Wednesday, September 24, 2014

Daily Crime Reports 23-09-2014

ದಿನಾಂಕ 23.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ 

:

3

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-09-2014 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಕ್ಷಯ್ ರವರು ಉರ್ವ ಮೈದಾನದಲ್ಲಿ ಕ್ರಿಕೇಟ್ ಆಟವಾಡಿ  ಕಾಫಿ ಕುಡಿಯಲು ಕುದ್ಮುಲ್ ರಂಗರಾವ್ ಬಳಿ ಇರುವ ಮೂರ್ತಿ ಎಂಬವರ ಕ್ಯಾಂಟಿನ್ ನಲ್ಲಿ ನಿಖಿಲ್ ಎಂಬವರೊಂದಿಗೆ ಕಾಫಿ ಕುಡಿಯುತ್ತಿರುವ ಸಂದರ್ಭ ಆಪಾದಿತ ಪರಿಚಯದ ರಾಕೇಶ್ ಎಂಬವನು ಮಾತನಾಡಲಿದೆ ಹೊರಗೆ ಬಾ ಎಂದು ಹೊರಗೆ ಕರೆದಾಗ ಆತನ ಜೊತೆಯಲ್ಲಿದ್ದ ಆನಂತು, ಲತೀಶ್ ಅಳಕೆ, ದುರ್ಗೇಶ್ ಉರ್ವ ಎಂಬವರುಗಳು ಪಿರ್ಯಾದಿಯನ್ನು ತಡೆದು "ನಿನ್ನನನ್ನು ಕಾತೊಂದು ಇತ್ತೆ ತಿಕ್ಕಮಗ ನಿನನ್ ಕೆರಂದೆ ಬುಡಾಯೆ" ಎಂದು ಅವಾಚ್ಯ ಶಬ್ದಗಳಿಂದ ಬೈದು ಆನಂತು ಎಂಬಾತನು ಆತನ ಕೈಯಲ್ಲಿದ್ದ ಹಾಕಿ ಸ್ಟಿಕ್ ನಲ್ಲಿ ಹೊಡೆಯಲು ಮುಂದಾದಾಗ ಪಿರ್ಯಾದಿದಾರರು ತಪ್ಪಿಸಿ ಓಡಲು ಪ್ರಯತ್ನಿಸಿದ್ದು, ಆ ವೇಳೆಗೆ ಲತೀಶ್ ಅಳಕೆ ಎಂಬಾತನು ಆತನ ಕೈಯಲ್ಲಿದ್ದ ಹಾಕಿ ಸ್ಟಿಕ್ ನಿಂದ ಪಿರ್ಯಾದಿಯ ಎಡ ಕಾಲಿನ ಗಂಟಿಗೆ ಹೊಡೆದನು. ಆ ವೇಳೆಗೆ ಸಾರ್ವಜನಿಕರು ಸೇರಿದಾಗ ಆರೋಪಿಗಳು ಪಿರ್ಯಾದಿಯನ್ನು  ಬಿಟ್ಟು ಓಡಿ ಹೋಗಿರುತ್ತಾರೆ. ಆರೋಪಿಗಳು ಹಲ್ಲೆ ಮಾಡಿದ್ದರಿಂದ ಪಿರ್ಯಾದಿಯ ಎಡ ಕಾಲಿನ ಮೊಣ ಗಂಟಿಗೆ ಗುದ್ದಿದ  ಗಾಯವಾಗಿದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಆನಂತು ಮತ್ತು ಇತರರು ಯಾವುದೋ ಹಳೆ ದ್ವೇಷದಿಂದ ಈ ಕೃತ್ಯ ವೆಸಗಿರುವುದಾಗಿದೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-09-2014 