Wednesday, September 10, 2014

Daily Crime Reports 10-09-2014

ದೈನಂದಿನ ಅಪರಾದ ವರದಿ.

ದಿನಾಂಕ 10.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

2

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಪವನ್ ಕುಮಾರ್ ಯಾದವ್ ರವರ ತಮ್ಮ 30 ವರ್ಷ ಪ್ರಾಯದ ಶ್ಯಾಮ್ಕುಮಾರ್ ಯಾದವ್ ಎಂಬಾತನು ದಿನಾಂಕ 30-08-2014ರಂದು ಊರಿಗೆ ಹೋಗುತ್ತೇನೆಂದು, ರಾತ್ರಿ 10-00 ಗಂಟೆ ಸಮಯ ಮನೆಯಿಂದ ರೈಲ್ವೆ ನಿಲ್ಧಾಣಕ್ಕೆ ಹೋದವರು ಅಲ್ಲಿಂದ ಅಟೋ ರಿಕ್ಷಾವೊಂದರಲ್ಲಿ ಉರ್ವ ಮಾರ್ಕೆಟ್‌‌ ಬಳಿಯ ಅಟೋಪಾರ್ಕ್ ತನಕ ಬಂದಾತನು ಅಲ್ಲಿಂದ ಊರಿಗೂ ಹೋಗದೇ, ತಾನು ಕೆಲಸ ಮಾಡುತ್ತಿದ್ದಲ್ಲಿಗೂ ಹೋಗದೇ ಕಾಣೆಯಾಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.09.2014 ರಂದು ಸಮಯ ಸುಮಾರು ಸಂಜೆ 6.45 ಗಂಟೆಗೆ ಬೈಕು  ನಂಬ್ರ KA19-Y-1282  ರಲ್ಲಿ ಫಿರ್ಯಾದುದಾರರಾದ ಶ್ರೀ ಜನಾರ್ಧನ ರವರು ಸವಾರರಾಗಿ ಅತ್ತಾವರ ಈಜಿ ಡೇ ಕಡೆಯಿಂದ ತನ್ನ ಮನೆಯಾದ ಮೂಡುಶೆಡ್ಡೆ ಕಡೆಗೆ ಹೋಗುತ್ತಾ ಸ್ಟರಕ್ ರೋಡಿನ ಹಾಸ್ಟೆಲ್ ಬಳಿಯ ರವಲ್ ಕೋಟ್ ಅಪಾರ್ಟ್ ಮೆಂಟ್ ಎದುರು  ತಲುಪುವಾಗ, ಪಳ್ನಿರ್ ಕಡೆಯಿಂದ ಬೈಕೊಂದನ್ನು   ಅದರ ಸವಾರ  ಪಳ್ನಿರ್ ಕಡೆಯಿಂದ ಅತ್ತಾವರ ಕಡೆಗೆ ಅತೀ  ವೇಗ ಮತ್ತು ಅಜಾಗರೂಕತೆಯಿಂದ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು, ಕಾರೊಂದನ್ನು ಒವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರ ಬಲದಿಯಲ್ಲಿ ಬಂದು ಫಿರ್ಯಾದುದಾರರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಬೈಕು ಸಮೇತ  ಡಾಮಾರು  ರಸ್ತೆಗೆ ಬಿದ್ದು ,ಬಲಕಾಲಿಗೆ ಗಂಭೀರ ಸ್ವರೊಪದ  ರಕ್ತ ಗಾಯ  ಹಾಗೂ ಬಲ ಕೈ ಮೊಣಗಂಟಿಗೆ ತರಚಿದ ಗಾಯ ಉಂಟಾಗಿರುತ್ತದೆ. ಅಪಘಾತದ ನೋವಿನಿಂದ ಫಿರ್ಯಾದುದಾರರು  ಬೈಕಿನ ಪೂರ್ತಿ ನಂಬ್ರವನ್ನು ನೋಡಲಾಗದೇ KA19-5969 ಮಾತ್ರ ನೋಡಿರುವುದಾಗಿದೆ ಹಾಗೂ ಅಪಘಾತ ಮಾಡಿದ ಬೈಕು ಸವಾರರು ಫಿರ್ಯಾದುದಾರರನ್ನು ಆಸ್ಪತ್ರೆಗೆ ಸೇರಿಸಲು ಸಹಕರಿಸದೇ ಆಸ್ಪತ್ರೆಯ ಹೊರಗಿನಿಂದಲೇ ಹೋಗಿರುತ್ತಾರೆ.      

