Thursday, October 2, 2014

Daily Crime Reports 01-10-2014

ದೈನಂದಿನ ಅಪರಾದ ವರದಿ.

ದಿನಾಂಕ 01.10.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-09-2014 ರಂದು ಮದ್ಯಾಹ್ನ 01-40 ಗಂಟೆಗೆ ರಾ.ಹೆ 66 ರಲ್ಲಿ ಕೆ 19 ಇಎಲ್ 5983 ನೇ ದ್ವಿಚಕ್ರ ವಾಹನದಲ್ಲಿ ಪಿರ್ಯಾದಿದಾರರಾದ ಶ್ರೀ ವಸಂತ ರವರು ತನ್ನ ಅಕ್ಕನ ಮಗ ಗೌರವ್ ಎಂಬವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು   ಕೂಳೂರು ಬಳಿ ತಲುಪಿದಾಗ ಹಿಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಕೆ 19 ಡಿ 0332 ನೇ ಬಸ್ಸನ  ಚಾಲಕ ಪ್ರಕಾಶ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಫಿರ್ಯಾದಿದಾರರ ವಾಹನವನ್ನು ಓವರಟೆಕ್ ಮಾಡುವ ಭರದಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದುದರ ಪರಿಣಾಮ ವಾಹನ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರಿಗೆ ಯಾವುದೆ ಗಾಯವಾಗದೆ ಹಿಂಬದಿ ಸವಾರ ಗೌರವ್ ರವರಿಗೆ ಎಡಗೈಯ ತೋಳಿಗೆ ಮೂಳೆ ಮುರಿತದ ಗಂಭೀರ ತರದ ಗಾಯವಾಗಿ  ಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದು, ಸ್ಥಳದಿಂದ ಆರೋಪಿ ಚಾಲಕ ಬಸ್ಸ ಸಮೇತ ಯಾವುದೇ ಮಾಹಿತಿ ನೀಡದೆ ಹೋಗಿರುತ್ತಾರೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-09-2014 ರಂದು ಸಂಜೆ 06-00 ಗಂಟೆಗೆ ಶಕೀಬ್ ಎಂಬವರು ಬೈಕ್ ನಂಬ್ರ ಕೆ 19 ಇಕೆ 9313 ನೇ ಯದರಲ್ಲಿ ಕಾಟಿಪಳ್ಳ ಚೊಕ್ಕಬೆಟ್ಟು ರಸ್ತೆಯಲ್ಲಿ ಹೋಗುತ್ತಾ ಕಾಟಿಪಳ್ಳ 4ನೇ ಬ್ಲಾಕ್ ಬಳಿಯ ರಸ್ತೆಯಲ್ಲಿ ಎದುರು ಬದಿಯಿಂದ ಕೆ 19 ಡಿ 0841 ನೇ ಪಲ್ಸರ್ ಬೈಕಿನಲ್ಲಿ ಅದರ ಸವಾರ ಹಂಝಾ ಎಂಬವರು ಸಹಸವಾರ ಮಹಮ್ಮದ್ ಇಸ್ಮಾಯಿಲ್ ಎಂಬವರೊಂದಿಗೆ ನಿರ್ಲಕ್ಷತನ ಮತ್ತು ಮಾನವ ಜಿವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಾದ ಶ್ರೀ ನಿಸಾರ್ ಹುಸೈನ್ ರವರು ಸಹಸವಾರರಾಗಿ ಹೋಗುತ್ತಿದ್ದ ಬೈಕಿಗೆ ಮುಖಾಮುಖಿಯಾಗಿ ಡಿಕ್ಕಿಹೊಡೆದ ಪರಿಣಾಮ ಬೈಕ್ ಗಳೆರಡೂ ರಸ್ತೆಗೆ ಬಿದ್ದು ಫಿರ್ಯಾದಿದಾರರಿಗೆ ಬೈಕಿನಿಂದ ಯಾವುದೇ ಗಾಯವಾಗದೆ ಹಾರಿ ತಪ್ಪಿಸಿಕೊಂಡು ಅವರು ಬೈಕು ಚಲಾಯಿಸುತ್ತಿದ್ದ ಶಕೀಬ್ ರವರ ತಲೆಗೆ, ಹಣೆಗೆ, ಗಂಭೀರ ತರದ ಗಾಯವಾಗಿದ್ದು, ಅಪಘಾತಪಡಿಸಿದ ಬೈಕ್ ಸವಾರ ಹಂಝಾ ರವರಿಗೆ ಯಾವುದೆ ಗಾಯವಾಗದೆ ಅದರಲ್ಲಿದ್ದ ಸಹಸವಾರ ಮಹಮ್ಮದ್ ಇಸ್ಮಾಯಿಲ್ ರವರಿಗೆ ಮುಖಕ್ಕೆ, ಬಲಗಾಲಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ

 

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.09.2014 ರಂದು ಪಿರ್ಯಾದಿದಾರರಾದ ಶ್ರಿ ಯಾದವ್ ಕೆ. ರವರು ಮದ್ಯಾಹ್ನ ಮಂಗಳೂರು ನಗರದ ರಾವ್ಅಂಡ್ರಾವ್ಸರ್ಕಲ್ಬಳಿ ಇರುವ ಮಹೇಶ್ಲಂಚ್ಹೋಂ ಬಳಿ ಸಿಟಿ ಬಸ್ಹೋಗುವ ರಸ್ತೆ ದಾಟಿ ಸ್ಟೇಟ್ಬ್ಯಾಂಕ್ಕಡೆಯಿಂದ ಹಂಪನ್ಕಟ್ಟೆ ಕಡೆಗೆ ಹೋಗುವ ರಸ್ತೆ ದಾಟುವರೇ ಡಿವೈಡರ್ನ್ನು ದಾಟಿ ಡಿವೈಡರ್ಬಳಿ ನಿಂತಿರುವಾಗ ಸಮಯ ಮದ್ಯಾಹ್ನ 2:30 ಗಂಟೆಗೆ ಸ್ಟೇಟ್ಬ್ಯಾಂಕ್ಕಡೆಯಿಂದ ಹಂಪನ್ಕಟ್ಟೆ ಕಡೆಗೆ  ದ್ವಿಚಕ್ರ ವಾಹನ ನಂಬ್ರ ಕೆ.-19-.ಎಫ್‌-5746 ನೇದನ್ನು ಅದರ ಸವಾರನು ಹಿಂಬದಿಯಲ್ಲಿ ಒಬ್ಬಳು ಮಹಿಳೆಯನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಡಿವೈಡರ್ ಬಳಿ ನಿಂತಿದ್ದ ಪಿರ್ಯಾದಿದಾರರಿಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು  ದ್ವಿಚಕ್ರ ಸವಾರ  ಹಾಗೂ ಮಹಿಳೆಯು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲ ತೊಡೆಗೆ ಮೂಳೆ ಮುರಿತದ ಗಂಭೀರ ಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ  ಆಟೋ ರಿಕ್ಷಾದಲ್ಲಿ ನಗರದ ಫಾದರ್ಮುಲ್ಲರ್ಆಸ್ಪತ್ರೆಯಲ್ಲಿ ಒಳ-ರೋಗಿಯಾಗಿ ದಾಖಲಿಸಿರುವುದಾಗಿದೆ. ಆದರೆ ದ್ವಿಚಕ್ರ ವಾಹನ ಸವಾರನು ಅಪಘಾತದ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ.

 

4.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.09.2014 ರಂದು ಪಿರ್ಯಾದಿದಾರರಾದ ಶ್ರೀ ಮರಿಯಾದಾಸ್ ರವರು ಸಂಜೆ ಮಂಗಳೂರು ನಗರದ ಕುಂಟಿಕಾನ ಕಡೆಯಿಂದ ಕೊಟ್ಟಾರ ಕಡೆಗೆ ಫ್ಲೈಓವರ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಸಂಜೆ 6:30  ಗಂಟೆಗೆ ಕೊಟ್ಟಾರ ಬಳಿಯಿರುವ ಮಹೇಂದ್ರ ಶೋರೂಂ ಬಳಿಗೆ ತಲುಪಿದಾಗ, ಅವರ ಹಿಂದಿನಿಂದ ಅಂದರೆ ನಂತೂರು  ಕಡೆಯಿಂದ ಕೂಳೂರು ಕಡೆಗೆ ಲಾರಿ ನಂಬ್ರ ಕೆ.-19-ಬಿ-6340 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು , ಪಿರ್ಯಾದಿದಾರರ ತಲೆಗೆ ರಕ್ತ ಗಾಯ ಹಾಗೂ ಎಡಭಾಗದ ಭುಜದಿಂದ ಸೊಂಟದ ತನಕ ಗುದ್ದಿದ ನೋವು ಹಾಗೂ ಎಡ ಕೆನ್ನೆ ಮತ್ತು ಬಲಕೈಗೆ ತರಚಿದ ನೋವು ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ನಗರದ .ಜೆ ಆಸ್ಪತ್ರೆಯಲ್ಲಿ ಒಳ-ರೋಗಿಯಾಗಿ ದಾಖಲಿಸಿರುವುದಾಗಿದೆ.