00-00 ಗಂಟೆಯಿಂದ ದಿನಾಂಕ 22-09-2014ರ ಬೆಳಿಗ್ಗೆ ಸಮಯ ಸುಮಾರು 08-00 ಗಂಟೆಯ ಮಧ್ಯೆ ಮಂಗಳೂರು ನಗರದ ಡೊಂಗರಕೇರಿಯಲ್ಲಿರುವ ಕೆನರಾ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ ಕಟ್ಟಡದ ಮುಖ್ಯ ದ್ವಾರದ ಕಬ್ಬಿಣದ ಗೇಟ್ ಗೆ  ಹಾಕಿದ ಬೀಗವನ್ನು ಯಾರೋ ಕಳ್ಳರು  ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆರೆದು ಆ ಮೂಲಕ ಒಳಪ್ರವೇಶಿಸಿ ತಳ ಅಂತಸ್ತಿನಲ್ಲಿದ್ದ  School Bell-1,  ಹಾಗೂ 1,2 ಮತ್ತು 3ನೇ ಮಹಡಿಯ ಶೌಚಾಲಯಗಳಿಂದ Toilet(Boys) Tap and Flush- 49, Toilet(Girls) Tap and Flush- 44, Wash Basin – 2, ಹಾಗೂ 1ನೇ ಮಹಡಿಯ ಸ್ಪೋರ್ಟ್ಸ್ ರೂಮಿನಿಂದ Trumphets- 6 and Cymbal(Tala)- 1 ಹಾಗೂ ಇನ್ನೊಂದು ರೂಮಿನಿಂದ Computer Monitor-2 ಹಾಗೂ ರೂಮಿಗೆ ಅಳವಡಿಸಿದ್ದ ಜಖಂಗೊಂಡ ಲಾಕ್ ಗಳು-4, ಹೀಗೆ ಒಟ್ಟು ಸುಮಾರು 72,650/- ರೂ. ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2014 ರಂದು ಬೆಳಿಗ್ಗೆ 01-10 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಬಿಜು ತೋಮಸ್ ರವರು 16346ನೇ ನಂಬ್ರದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಳುವ ದಿಂದ ಮುಂಬೈ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಸುವ ವೇಳೆ ಅವರ ಬಾಬ್ತು ಬಂಗಾರದ ಆಭರಣಗಳಾದ  1 ಚೈನ್, 2 ಬಳೆಗಳು, 1 ಜೊತೆ ಕಿವಿಯ ರಿಂಗ್‌‌, ಮತ್ತು ಒಂದು ಉಂಗುರ ಮತ್ತು 2 ಮೊಬೈಲ್ ಪೋನ್ಗಳು ಹ್ಯಾಂಡ್ ಬ್ಯಾಗ್ ಸಮೇತ ಯಾರೋ ಕಳ್ಳರು ಕಳವು ಮಾಡಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1,03,000/-  ರೂ ಆಗಬಹುದು.

