ದೈನಂದಿನ ಅಪರಾದ ವರದಿ.
ದಿನಾಂಕ 29.10.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 27.10.2014 ರಂದು ಸಂಜೆ ಪಿರ್ಯಾದಿದಾರರಾದ ಶ್ರೀ ಅಶೋಕ ಶೆಟ್ಟಿ ರವರು ರೂಟ್ ನಂಬ್ರ-7 ಬಸ್ ನಂಬ್ರ ಕೆ.ಎ-19-ಎಡಿ-5547 ನೇ ಪೋಪುಲ್ಲರ್ ಬಸ್ಸಿನಲ್ಲಿ ಉರ್ವಾಸ್ಟೋರ್ ನಿಂದ ಮಂಗಳೂರು ಪೇಟೆಗೆ ಪ್ರಯಾಣಿದ್ದು, ಸದ್ರಿ ಬಸ್ಸನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸಮಯ ಸಂಜೆ 6:00 ಗಂಟೆಗೆ ಚಿಲಿಂಬಿಯ ಮೋರ್ ಅಂಗಡಿಯ ಬಳಿ ತಲುಪಿದಾಗ, ಡಿವೈಡರ್ನ್ನು ಕಂಡು ಬಸ್ಸಿನ ಚಾಲಕರು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ, ಸದ್ರಿ ಬಸ್ನಲ್ಲಿ ನಿರ್ವಾಹಕರಾಗಿದ್ದ ಪಿರ್ಯಾದಿದಾರರ ಪರಿಚಯದ ಚಂದ್ರಹಾಸ ಶೆಟ್ಟಿರವರು ಆಯತಪ್ಪಿ ಬಸ್ಸಿನ ಬೋನೆಟ್ ಬಳಿ ಅಳವಡಿಸಿದ ರಾಡ್‌ನ ಮೇಲೆ ಬಿದ್ದು ಎದೆಯ ಬಳಿ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕಾರಿನಲ್ಲಿ ಮಂಗಳೂರು ನಗರದ ವಿನಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿದ್ದವರು, ದಿನಾಂಕ 28-10-2014 ರಂದು ಬೆಳಿಗ್ಗೆ 04:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 28.10.2014 ರಂದು ಪಿರ್ಯಾದಿದುದಾರರಾದ ಸುಸ್ಮಿತಾ ರವರು ಹೋಂಡಾ ಆಕ್ಟೀವಾ ಕೆಎ.05.ಈಪಿ.4680 ನೇದನ್ನು ಮಂಗಳೂರು ನಗರದ ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ ಎಂ ಜಿ ರಸ್ತೆಯಲ್ಲಿ ಬಿ ಜಿ ಸ್ಕೂಲ್ ಕಡೆಯಿಂದ ಲೇಡಿಹಿಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಟಿ ಎಂ ಪೈ ಹಾಲ್ ಎದುರುಗಡೆ ತಲುಪಿದ ಸಮಯ ಸಂಜೆ 17.15 ಗಂಟೆಗೆ ಆರೋಪಿ ಬಸ್ಸು ನಂಬ್ರ ಕೆಎ.19.