Monday, September 1, 2014

Daily Crime Reports 01-09-2014

ದೈನಂದಿನ ಅಪರಾದ ವರದಿ.

ದಿನಾಂಕ 01.09.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-05-2011 ರಂದು  ಪಿರ್ಯಾದಿದಾರರಾದ ಶ್ರೀಮತಿ ಅಡಲೈನ್ ಡಫ್ನಿ ಡಿ'ಸೋಜಾ ರವರು ಮಿಲೇಶ್ ಸಂದೀಪ್ ಡಿ' ಸೋಜಾ ರವರನ್ನು  ರಿಜಿಸ್ಟರ್ ಮದುವೆಯಾಗಿದ್ದು,  ಮದುವೆಯ ನಂತರ ಗಂಡನ ಮನೆಯಾದ ತೊಕ್ಕೊಟ್ಟುವಿನ ಅದಮ್ ಕುದ್ರುವಿನಲ್ಲಿ ವಾಸವಾಗಿದ್ದು, ದಿನಾಂಕ 23-02-2014 ರಂದು ಗರ್ಭಿಣಿಯಾದ ಪಿರ್ಯಾದಿದಾರರಿಗೆ ಸಿಮಂತ ಮಾಡಿ ತಾಯಿ ಮನೆಯಾದ ಜೆಪ್ಪು ಬಪ್ಪಾಲ್ಗೆ ಕರೆ ತಂದಿದ್ದು, ತಾಯಿ ಮನೆಯಲ್ಲಿರುವಾಗ  ಆರೋಪಿ ದಿನಾಲೂ ಮನೆಗೆ ಬಂದು ಹೋಗುತ್ತಿದ್ದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ನೀನು ಬಡವಳು, ನೀನು ಕೂರೂಪಿ ಕಪ್ಪು ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿಯ ಅಜ್ಜಿ ಮನೆಯಲ್ಲಿ ಇರುವಾ ಎಂದು ತಿಳಿಸಿ ಬಾಬುಗುಡ್ಡ ಅತ್ತಾವರಕ್ಕೆ ಬಂದು ವಾಸವಾಗಿದ್ದಾಗ ಅಲ್ಲಿಯೂ ಕೂಡ ಆರೋಪಿ ನನಗೆ ವ್ಯಾಪಾರಕ್ಕೆ ಹಣ ಕೊಡಬೇಕೆಂದು  ಚಿತ್ರಹಿಂಸೆ ನೀಡುತ್ತಿದ್ದು, ಅಲ್ಲದೇ ದಿನಾಂಕ 30-08-2014 ರಂದು ಆರೋಪಿಯು ಶರಾಬು ಕುಡಿದು ಬಂದು ನನಗೆ ಈಗಾಲೇ ಹಣ ನೀಡಬೇಕು ಇಲ್ಲದಿದ್ದರೆ ನಿನ್ನನ್ನು ಹಾಗೂ ಮಗುವನ್ನು ಸಾಯಿಸುತ್ತೆನೆಂದು ಕೈಯಿಂದ ಹೊಡೆದು ಬೆದರಿಕೆ ಹಾಕಿರುವುದಾಗಿದೆ.

 