 

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-09-2014 ರಂದು  ಮದ್ಯಾಹ್ನ ಸುಮಾರು 3-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಜೀವನ್ ಶೆಟ್ಟಿ ರವರು ತಾನು ಕೆಲಸ ಮಾಡುತ್ತಿರುವ ಮಂಗಳೂರಿನ ಪಡೀಲ್ ನಲ್ಲಿರುವ ಕಾಂಚನ ಹುಂಡೈ ಶೋರೂಮ್ ನಲ್ಲಿರುವಾಗ, ಅವರ ಸಂಬಂಧಿಯಾದ ಎಡಪದವು ಕುಂದೊಟ್ಟಿನ ದುರ್ಗಾ ಪ್ರಸಾದ್ ಶೆಟ್ಟಿ ಎಂಬವರ  ನಂಬ್ರ 9008003507 ನೇ ಮೊಬೈಲ್ ಪೋನ್ ನಿಂದ ಪಿರ್ಯಾದಿದಾರರ ನಂಬ್ರ 8971760325 ಮೊಬೈಲ್ ಪೋನ್ ಗೆ ಪೋನ್ ಕರೆಯೊಂದು ಬಂದು, ಅದಕ್ಕೆ ಉತ್ತರಿಸಿದಾಗ, ಈ ಮೊಬೈಲ್ ನ್ನು ಹೊಂದಿದ್ದ ವ್ಯಕ್ತಿಗೆ ಯಾರೋ  ದುಷ್ಕರ್ಮಿಗಳು ಮಾರಕಾಯುಧಗಳಿಂದ ಹಲ್ಲೆ ನಡೆಸಿ,ತೀವ್ರ ತರದ ರಕ್ತಗಾಯಗಳಾಗಿರುತ್ತದೆ. ಇವರನ್ನು ಮಂಗಳೂರು ಯುನಿಟಿ ಆಸ್ಪತ್ರೆಗೆ ಚಿಕಿತ್ಸೆಗೆ  ದಾಖಲಿಸಿರುತ್ತಾರೆ ಎಂಬುದಾಗಿ  ಯಾರೋ ಪೋನ್ ಮುಖೇನಾ  ಮಾಹಿತಿ ತಿಳಿಸಿದಂತೆಪಿರ್ಯಾದಿದಾರರು ಕೂಡಲೇ ಯುನಿಟಿ ಆಸ್ಪತ್ರೆಗೆ  ಸಂಜೆ 4-00 ಗಂಟೆಗೆ ಬಂದಾಗ, ಪಿರ್ಯಾದಿದಾರರ ಸಂಬಂಧಿಕರಾದ ಎಡಪದವು ಕುಂದೊಟ್ಟುವಿನ ದುರ್ಗಾ ಪ್ರಸಾದ್ ಶೆಟ್ಟಿಯವರು ಯೂನಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದು, ಎಡ ಕಾಲಿನ ತೊಡೆಗೆಎಡಕಾಲಿನ ಮಣಿಗಂಟಿನ ಬಳಿಗೆ, ಬೆನ್ನಿಗೆ, ಎಡಕೈಗೆ ಹಾಗೂ ಎಡ ಕಿಬ್ಬೊಟ್ಟೆಯ ಬಳಿ ತಲವಾರಿನಿಂದ ಕಡಿದ ರಕ್ತಗಾಯಗಳಾಗಿದ್ದು, ವೈದ್ಯರಲ್ಲಿ ವಿಚಾರಿಸಿದಾಗ ಗಾಯಾಳು ದುರ್ಗಾ ಪ್ರಸಾದ್ ಶೆಟ್ಟಿಯು ಮೃತಪಟ್ಟಿರುವುದಾಗಿ ತಿಳಿಸಿದರು, ಈತನು ಮಂಗಳೂರಿನ ಕುಳಾಯಿಯಲ್ಲಿ ಶುಭೋದಯಾ ಚಿಟ್ ಫಂಡ್ ನಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದನು, ಈತನಿಗೆ ಹಣ ಕಾಸಿನ ವಿಚಾರದಲ್ಲಿ  ಸಂತೋಷ ಶೆಟ್ಟಿಗಾರ್ ಎಂಬವರ ಜೊತೆ  ವೈಮನಸ್ಸಿದ್ದ ಬಗ್ಗೆ ಪಿರ್ಯಾದಿದಾರರರಿಗೆ ತಿಳಿದಿರುತ್ತದೆ. ಈ ಘಟನೆಯ ಬಗ್ಗೆ ತಿಳಿದುಕೊಂಡಲ್ಲಿ ಈತನನ್ನು ದಿನಾಂಕ 22-09-2014 ರಂದು  ಮದ್ಯಾಹ್ನ ಸುಮಾರು 2-45 ಗಂಟೆಗೆ ವೆಲೆನ್ಶಿಯಾದ ಬಳಿ  ಮೂರು ಜನ  ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಹರಿತವಾದ ಹತ್ಯಾರುಗಳಿಂದ ಅವರನ್ನು  ಕಡಿದು ಗಂಭಿರ ಗಾಯಗೊಳಿಸಿದವರನ್ನು ಘಟನೆ ನೋಡಿದ   ಯಾರೋ ಸಾರ್ವಜನಿಕರು ಅವರನ್ನು ಯೂನಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ಧಾಖಲಿಸಿದ್ದು ಅಲ್ಲಿ ಅವರು ಮದ್ಯಾಹ್ನ 3-55 ಗಂಟೆಗೆ ಚಿಕಿತ್ಸೆಯಲ್ಲಿರುವಾಗಲೇ ಮೃತಪಟ್ಟಿರುತ್ತಾರೆ.

