ದೈನಂದಿನ ಅಪರಾದ ವರದಿ.
ದಿನಾಂಕ 14.10.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.10.2014 ರಂದು ಪಿರ್ಯಾದಿದಾರರಾದ ಶ್ರೀ ಶಂಭು ಯು. ಶೆಟ್ಟಿ ರವರು ತನ್ನ ಅಣ್ಣನವರಾದ ಶ್ರೀ ಕೇಶವರವರ ಜೊತೆ ಮಂಗಳೂರು ನಗರದ ಹಂಪನ್ಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಿಂದ ಮನೆಯ ಕಡೆಗೆ ಹೊರಟು, ಸಮಯ ಮದ್ಯಾಹ್ನ 1:30 ಗಂಟೆಗೆ ಪಿ.ವಿ.ಎಸ್ ಸರ್ಕಲ್ ಬಳಿ ನಿಂತಿರುವಾಗ, ಲಾಲ್‌ಬಾಗ್ ಕಡೆಯಿಂದ ಪಿ.ವಿ.ಎಸ್ ಕಡೆಗೆ ದ್ವಿಚಕ್ರ ವಾಹನ ನಂಬ್ರ ಕೆ.ಎ-19-ಇ.ಸಿ-2879 ನೇದನ್ನು ಅದರ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಜೊತೆಯಲ್ಲಿದ್ದ ಅವರ ಅಣ್ಣ ಕೇಶವನವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕೇಶವರವರ ಮುಖದ ಭಾಗಕ್ಕೆ, ದವಡೆಗೆ, ಕಣ್ಣಿಗೆ ಗುದ್ದಿದ ನಮೂನೆಯ ಗಾಯ ಉಂಟಾದವರನ್ನು ಪಕ್ಕದಲ್ಲಿರುವ ಖಾಸಗೀ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆ ನೀಡಿದ್ದು, ಆದರೆ ದಿನಾಂಕ 09-10-2014 ರಂದು ನೋವು ಉಲ್ಬಣಿಸಿದರಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ನಗರದ ಸಿ.ಟಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-10-2014 ರಂದು 19:30 ಗಂಟೆಗೆ ಮಂಗಳೂರು ಜಿಲ್ಲಾಕಾರಾಗೃಹದ "ಎ" ಬ್ಲಾಕನ ರೂಮ ನಂಬ್ರ 3 ರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪಿರ್ಯಾಧಿದಾರರು ಹುಡಿಗಿಯೊಬ್ಬಳಿಗೆ ಮೋಸ ಮಾಡಿ ಬಂದಿರುತ್ತಾನೆ ಎಂಬ ಬಗ್ಗೆ ಮಾಹಿತಿ ಪಡೆದ ಆರೋಪಿತರುಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟಸ್ಥರಾಗಿ ಪಿರ್ಯಾಧಿದಾರರ ಕೈ ಹಿಡಿದು ಎಳೆದು ನೆಲಕ್ಕೆ ಕೆಡವಿ ಕೈಗಳಿಂದ ಮುಖ, ಬೆನ್ನು, ಸೊಂಟಕ್ಕೆ ಹೋಡೆದುದಲ್ಲದೆ ಎಡಕಾಲ ತೊಡೆ ಮೇಲೆ ನಿಂತು, ಕಾಲುಗಳಿಂದ ತುಳಿದುದಲ್ಲದೆ ಕಾರಾಗೃಹದ ರೂಮನಲ್ಲಿದ್ದ ಚೆಂಬಿನಿಂದ ಮುಖಕ್ಕೆ ಗುದ್ದಿ ಹಲ್ಲೆ ಮಾಡಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13.10.2014 ರಂದು 14:45 ಗಂಟೆಗೆ ಕರಂಗಲ್ಪಾಡಿ ಅಲೋಶಿಯಸ್ ಸ್ಕೂಲ್‌ನ ಬಳಿ KA-19-AA-1481 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ಆರೋಪಿಯು ಪಿವಿಎಸ್ ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಂಟ್ಸ್ ಹಾಸ್ಟೆಲ್ ಕಡೆಯಿಂದ ಪಿರ್ಯಾದಿದಾರರಾದ ಶ್ರೀಮತಿ ರೂಪಾ ಆರ್. ಬೊಂತ್ರಾ ರವರು ಚಲಾಯಿಸಿಕೊಂಡು ಬರುತ್ತಿದ್ದ ಕೆಎ-19-ಎಂಸಿ-2011 ನಂಬ್ರದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಾರಿಗೆ ಮತ್ತು ಆಟೋರಿಕ್ಷಾಕ್ಕೆ ಜಖಂ ಉಂಟಾಗಿರುತ್ತದೆ.