ದೈನಂದಿನ ಅಪರಾದ ವರದಿ.
ದಿನಾಂಕ 05.10.2014 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-10-2014 ರಂದು 14-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಬಾಲಕೃಷ್ಣ ಗೌಡ ರವರ ನೆರಮನೆ ವಾಸಿ ಶ್ರೀ ಜಗನ್ನಾಥ್ ಎಂಬವರು ದೂರವಾಣಿ ಕರೆ ಮಾಡಿ ಸಮಯ 12-00 ಗಂಟೆಯಿಂದ ಮಧ್ಯಾಹ್ನ 2-30 ಗಂಟೆ ಮಧ್ಯೆ ವಾಸ್ತವ್ಯವಿರುವ ಲೇಡಿಹಿಲ್ ನಲ್ಲಿರುವ ಮೈಕ್ರೋವೇವ್ ಸ್ಟಾಫ್ ಕ್ವಾಟ್ರಸ್‌ನ ಹಿಂಬದಿಯ ಬಾಗಿಲನ್ನು ಮುರಿದು ಯಾರೋ ಕಳ್ಳರು ಒಳಹೊಕ್ಕಿ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದುದನ್ನು ಗಮನಿಸಿ ಜಗನ್ನಾಥ ರವರು ಮನೆಯ ಒಳಗೆ ನೋಡಿದಲ್ಲಿ ಟಾಯ್ಲೆಟಿನಲ್ಲಿ ಇಬ್ಬರು ವ್ಯಕ್ತಿಗಳಿದ್ದು ಒಬ್ಬಾತನು ಓಡಿದ್ದು ಇನ್ನೊಬ್ಬನನ್ನು ಗಟ್ಟಿಯಾಗಿ ಹಿಡಿದು ತಪ್ಪಿಸಿಕೊಳ್ಳಲು ಉರುಡಾಟವಾದಾಗ ಜಗನ್ನಾಥ ರವರ ಕೈಯಲ್ಲಿದ್ದ ಕತ್ತರಿಯು ಆತನಿಗೆ ತಾಗಿ ಕೈಗಳಿಗೆ ಗಾಯವಾಗಿದ್ದಾಗಿ ಹಾಗೂ ಆತನು ಒಡುವ ಸಮಯದಲ್ಲಿ ಕೈಗಳಲ್ಲಿ ಯಾವುದೇ ಸೊತ್ತುಗಳು ಇಲ್ಲದಿರುವುದಾಗಿ ತಿಳಿಸಿದರಿಂದ ದಿನಾಂಕ 04-10-2014 ರಂದು ಫಿರ್ಯಾದುದಾರರು ವಾಸ್ತವ್ಯವಿರುವ ಮನೆಗೆ ಬಂದು ನೋಡಿದಾಗ ಮನೆಯ ಒಳಗಡೆಯ ಕಪಾಟಿನ ಬಾಗಿಲನ್ನು ಮುರಿದು ಅದರಲ್ಲಿದ್ದ ಸೊತ್ತುಗಳೆಲ್ಲ ಚಲ್ಲಾಪಿಲ್ಲಿ ಮಾಡಿರುವುದಾಗಿದೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಪ್ರಶಾಂತ್ ರವರು ಕಾವೂರು ಜಂಕ್ಷನ್ನಲ್ಲಿರುವ ಟೂರಿಸ್ಟ್ ವಾಹನಗಳ ಪಾರ್ಕಿಂಗ್ ಸ್ಥಳದ ಎದುರು ಚಿಕ್ಕ ಗೂಡಂಗಡಿ ಇಟ್ಟುಕೊಂಡು ಕಬಾಬ್ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 03-10-2014 ರಂದು ರಾತ್ರಿ 8-20 ಗಂಟೆಗೆ ಫಿರ್ಯಾದುದಾರರ ಪರಿಚಯದ ಚಂದ್ರು ಎಂಬವರು ಫಿರ್ಯಾದುದಾರರ ಅಂಗಡಿಗೆ ಬಂದು ತಿನ್ನಲು ಫ್ರೈಡ್ ರೈಸ್ ಕೊಡಿ ಎಂದು ಕೇಳಿದ್ದು, ಫಿರ್ಯಾಧುದಾರರು ಬೇರೆ ಗಿರಾಕಿಗಳು ಕೊಟ್ಟ ಆರ್ಡರನ್ನು ರೆಡಿ ಮಾಡುತ್ತಿದ್ದು, ಆಗ ಚಂದ್ರು ಫಿರ್ಯಾಧುದಾರರ ಪತ್ನಿಯಾದ ಶ್ರೀಮತಿ ಸೋನಾಲಿಯವರಲ್ಲಿ ರೈಸ್ ಬೇಗ ರೆಡಿ ಮಾಡಿ ಕೊಡು ಎಂದು ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾದುದಾರರು ಆತನಲ್ಲಿ ಯಾಕೆ ಬೈಯುತ್ತಿಯಾ ಎಂದು ಕೇಳಿದಾಗ ಚಂದ್ರನು ಅಲ್ಲಿಯೇ ಪಕ್ಕದಲ್ಲಿ ಮೇಜಿನ ಮೇಲಿದ್ದ ಕೈ ತೊಳೆಯುವ ಸ್ಟೀಲ್ ಜಗ್ ನಿಂದ ಫಿರ್ಯಾದುದಾರರ ಎಡ ಕಣ್ಣಿನ ಮೇಲ್ಭಾಗಕ್ಕೆ, ಎಡ ತಲೆಯ ಹಿಂಬದಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದ್ದು, ಫಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಾರರಾದ ಶ್ರೀ ಇಮ್ರಾನ್ ರವರು ಸುಮಾರು ಒಂದು ವರ್ಷದ ಹಿಂದೆ ಹಂಡೇಲು ನಿವಾಸಿ ಶೇಖಬ್ಬ ರವರ ಮಗಳು ಫಾತಿಮ ಮೆಹತಾಜ್ ಎಂಬವಳನ್ನು ಮದುವೆ ಆಗಿದ್ದು, ಮದುವೆ ಆದ ನಂತರ ಅವರಿಬ್ಬರ ನಡುವೆ ಸಂಸಾರ ಚೆನ್ನಾಗಿರದೆ ಇದ್ದು ಇಬ್ಬರ ಮದ್ಯೆ ಜಗಳವಾಗುತ್ತಿದ್ದು ಈ ಬಗ್ಗೆ 3-4 ಬಾರಿ ಮಾತುಕತೆ ಮಾಡಿದ್ದು, ಆದರೆ ಸಂಸಾರ ಚೆನ್ನಾಗಿ ನಡೆಯಲಿಲ್ಲ. ದಿನಾಂಕ 03.10.2014 ರಂದು ಸಂಜೆ 17:00 ಗಂಟೆಗೆ ರಾಜಿ ಪಂಚಾತಿಗೆಯ ಬಗ್ಗೆ ಪಿರ್ಯಾದಿದಾರರ ಹೆಂಡತಿಯ ತಂದೆ ಶೇಖಬ್ಬ, , ಅಣ್ಣ ಇಲಿಯಾಸ್, ಸಂಬಂದಿ ಶರೀಪ್, ಹಂಡೇಲು ಮತ್ತು ಪುತ್ತಿಗೆ ಮಸೀದಿಯ ಅದ್ಯಕ್ಷರು ಬಂದಿದ್ದು, ಪಿರ್ಯಾದಿಯ ಕಡೆಯಿಂದ ಚಿಕ್ಕಪ್ಪ ಹೆಚ್ ಮೊಹಮ್ಮದ್, ಅಬ್ದುಲ್ರಹಿಮಾನ್, ಬಂದಿದ್ದು, ಮಾತುಕತೆಯ ಸಮಯ ಹಳೆಯ ಘಟನೆಗಳನ್ನು ಮರೆತು ಒಳ್ಳೆಯ ರೀತಿಯಲ್ಲಿ ಸಂಸಾರ ನಡೆಸುವಂತೆ ತಿಳಿಸಿದ್ದು, ಆ ಸಮಯ ಪಿರ್ಯಾದಿಯ ಹೆಂಡತಿಯ ತಂದೆ ಶೇಖಬ್ಬ ಹಿಂದಿನ ಘಟನೆಗಳನ್ನು ಕೆದಕಿದಾಗ ಇವರಿಬ್ಬರ ಮದ್ಯೆ ಮಾತುಕತೆಯಾಗಿ ಶೇಖಬ್ಬ ಪಿರ್ಯಾದಿಯನ್ನು ದೂಡಿ ಹಾಕಿದಾಗ, ಪಿರ್ಯಾದಿಯ ಅಕ್ಕ ತಡೆಯಲು ಬಂದವರನ್ನು ಇಲಿಯಾಸ್ ಎಂಬವನು ಆಕೆಯನ್ನು ದೂಡಿ ಹಾಕಿ ಈ ಸಮಯ ಶೇಖಬ್ಬರವರು ಪೋನ್ ಮಾಡಿ ಆಸೀಪ್, ಆರೀಪ್, ಇಮ್ತಿಯಾಜ್, ಪುತ್ತುಮೋನು ಎಡಪದವು ಹಾಗೂ ಇತರರನ್ನು ಕರೆಸಿದ್ದು, ಆ ಸಮಯ ಇಲಿಯಾಸ್ ಎಂಬವನು ಪಿರ್ಯಾದಿಯನ್ನು ಕೊಲ್ಲದೆ ಬಿಡುವುದಿಲ್ಲ ನಿಮ್ಮನ್ನು