 

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-09-2014 ರಂದು ರಾತ್ರಿ 09.15 ಗಂಟೆಗೆ ಜೆಪ್ಪು ಮಾರ್ನಮಿಕಟ್ಟೆ ಅನ್ವರ್ ತಂಗಲ್ ಮನೆಯಿಂದ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಜಾಸಿಮ್ ರವರು ತನ್ನ ಮನೆ ಕಡೆಗೆ ನಡೆದು ಹೋಗುವಾಗ ಮಾರ್ನಮಿಕಟ್ಟೆ ಕಡೆಯಿಂದ ಒಂದು ಮಾರುತಿ ಕಾರಿನಲ್ಲಿ ಬಂದು ಪಿರ್ಯಾದಿದಾರರಿಗೆ ಅಡ್ಡ ನಿಲ್ಲಿಸಿ ಸದ್ರಿ ಕಾರಿನಿಂದ ಹಬೀಬ್ ಮತ್ತು ಆರೀಪ್ ಎಂಬಿಬ್ಬರು ಹಿಡಿದು ಹಬೀಬ್ ಮರದ ದೊಣ್ಣೆಯಿಂದ ಪಿರ್ಯಾದಿಯ ತಲೆಯ ಹಿಂಬಾಗಕ್ಕೆ ಎಡಕೈಗೆ ಹೊಡೆದುದಲ್ಲದೆ ಆರೀಜ್ ಪಿರ್ಯಾದಿಯ ಕೈಗೆ ಹೊಡೆದು ಇತರ ಇಬ್ಬರು ಕಾರಿನಿಂದ ಇಳಿದು ಕೈಯಿಂದ ಹೊಡೆಯಲು ಬಂದಾಗ ಪಿರ್ಯಾದಿ ಬೊಬ್ಬೆ ಹಾಕಿದಾಗ ಅಲ್ಲಿಯೇ ತಂಗಲ್ ಮನೆಯಲ್ಲಿದ್ದ ಇತರರು ಓಡಿ ಬರುವುದನ್ನು ನೋಡಿ ಆರೋಪಿಗಳು ಅದೇ ಕಾರಿನಲ್ಲಿ ಹೋಗಿದ್ದು ಹೋಗುವಾಗ "ನಿನ್ನನ್ನು ಈ ದಿನ ಹೀಗೆ ಬಿಟ್ಟಿದ್ದೇವೆ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ" ಎಂದು ಬೆದರಿಕೆ ಒಡ್ಡಿದ್ದು ನಂತರ ಪಿರ್ಯಾದಿಯು ತನಗಾದ ಗಾಯದ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಕೃತ್ಯಕ್ಕೆ ಕಾರಣವೇನೆಂದರೆ ಸುಮಾರು 2-3 ದಿನಗಳ ಹಿಂದೆ ಆರೀಜ್ ಎಂಬುವನ ಸ್ನೇಹಿತನಿಗೆ ಮತ್ತು ಪಿರ್ಯಾದಿಗೆ ಜಗಳವಾಗಿದ್ದು ಅದೇ ದ್ವೇಷದಿಂದ ಮಾಡಿದ್ದಾಗಿರುತ್ತದೆ.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-09-2014 ರಂದು ರಾತ್ರಿ 09.30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಹಬೀಬ್ ರೆಹಮಾನ್ ರವರು ತನ್ನ ಬಾಬ್ತು ಕೆ. 19 ಎಂ.ಬಿ 3922 ನೇ ಮಾರುತಿ ರಿಟ್ಜ್ ಕಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ಜೆಪ್ಪು ಎಂ.