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-10-2014 ರಂದು ಬೆಳಗ್ಗಿನ ಜಾವ 03-00 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ವಿಜಯ್ ಎಸ್. ಹೂಗಾರ್ ರವರು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಂಗಳೂರು ನಗರದ ಅತ್ತಾವರ ಎಸ್.ಎಲ್ ಮಥಾಯಿಸ್ ರಸ್ತೆಯಲ್ಲಿರುವ ಡೊರ್ ನಂಬ್ರ 17-21-1529 ನೇದರ ಮನೆಯ ಹಿಂದಿನ ಬಾಗಿಲನ್ನು ನೀಲಿ ಜೀನ್ಸ್ ಪ್ಯಾಂಟ್ ಕಪ್ಪು ಟೀ ಶರ್ಟ್ ತಲೆಗೆ ನೀಲೆ ಕೆಂಪು ಬಣ್ಣದ ಸ್ಕಾರ್ಫ್ ಧರಿಸಿರುವ ಅಪರಿಚಿತ ವ್ಯಕ್ತಿ ಬಲತ್ಕಾರವಾಗಿ ತೆಗೆದು ಮನೆಯ ಒಳಗೆ ಪ್ರವೇಶಿಸಿ ಫಿರ್ಯಾದುದಾರರ ಬಾಬ್ತು MICROMAX KNIGHT MOBILE, IMEI NO 91135770103299 ಹಾಗೂ KA 26 L 9755 ದ್ವಿ ಚಕ್ರ ವಾಹನದ ದಾಖಲೆ ಪತ್ರಗಳಿದ್ದ ಕ್ಯಾರಿ ಬ್ಯಾಗ್ , ಫಿರ್ಯಾದುದಾರರ ಶರ್ಟ್ ನ ಕಿಸೆಯಲ್ಲಿದ್ದ ನಗದು ಹಣ ರೂ 8000/- ಮತ್ತು ಫಿರ್ಯಾದುದಾರರ ಸಹವಾಸಿ ಹರಿಪ್ರಸಾದ್ ಎಂಬವರ ಬಾಬ್ತು ರೂ 2000/- ಬೆಲೆ ಬಾಳುವ ಫಾಸ್ಟ್ ಟ್ರ್ಯಾಕ್ ವಾಚ್ , ನಗದು ಹಣ ರೂ 450/- ಒಟ್ಟು ರೂ 30650/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-10-2014 ರಂದು ರಾತ್ರಿ ವಿದೇಶದಿಂದ ಬರುವ ಪ್ರಯಾಣಿಕರೊಬ್ಬರನ್ನು ಕರೆದುಕೊಂಡು ಹೋಗಲೆಂದು ಬಜಪೆ ವಿಮಾನ ನಿಲ್ದಾಣದ ಆಗಮನ ದ್ವಾರ ಸಮೀಪ ತಿಳಿಯದೇ ತನ್ನ ಕಾರನ್ನು ನಿಲ್ಲಿಸಿದ್ದು, ಆಗ ಅಲ್ಲಿದ್ದ ಟ್ಯಾಕ್ಸಿ ಚಾಲಕರೊಬ್ಬರು "ಕಾರನ್ನು ಇಲ್ಲಿ ನಿಲ್ಲಿಸಬಾರದು" ಎಂದು ತಿಳಿಸಿದಾಗ ಪಿರ್ಯಾದಿದಾರರು ಅವರಲ್ಲಿ "ತನ್ನ ಅಸೌಖ್ಯದ ತಾಯಿಯವರು ಮೂತ್ರ ಶಂಕೆಗೆ ಹೋಗಿರುತ್ತಾರೆ, ಅವರು ಎರಡು ನಿಮಿಷದಲ್ಲಿ ವಾಪಸು ಬರಬಹುದು, ಅವರು ಬಂದ ಕೂಡಲೇ ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ" ಎಂದು ಹೇಳುತ್ತಿದ್ದಂತೆ ಅಲ್ಲಿದ್ದ ಟ್ಯಾಕ್ಸಿ ಚಾಲಕ ಭರತ್ ಅಮೀನ್ ಎಂಬಾತ ರಾತ್ರಿ ಸುಮಾರು 10.30 ಗಂಟೆಗೆ "ನಿನಗೆ ಅವರು ಹೇಳುತ್ತಿರುವುದು ಕೇಳುವುದಿಲ್ಲವೇ" ಎಂದು ಅವಾಚ್ಯವಾಗಿ ಬೈದು ಪಿರ್ಯಾದಿದಾರರ ಕೆನ್ನೆಗೆ ಮತ್ತು ಎಡ ಕಿವಿಗೆ ಜೋರಾಗಿ ಹೊಡೆದು "ಇನ್ನು ಮುಂದೆ ಇಲ್ಲಿ ನಿಂತರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ" ಎಂದು ಬೆದರಿಸಿರುವುದಾಗಿದೆ.
No comments:
Post a Comment