ಎಈ.7867ನೇದನ್ನು ಅದರ ಚಾಲಕ ಪಿ ವಿ ಎಸ್ ಕಡೆಯಿಂದ ಲೇಡಿಹಿಲ್ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯ ತನದಿಂದ ಪಿರ್ಯಾದಿದಾರರ ಹಿಂದುಗಡೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹೋಂಡಾ ಆಕ್ಟೀವಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಎರಡೂ ಕಾಲಿನ ಮೊಣಗಂಟಿಗೆ, ಬಲ ಕೈ ಮಣಿಗಂಟಿಗೆ ಹಾಗೂ ಎರಡೂ ಕೈಗಳ ತಟ್ಟಿಗೆ, ಬಲ ಕಣ್ಣಿನ ಬಳಿ ತರಚಿದ ಗಾಯವಾಗಿ ನಗರದ ವಿನಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮೌಲಾಝ್ ರವರು ಮೈಟ್ ಕಾಲೇಜಿನ ರಬ್ಬರ್ ತೋಟದ ಬಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ದಿನಾಂಕ 24-10-2014 ರಂದು ಹೆಂಡತಿ ಮತ್ತು ನಾಲ್ಕು ಮಕ್ಕಳು ಹಾಗೂ ಒಟ್ಟಿಗೆ ಕೆಲಸ ಮಾಡುತ್ತಿದ್ದ ನಾಗೇಶ ಎಂಬವರು ರಾತ್ರಿ ಊಟ ಮಾಡಿ ಮಲಗಿದ್ದು ಬೆಳ್ಳಿಗೆ ಸುಮಾರು 4.00 ಗಂಟೆಗೆ ಎದ್ದು ನೋಡಲಾಗಿ ಪಿರ್ಯಾದಿದಾರರ ಹೆಂಡತಿ ಯಮುನಾ ಮತ್ತು ಚಿಕ್ಕ ಮಗು ಕವನ ಹಾಗೊ ನಾಗೇಶ ಎಂಬವರು ಕಾಣೆಯಾಗಿರುತ್ತಾರೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು KA 21 A 1354 ನೇ ನೊಂದಣಿ ಸಂಖ್ಯೆಯ ಟಿಪ್ಪರ್ ಲಾರಿಯ ಮಾಲಕರಾಗಿದ್ದು ಸದ್ರಿ ಟಿಪ್ಪರ್ ಲಾರಿಯನ್ನು ಪ್ರತಿದಿನ ಬೇರೆ ಬೇರೆ ಕಡೆಗೆ ಅವರ ಚಾಲಕರಾದ ನವೀದ್ ರವರ ಮುಖೇನ ಬಾಡಿಗೆಗಾಗಿ ಕಳುಹಿಸಿ, ನಂತರ ಸಂಜೆ ಪಿರ್ಯಾದಿದಾರರ ಮನೆಯ ಮುಂದೆ ನಿಲ್ಲಿಸುತ್ತಿದ್ದು ಎಂದಿನಂತೆ ದಿನಾಂಕ:24-10-2014 ರಂದು ಸಂಜೆ 6-00 ಗಂಟೆಗೆ ಮೇಲ್ಕಂಡ ಟಿಪ್ಪರ್ ಲಾರಿಯನ್ನು ಚಾಲಕ ನವೀದ್ ರವರು ಪಿರ್ಯಾದಿದಾರರ ಮನೆಯ ಮುಂದೆ ನಿಲ್ಲಿಸಿ ಹೋಗಿದ್ದು ರಾತ್ರಿ ಮನೆಯಲ್ಲಿ ಮಲಗಿರುವಾಗ ದಿನಾಂಕ:25-10-2014ರ 02-00 ಗಂಟೆಗೆ ಮನೆಯ ಗೇಟ್ ತೆರೆದ ಶಬ್ದವಾಗಿ ಪಿರ್ಯಾದಿದಾರರು ಕಿಟಕಿಯಿಂದ ಹಾಗು ಅಲ್ಲಿದ್ದ ವಿದ್ಯುತ್ ದೀಪದ ಬೆಳಕಿನ ಸಹಾಯದಿಂದ ನೋಡಿದಾಗ ಸಪೂರ ಶರೀರದ ಸುಮಾರು 24 