ದೈನಂದಿನ ಅಪರಾದ ವರದಿ.
ದಿನಾಂಕ 26.10.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-10-2014 ರಂದು ರಾತ್ರಿ 7-00 ಗಂಟೆಗೆ ಕುಳಾಯಿಗುಡ್ಡೆಯಲ್ಲಿರುವ ಫಿರ್ಯಾದಿದಾರರಾದ ಶ್ರೀ ರಾಜೇಶ್ ರವರ ಮನೆಯಿಂದ ಹೋಗಿದ್ದ ಪಿರ್ಯಾದಿದಾರರ ತಂದೆಯವರಾದ ಶ್ರೀ ಜಯರಾಮ ಕರ್ಕೇರಾ (65 ವರ್ಷ), ತಂದೆ: ತುಕ್ರ ಮೂಲ್ಯ ರವರಿಗೆ ಕುಳಾಯಿಗುಡ್ಡೆ ರೈಲ್ವೆ ಬ್ರೀಜ್ ಬಳಿ ಯಾವುದೊ ಅಪರಿಚಿತ ವಾಹನವನ್ನು ಅದರ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಡಿಕ್ಕಿಪಡಿಸಿ ಸ್ಥಳದಿಂದ ತನ್ನ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು ಜಯರಾಂ ಕರ್ಕೆರಾ ರವರು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿದಾರರಿಗೆ ದಿನಾಂಕ 26-10-2014 ರಂದು ಬೆಳಿಗ್ಗೆ 06-30 ಗಂಟೆಗೆ ಮಾಹಿತಿ ಬಂದ ಮೇರೆಗೆ ಮೃತದೇಹವನ್ನು ನೋಡಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-10-2014 ರಂದು ಸಂಜೆ 06.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅರವಿಂದ ವಿ. ರವರು ತನ್ನ ಊರಾದ ವಿಟ್ಲಕ್ಕೆ ತೆರಳಿದ್ದು, ವಾಪಾಸ್ಸು ದಿನಾಂಕ:25-10-2014 ರಂದು 10.00 ಗಂಟೆಗೆ ಮಂಗಳೂರು ಬಿಜೈ ಚರ್ಚ್ ರಸ್ತೆಯ ವೆಸ್ಪಾ ಶೋ ರೂಮ್ ಹಿಂದುಗಡೆಯ ಡೋರ್ ನಂಬ್ರ 3-33-2909/8 ನೇ ಮನೆಗೆ ಬಂದು ನೋಡಲಾಗಿ ಪಿರ್ಯಾದಿದಾರರ ಮನೆಯ ಎದುರು ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಯಾರೋ ಕಳ್ಳರು ಸದ್ರಿ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆರೆದು ಆ ಮೂಲಕ ಒಳ ಪ್ರವೇಶಿಸಿ ಕಿಚನ್, ಬಾತ್ ರೂಂಗಳಲ್ಲಿ ಅಳವಡಿಸಿದ್ದ ನೀರಿನ ಟ್ಯಾಪ್ -5 ಹಾಗೂ ಬೆಡ್ ರೂಂ ನ ಕಪಾಟಿನಲ್ಲಿರಿಸಿದ್ದ ಸುಮಾರು 5000/-ರೂ ನಗದು ಹಣ ಹೀಗೆ ಒಟ್ಟು ಅಂದಾಜು 7000/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರಕಾಶ್ ಆಚಾರ್ಯ ರವರ ತಮ್ಮ ರಾಜೇಶ್ ಆಚಾರ್ಯ ಎಂಬವನು ದಿನಾಂಕ 10.09.2014 ರಂದು ಕೆಲಸದ ಬಗ್ಗೆ ಮೂಡಬಿದ್ರೆಗೆ ಹೋದವನು ನಂತರ ಮನೆಗೂ ಬಾರದೇ ಆತ ವಾಸವಿದ್ದ ಗೌರಿ ದೇವಸ್ಥಾನದ ಬಳಿ ಇರುವ ಬಾಡಿಗೂ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ, ಆತನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಅದೇ ಕಾರಣದಿಂದ ಕಾಣೆಯಾಗಿರಬಹುದೆಂದು ಸಂಶಯವಿರುತ್ತದೆ. ಕಾಣೆಯಾದ ಗಂಡಸಿನ ಚಹರೆ ವಿವರ: ಹೆಸರು: ರಾಜೇಶ್ ಆಚಾರ್ಯ, ಪ್ರಾಯ: 35 ವರ್ಷ, 5 ಅಡಿ, 3 ಇಂಚು ಎತ್ತರ, ನಸುಕಪ್ಪು ಮೈಬಣ್ಣ, ಕನ್ನಡ, ತುಳು ಭಾಷೆಗಳನ್ನು ಮಾತಾಡುತ್ತಾನೆ. ದೃಡಕಾಯ ಶರೀರ, ಗಡ್ಡ ಬಿಟ್ಟಿರುತ್ತಾನೆ. ಚಿನ್ನದ ಕೆಲಸ ಮತ್ತು ಪಿಗ್ಮಿ ಕಲೆಕ್ಷನ್ ಕೆಲಸ ಮಾಡುತ್ತಿದ್ದ, ಹೋಗುವಾಗ ನೀಲಿ ಜೀನ್ಸ್ ಮತ್ತು ಬಿಳಿ ಅಂಗಿ ಧರಿಸಿರುತ್ತಾನೆ.