ಮಾಂಸ ತುಂಡು ಮಾಡುವ ಹಾಗೆ ಕೊಚ್ಚಿಹಾಕುತ್ತೇನೆ ಎಂದು ಕೈಯಿಂದ ತಲೆಯ ಹಿಂದೆ ಹೊಡೆದ ಸಮಯ ಆಸೀಪ್, ಆರೀಫ್, ಪುತ್ತುಮೋನು ಇಮ್ತಿಯಾಜ್ ಶರೀಪ್ ಇವರು ಕೂಡಾ ಸೇರಿ ಪಿರ್ಯಾದಿಯ ಮುಖ್ಕಕೆ ಮತ್ತು ಬೆನ್ನಿಗೆ ಹಲ್ಲೆನಡೆಸಿದಲ್ಲದೆ ಬಿಡಿಸಲು ಬಂದ ಮೊಹಮ್ಮದ್ ಮತ್ತು ಅಬ್ದುಲ್ ರಹಿಮಾನ್‌ರವರಿಗೆ ಆಸೀಪ್ ಮತ್ತು ಇಲಿಯಾಸ್ ಮತ್ತಿತರರು ಕೈಯಿಂದ ಹಲ್ಲೆ ನಡೆಸಿ ಸ್ಥಳಕ್ಕೆ ಪೊಲೀಸರು ಬರುವ ವಿಚಾರ ತಿಳಿದು ಅಲ್ಲಿಂದ ಹೋಗುವ ಸಮಯ ಜೀವ ಬೆದರಿಕೆ ಹಾಕಿ ಪರಾರಿಯಾಗಿರುವುದಾಗಿದೆ. ಆರೋಪಿಗಳೆಲ್ಲ ಸಮಾನ ಉದ್ದೇಶದಿಂದ ಒಟ್ಟು ಸೇರಿ ಈ ಕೃತ್ಯ ನಡೆಸಿದ್ದು, ಗಾಯಗೊಂಡ ಪಿರ್ಯಾದಿ ಹಾಗೂ ಹೆಚ್ ಮೊಹಮ್ಮದ್ ಮತ್ತು ಅಬ್ದುಲ್ ರಹಿಮಾನ್ ರವರು ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-10-2014 ರಂದು ಸಮಯ ಸುಮಾರು 15.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪೀಟರ್ ಪಾಯಸ್ ರವರು ತನ್ನ ಮನೆಯಾದ ನಿತ್ಯಾಧರ ನಗರದಿಂದಾಗಿ ತೊಕ್ಕೊಟ್ಟು ಕಡೆಗೆ ಹೋಗುತ್ತಿರುವಾಗ ಚೆಂಬುಗುಡ್ಡೆ ಬಸ್ ಸ್ಟಾಪ್ ಎದುರುಗಡೆ ತಲುಪಿದಿದ್ದಂತೆ ತಾನು ಚಲಾಯಿಸುತ್ತಿದ್ದ ಅಟೋ ರಿಕ್ಷಾ ನಂಬ್ರ ಕೆಎ.19ಬಿ. 3909 ನೇದಕ್ಕೆ ಹಿಂಭಾಗದಿಂದ ಒಂದು ಕಪ್ಪು ಬಣ್ಣದ ಕಾರು ನಂಬ್ರ ಕೆಎ.13-ಎಂ-4088 ನೇದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಮತ್ತು ರಿಕ್ಷಾ ಮಗುಚಿ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿನ ತೊಡೆಗೆ, ಮೊಣ ಕಾಲಿಗೆ ಮತ್ತು ಹೆಬ್ಬರಳಿಗೆ ಸಾಮಾನ್ಯ ಸ್ವರೂಪದ ಗುದ್ದಿದ ಗಾಯವಾಗಿರುತ್ತದೆ. ರಿಕ್ಷಾದ ಮುಂಭಾಗವು ಸಂಪೂರ್ಣ ಜಖಂಗೊಂಡಿರುತ್ತದೆ. ಹಾಗೆಯೇ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ ಕುತ್ತಾರು ಕಡೆಗೆ ಹೋಗುತ್ತಿದ್ದ ಇನ್ನೊಂದು ಅಟೋ ರಿಕ್ಷಾಕ್ಕೆ ಡಿಕ್ಕಿ ಮಾಡಿ ಕಾರಿನ ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾರೆ.
No comments:
Post a Comment