ಆರ್ ಭಟ್ ಲೆನ್ ಹತ್ತಿರಕ್ಕೆ ಹೋಗಿ ಕಾರನ್ನು ನಿಲ್ಲಿಸಿ ಪಿರ್ಯಾದಿ ಹಾಗೂ ಸ್ನೇಹಿತರು ಪಕ್ಕದಲ್ಲಿರುವ ಅಂಗಡಿಗೆ ಕೊಲ್ಡ್ ಕುಡಿಯಲು ರಸ್ತೆ ದಾಟುವಾಗ ಸಲೂನ್ ಕಡೆಯಿಂದ 4-5 ಜನರು ಕೈಯಲ್ಲಿ ಮರದ ದೊಣ್ಣೆಯನ್ನು ಹಿಡಿದು ಬಂದವರು ಪಿರ್ಯಾದಿದಾರರನ್ನು ಉದ್ದೇಶಿಸಿ "ನಿನಗೆ ಬಾರಿ ಅಹಂಕಾರ ಇದೆ ನಿನ್ನ ಅಹಂಕಾರವನ್ನು ಇಳಿಸುತ್ತೇನೆ" ಎಂದು ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳಾದ ಮೊಹ್ಮದ್ ಜಾಸಿಮ್, ಷಪೀಕ್, ಹಿಲಾಲ ಎಂಬುವರ ದೊಣ್ಣೆಯಿಂದ ಪಿರ್ಯಾದಿಯ ಬೆನ್ನಿಗೆ ಮೈ ಕೈಗೆ ಹೊಡೆದ ಪರಿಣಾಮ ಪಿರ್ಯಾದಿ ಬಿದ್ದಲ್ಲಿ ಜಾಸಿಮ್ ಆತನ ಕೈಯಲ್ಲಿದ್ದ ದೊಣ್ಣೆಯಿಂದ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಬಲವಾಗಿ ಬಲಗೈನ ಮೊಣ ಗಂಟಿನ ಹತ್ತಿರ ಹೊಡೆದುದಲ್ಲದೇ ಬಿಡಿಸಲು ಬಂದ ಇತರರಿಗೆ ಕೈಗಳಿಂದ ಹೊಡೆದಿರುತ್ತಾರೆ. ನೆರೆಕರೆಯವರು ದಾರಿಹೋಕರು ಬರುವುದನ್ನು ನೋಡಿ ಆರೋಪಿಗಳು ದೊಣ್ಣೆ ಬಿಸಾಡಿ ಹೋಗಿರುವುದಾಗಿದೆ. ಆರೋಪಿ ಮೊಹ್ಮದ್ ಜಾಸಿಮ್ ಕೈಗೆ ಹೊಡೆದ ಪರಿಣಾಮ ಪಿರ್ಯಾದಿ ಮೂಳೆ ಮುರಿತದ ಗಾಯ ಉಂಟಾಗಿ ಹಾಗೂ ಇತರ ಕಡೆ ಗುದ್ದಿದ ನೋವು ಉಂಟಾಗಿರುತ್ತದೆ. ನಂತರ ಪಿರ್ಯಾದಿದಾರರಿಗೆ ಚಿಕಿತ್ಸೆಯ ಬಗ್ಗೆ ಕಾರಿನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆತಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಹೈಲಾಂಡ್ ಆಸ್ಪತ್ರೆಗೆ ದಾಖಲು ಮಾಡಿದ್ದು ಈ ತಕ್ಷಿರಿಗೆ ಕಾರಣವೇನೆಂದರೆ 2 ದಿನದ ಹಿಂದೆ ಆಸಿಕ್ ನಿಗೆ ಜಾಸಿಮ್ ಹೊಡೆದ ಬಗ್ಗೆ ಪಿರ್ಯಾದಿಯು ವಿಚಾರಿಸಿದ್ದಕ್ಕೆ ಆರೋಪಿಗಳು ಸೇರಿಕೊಂಡು ಈ ಕೃತ್ಯವನ್ನು ಮಾಡಿದಾಗಿರುತ್ತದೆ.