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಹೋಗುತ್ತಿರುವುದನ್ನು ನೋಡಿದ್ದು ಬಾಗಿಲು ತೆರೆದು ಹೊರಗೆ ಬಂದಾಗ ಆತ ಅಲ್ಲಿ ಕಾಣಲಿಲ್ಲ. ಬೆಳಿಗ್ಗೆ 06-00 ಗಂಟೆಗೆ ಚಾಲಕ ನವೀದ್ ರವರು ಮೇಲ್ಕಂಡ ಟಿಪ್ಪರ್ ನ್ನು ಸ್ಟಾಟ್ ಮಾಡುವಾಗ ಅದು ಸ್ಟಾಟ್ ಆಗದೇ ಇದ್ದು ಆತ ಬ್ಯಾಟರಿಯನ್ನು ಚಕ್ ಮಾಡಲು ಬಂದಾಗ ಬ್ಯಾಟರಿ ಇರಲಿಲ್ಲ ಆತ ಅದನ್ನು ಪಿರ್ಯಾದಿದಾರರಿಗೆ ತಿಳಿಸಿದ್ದು, ಅವರು ಕೂಡ ನೋಡಿದಾಗ ಟಿಪ್ಪರ್ ನ ಬ್ಯಾಟರಿ ಇರಲಿಲ್ಲ, ಅದರ ವೈರ್ ತುಂಡು ಮಾಡಿದ್ದು ಕಂಡು ಬಂದಿದ್ದು ,ಸದ್ರಿ ಟಿಪ್ಪರ್ ನ ಬ್ಯಾಟರಿಯನ್ನು ಅಪರಿಚಿತ ವ್ಯಕ್ತಿಯು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಯಿತು. ಸದ್ರಿ ಬ್ಯಾಟರಿಯ ಅಂದಾಜು ಮೌಲ್ಯ 10000 ರೂಪಾಯಿ ಆಗಿರುತ್ತದೆ. ಪಿರ್ಯಾದಿದಾರರು ತುರ್ತು ಕೆಲಸದ ಬಗ್ಗೆ ಹೊರಗೆ ಹೋಗಿರುವುದರಿಂದ ಠಾಣೆಗೆ ಬಂದು ಈ ಬಗ್ಗೆ ದೂರು ನೀಡಲು ಅಗಿರುವುದಿಲ್ಲ. ದಿನಾಂಕ:27-10-2014 ರಂದು ಕಾಟಿಪಳ್ಳದ ಮಹಮ್ಮದ್ ಇಮ್ರಾನ್ ಎಂಬವವನನ್ನು ಪೊಲೀಸರು ಹಿಡಿದು ಆತನಿಂದ ಬ್ಯಾಟರಿಗಳನ್ನು ವಶಪಡಿಸಿಕೊಂಡ ವಿಚಾರ ತಿಳಿದು ದಿನಾಂಕ: 28-10-2014 ರಂದು ಬೆಳಿಗ್ಗೆ ಸುರತ್ಕಲ್ ಠಾಣೆಗೆ ಬಂದು ಆರೋಪಿ ಮಹಮ್ಮದ್ ಇಮ್ರಾನ್ ನನ್ನು ನೋಡಿದ್ದು ಆತ ಈ ಹಿಂದೆ ಪಿರ್ಯಾದಿದಾರರ ಮನೆಯ ಬಳಿ ರಾತ್ರಿ ಕಂಡ ವ್ಯಕ್ತಿಯಾಗಿದ್ದು ಹಾಗು ಪೊಲೀಸರು ವಶಪಡಿಸಿದ ಬ್ಯಾಟರಿ ಕೂಡ ಪಿರ್ಯಾದಿದಾರರ ಟಿಪ್ಪರ್ ನ ಬ್ಯಾಟರಿ ಆಗಿರುತ್ತದೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ರಹಮತುಲ್ಲಾ ರವರು ದುರ್ಗಾ ಫೆಸಿಲಿಟಿ ಮ್ಯಾನೇಜ್ ಮೆಂಟ್ ಎಂಬ ಸಂಸ್ಥೆಯ ಸೀನಿಯರ್ ಆಪರೇಶನ್ ಮ್ಯಾನೇಜರ್ ಆಗಿದ್ದು ಅವರ ಕೈ ಕೆಳಗೆ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಾದ ಎಲ್ಯಣ್ಣ ಗೌಡ ಮತ್ತು ಹಜ್ಮಲ್ ಎಂಬವರು ದಿನಾಂಕ 27-10-2014 ರಂದು