ದೈನಂದಿನ ಅಪರಾದ ವರದಿ.
ದಿನಾಂಕ 28.10.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 27.10.2014 ರಂದು ಪಿರ್ಯಾದಿದಾರರಾದ ಶ್ರೀ ದೇವದಾಸ್ ಶೆಟ್ಟಿ ರವರು ಮಂಗಳೂರು ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹೋಗಿ ನಂತರ ಮನೆಗೆ ಹೋಗುವರೇ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ 10.30 ಗಂಟೆಗೆ ಹೋಟೇಲ್ ವಿಮಲೇಶ್ ಎದುರುಗಡೆ ತಲುಪಿದಾಗ ಆರೋಪಿ ಕಾರು ನಂಬ್ರ ಕೆಎ 19.ಎಂಸಿ.5227ನೇದನ್ನು ಅದರ ಚಾಲಕ ಗಣೇಶ್ ರವರು ಶರವು ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಎಡ ಕಾಲಿನ ಕೋಲು ಕಾಲಿಗೆ ಬಲವಾದ ರಕ್ತ ಗಾಯ, ಎಡ ಕೈಯ ಕಿರು ಬೆರಳಿಗೆ , ಮೊಣ ಗಂಟಿಗೆ ಮತ್ತು ಎಡ ಭುಜಕ್ಕೆ ಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ ತಾರಾ ಕ್ಲಿನಿಕಿನಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದಲ್ಲಿರುವ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮದ ಬಳಿ ಹಾಕಿರುವ ದೀಪಾವಳಿ ಹಬ್ಬಕ್ಕೆ ಶುಭ ಕೋರುವ ಬ್ಯಾನರ್ ಮತ್ತು ರಿಕ್ಷಾ ಚಾಲಕರಿಗೆ ಸನ್ಮಾನ ಮತ್ತು ಉಡುಗೊರೆ ನೀಡುವ ಕಾರ್ಯಕ್ರಮದ ಬಗ್ಗೆ ಬ್ಯಾನರನ್ನು ದಿನಾಂಕ 26/27-10-2014 ರಂದು ರಾತ್ರಿ ಸಮಯದಲ್ಲಿ ಯಾರೋ ಹರಿದು ಹಾಕಿದ್ದಲ್ಲದೆ ಸ್ವಾಮೀಜಿಯವರ ಕಂಪೌಡಿಗೆ ಅಕ್ರಮ ಪ್ರವೇಶ ಮಾಡಿ ಸುಮಾರು 10,000/- ರೂ ನಷ್ಟ ಉಂಟು ಮಾಡಿರುತ್ತಾರೆ ಎಂಬುದಾಗಿ ಶ್ರೀ ಗೀರೀಶ್ ಕಾಮತ್ ಎಂಬವರು ದೂರು ನೀಡಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-10-14 ರಂದು ಬೆಳಿಗ್ಗೆ ಫಿರ್ಯಾದಿದಾರರಾದ ಶ್ರೀಮತಿ ಜುಬೈದಾ ರವರು ಅವರ ತಮ್ಮ ಮುನೀರ್, ತಂಗಿ ಮುಮ್ತಾಜ್, ಜಮೀಲಾರೊಂದಿಗೆ ಕೆಎ-19-ಎಂಸಿ-6478 ನೇ ರಿಟ್ಝ್ ಕಾರಿನಲ್ಲಿ ಕಾರು ಚಾಲಕನಾಗಿ ಪಿರ್ಯಾದಿಯ ತಮ್ಮ ಫಾರೂಕ್ ಕಾರು ಚಲಾಯಿಸಿಕೊಂಡು ಶಿವಮೊಗ್ಗಕ್ಕೆ ಮದುವೆ ಕಾರ್ಯಕ್ರಮದ ಬಗ್ಗೆ ಹೊರಟು ಮೂಡಬಿದ್ರೆ ಮಾರ್ಗವಾಗಿ ಹೋಗುತ್ತಾ ಬೆಳಿಗ್ಗೆ 09.00 ಗಂಟೆಗೆ ಬೆಳುವಾಯಿ ಗ್ರಾಮದ ಕೆಸರು ಗದ್ದೆ ಬಳಿ ತಲುಪಿದಾಗ ಉಮ್ಮರ್ ಫಾರೂಕ್ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಒಮ್ಮೆಲೇ ಕಾರು ಸ್ಕಿಡ್ ಆಗಿ ಕಾರು ಗದ್ದೆಗೆ ಬಿದ್ದಿದ್ದು, ಪರಿಣಾಮ ಪಿರ್ಯಾದಿದಾರರ ಎಡಕೈಯ ಭುಜಕ್ಕೆ ಹಾಗೂ ತೋಳಿಗೆ, ಮೊಣ ಗಂಟಿಗೆ ರಕ್ತ ಬರುವ ಗುದ್ದಿದ ಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಐಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಮ್ ನಂದ್ ಜಾಟ್ ರವರು RJ 06 GA 9116 ನೇ ನೊಂದಣಿ ಸಂಖ್ಯೆಯ ಲಾರಿಯ ನೊಂದಣಿ ಮಾಲಕರಾಗಿದ್ದು ದಿನಾಂಕ 26-10-2014 ರಂದು ಮೇಲ್ಕಂಡ ಲಾರಿಯಲ್ಲಿ ಮಾರ್ಬಲನ್ನು ಕ್ಯಾಲಿಕಟ್ ನಲ್ಲಿ ಅನ್ ಲೋಡ್ ಮಾಡಿಕೊಂಡು ಬಂದು ಸುರತ್ಕಲ್ ನ ರೋ ರೋ ಬಳಿಯ ಲಾರಿ ಪಾರ್ಕಿಂಗ್ ಸ್ಥಳದ ಬಳಿ ರಾತ್ರಿ ನಿಲ್ಲಿಸಿ ಲಾರಿಯ ಕ್ಯಾಬಿನ್ ನ ಒಳಗಡೆ ಪ್ಯಾನ್ ಹಾಕಿ ಲಾರಿ ಕ್ಲೀನರ್ ರಾಮ್ ಕರಣ್ ರೊಂದಿಗೆ ಮಲಗಿದ್ದು ದಿನಾಂಕ 27-10-2014 ರಂದು ಬೆಳಿಗ್ಗೆ 04-00 ಗಂಟೆಗೆ ಫ್ಯಾನ್ ಆಫ್ ಆಗಿರುವುದರಿಂದ ಎಚ್ಚರವಾಗಿ ಯಾಕೆ ಫ್ಯಾನ್ ಆಫ್ ಆಯಿತೆಂದು ಬಾಗಿಲು ತೆರೆದು ಹೂರಗೆ ನೋಡುವಾಗ ಲಾರಿಯ ಬ್ಯಾಟರಿ ಬಳಿ ಶಬ್ದ ಕೇಳಿ ಬಂದು ಅಲ್ಲಿದ್ದ ವಿದ್ಯುತ್ ದ್ವೀಪದ ಬೆಳಕಿನ ಸಹಾಯದಿಂದ ನೋಡಲಾಗಿ ಯಾರೋ ಲಾರಿಯ ಬ್ಯಾಟರಿಯನ್ನು ತೆಗೆಯಲು ಪ್ರಯತ್ನಿಸುವುದನ್ನು ಕಂಡು ಕೂಡಲೇ ಕ್ಲೀನರ್ ಜೊತೆ ಹತ್ತಿರಹೋದಾಗ ಆ ವ್ಯಕ್ತಿ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಅವರು ಹಿಡಿದು ವಿಚಾರಿಸಿದಾಗ ಆತ ಲಾರಿಯಿಂದ ಬ್ಯಾಟರಿ ಕಳ್ಳತನ ಮಾಡಲು ಬಂದಿರುವುದಾಗಿ ತಿಳಿಯಿತು. ಆತನ ಹೆಸರು ಇಮ್ರಾನ್ ಪ್ರಾಯ:24 ವರ್ಷ ತಂದೆ ಅಬ್ದುಲ್ ಖಾದರ್ ಎಂದು ಸದ್ರಿ ಬ್ಯಾಟರಿ ಇದ್ದ ಸ್ಥಳದಲ್ಲಿ ಮೋಟಾರ್ ಸೈಕಲ್ ನ ಟೂಲ್ಸ್,ಲೈಟರ್ ಬಿದ್ದು ಕೊಂಡಿದ್ದು ಹತ್ತಿರದಲ್ಲಿ ಆಪಾದಿತ ಬಂದಿದ್ದ KA019 EF6505ನೇ ಎಫ್ ಝಡ್ ಮೋಟಾರ್ ಸೈಕಲ್ ಕೂಡ ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಲ್ಲಿಗೆ ಬಂದ ಪಿಸಿಆರ್ ವಾಹನದಲ್ಲಿ ಆಪಾದಿತನನ್ನು ಸುರತ್ಕಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುವುದಾಗಿದೆ. ಆಪಾದಿತನು ಲಾರಿಯಿಂದ ಬ್ಯಾಟರಿಯನ್ನು ಕಳವು ಮಾಡಲು ಪ್ರಯತ್ನಿಸಿದಾಗಿರುತ್ತದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುದರ್ಶನ್ ರವರು ಶ್ರೀರಾಮ್ ಪೈನಾನ್ಸ್ ಕಂ.