ದೈನಂದಿನ ಅಪರಾದ ವರದಿ.
ದಿನಾಂಕ 06.10.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 04.10.2014 ರಂದು ಪಿರ್ಯಾದಿದಾರರಾದ ಶ್ರೀ ಸುಧಾಕರ ಕಲ್ಬಾವಿ ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ.19.ಈಕೆ.1289ನೇದರಲ್ಲಿ ತನ್ನ ಪತ್ನಿ ಪ್ರೇಮ ರವರನ್ನು ಸಹ ಸವಾರಿಣಿಯಾಗಿ ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 66 ನೇದರಲ್ಲಿ ಕೂಳೂರು ಕಡೆಯಿಂದ - ಕೊಟ್ಟಾರ ಚೌಕಿ ಕಡೆಗೆ ಚಲಾಯಿಸಿಕೊಂಡು ಬಂದು ತನ್ನ ಮನೆಯಾದ ಕಲ್ಬಾವಿಗೆ ಹೋಗುವರೇ ಕೋಡಿಕಲ್ ಕ್ರಾಸ್ ಎಂಬಲ್ಲಿ ತನ್ನ ಮೋಟಾರು ಸೈಕಲನ್ನು ಬಲಕ್ಕೆ ತಿರುಗಿಸುವರೇ ಸೂಚನೆ ನೀಡಿ ಹೋಗುತ್ತಿದ್ದಂತೆ ನಗರದ ನಂತೂರು ಕಡೆಯಿಂದ ಕೂಳೂರು ಕಡೆಗೆ ಆರೋಪಿ ಕಾರು ಚಾಲಕ ಕಾರು ನಂಬ್ರ ಕೆಎ.19 ಎಂಎ. 3561ನೇಯದನ್ನು ರಾ.ಷ್ಟ್ರೀಯ ಹೆದ್ದಾರಿ 66ನೇಯದಲ್ಲಿ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲಿನ ಎಡ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಪತ್ನಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದುದರಿಂದ ಪಿರ್ಯಾದಿದಾರರಿಗೆ ಮತ್ತು ಪತ್ನಿ ಪ್ರೇಮರಿಗೆ ಕಾಲುಮುರಿತದ ಗಂಬೀರ ಹಾಗೂ ಸಾಮಾನ್ಯ ತರಹದ ಗಾಯವಾಗಿ ಚಿಕಿತ್ಸೆ ಬಗ್ಗೆ ನಗರದ ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05-10-2014 ರಂದು ಸುಮಾರು 00-20 ಗಂಟೆ ಸಮಯಕ್ಕೆ ಮಂಗಳೂರು ನಗರದ ಸಿಟಿ ಆಸ್ಪತ್ರೆಯ ಎದುರು KA-19-EL-9310 ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ತಿಲಕ್ರಾಜ್ ಎಂಬಾತನು ಬಂಟ್ಸ್ ಹಾಸ್ಟೇಲ್ ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದುದಾರರಾದ ಶ್ರೀ ಶ್ರೀಕಾಂತ್ ರವರಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು, ಅವರ ಬಲಕೈ ತೊಳಿಗೆ ಮೂಳೆ ಮುರಿತದ ಗಾಯ ಮತ್ತು ಹಣೆಗೆ ತರಚಿದ ಗಾಯವಾಗಿರುವುದಲ್ಲದೇ ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ ಕೂಡ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಆತನ ಹಣೆಗೆ ರಕ್ತಗಾಯವಾಗಿ ಇಬ್ಬರೂ ಚಿಕಿತ್ಸೆಯ ಬಗ್ಗೆ ಮಂಗಳೂರು ನಗರದ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04-10-2014 ರಂದು ರಾತ್ರಿ ಸುಮಾರು 23-45 ಗಂಟೆ ಸಮಯಕ್ಕೆ ಮಂಗಳೂರು ನಗರದ ಅತ್ತಾವರ ರೈಲ್ವೇಸ್ಟೇಷನ್ ಬಳಿಯ ಟ್ರಿನಿಟಿ ಕಾಂಪ್ಲೆಕ್ಸ್ ನಲ್ಲಿರುವ ಕೈರಾಳಿ ಹೋಟೆಲ್ ಬಳಿ ನಂಬ್ರ ತಿಳಿಯದ ಯಾವುದೋ ವಾಹನವನ್ನು ಅದರ ಚಾಲಕನು ರೈಲ್ವೇ ಸ್ಟೇಷನ್ ಕಡೆಯಿಂದ ಅತ್ತಾವರ ಕಡೆಗೆ ಹಾದುಹೋಗುವ ಕಾಂಕ್ರೀಟ್ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಸುಮಾರು 48 ವರ್ಷ ಪ್ರಾಯದ ