Wednesday, October 8, 2014

Gold Chain Theif Arrested

ಚಿನ್ನದ ಸರ ಕಳ್ಳನ ಬಂಧನ

 

      ಈ ದಿನ ದಿನಾಂಕ 07-10-2014 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 179/2014 ಕಲಂ 380 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾ ಅಪರಾಧ ವಿಭಾಗದ ಪಿಎಸ್ಐ ಎಂ.ಸಿ. ಮದನ್ ರವರು ಸಿಬ್ಬಂದಿಯವರೊಂದಿಗೆ  ಪ್ರಕರಣದಲ್ಲಿ ಸೊತ್ತು ಮತ್ತು ಆರೋಪಿ ಪತ್ತೆ ಬಗ್ಗೆ ಸಂಚರಿಸಿಕೊಂಡಿರುವಾಗ ಬೆಳಿಗ್ಗೆ ಸುಮಾರು 8-50 ಗಂಟೆ ಸಮಯಕ್ಕೆ ಫೆಲಿಕ್ಸ್ ಪೈ ಬಜಾರ್ ಜಂಕ್ಷನ್‌ಗೆ ಹೋದಾಗ ಬಾತ್ಮೀದಾರರು   ಅನುಮಾನಾಸ್ಪದ ವ್ಯಕ್ತಿಯನ್ನು ದೂರದಿಂದ ತೋರಿಸಿಕೊಟ್ಟ  ಮೇರೆಗೆ ಸಾದಾ ಉಡುಪಿನಲ್ಲಿದ್ದ  ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ  ವ್ಯಕ್ತಿಯ ಬಳಿಗೆ ಹೋಗಿ ಆತನ ಚಹರೆಯನ್ನು ಗಮನವಿಟ್ಟು ಪರಿಶೀಲಿಸಿದಾಗ ಇತ್ತೀಚೆಗೆ ನ್ಯೂ ಮಹಾಲಕ್ಷ್ಮೀ ಜ್ಯುವೆಲ್ಲರಿಗೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಕಳವು ಮಾಡಿದ ವ್ಯಕ್ತಿಗೆ ಹೋಲಿಕೆಯಂತಿರುವುದನ್ನು ಕಂಡು   ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತನ್ನ ಹೆಸರು ಶ್ರೀ ವಿನೋದ್  ಪ್ರಾಯ 30 ವರ್ಷ, ತಂದೆ ದಿವಂಗತ ಮೋಹನ್, (ತಾಯಿ-ಶ್ರೀಮತಿ ದುರ್ಗ)  ವಾಸ:   ಡೋರ್ ನಂ. 3-560 ವಿನೋದ್ ನಿಲಯ, ಶ್ರೀನಿವಾಸ್ ಕಾಲೇಜ್ ಬಳಿ, ಅಡ್ಯಾರ್ ಅಂಚೆ ಮತ್ತು ಗ್ರಾಮ ಪಡೀಲ್, ಮಂಗಳೂರು ತಾನು ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿಯಿಂದ ಚಿನ್ನಾಭರಣ ಕಳವು ಮಾಡಲು ಬಂದಿರುವುದಾಗಿ ತಿಳಿಸಿರುತ್ತಾನೆ.  ಹಾಗೇ  ನ್ಯೂ ಮಹಾಲಕ್ಷ್ಮೀ ಜ್ಯುವೆಲ್ಲರಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಕಳವು ಮಾಡಿ ಮಂಗಳಾಜ್ಯೋತಿ ಸೋಸೈಟಿಯಲ್ಲಿ ರೂ, 29,000/-ಕ್ಕೆ ಅಡಮಾನ ಇರಿಸಿದ್ದಾಗಿ  ಒಪ್ಪಿಕೊಂಡ ಮೇರೆಗೆ  ಸುಮಾರು 42,250 ರೂ ಮೌಲ್ಯದ 16.300 ಗ್ರಾಂ ತೂಕ ಚಿನ್ನದ ಸರವನ್ನು ವಶಪಡಿಸಿಕೊಂಡು ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ದಿನಾಂಕ 21-10-2014  ರ ತನಕ ನ್ಯಾಯಾಂಗ ಬಂಧನದ ಅದೇಶವಾಗಿರುತ್ತದೆ.

 

  ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ ಐ.ಪಿ.ಎಸ್. ಮತ್ತು ಡಿ.ಸಿ.ಪಿ. ಶ್ರೀ ಜಗದೀಶ್ ಹಾಗೂ ಶ್ರೀ ವಿಷ್ಣುವರ್ಧನ್ ರವರ ನಿರ್ಧೇಶನದಲ್ಲಿ ಮಂಗಳೂರು ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕೆ. ತಿಲಕ್‌ಶ್ಚಂದ್ರ ರವರ ಮಾರ್ಗದರ್ಶನದಲ್ಲಿ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜುರವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದ್ದು, ಪತ್ತೆ ಕಾರ್ಯಚರಣೆಯಲ್ಲಿ  ಕ್ರೈಂ ಪಿಎಸ್ಐ ಎಂ.ಸಿ.ಮದನ್, ಎಎಸ್ ಐ ಕುಮಾರೇಶ್  ಹಾಗೂ ಹೆಚ್.ಸಿ ಜನಾರ್ಧನ, ಪಿ.ಸಿಗಳಾದ   ಸುಧಾಕರ ಮತ್ತು ಶ್ರೀಶೈಲ ರವರು ಭಾಗವಹಿಸಿರುತ್ತಾರೆ.

 

No comments:

Post a Comment