ಲಿಮಿಟೆಡ್ ನೇದರ ಮೆನೇಜರ್ ಆಗಿದ್ದು, ಈ ಸಂಸ್ಥೆಯಲ್ಲಿ , ಆರೋಪಿ 1ನೇ ಶ್ರೀಮತಿ ಆಶಾಲತಾ ರವರು ಇನೊವಾ ಕಾರು ನಂಬ್ರ ಕೆಎ 18 ಎನ್ 3393, ಚೇಸಿಸ್ ನಂಬ್ರ MBJ11JV40072103720310, ಇಂಜಿನ್ ನಂಬ್ರ 2KD6478577 ನೇದರ ಖರೀದಿಗೆ ಪಿರ್ಯಾದಾರರು ಮೆನೇಜರ್ ಆಗಿರುವ ಸಂಸ್ಥೆಯಲ್ಲಿ ಸಾಲ ಸೌಲಭ್ಯಕ್ಕಾಗಿ 2013 ಫೆಬ್ರವರಿ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದು, ಅದರಂತೆ ವಾಹನ ಖರೀದಿಗೆ ರೂಪಾಯಿ 8,64,136-00/- ಹಣವನ್ನು ಪಡೆದು ಬಡ್ಡಿ ಸಮೇತ ಒಟ್ಟು ರೂಪಾಯಿ 14,31,537-00/- ನ್ನು 60 ಕಂತುಗಳಲ್ಲಿ ಪಾವತಿಸುವುದಾಗಿ ಒಪ್ಪಿಕೊಂಡು ಸಂಸ್ಥೆಗೆ ಸಂಬಂಧಪಟ್ಟ ದಾಖಲಾತಿಗಳಿಗೆ ಸಹಿ ಹಾಕಿರುತ್ತಾರೆ. ಈ ದಾಖಲಾತಿಗಳಿಗೆ ಆರೋಪಿ 2ನೇ ಭರತ್ ಕುಮಾರ್ ರವರು ಜಾಮೀನುದಾರರಾಗಿ ಸಹಿ ಹಾಕಿರುತ್ತಾರೆ. ಹೀಗೆ ಸಾಲವನ್ನು ಪಡೆದ ಆರೋಪಿಗಳು ಕರಾರಿನಂತೆ ಕಂತಿನ ರೂಪದಲ್ಲಿ ಸಾಲ ಮರುಪಾವತಿ ಮಾಡಬೇಕಾಗಿದ್ದು, ಆದರೆ ಆರೋಪಿಗಳು ಸಾಲದ ಕಂತನ್ನು ಹಲವಾರು ತಿಂಗಳು ಮರುಪಾವತಿಸದೇ ಇದ್ದು, ಈ ಬಗ್ಗೆ ವಿಚಾರಿಸಿದಾಗ, ಸದ್ರಿ ವಾಹನವನ್ನು ಆರೋಪಿ 2ನೇಯವನು ತೆಗೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದ್ದು, ಈ ವಾಹನದ ಬಗ್ಗೆ ಆರ್.ಟಿ.ಓ.ಕಚೇರಿಯಲ್ಲಿ ವಿಚಾರಿಸಿದಾಗ, ಪಿರ್ಯಾದಿದಾರರ ಸಂಸ್ಥೆಯ ಸಾಲದ ಬಗ್ಗೆ , ಸಾರಿಗೆ ಕಚೇರಿಯ ದಾಖಲಾತಿಯಲ್ಲಿ Hypothecation entry ಯನ್ನು ತೆಗೆದು ಹೊಸ ನೋಂದಣಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ತಿಳಿದು ಬಂದಿರುತ್ತದೆ. ಆದರೆ ಪಿರ್ಯಾದಿದಾರರ ಸಂಸ್ಥೆಯು ಸದ್ರಿ ವಾಹನಕ್ಕೆ ಯಾವುದೇ ರೀತಿಯ ಸಾಲ ತೀರುವಳಿ ಪತ್ರ ನೀಡಿರುವುದಿಲ್ಲ. ಹಾಗೂ ಸಂಸ್ಥೆಯ Hypothecation entry ಯನ್ನು ತೆಗೆಯಲು ಯಾವುದೇ ಅನುಮತಿ ಪತ್ರವನ್ನು ನೀಡಿರುವುದಿಲ್ಲ. ಆರೋಪಿಗಳಾದ ಶ್ರೀಮತಿ ಆಶಾಲತಾ ಮತ್ತು ಭರತ್ ಕುಮಾರ್ ಇವರು ಪಿರ್ಯಾದಿದಾರರ ಸಂಸ್ಥಗೆ ನಂಬಿಸಿ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ವಾಹನವನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಯತ್ನಿಸಿ ಸಂಸ್ಥೆಗೆ ಮೋಸ ಮಾಡಿರುವುದಾಗಿದೆ.
No comments:
Post a Comment