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀಮತಿ ದಿವ್ಯ ಜೋಯಿಷಿ ಎಂಬುವರು ತನ್ನ ಗಂಡನ ಮನೆಯಾದ ಉಡುಪಿ ಜಿಲ್ಲೆಯ ಶಿರ್ವ ಮಂಚಕಲ್ ಎಂಬಲ್ಲಿರುವ ಸಂಗೀತಾ ಕಾಂಪ್ಲ್ ಕ್ಸ್ ಎಂಬಲ್ಲಿ ವಾಸವಾಗಿದ್ದವರು ಅಲ್ಲಿ ದಿನಾಂಕ: 8/09/2014 ರಂದು ಸಂಜೆ ಸುಮಾರು 04.30 ವೇಳೆಗೆ ಅವರ ಮನೆಯಲ್ಲಿ ಇರುವಾಗ ನಿನ್ನ ಗಂಡನ ಮನೆ ಮತ್ತು ಜಾಗವನ್ನು ಕೂಡಲೇ ಪಾಲು ಮಾಡಿಕೊಡಬೇಕು ಎಂಬುದಾಗಿ ಪಿರ್ಯಾದಿದಾರರಾದ ಶ್ರೀಮತಿ ದಿವ್ಯ ಜೋಯಿಷಿ ಎಂಬುವರೊಂದಿಗೆ ಮನೆ ಮತ್ತು  ಜಾಗದ ಪಾಲು ವಿಚಾರದಲ್ಲಿ ಅವರ ಗಂಡನ  ಅಣ್ಣ ರಮಾನಾಥ ಮತ್ತು ಅವರ ಹೆಂಡತಿ ಮಾಲತಿ ಎಂಬುವರು ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡಿದಲ್ಲದೇ ಪಿರ್ಯಾದಿದಾರರ ಗಂಡನಿಗೆ ಮತ್ತು ಪಿರ್ಯಾದಿದಾರಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ "ನೀನು ಸತ್ತರೇ ಮಾತ್ರ ನಮಗೆ ಪರಿಹಾರ" ಎಂಬುದಾಗಿ ಬೈದು ಮಾನಸಿಕವಾಗಿ ತೊಂದರೆಯನ್ನು ನೀಡಿ ಪಿರ್ಯಾಧಿದಾರರನ್ನು ಆತ್ಮಹತ್ಯೆಗೆ ಪ್ರೇರಣೆ ನೀಡಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 09-09-2014  ರಂದು ಬೆಳಿಗ್ಗೆ  9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿಶ್ವನಾಥ ಆಚಾರ್ಯ ರವರು ಹಾಗೂ ಪಿರ್ಯಾಧಿಯ ಅಣ್ಣ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-19-ಇಎಚ್  -6144 ನೇದನ್ನು ಸವಾರಿ ಮಾಡಿಕೊಂಡು ನೆಲ್ಲಿಕಾರ್ ನಿಂದ ಅಲಿಯೂರು ಶಿರ್ತಾಡಿ ಮಾರ್ಗ ವಾಗಿ ಮೂಡಬಿದ್ರೆ ಕಡೆಗೆ ಹೋಗುತ್ತಿರುವಾಗ ಬೋರುಗುಡ್ಡೆ ತಲುಪಿದಾಗ ಎದುರಿನಿಂದ ಕೆಎ19ಡಿ7140 ಪಿಕಪ್ ವಾಹನವೊಂದನ್ನು ಅದರ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಢಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕೈಗೆ ,ಮಣಗಂಟಿಗೆ, ಮತ್ತು ಬಲಕಾಲು ಕೋಲು ಕಾಲಿಗೆ ತರಚಿದ ಗಾಯವುಂಟಾಗಿದ್ದು, ಕಾರ್ಕಳದ ಸ್ಪಂದನ ಅಸ್ಪತ್ರಯಲ್ಲಿ ಚಿಕಿತ್ಸೆಯ ಬಗ್ಗೆ ವೈದ್ಯಾಧಿಕಾರಿಯವರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಅಪಘಾತವನ್ನುಂಟು ಮಾಡಿದ ಪಿಕಪ್ ವಾಹನವನ್ನು ಅದರ ಚಾಲಕರು ನಿಲ್ಲಿಸದೇ ಘಟನಾ ಸ್ಥಳದಿಂದ ಪರಾರಿಯಾಗಿರುತ್ತಾರೆ.

