪಡೆದು ಕೂಲಂಕಷವಾಗಿ ಪ್ರಶ್ನಿಸಿದಾಗ ಅವರುಗಳು ಮಂಗಳೂರಿನಲ್ಲಿ ಕಳವು ಮಾಡಿದ ವಿಚಾರವನ್ನು ಒಪ್ಪಿಕೊಂಡಿದ್ದು ಕಳವು ಮಾಡಿದ ಕಾರನ್ನು ತಮಿಳುನಾಡು ರಾಜ್ಯದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಗಳೊಂದಿಗೆ ಕೊಯಿಕೊಡ್ ನಿಂದ ತಮಿಳುನಾಡಿಗೆ ತೆರಳಿ ಕಳವು ಮಾಡಿದ ಕಾರನ್ನು ಕಡಿಮೆ ಕ್ರಯಕ್ಕೆ ಖರೀದಿಸಿದ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿ ಒಂದು ಕಾರು ಹಾಗೂ 13 ವಾಚ್ ಸೇರಿ ಒಟ್ಟು 9,22,000/-ಮೌಲ್ಯದ ಸೊತ್ತಗಳನ್ನು ಸ್ವಾಧೀನಪಡಿಸಲಾಗಿದೆ.
ಆರೋಪಿಗಳ ಹೆಸರು ವಿಳಾಸ ಹಾಗೂ ಪೋಟೊ
1. RASHID K. P. S/O RASHEED, R/O KUNHIPURAYIL HOUSE, PERINGOM POST. PAYYANNUR (VIA), KANNUR DISTRICTCT,
2. ADHIL KHAN, AGE 20/14, S/O ABDUL KHADAR VADAPPAID (H), UNNIKULAM POST. POONOORE. KOZHIKODE. R.P. No. 9828
3. SAJID HASSAN @ SHAJI, AGE 29/14, S/O HASSAN, PARAPPIL (H), NADUVANNOOR POST, KOZIKODE. R.P. No. 9825
4. ಶರವಣನ್, ಎಸ್. ಪ್ರಾಯ 36 ವರ್ಷ, ತಂದೆ-ದಿ| ಶ್ರೀನಿವಾಸನ್, ವಾಸ-ನಂಬ್ರ 2/3, ಸೂರಪ್ಪ ಸ್ಟ್ರೀಟ್, ತ್ರಿಪ್ಲಿಕೆನ್, ಚೆನೈ, ತಮಿಳು ನಾಡು ರಾಜ್ಯ
ಪತ್ತೆ ಕಾರ್ಯಾಚಾರಣೆ :-
ಮಾನ್ಯ ಆರ್. ಹಿತೇಂದ್ರ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ. ವಿ. ಜಗಧೀಶ್, ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ರವರು ಆರೋಪಿಯನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿದ್ದು ಠಾಣಾ ಸಿಬ್ಬಂದಿಯವರು. ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.
No comments:
Post a Comment