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-10-2014 ರಂದು ರಾತ್ರಿ ಸುಮಾರು 1-00 ಗಂಟೆಯಿಂದ ದಿನಾಂಕ. 25-10-2014 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯ ಮದ್ಯೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಅಲೇಕಳ ಪಾಂಡೇಲ್-ಪಕ್ಕ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಹುಸೈಲ್ ರವರ ಬಾಬ್ತು ಫರಾಝ್ ಸೌಂಡ್ಸ್ ಎಂಬ ಸೌಂಡ್ಸ್ ಅಂಡ್ ಲೈಟಿಂಗ್ಸ್ ಸಾಮಾಗ್ರಿಗಳನ್ನು ದಾಸ್ತಾನು ಮಾಡುವ ಕೋಣೆಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗಡೆ ಪ್ರವೇಶಿಸಿ ಸುಮಾರು ರೂ. 1,50,000-00 ಬೆಲೆ ಬಾಳುವ ಸೌಂಡ್ಸ್ ಅಂಡ್ ಲೈಟಿಂಗ್ಸ್ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 25-10-2014 ರಂದು ಸಂಜೆ ಸುಮಾರು 5-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಉಳ್ಳಾಲ ಪುರಸಭೆಯ ಬಳಿ ಇರುವ ಇನ್‌ಲ್ಯಾಂಡ್ ಕಂಪೆನಿಗೆ ಸೇರಿದ ಸುಮಾರು 10 ಅಂತಸ್ತಿನ ಕಾಮಗಾರಿ ನಡೆಯುತ್ತಿದ್ದ ಕಟ್ಟಡದಲ್ಲಿ ಕೂಲಿ ಕಾರ್ಮಿಕನಾಗಿರುವ ಸೋಮ್ ಹೆಬ್ಬ್ರಾಮ್ (36) ಎಂಬಾತನಿಗೆ ಸದ್ರಿ ಕಟ್ಟಡದ ಮಾಲಕರು ಹಾಗೂ ಮೇಲ್ವಿಚಾರಕರು ಯಾವುದೇ ಭದ್ರತೆಯನ್ನು ಒದಗಿಸದೇ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಕೆಲಸ ಮಾಡಿಸಿರುವುದರಿಂದ ಸೋಮು ಹೆಬ್ಬ್ರಾಮ್ನು ಕೆಲಸ ಮಾಡುತ್ತಿದ್ದ ಸಮಯ ಸದ್ರಿ ಕಟ್ಟಡದ ಮೇಲ್ಗಡೆಯಿಂದ ಕೆಳಗಡೆ ಬಿದ್ದು, ಆತನ ತಲೆಗೆ ರಕ್ತ ಗಾಯ, ಎಡ ಕೋಲು ಕಾಲು ಮುರಿತದ ರಕ್ತ ಗಾಯ, ಬಲ ಕಾಲಿನ ಮೊಣ ಕಾಲು ಮುರಿತದ ರಕ್ತ ಗಾಯ, ಎಡಕೈ ಮೂಳೆ ಮುರಿತದ ಗಾಯ ಹಾಗೂ ಮತ್ತಿತರ ಕಡೆಗಳಿಗೆ ತೀವ್ರ ತರದ ಗಾಯಗೊಂಡು ಮೃತಪಟ್ಟಿರುವುದಾಗಿದೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಗೀತೇಶ್ ರವರ ತಂದೆಯವರಾದ ರಮೇಶ್ ಪೂಜಾರಿ (60) ರವರು ನವೀನ್ ಕುಮಾರ್ ಎಂಬವರ ಟೆಂಪೋ ಚಾಲಕರಾಗಿದ್ದು, ದಿನಾಂಕ 20-10-2014 ರಂದು ಸಂಜೆ 6.00 ಗಂಟೆ ಸಮಯಕ್ಕೆ ತನ್ನ ಬಾಬ್ತು ಟೆಂಪೊವನ್ನು ಮಾಲಕರ ಮನೆಯಲ್ಲಿ ನಿಲ್ಲಿಸಿ ಹೋದವರು ಮನೆಗೆ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಎಲ್ಲ ಕಡೆ, ಸಂಬಂದಿಕರ ಮನೆಯಲ್ಲಿ ಹುಡುಕಾಡಿದರು ಈ ತನಕ ಪತ್ತೆಯಾಗಿರುವುದಿಲ್ಲ.
No comments:
Post a Comment