 

5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-09-2014 ರಂದು ಬೆಳಿಗ್ಗೆ ಸುಮಾರು 05-00 ಗಂಟೆ ಸಮಯಕ್ಕೆ ಕೆಎ-19-.ಎಫ್‌-8982 ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ವಿನಾಯಕ ಎಂಬಾತನು ತನ್ನ ತಾಯಿ ಶ್ರೀಮತಿ ತುಳಸಿ ಎಂಬವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಕೈಕಂಬ ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ನಗರದ ಬಿಕರ್ನಕಟ್ಟೆ ಕೈಕಂಬ ಎಂಬಲ್ಲಿ ಮೋಟಾರು ಸೈಕಲ್ ಸ್ಕಿಡ್ ಆಗಿ ರಸ್ತೆ ಬಿದ್ದು ಶ್ರೀಮತಿ ತುಳಸಿ ರವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳು ಶ್ರೀಮತಿ ತುಳಸಿ ರವರು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-09-2014 ರಂದು ಬೆಳಿಗ್ಗೆ ಸುಮಾರು 09-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಯೆಯ್ಯಾಡಿ ಮಧುವನ್ ಬಾರ್ ಎದುರುಗಡೆ ಆರೋಪಿ ಕೃಷ್ಣ ಎಂಬಾತನು ತನ್ನ ಬಾಬ್ತು ಕೆಎ-19-ವೈ-5942 ನಂಬ್ರದ ಮೋಟಾರು ಸೈಕಲ್ನ್ನು ಕೆ.ಪಿ.ಟಿ ಕಡೆಯಿಂದ ಯೆಯ್ಯಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ಪಿರ್ಯಾದುದಾರರಾದ ಶ್ರೀ ಸುರೇಂದ್ರ ಅಂಚನ್ ರವರಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ಹಾಗೂ ಮೋಟಾರು ಸೈಕಲಿನ ಸವಾರ ಮೋಟಾರು ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ಪಿರ್ಯಾದುದಾರರ ಎಡಕೋಲು ಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಬಲಕಾಲಿನ ಪಾದದ ಮೇಲಿನ ಗಂಟಿಗೆ ಗುದ್ದಿದ ಗಾಯ ಹಾಗೂ ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿರುತ್ತದೆ ಅಲ್ಲದೇ ಆರೋಪಿಗೆ ಕೂಡ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಸಂತೋಷ್ ತಿಮ್ಮಯ್ಯ ನಾಯ್ಕ್ ರವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 1 ವರ್ಷದಿಂದ ಪಿವಿಎಸ್ ಸರ್ಕಲ್ ನಲ್ಲಿರುವ ಇಲಾಖಾ ಗೃಹದಲ್ಲಿ ವಾಸವಾಗಿರುತ್ತಾರೆ. ಎಂದಿನಂತೆ ದಿನಾಂಕ 30-09-2014 ರಂದು ಬೆಳಿಗ್ಗೆ 8:30 ಗಂಟೆಗೆ ಬೀಗ ಹಾಕಿ ಫಿರ್ಯಾದಿದಾರರು ಡಿಸಿ ಕಛೇರಿಗೆ ತೆರಳಿದ್ದು, ಎಲ್ಲಾ ಕೆಲಸ ಮುಗಿಸಿ ರಾತ್ರಿ ಸುಮಾರು 10:30 ಗಂಟೆಗೆ ಮನೆಗೆ ಬಂದಾಗ ಮನೆಯ ಹಿಂದಿನ ಬಾಗಿಲನ್ನು ಮುರಿದು ತೆಗೆದು ಮನೆಗೆ ನುಗ್ಗಿ ರೂ. 28,000/- ಮೌಲ್ಯದ ಲ್ಯಾಪ್ ಟಾಪ್ ಹಾಗೂ ಗೋಡ್ರೆಜಿನಲ್ಲಿದ್ದ ರೂ.12000/- ನಗದನ್ನು ಕಳವು ಆಗಿರುವುದು ಕಂಡುಬಂದಿದ್ದು, ಫಿರ್ಯಾದಿದಾರರು ಕೆಲಸಕ್ಕೆ ಹೋಗಿದ್ದ ಸಮಯ ಬೆಳಿಗ್ಗೆ 8:30 ರಿಂದ ರಾತ್ರಿ 10:30 ಗಂಟೆ ಮಧ್ಯೆ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳ ನುಗ್ಗಿ ಸುಮಾರು ರೂ.40,000/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದಾಗಿದೆ.

 

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : 2013 ನೇ ಜುಲಾಯಿ 4 ನೇ ತಾರೀಕಿನಂದು ಫಿರ್ಯಾದಿದಾರರಾದ ಶ್ರೀಮತಿ ಫಾತಿಮಾ ಫೈರೋಜ್ ಪರ್ವಿನ್ ರವರಿಗೆ 1ನೇ ಆರೋಪಿ ಯು.ಕೆ.ಮೊಹಮ್ಮದ್ ಕಲಂದರ್ ರವರ ಜೊತೆ ಮಂಗಳೂರು ಬಂದರ್ ಜುಮ್ಮಾ ಮಸೀದಿಯಲ್ಲಿ ಮದುವೆ ನಿಖಹ ಆಗಿದ್ದು, ಜವಾಬ್ದಾರಿಯನ್ನು ಮಸೀದಿಯ ಖಾಝಿಯವರು ವಹಿಸಿಕೊಂಡಿದ್ದರು. ಮತ್ತು ಮದುವೆಯ ಸಮಯದಲ್ಲಿ ವರನ ತಾಯಿ 2ನೇ ಆರೋಪಿ ಬೀಪಾತಿಮ ರವರ ಬೇಡಿಕೆಯಂತೆ 55 ಪವನ್ಚಿನ್ನಾಭರಣ ಹಾಗೂ 5 ಲಕ್ಷ ರೂಪಾಯಿ ವರದಕ್ಷಿಣೆಯನ್ನು ನೀಡಿದ್ದರು. ಮದುವೆಯಾದ ನಂತರ ಫಿರ್ಯಾದಿದಾರರನ್ನು ತನ್ನ ಗಂಡ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿದ್ದು, ಬಳಿಕ ದಿನಾಂಕ. 20-4-2014 ನೇ ರಾತ್ರಿ 10-30 ಗಂಟೆಗೆ ಫಿರ್ಯಾದಿದಾರರಿಗೆ 2ನೇ ಆರೋಪಿ ಬೀಪಾತಿಮ ರವರು ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ, 1ನೇ ಆರೋಪಿ ಕೂಡಾ ಫಿರ್ಯಾದಿದಾರರಿಗೆ ಇದೇ ರೀತಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು, ಕಾಲಿನಿಂದ ತುಳಿದಾಗ ಇವರ ಸಹಾಯಕ್ಕೆ ಬಂದ ಫಿರ್ಯಾದಿದಾರರ ತಾಯಿ ಫೌಝಿಯರವರಿಗೆ ಕೂಡಾ ಹೊಡೆದು ದೂಡಿ ಹಾಕಿರುತ್ತಾರೆ. ಇದೇ ರೀತಿ ಫಿರ್ಯಾದಿದಾರರು ತನ್ನ ತಾಯಿ ಮನೆಯಲ್ಲಿರುವ ಸಮಯದಲ್ಲಿ ಕೂಡಾ 1ನೇ ಆರೋಪಿ ಅಲ್ಲಿಗೂ ಕೂಡಾ ಹೋಗಿ ಅವಾಚ್ಯಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ. ಇದಲ್ಲದೆ ಆರೋಪಿಗಳು ಫಿರ್ಯಾದಿದಾರರಲ್ಲಿ ಹೆಚ್ಚುವರಿಯಾಗಿ ವರದಕ್ಷಿಣೆ ಮತ್ತು ಚಿನ್ನಾಭರಣಗಳನ್ನು ಕೊಡುವಂತೆ ಒತ್ತಾಯಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಟ್ಟಿದಲ್ಲದೆ ಹಣ ಮತ್ತು ಚಿನ್ನಾಭರಣ ನೀಡದಿದ್ದರೆ ತಲಾಖ್ಕೊಡುವುದಾಗಿಯೂ, ಮತ್ತು ಕೊಲ್ಲುವುದಾಗಿಯೂ ಜೀವ ಬೆದರಿಕೆ ಒಡ್ಡಿರುತ್ತಾರೆ. ಆಲ್ಲದೆ ಆರೋಪಿ ಯು.ಕೆ.