ದಿನಾಂಕ 23-10-2014 ರಂದು ಮಧ್ಯಾಹ್ನ 12-00 ಗಂಟೆ ಸಮಯಕ್ಕೆ ಮತ್ತು ರಾತ್ರಿ 10-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ತಲಪಾಡಿ ಗ್ರಾಮದ ಮರೋಳಿ ಬಾರ್‌ಗೆ ಮದ್ಯಸೇವಿಸಲು ಬಂದ ಮಹಮ್ಮದ ಬಾತೀಷ್ ಮತ್ತು ಇನ್ನೊಬ್ಬ ಯುವಕನು ಬಾರ್‌ನ ಸಪ್ಲಾಯರ್ ಹರೀಶ್ ಮತ್ತು ಮೆನೇಜರ್ ಗಂಗಾಧರ ರವರಲ್ಲಿ ತಿಂಗಳಿಗೆ ರೂ.20 ಸಾವಿರ ಹಫ್ತಾ ಕೊಡಬೇಕು ಎಂದು ಹೇಳಿ ಮದ್ಯ ಸೇವಿಸುತ್ತಾ ಟೇಬಲ್‌ನ ಮೇಲೆ ಇದ್ದ ಗಾಜಿನ ಗ್ಲಾಸುಗಳನ್ನು ಕೆಳಗೆ ಹಾಕಿ ಹುಡಿ ಮಾಡುತ್ತಿದ್ದಾಗ ಮೆನೇಜರ್ ಮತ್ತು ಬಾರ್ ಮಾಲಿಕರು ಬಂದು ಅವರನ್ನು ಸಮಾಧಾನ ಮಾಡಿ ಹೊರಗೆ ಕಳುಹಿಸಿದ್ದು, ಬಳಿಕ ಬಾರ್ ಬಂದ್ ಆಗಿ ಬಾರ್‌ನ ಕೆಲಸಗಾರರು ಒಳಗೆ ಕ್ಲೀನಿಂಗ್ ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲಿ ರಾತ್ರಿ ಸುಮಾರು 10-45 ಗಂಟೆಯ ಹೊತ್ತಿಗೆ ಬಾರ್‌ನ ಹೊರಗೆ ಜೋರಾಗಿ ಬೊಬ್ಬೆ ಕೇಳುವುದನ್ನು ನೋಡಿ ಹರೀಶ್ ಮತ್ತು ಇತರರು ಹೊರಗೆ ಬಂದು ನೋಡಿದಾಗ ಅದೇ ಮಹಮ್ಮದ್ ಬಾತಿಶ್ ಮತ್ತು ಇತರ 10-15 ಮಂದಿ 2 ಮೋಟಾರು ಸೈಕಲು ಮತ್ತು ಹಳದಿ ಬಣ್ಣದ APE ವಾಹನದಲ್ಲಿ ಬಂದವರು ತಮ್ಮ ಕೈಯಲ್ಲಿ ಮರದ ಸೋಂಟೆ, ತಲವಾರು ಹಿಡಿದುಕೊಂಡಿದ್ದು, ಮಹಮ್ಮದ್ ಬಾತಿಶ್‌ನು ಹರೀಶ ರವರನ್ನು ಉದ್ದೇಶಿಸಿ 20 ಸಾವಿರ ಹಪ್ತಾ ನೀಡಬೇಕು, ಇಲ್ಲದಿದ್ದರೆ ಬಾರ್‌ನ ಗ್ಲಾಸು ಹುಡಿ ಮಾಡುತ್ತೇವೆ ಮತ್ತು ನಿಮ್ಮನ್ನು ಸಾಯಿಸುತ್ತೇವೆ ಎಂದು ಹೇಳಿ ಆತನ ಕೈಯಲ್ಲಿದ್ದ ಮರದ ಸೋಂಟೆಯಿಂದ ಹರೀಶ ರವರ ತಲೆಗೆ ಹೊಡೆದು ತೀವ್ರ ಗಾಯಗೊಳಿಸಿದ್ದು, ಆಗ ಹರೀಶ್ ಮತ್ತು ಇತರರು ಬಾರ್‌ನ ಒಳಗಡೆ ಓಡಿಕೊಂಡು ಬರುವಾಗ ಮಹಮ್ಮದ್ ಬಾತಿಶ್ ಮತ್ತು ಇತರರು ಅವಾಚ್ಯಶಬ್ದಗಳಿಂದ ಬೈದು ಹಣ ನೀಡದಿದ್ದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಗಾಯಗೊಂಡ ಹರೀಶ ರವರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ನೀಡಿದ ಹೇಳಿಕೆ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ. 317/2014 ಕಲಂ 384, 427, 143, 147, 148, 324, 307, 504, 506 ಜತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಮಾನ್ಯ ಪೊಲೀಸ್ ಆಯುಕ್ತರು ಮಂಗಳೂರು ನಗರ, ಮಾನ್ಯ ಉಪ-ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಪರಾಧ ವಿಭಾಗ, ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಮಂ.ದ.ಉ.ವಿಭಾಗ ರವರ ಸೂಕ್ತ ನಿರ್ದೇಶನದಂತೆ ಮತ್ತು ಮಾನ್ಯ ಪೊಲೀಸ್ ನಿರೀಕ್ಷಕರು, ಉಳ್ಳಾಲ ಪೊಲೀಸ್ ಠಾಣೆ ರವರ ಮಾರ್ಗದರ್ಶನದಂತೆ ಈ ಹಪ್ತಾ ವಸೂಲಿ ಹಾಗೂ ಕೊಲೆಯತ್ನ ಪ್ರಕರಣದ ತನಿಖೆಯನ್ನು ಕೈಗೊಂಡ ಭಾರತಿ. ಜಿ. ಪೊಲೀಸ್ ಉಪ-ನಿರೀಕ್ಷಕರು (ಕಾ.ಸು) ಉಳ್ಳಾಲ ಠಾಣೆ ರವರು ಸಿಬ್ಬಂದಿಯವರೊಂದಿಗೆ ಈ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಬಾತಿಶ್ (32) ತಂದೆ. ಹಮೀದ ವಾಸ. ಹೆಚ್.ಎಂ. ಮಂಜಿಲ್, ಮೊಹಿಯುದ್ಧೀನ್ ಜುಮ್ಮಾ ಮಸೀದಿ ಬಳಿ, ಪಿಲಿಕೂರು ತಲಪಾಡಿ ಗ್ರಾಮ, ಮಂಗಳೂರು ತಾಲೂಕು ಎಂಬಾತನನ್ನು ದಿನಾಂಕ. 25-10-2014 ರಂದು ಮದ್ಯಾಹ್ನ 12-30 ಗಂಟೆಗೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪು ಎಂಬಲ್ಲಿ ಪತ್ತೆ ಹಚ್ಚಿ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಂಡಿರುತ್ತಾರೆ.
No comments:
Post a Comment