2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-08-2014 ರಂದು ಮಂಗಳೂರು ತಾಲೂಕು ಕಾವೂರು ಗ್ರಾಮದ ಸೂಜಿಕಲ್ಲು ಗುಡ್ಡೆ ಎಂಬಲ್ಲಿ ಮರದ ಅಡಿಯಲ್ಲಿ ಖಾಲಿ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಕಾವೂರು ಪೊಲೀಸ್ ಠಾಣಾ ಉಪನಿರೀಕ್ಷರಾದ ಶ್ರೀ ಉಮೇಶ್ ಕುಮಾರ್ ಎಂ.ಎನ್. ರವರು, ಸಿಬ್ಬಂದಿಯವರನ್ನು ಮತ್ತು ಪಂಚರೊಂದಿಗೆ ಇಲಾಖಾ ವಾಹನದಲ್ಲಿ ಮೇಲಿನ ಸ್ಥಳಕ್ಕೆ ತೆರಳಿ 13-20 ಗಂಟೆಗೆ ಧಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಒಳಗೆ ಹೊರಗೆ ಎಂಬ ನಸಿಬಿನ ಜೂಜಾಟ ಆಡುತ್ತಿದ್ದ ಆರೋಪಿಗಳಾದ ಮಂಜುನಾಥ. ಸಂಗಪ್ಪ, ವೀರಣ್ಣ, ರಹಿಮಾನ್, ಉಮೇಶ್, ರಮೇಶ್ ಯಮುನಪ್ಪ ಚಲವಾದಿ, ಶ್ರೀಕಾಂತ್ ರವಿ ಎಂಬವರನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿದ್ದ ಒಟ್ಟು ರೂಪಾಯಿ 11,200/- ಇಸ್ಪೀಟ್, ಕ್ಲೆವರ್, ಡೈಮಂಡ್ ಆಟೀನ್ ಹೀಗೆ ಒಟ್ಟು 52 ಇಸ್ಪೀಟ್ ಎಲೆಗಳು ಹಾಗು ನೆಲದ ಮೇಲೆ ಹಾಸಿದ್ದ ಪ್ಲಾಸ್ಟಿಕ್ ನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮೂಲಕ ಸ್ವಾದೀನಪಡಿಸಿಕೊಂಡಿರುವುದಾಗಿದೆ.

 

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:30.08.2014 ರಂದು ಸಮಯ ರಾತ್ರಿ 23.00 ಗಂಟೆಗೆ  ಮಿತ್ರ ಮಂಡಳಿ ಬಿಜೈ, ಮಂಗಳೂರು ಸಮಿತಿಯ ಶ್ರೀ ಗಣೇಶೋತ್ಸವ ಸಮಾರಂಭದ ವಿರ್ಸಜನಾ ಮೆರವಣಿಯು ಕದ್ರಿ ಕಂಬ್ಳ ಜಂಕ್ಷನ್ ಬಳಿ ಪಿರ್ಯಾದಿದಾರರಾದ ಶ್ರೀ ನೀಲಧರ ಶೆಟ್ಟಿ ರವರು ಹಾಗೂ ಸಂಬಂದಿಕರು ಶ್ರಿಗಣೇಶನ ಶೊಭಾಯಾತ್ರೆಯನ್ನು ನೋಡುವರೇ ಕಾರು ನಂ: ಕೆಎ-19 ಎಂಸಿ-1609 ನೆದರದಲ್ಲಿ ಕುಳಿತಿದ್ದು ಉತ್ಸವ ಸಮಿತಿಗೆ ಸಂಬಂದಿಸಿದ ಮೋಹಿತ್ ಹಾಗೂ  ಇತರೆ ಪಟಾಕಿ ಬಿಡುವವರು ಯಾವುದೇ ಜವಾಬ್ದಾರಿ ವಹಿಸಿದೆ ನಿರ್ಲಕ್ಷತನದಿಂದ ಮುಂಜಾಗ್ರತೆ ಸೂಚನೆ ನಿಡದೆ, ಪಟಾಕಿಯ ಮಾಲೆಗೆ ಬೆಂಕಿ ನೀಡಿ ಸಿಡಿಸುತ್ತಿರುವಾಗ ಪಟಾಕಿಯು ಕಾರಿನ ಒಳಗೆ ಬಂದು ಪಟಾಕಿ ಬಿದ್ದು ಸಿಡಿದು ಬೆಂಕಿ ಹೊತ್ತಿ ಉರಿದು ಕಾರಿನೊಳಗೆ ಕುತಿದ್ದ ಪಿರ್ಯಾದಿ ನೀಲಧರ ಶೆಟ್ಟಿ ಹಾಗೂ ಪಿರ್ಯಾದಿ ತಮ್ಮನ ಮಗಳು ರಕ್ಷಿತಾ ಶೆಟ್ಟಿ ರವರಿಗೆ ಸುಟ್ಟ ಗಾಯವಾಗಿರುತ್ತೆ ಮತ್ತು ಕಾರಿನೊಳಗಿನ ಸೀಟುಗಳು ಬೆಂಕಿತಾಗಿ ನಷ್ಟ ಸಂಬಂವಿಸಿರುತ್ತದೆ.