ರಾತ್ರಿ 10-15 ಗಂಟೆಗೆ ಕೆಲಸ ಮುಗಿಸಿ ನಡೆದುಕೊಂಡು ಅವರ ವಾಸ್ತವ್ಯದ ಬಾಡಿಗೆ ಮನೆಯಾದ ಕರಂಬಾರು ಜಂಕ್ಷನ್ ಎಂಬಲ್ಲಿಗೆ ತಲಪಿದಾಗ ಯಾರೋ ಇಬ್ಬರು ಅಪರಿಚಿತರು ನೀವು ದುರ್ಗಾ ಕಂಪೆನಿಯವರಾ ಎಂದು ಹೇಳಿ ನಿಮಗೆ ಭಾರೀ ಅಹಂಕಾರ ಇದೆಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಮರದ ತುಂಡಿನಿಂದ ಮತ್ತು ಕೈಯಿಂದ ಇಬ್ಬರಿಗೆ ಹಲ್ಲೆ ಮಾಡಿ ಓಡಿ ಹೋಗಿರುತ್ತಾರೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.10.2014 ರಂದು ಪಿರ್ಯಾದಿದಾರರಾದ ಶ್ರೀ ವಿಜಯ ಆಳ್ವಾರಿಸ್ ರವರು ತನ್ನ ಬಾಬ್ತು ರಿಕ್ಷಾದಲ್ಲಿ ಪ್ರಯಾಣಿಕರನ್ನು ವಾಮಂಜೂರು ಚೆಕ್‌ಪೋಸ್ಟ್ ಬಳಿ ಇಳಿಸಿ ವಾಪಾಸು ಮಂಗಳೂರು ಕಡೆಗೆ ಬರುತ್ತಿದ್ದ ಸಮಯ ರಾತ್ರಿ ಸುಮಾರು 7.45 ಗಂಟೆ ಸಮಯಕ್ಕೆ ವಾಮಂಜೂರು ಸೈಟ್ ಜೋಸೆಫ್ ಕಾಲೇಜಿನ ಮುಂಭಾಗ ತಲುಪಿದಾಗ ಪಿರ್ಯಾದಿದಾರರ ಆಟೋ ರಿಕ್ಷಾದ ಮುಂಭಾಗದಲ್ಲಿ ಹೋಗುತ್ತಿದ್ದ ಕೆಎ-19-ಎಕ್ಸ್-5133 ನೇ ಹೀರೋಹೋಂಡಾ ಸ್ಪ್ಲೆಂಡರ್ ಬೈಕಿಗೆ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ವಾಮಂಜೂರು ಕಡೆಗೆ ಕೆಎ-19-ಡಬ್ಲ್ಯು-8480 ನೇ ಹೋಂಡಾ ಡಿಯೋ ದ್ವಿಚಕ್ರವಾಹನವನ್ನು ಅದರ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪರಿಣಾಮ ಕೆಎ-19-ಎಕ್ಸ್5733 ನೇ ಮೋಟಾರ್ ಸೈಕಲ್ ಸವಾರ ವಿನ್ಸೆಂಟ್ ಲೋಬೋ ಮತ್ತು ಹಿಂಬದಿ ಸವಾರೆ ನಿರ್ಮಲಾ ಪಿಂಟೋ ರವರು ಬೈಕ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬೈಕ್ ಸವಾರರ ಕಾಲಿಗೆ, ಬಲಕೈಯ ಬೆರಳಿಗೆ, ಎದೆಗೆ, ಬಲಕಾಲಿಗೆ ರಕ್ತಗಾಯ ಹಾಗೂ ಗುದ್ದಿದ ಗಾಯವಾಗಿರುತ್ತದೆ. ಹಾಗೂ ಸಹಸವಾರೆ ನಿರ್ಮಲಾ ಪಿಂಟೋ ರವರಿಗೆ ತಲೆಗೆ ಸೊಂಟದ ಭಾಗಕ್ಕೆ ಮತ್ತು ಎರಡೂ ಕಾಲುಗಳಿಗೆ ರಕ್ತಗಾಯ ಮತ್ತು ಗುದ್ದಿದ ಗಾಯವಾಗಿರುತ್ತದೆ.
No comments:
Post a Comment