ದೈನಂದಿನ ಅಪರಾದ ವರದಿ.
ದಿನಾಂಕ 02.10.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 0 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-09-2014 ರಂದು 18-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಂಜುನಾಥ ಶೆಟ್ಟಿ ರವರು ತನ್ನ ಆರ್.ಸಿ ಮಾಲಕತ್ವದ KA 19 A 5711ನೇ ನೋಂದಣಿ ಸಂಖ್ಯೆಯ, ಚಾಸೀಸ್ ನಂಬ್ರ:24FBHB26978, ಇಂಜಿನ್ ನಂಬ್ರ:AEMBHB03162 ರ 2001ನೇ ಮೊಡೆಲಿನ ಕಪ್ಪು ಮತ್ತು ಹಳದಿ ಬಣ್ಣದ ಅಂದಾಜು ಸುಮಾರು 17,000/- ರೂ ಬೆಲೆ ಬಾಳುವ ಬಜಾಜ್ ಕಂಪನಿಯ ಅಟೋ ರಿಕ್ಷಾವನ್ನು ಮಂಗಳೂರು ನಗರದ ಬೆಂದೂರುವೆಲ್ ನಲ್ಲಿರುವ ಲೆಗೆಸಿ ಕಾಂಪ್ಲೆಕ್ಸ್ ನಲ್ಲಿನ ಡೊಮಿನೋಸ್ ಪಿಜ್ಜಾ ಎದುರು ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟು ಅದೇ ಕಾಂಪ್ಲೆಕ್ಸ್ ನ ನೆಲ ಮಹಡಿಯಲ್ಲಿರುವ ಚಿಕನ್ ವರ್ಲ್ಡ್ ಎಂಬ ಅಂಗಡಿಗೆ ತೆರಳಿದ್ದು ಸುಮಾರು 10 ನಿಮಿಷದ ಬಳಿಕ ತಾನು ರಿಕ್ಷಾ ಪಾರ್ಕ್ ಮಾಡಿಟ್ಟಿದ್ದ ಸ್ಥಳಕ್ಕೆ ಬಂದು ನೋಡಿದಾಗ ಸದ್ರಿ ರಿಕ್ಷಾ, ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಿದ್ದು ಪತ್ತೆಯಾಗದೇ ಇರುವುದಾಗಿದೆ.
2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-09-2014ರಂದು ರಾತ್ರಿ 20-00 ಗಂಟೆಯಿಂದ ದಿನಾಂಕ 23-09-2014ರಂದು ಬೆಳಿಗ್ಗೆ 09-00 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ಕಳ್ಳರು ಪ್ರಕರಣದ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಗಫೂರ್ ರವರು ಉಪಯೋಗಿಸುತ್ತಿದ್ದ ಅವರ ಅಣ್ಣ ಪಿ.ಎಚ್. ಮೊಹಮ್ಮದ್ ಕುಂಞ್ಞ ಇವರ ಆರ್. ಸಿ. ಮಾಲಕತ್ವದ 2003ನೇ ಮೊಡಲ್ ನ ಕಪ್ಪು ಬಣ್ಣದ ಅಂದಾಜು ರೂಪಾಯಿ 13000/- ಬೆಲೆ ಬಾಳುವ ಕೆಎ 19 ಆರ್. 8393 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಸೀಟ್ ನ ಕೆಳ ಭಾಗ ಟೂಲ್ಸ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್. ಸಿ. ಮತ್ತು ಇನ್ಸೂರೆನ್ಸ್ ನ ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಈ ದಿನ ದಿನಾಂಕ 01-10-2014ರ ರಂದು ಸಂಜೆ ಯವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
No comments:
Post a Comment