 

7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಗಣೇಶ್ ರವರಿಗೆ ರಾಜೇಶ್ ಸಿಂಗ್ ಎಂಬಾತನು ಆರ್.ಬಿ.ಐ ಬ್ಯಾಂಕಿನ ಮ್ಯಾನೇಜರ್ ಎಂದು ಹೇಳಿ ದಿನಾಂಕ 09-09-2014 ರಂದು bbc ಕಂಪೆನಿಯ ಇ ಮೇಲ್ bbcclaimdept2014@live.com ನಿಂದ 5,00,000 GB Pounds ಹಣ ಗೆದ್ದಿರುವುದಾಗಿ ಇಮೇಲ್ ಸಂದೇಶ ಕಳುಹಿಸಿ, ನಂತರ rbionlinetrasfer01@hotmail.com ನೇದರಲ್ಲಿ ಸಂದೇಶಗಳನ್ನು ಕಳುಹಿಸಿ, ಪಿರ್ಯಾದಿದಾರರಿಂದ ಆಪಾದಿತನ ಎಸ್.ಬಿ.ಐ. ಎಕೌಂಟ್ ನಂಬ್ರ   20222740079, 20222737259, 339190778 32593056709 ನೇದಕ್ಕೆ ಹಣವನ್ನು ಕಳುಹಿಸುವಂತೆ ತಿಳಿಸಿ ದಿನಾಂಕ 11-09-2014, 12-09-2014, 15-09-2014 16-09-2014 18-09-2014, 20-0-2014 ರಂದು ಒಟ್ಟು  ಸುಮಾರು 2,47,400/-ರೂ ಹಣವನ್ನು ಮೋಸದಿಂದ ಪಡೆದು ವಂಚನೆ ಮಾಡಿರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21.09.2014 ರಂದು ಪಿರ್ಯಾಧಿದಾರರಾದ ಶ್ರೀ ವಿನೋದ್ ಪ್ರಭು ರವರು ಪಡೀಲ್‌‌ನಲ್ಲಿರುವ ತನ್ನ ಮಿತ್ರನ ಮನೆಗೆ ಹೋಗಿ  ರಾತ್ರಿ ಸುಮಾರು 8.30 ಗಂಟೆಗೆ ಪಡೀಲಿನಿಂದ ತನ್ನ ಬಾಭ್ತು ಸ್ಕೂಟರ್‌‌ನಲ್ಲಿ ಪಡೀಲ್‌‌ ಜಂಕ್ಷನ್‌‌ನಿಂಗಾಗಿ  ಪಂಪ್ವೆಲ್‌‌ ಕಡೆಗೆ ಹೋಗುತ್ತಾ ಬಜಾಲ್‌‌ ಕ್ರಾಸ್‌‌ ಬಳಿ ತಲುಪುತ್ತಿದ್ದಂತೆ ರಾತ್ರಿ ಸುಮಾರು 8.45 ಗಂಟೆ ಸಮಯಕ್ಕೆ  ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ಕೆಎ-19-ವೈ-6781 ನೇ ಮೋಟಾರ್‌‌ ಸೈಕಲನ್ನು ಅದರ ಸವಾರ ಪ್ಲೋಯಿಡ್ಎಂಬವರು  ಬಜಾಲ್‌‌ ಕ್ರಾಸ್‌‌ ರಸ್ತೆ ಬಳಿ ರಸ್ತೆಯಲ್ಲಿ ಗುಂಡಿ ಇರುವ ಸ್ಥಳದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ  ಸದ್ರಿ ಮೋಟಾರ್‌‌ ಸೈಕಲ್‌‌ನಲ್ಲಿ ಹಿಂಬದಿ ಸವಾರರಾಗಿ ಸವಾರಿ ಮಾಡುತ್ತಿದ್ದ ಶ್ರೀಮತಿ. ಸಿಂಪ್ರೋಸ್‌‌ ತೌರೋ ರವರು ರಸ್ತೆಗೆ ಬಿದ್ದು ಅವರ ತಲೆಗೆ ಗುದ್ದಿದ ನೋವುಂಟಾಗಿದ್ದು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯ ಸದ್ರಿ ಶ್ರೀಮತಿ. ಸಿಂಪ್ರೋಸ್‌‌ ತೌರೋ ರವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.09.2014  ಬೆಳಿಗ್ಗೆ ಎಂದಿನಂತೆ ಪಿರ್ಯಾದಿದಾರರಾದ ಶ್ರೀ ಶೇಖರ್ ಸಫಲ್ಯ ರವರು ತಮ್ಮ ಕ್ಯಾಂಟಿನನ್ನು ತೆರೆಯಲು ಮನೆಯಿಂದ ಹೊರಟು ಬೆಳಿಗ್ಗೆ ಸುಮಾರು 5.30 ಗಂಟೆಗೆ ಕ್ಯಾಂಟಿನ ಹತ್ತಿರ ಬರುತ್ತಿದ್ದಂತೆಯೆ ಹಿಂದಿನಿಂದ ಯಾರೋ ಇಬ್ಬರು ಬಂದು ಮರದ ಸೊಂಟೆಯಿಂದ ಪಿರ್ಯಾದಿದಾರರ ತಲೆಗೆ, ಬಲಕಾಲಿಗೆ, ಬಲ ಎಡಕಣ್ಣಿನ ಬಳಿ ಬಲವಾಗಿ ಹೊಡೆದು ಗಂಬೀರ ಗಾಯಗೊಳಿಸಿ, ಪಿರ್ಯಾದಿದಾರರ  ಕೈಯಲ್ಲಿದ್ದ 3.000 /- ರೂಗಳಿದ್ದ ಪ್ಲಾಸ್ಟಿಕ ತೊಟ್ಟೆಯನ್ನು ಬಲತ್ಕಾರವಾಗಿ ಕಿತ್ತುಕೊಂಡು ಪರಾರಿಯಾಗಿದ್ದು ಸದ್ರಿ ಆರೋಪಿಗಳು ಫಿರ್ಯಾದಿದಾರರನ್ನು ಕೊಲೆ ಮಾಡಿ ಅವರಲ್ಲಿದ್ದ ಹಣವನ್ನು ದೋಚಿಕೊಂಡು ಹೋಗುವ ಸಲುವಾಗಿ ಫಿರ್ಯಾದಿದಾರರ ಕೊಲೆ ಯತ್ನ ಮಾಡಿದ್ದಾಗಿರುತ್ತದೆ. ಆರೋಪಿತರು ನಡೆಸಿದ ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಫ್ಲಾವಿಯಾ ರೊಶಲ್ ಫರ್ನಾಂಡಿಸ್ ರವರ ತಂದೆ ತಾಯಿ ಮತ್ತು ಅಣ್ಣನು ಪಿರ್ಯಾದಿದಾರರು ಯಾರ ಜೊತೆಯಲ್ಲಿ ಮಾತನಾಡಿದರೂ ಅನುಮಾನಗೊಂಡು ಪಿರ್ಯಾದುದಾರರಿಗೆ ಹೊಡೆಯುತ್ತಿದ್ದು, ಇದನ್ನು ಪಿರ್ಯಾದಿದಾರರು ಸಹಿಸಿಕೊಂಡಿದ್ದರೂ ಎರಡು ದಿನಗಳ ಹಿಂದೆ ಪಿರ್ಯಾದಿದಾರರ ಅಣ್ಣನು ಪಿರ್ಯಾದುದಾರರು ಅನ್ಯ ಹುಡುಗರ ಜೊತೆ ಅಕ್ರಮ ಸಂಬಂಧ ಹೊಂದಿರುವುದಾಗಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೇ ಸದ್ರಿಯವರನ್ನು ರೂಮಿನಲ್ಲಿ ಅಕ್ರಮ ಬಂಧನದಲ್ಲಿಟ್ಟು ಹಿಂಸೆ ನೀಡಿರುವುದಾಗಿದೆ.

 

No comments:

Post a Comment