 

5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-09-2014 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್  ನಿರೀಕ್ಷಕ ಚೆಲುವರಾಜು ಬಿ . ರವರು ಠಾಣೆಯಲ್ಲಿರುವ ಸಮಯ 18-00 ಗಂಟೆಗೆ ಮಂಗಳೂರು ನಗರದ ಹಂಪನ್  ಕಟ್ಟೆ  ಮೇಗಾ ರೇಸಿಡೆಸ್ಸಿಲಾಡ್ಜ್‌‌ ರೂಂ ನಂ 203 ರಲ್ಲಿ ಓಳಗಡೆ ಕೊಠಡಿಯಲ್ಲಿ  ಉಲಾಯಿ ಪಿದಾಯಿ ಎಂಬ ನಸೀಬಿನ ಆಟವನ್ನು ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರಿಂದ ಸರ್ಚ ವಾರಂಟ್‌‌ನ್ನು ಪಡೆದು ಕೊಂಡು, ಪಂಚರನ್ನು ಠಾಣೆಗೆ ಬರಮಾಡಿಕೊಂಡು, ಪಿಎಸ್ (ಕಾ ಸು) ಕೆ.ಕೆ. ರಾಮಕೃಷ್ಣ, ಪಿಎಸ್ (ಅಪರಾಧ) ಮದನ್ ಎಂ. ಸಿ., ಮತ್ತು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ 18-30 ಗಂಟೆಗೆ ಹೊರಟು, ಮಂಗಳೂರು ನಗರದ ಹಂಪನ್  ಕಟ್ಟೆ  ಮೇಗಾ ರೇಸಿಡೆಸ್ಸಿಲಾಡ್ಜ್ ರೂಂ ನಂ 203 ಕೊಠಡಿಯ ಹೊರಗಡೆ ನಿಂತು ಬಾಗಿಲನ್ನು ಸರಿಸಿ ಗಮನಿಸಿದಾಗ ರೂಮ್ ಒಳಗಡೆ ಟೇಬಲ್‌‌ ಸುತ್ತ ಚೇರ್ ಗಳನ್ನು ಇಟ್ಟು ಕುಳಿತುಕೊಂಡು ಹಾಗೂ ಕೆಲವರು ನಿಂತುಕೊಂಡು, ಕುಳಿತವರ ಪೈಕಿ ಒಬ್ಬಾತನು ಇಸ್ಫೀಟ್ ಎಲೆಗಳನ್ನು ಕೈಯಲ್ಲಿ ಹಿಡಿಕೊಂಡು ಉಲಾಯಿ ಪಿದಾಯಿ ಎಂದು ಹೇಳುತ್ತಾ ,  ಟೇಬಲ್ ಮೇಲೆ ಹಾಕುತ್ತಾ ಬಾಕಿ ಉಳಿದವರು ಕೈಯಲ್ಲಿ ನಗದು ಹಣವನ್ನು ಕೈಯಲ್ಲಿ ಹಿಡಿದು ಟೇಬಲ್ ಮೇಲೆ ಹಾಕುತ್ತಾ ಉಲಾಯಿ ಪಿದಾಯಿ ನಸೀಬಿನ ಜುಗಾರಿ ಆಟವಾಡುತ್ತಿದ್ದನ್ನು ಕಂಡು 18-45 ಗಂಟೆಗೆ ದಾಳಿ ನಡೆಸಿದ ಸಮಯ ಜುಗಾರಿ ಆಟವಾಡುತ್ತಿದ್ದವರು ತಮ್ಮ ಕೈಯಲ್ಲಿದ್ದ ಹಣವನ್ನು ಟೇಬಲ್ ಮೇಲೆ ಬಿಸಾಡಿ ಓಡಲು ಪ್ರಯತ್ತಿಸುತ್ತಿದ್ದವರನ್ನು ಸಿಬ್ಬಂದಿಗಳ ಸಹಾಯದಿಂದ ರೂಂನ ಒಳಗಡೆ ಸುತ್ತುವರಿದು, ಬಳಿಕ ಅವರಲ್ಲಿ ವಿಚಾರಿಸಿದಾಗ  ಜುಗಾರಿ ಆಟವಾಡುವರೇ ಪರಾವನಿಗೆ ಕೇಳಲಾಗಿ ಸಮಪರ್ಕವಾದ ಉತ್ತರವನ್ನು ನೀಡದೇ ಇದ್ದುದರಿಂದ ಇವರುಗಳು ಹಣವನ್ನು ಪಣವಾಗಿಟ್ಟುಕೊಂಡು ಉಲಾಯಿ ಪಿದಾಯಿ ನಸೀಬಿನ ಜುಗಾರಿ ಆಟವಾಡುತ್ತಿರುವು ಖಾತ್ರಿ ಪಡಿಸಿಕೊಂಡ  ಹೆಸರು ವಿಳಾಸ ಕೇಳಲಾಗಿ 1)ಅಶೋಕ್ ಶೆಟ್ಟಿ (43) ತಂದೆ 2)  ದಿನೇಶ (43) 3) ಸಂತೋಷ  (36) 4)  ಸೂರಾಜ್ (38) 5) ಸುಧಾಕರ (46) 6) ವಿನೋದ್ ಪಿಂಟೋ (46) 7) ಮಹಮ್ಮದ್  (52)  ಎಂಬುದಾಗಿ ತಿಳಿಸಿದಂತೆ ಅರೋಪಿಗಳ ವಿರುದ್ದ ದಸ್ತಗಿರಿ ಜಾರಿ ಮಾಡಿ, ಅಲ್ಲದೇ ಜುಗಾರಿ ಅಟಕ್ಕೆ ಉಪಯೋಗಿಸಿದ ಅರೋಪಿಗಳ ವಶದಲ್ಲಿದ್ದ ನಗದು ಹಣ 12,090/ ಪೈಬರ್ ಟೇಬಲ್ ಮೇಲೆ ಇದ್ದ  ನಗದು ಹಣ 8,900 ಅಲ್ಲದೇ  ವಿವಿಧ ಜಾತಿಯ  52 ಇಸ್ಫೀಟ್  ಎಲೆಗಳು,  4 ಪೈಬರ್ ಚಯರ್ ಹಾಗು 1 ಪೈಬರ್ ಟೇಬಲ್ ಹಾಗು ಬಿಳಿ ಬಣ್ಣದ ಬೇಡ್ ಶೀಟ್ ನ್ನು ಮಹಜರು ಮುಖೇನಾ ಮುಂದಿನ ಕ್ರಮದ ಬಗ್ಗೆ ಸ್ವಾಧಿನ ಪಡಿಸಿಕೊಂಡು ಕ್ರಮ ಜರುಗಿಸಲಾಗಿದೆ.