ಮೊಹಮ್ಮದ್ ಕಲಂದರ್ ರವರು ಮೊದಲೇ ಶಬನಾ ಎಂಬಾಕೆಯನ್ನು ರಿಜಿಸ್ಟರ್ಮದುವೆ ಮಾಡಿಕೊಂಡು ವಿಚಾರವನ್ನು ಫಿರ್ಯಾದಿದಾರರಿಗೆ ಮತ್ತು ಅವರ ಮನೆಯವರಿಗೆ ತಿಳಿಸದೇ  ಮೋಸದಿಂದ ಫಿರ್ಯಾದಿಯನ್ನು ಎರಡನೇ ಮದುವೆಯಾಗಿರುವುದಾಗಿದೆ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-09-2014 ರಂದು ಪಿರ್ಯಾದುದಾರರಾದ ಶ್ರೀ ಗಣೇಶ್ ಶೆಟ್ಟಿ ರವರು ತನ್ನ ಬಾಬ್ತು ಕೆಎಲ್‌ 14 ಎಲ್‌ 3998 ನೇ ಆಕ್ಟಿವ್ಹೊಂಡಾ ದ್ವಿಚಕ್ರ ವಾಹನದಲ್ಲಿ ಮಂಗಳೂರಿನಿಂದ ಕುಂಬಳೆ ಕಡೆಗೆ ರಾ.ಹೆ. 66 ರಲ್ಲಿ ಸವಾರಿ ಮಾಡುತ್ತಾ 16-50 ಗಂಟೆಗೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ಸು ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಕೆಎ 19 ಡಿ 4707 ನೇ ನಂಬ್ರದ ಬಸ್ಸನ್ನು ಅಬ್ದುಲ್ರೆಹಮಾನ್ಎಂಬವರು ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಡಿಕ್ಕಿ ಹೊಡೆದುದರಿಂದ ರಸ್ತೆ ಬದ್ದಿ ಪಿರ್ಯಾದುದಾರರ ಎಡಕಾಲಿನ ಕೊಳುಕಾಲು ಮತ್ತು ಕಾಲಿನ ಪಾದದ ಮೂಳೆ ಮುರಿತ, ಬಲಕಾಲಿನ ಮೊಣಗಂಟಿನ ಮೂಳೆ ಮುರಿತದ ಗಾಯ ಬಲಕೈಯ ಅಂಗೈಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಪಿರ್ಯಾದುದಾರರು ತೊಕ್ಕೊಟ್ಟು ಸಹಾರಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಿಪಾಯ್ ರವರು ಕಣ್ಣೂರು ಹೈವೇ ಬದಿಯಲ್ಲಿ ಮೊಬೈಲ್‌‌ ಅಂಗಡಿಯನ್ನು ನಡೆಸುತ್ತಿದ್ದು  ದಿನಾಂಕ: 25.09.2014 ರಂದು ರಾತ್ರಿ 9.30 ಗಂಟೆಗೆ ಎಂದಿನಂತೆ  ಅಂಗಡಿ ಮುಚ್ಚಿ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ಮರುದಿನ ದಿನಾಂಕ: 26.09.2014 ರಂದು ಬೆಳಿಗ್ಗೆ 9.00 ಗಂಟೆಗೆ ಅಂಗಡಿಗೆ ಬಂದು ತೆರೆಯಲು ನೋಡಿದಾಗ ಯಾರೋ ಕಳ್ಳರು  ಅಂಗಡಿಯ ಬೀಗ ಮುರಿದಿದ್ದು  ಒಳಗೆ ಹೋಗಿ ಪರಿಶೀಲಿಸಿದಲ್ಲಿ ಮೊಬೈಲ್‌‌ ಅಂಗಡಿಯಲ್ಲಿದ್ದ ಒಂದು ಡೆಲ್‌‌ ಕಂಪಪೆನಿಯ ಲ್ಯಾಪ್‌‌ಟಾಪ್‌‌, ಮತ್ತು ರಿಪೇರಿಗೆ ಬಂದಿದ್ದ 16 ಮೊಬೈಲ್‌‌ ಸೆಟ್‌‌‌ಗಳು  ಹಾಗೂ  ಮಾರಾಟಕ್ಕೆ ಇಟ್ಟಿದ್ದ   ಸುಮಾರು 12 ಸೆಕೆಂಡ್‌‌ಹ್ಯಾಂಡ್‌‌  ಮೊಬೈಲ್‌‌ಗಳು ಕಾಣದೇ ಇದ್ದು ಅದನ್ನು ಯಾರೋ ಕಳ್ಳರು ಅಂಗಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿ ಕಳ್ಳತನ ಮಾಡಿರುತ್ತಾರೆ, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ 20,000/- ಆಗಬಹುದು.

No comments:

Post a Comment