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-08-2014 ರಂದು  ಮದ್ಯಾಹ್ನ  ತೆಂಕ ಎಡಪದವು ಪಾಡ್ಯಾರ್ ಎಂಬಲ್ಲಿ ಅಕ್ರಮವಾಗಿ  ಕೋಳಿ ಅಂಕ ಎಂಬ  ಜುಗಾರಿ ಆಟವಾಡುತ್ತಿದ್ದಾರೆಂಬ ಮಾಹಿತಿಯಂತೆ ಬಜ್ಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ನರಸಿಂಹಮೂರ್ತಿ ರವರು ಸಿಬ್ಬಂದಿಗಳನ್ನು ಮತ್ತು  ಪಂಚರೊಂದಿಗೆ ತೆಂಕ ಎಡಪದವು ಪಾಡ್ಯಾರ್ ಎಂಬ ಸ್ಥಳಕ್ಕೆ ಮದ್ಯಾಹ್ನ:12.00 ಗಂಟೆಗೆ  ಹೋದಾಗ ಅಲ್ಲಿ  ಸುಮಾರು  ಜನರು ಕೋಳಿಗಳನ್ನು ಇಟ್ಟುಕೊಂಡು  ಅದರ ಕಾಲಿಗೆ ಹರಿತವಾದ ಕೋಳಿ ಕತ್ತಿಯನ್ನು ಕಟ್ಟಿ ಅದನ್ನು ಕಾದಾಟಕ್ಕೆ ಬಿಟ್ಟು  ಅದರ ಮೇಲೆ ಹಣವನ್ನು ಪಣವಾಗಿರಿಸಿ ಜುಗಾರಿ ಆಟವಾಡುತ್ತಿರುವುದನ್ನು  ಕಂಡು ಅಲ್ಲಿಗೆ  ದಾಳಿ ನಡೆಸಿದಾಗ ಜುಗಾರಿ ಆಟವಾಡಿಸುತ್ತಿದ್ದ  ಹರೀಶ್ ಕೊಟ್ಟಾರಿ ಎಂಬವರು ಪರಾರಿಯಾಗಿದ್ದು, ಉಳಿದ ಆರೋಪಿತರಾದ   1). ಚಂದ್ರಹಾಸ 2) ಮಾಧವ 3)ಲತೀಶ್ 4) ಇಬ್ರಾಹಿಂ 5) ಗಂಗಾಧರ 6)ಜಗದೀಶ್ 7) ಸುರೇಂದ್ರ 8)ಪ್ರಕಾಶ್  9) ತಾರನಾಥ 10) ಪ್ರಕಾಶ ಎಂಬವರನ್ನು ದಸ್ತಗಿರಿ ಮಾಡಿ ಅವರಿಂದ  ವಿವಿಧ ಜಾತಿಯ 11 ಕೋಳಿಗಳು, ಎರಡು ಕೋಳಿ ಕತ್ತಿ (ಬಾಳ್),ನಗದು ಹಣ 900 ಮತ್ತು ಪ್ಲಾಸ್ಟಿಕ್ ಗೋಣಿ ಚೀಲವೊಂದನ್ನು ಮುಂದಿನ ನಡವಳಿಕೆಯ ಬಗ್ಗೆ ಸ್ವಾಧೀನಪಡಿಸಿಕೊಂಡು ಕ್ರಮ ಜರುಗಿಸಿರುವುದಾಗಿದೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31.08.2014 ರಂದು ಮಧ್ಯಾನ 3:00 ಗಂಟೆಗೆ ಶಕ್ತಿನಗರದಿಂದ ಪಿರ್ಯಾದಿದಾರರಾದ ಶ್ರೀ ಜೀವನ ಪ್ರಭು ರವರು ಮತ್ತು ಅವರ ಗೆಳೆಯರಾದ ರಿತೇಶ್, ಕಿರಣ್, ಸೋಮಶೇಖರ್, ನಿತಿನ್, ದಿಕ್ಷೀತ್, ಪ್ರವೀಣ್ ನಾಯಕ್, ಎಲ್ಲರು ಒಟ್ಟಾಗಿ ನಾಲ್ಕು ಬೈಕುಗಳಲ್ಲಿ ಒಳಚಿಲ್ ಪದವಿನಲ್ಲಿರುವ ಒಂದು ಜಲಪಾತವನ್ನು ನೋಡಲು ಹೊರಟುಹೋಗಿದ್ದು ಸುಮಾರು 4:00 ಗಂಟೆಗೆ ಜಲಪಾತವಿರುವ ಜಾಗವನ್ನು ತಲುಪಿ ಅಲ್ಲಿ ಜಲಪಾತವನ್ನು ವಿಕ್ಷಿಸಿ  ನಂತರ ವಾಪಾಸು 4 ಬೈಕ್ ಗಳಲ್ಲಿ ಮನೆಕಡೆಗೆ ಹೊರಟು ಬರುವಾಗ ಒಂದು ಬೈಕಿನಲ್ಲಿ KA 19. EL 9333. ನೇ ದರಲ್ಲಿ ದಿಕ್ಷೀತ್ ರವರು ಬೈಕ್ ಚಲಾಯಿಸುತ್ತಿದ್ದು ಪ್ರವೀಣ್ ನಾಯಕ್ ರವರು ಸಹ ಸವಾರರಾಗಿದ್ದು ಇನ್ನೊಂದು ಬೈಕಿನಲ್ಲಿ ರಿತೇಶ್ ಮತ್ತು ಕಿರಣ್ ರವರಿದ್ದು ಬೈಕನ್ನು ರಿತೇಶ್ ರವರು ಚಲಾಯಿಸಿಕೊಂಡು ನೀರುಮಾರ್ಗದಿಂದ ಒಳಚಿಲ್ ಕಡೆಗೆ ಬರುವ ಡಾಮಾರು ರಸ್ತೆಯಲ್ಲಿ ರಿತೇಶ್ ರವರು ಚಲಾಯಿಸುತ್ತಿದ್ದ ಬೈಕನ್ನು ಓವರ್ ಟೇಕ್ ಮಾಡುವ ಆತುರದಲ್ಲಿ ದಿಕ್ಷೀತ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿರುವ ಹೊಂಡಕ್ಕೆ ಬೈಕ್ ಸಮೇತ ಬಿದ್ದರು, ಕೂಡಲೇ ಪಿರ್ಯಾದಿದಾರರು ಬೈಕನ್ನು ನಿಲ್ಲಿಸಿ ದಿಕ್ಷೀತ್ ಮತ್ತು ಪ್ರವೀಣ್ ನಾಯಕ್ ರವರು ಬಿದ್ದಿರುವ ಹೊಂಡಕ್ಕೆ ಇಳಿದು ಅವರುಗಳನ್ನು ಉಪಚರಿಸಿ ನೋಡಿದಲ್ಲಿ ಪ್ರವೀಣ್ ನಾಯಕ್ ರವರ ತಲೆಗೆ ಗಂಬೀರಗಾಯವಾಗಿದ್ದು ಅವರು ಮಾತನಾಡು ಸ್ಥಿತಿಯಲ್ಲಿ ಇರಲಿಲ್ಲ, ದಿಕ್ಷೀತ್ ರವರಿಗೂ ಗಂಭೀರ ರಕ್ತಗಾಯವಾಗಿದ್ದು  ಅವರನ್ನು ಆಟೋ ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಪಂಪ್ ವೆಲ್ ನಲ್ಲಿರುವ ಇಂಡಿಯಾನ ಆಸ್ಪತ್ರೆಗೆ ಕರೆತಂದಲ್ಲಿ ವೈಧ್ಯರು ಪ್ರವೀಣ್ ನಾಯಕ್ ನನ್ನು ಪರೀಕ್ಷಿಸಿ ಪ್ರವೀಣ್ ನಾಯಕ್ ನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಅಪಘಾತ ನಡೆಯಲು KA 19. EL 9333. ಬೈಕನ್ನು ದೀಕ್ಷಿತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದೇ ಕಾರಣವಾಗಿರುತ್ತದೆ.

No comments:

Post a Comment