 

6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಜಲಜಾ ರವರ ಮನೆಯಲ್ಲಿ ಕಳೆದ 5-6 ವರ್ಷಗಳಿಂದ ವಾಸ ಮಾಡಿಕೊಂಡಿರುವ ಚಂದ್ರ (35) ಎಂಬವರು ದಿನಾಂಕ 07-09-2014 ಬೆಳಿಗ್ಗೆ 07-00 ಗಂಟೆಯಿಂದ ಕಾಣೆಯಾಗಿರುವುದಾಗಿ ಸದ್ರಿಯವರಿಗೆ ಕಳೆದ 2 ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು ಬಗ್ಗೆ ಚಿಕಿತ್ಸೆ ನೀಡುತ್ತಿರುವುದಾಗಿ ಆತನನ್ನು ಎಲ್ಲಾಹುಡುಕಿದರೂ ಪತ್ತೆಯಾಗದೇ ಇದ್ದು ಕಾಣೆಯಾದ ಚಂದ್ರ ರವರ ಚಹರೆ : ಎತ್ತರಃ 5 ಅಡಿ 6 ಇಂಚು ಬಣ್ಣಃ ಕಪ್ಪು, ಬಟ್ಟೆಃ ಕೆಂಪು ಬಣ್ಣದ ಶರ್ಟ್ ಹಾಗೂ ಲುಂಗಿ ಧರಿಸಿರುವುದಾಗಿದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಮಾಲತಿ ರವರು 14 ವರ್ಷಗಳ ಹಿಂದೆ ವಿಜಯ ಎಂಬವರನ್ನು ವಿವಾಹವಾಗಿದ್ದು 9 ವರ್ಷ ಗಂಡನ ಜೊತೆ  ಉತ್ತಮವಾಗಿ ಸಂಸಾರ ನಡೆಸಿದ್ದು, ಕಳೆದ 5 ವರ್ಷದಿಂದ ಪಿರ್ಯಾದಿದಾರರಿಗೆ ಅವರ ಗಂಡ ವಿಜಯ ಎಂಬವರು ಮಾನಸಿಕ ಹಿಂಸೆ, ವರದಕ್ಷಿಣೆ ಕಿರುಕುಳ, ಕಂಠಪೂರ್ತಿ ಕುಡಿದು ದೈಹಿಕ ಹಲ್ಲೆ ಮಾಡಿದ್ದಲ್ಲದೆ ಕಳೆದ 2 ವರ್ಷದ ಹಿಂದ ಪಿರ್ಯಾಧಿದಾರರನ್ನು ಮನೆಯಿಂದ ಹೊರಗಡೆ ಹಾಕಿರುತ್ತಾರೆ. ಕಳೆದ  2 ವಾರದ ಹಿಂದೆ ಪಿರ್ಯಾಧಿದಾರರು ತನ್ನ ಗಂಡನ ಮನೆಯಾದ ಮರೋಳಿ ಬಳಿ ರೇಶನ್‌‌ಕಾರ್ಡ್ತೆಗೆದುಕೊಳ್ಳುವರೇ  ಹೋಗಿದ್ದ  ವೇಳೆ ಪಿರ್ಯಾಧಿದಾರರ ಗಂಡನು ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಮುಂದಾಗಿರುತ್ತಾರೆ ಎಲ್ಲಾ ಕೃತ್ಯಕ್ಕೆ ಪಿರ್ಯಾಧಿದಾರರ ಅತ್ತೆ ವೇದಾವತಿ ಕುಮ್ಮಕ್ಕು ನೀಡಿರುತ್ತಾರೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಅನಿತಾ ರವರು ಚನ್ನರಾಯ ಪಟ್ಟಣದ ಪುಟ್ಟಸ್ವಾಮಿ ಗೌಡ ಎಂಬವರ ಮಗ ಪ್ರವೀಣ ಕೆ.ಪಿ ಯವರು ಪಿರ್ಯಾದಿದಾರರ ತಂದೆಯ ಮಾಲೀಕತ್ವದ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದಾಗ ಪಿರ್ಯಾದಿದಾರರಿಗೆ ಪ್ರವೀಣರೊಂದಿಗೆ ಪ್ರೀತಿಯಾಗಿ ಅವರು ದಿನಾಂಕ 16.06.2009 ರಂದು ಎಲ್ಲಮ್ಮ ತಾಯಿ ದೇವಸ್ಥಾನ ಹೆಚ್.ಸಿ ಕೋಟೆಯಲ್ಲಿ ಮದುವೆಯಾಗಿರುತ್ತಾರೆ. ಮದುವೆಗೆ ಪಿರ್ಯಾದಿದಾರರ ಮನೆಯಲ್ಲಿ ಯಾವುದೆ ಒಪ್ಪಿಗೆ ಇರಲಿಲ್ಲ ನಂತರ ಇವರಿಬ್ಬರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಅಲ್ಲಿ ಅವರ ಗಂಡನ ಮನೆಯವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದು "ನಿನ್ನ ತಂದೆಯವರಿಗೆ ತುಂಬಾ ಆಸ್ತಿಯಿದ್ದು, ಅಲ್ಲಿಂದ ಹಣ ತಗೆದುಕೊಂಡು ಬಾ" ಎಂದು ಯಾವಾಗಲು ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ನೀಡುತ್ತಿದ್ದು ಅಲ್ಲದೆ ದಿನಾಂಕ 08.09.2014 ರಂದು ಪಿರ್ಯಾದಿದಾರರ ಗಂಡ ಮತ್ತು ಲೊಕೇಶ್, ಕೇಶವ್, ಪುಟ್ಟಸ್ವಾಮಿ ಗೌಡ, ಸುನಂದಾ,ಲಕ್ಷ್ಮೀ ಇವರೆಲ್ಲರು ಸೇರಿ ಕಿರುಕುಳ ನೀಡಿ ಹಣ ತರದೆ ಮನೆಗೆ ಬರಬಾರದೆಂದು ತಿಳಿಸಿ ಮಂಗಳೂರಿನ ಕಂಕನಾಡಿ ರೈಲ್ವೇ ನಿಲ್ದಾಣದಲ್ಲಿ ಪಿರ್ಯಾದಿದಾರರನ್ನು ಮಕ್ಕಳ  ಜೊತೆ ಬಿಟ್ಟು ಹೋಗಿರುತ್ತಾರೆ.

No comments:

Post a Comment