Tuesday, October 7, 2014

Press Note

ಪಿರ್ಯಾದಿದಾರರಾದ ಶ್ರೀಯತ ಸತೀಶ್ ಪೂಜಾರಿ ಒಂಭತ್ತು ಕೆರೆ , ಸಿಸೈಡ್‌ ಉಳ್ಳಾಲ ಎಂಬವರು  ಮನ್ವಿಂದರ್‌ ಆಳ್ವ ಎಂಬವರ ಜಾಗದಲ್ಲಿ ಸೆಕ್ಯುರಿಟಿ ಕೆಲಸವನ್ನು ಮಾಡಿಕೊಂಡಿದ್ದು ದಿನಾಂಕ 6-10-2014 ರಂದು ಸಮಯ ಸುಮಾರು ಬೆಳಿಗ್ಗೆ 11.30 ಗಂಟೆಗೆ ನಿಂತುಕೊಂಡಿರುವಾಗ ಒಬ್ಬ ವ್ಯಕ್ತಿಯು ಏಕಾ ಏಕಿ ಅವಾಚ್ಯ ಶಬ್ದಗಳಿಂದ ಬ್ಯಾರಿ ಭಾಷೆಯಲ್ಲಿ ಬೈದು , ಹೊಡೆದು ಮತ್ತು ಹೊಟ್ಟೆಯ ಭಾಗಕ್ಕೆ ಬಾಯಿಂದ ಕಚ್ಚಿದನು, ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ ಅಲ್ಲಿಯ ನೆರೆಕರೆಯ ಜನರು ಬರುವುದನ್ನು ನೋಡಿ ಓಡಿ ಹೋದನು ನಂತರ ಸ್ವಲ್ಪ ಸಮಯದಲ್ಲಿ ಅದೇ ವ್ಯಕ್ತಿ ಒಂದು ದೊಡ್ಡ ಕತ್ತಿಯನ್ನು ಹಿಡಿದು ಕಡಿಯಲು ನೋಡಿದಾಗ ಪಿರ್ಯಾದಿದಾರರು ತಪ್ಪಿಸಿಕೊಂಡು ಅಲ್ಲಿಗೆ ಬಂದ ಜನರನ್ನು ನೋಡಿ ಓಡಿ ಹೋಗಿರುತ್ತಾನೆ. ನಂತ್ರ ಹಲ್ಲೆಗೆ ಒಳಗಾದ ಪಿರ್ಯಾದಿದಾರರು ನೇತಾಜಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಅಬ್ದುಲ್‌ ಮೊಯಿಝ್‌ ಎಂಬತ್ತಾನನ್ನು ದಸ್ತಗಿರಿ ಮಾಡಲಾಗಿದೆ.

No comments:

Post a Comment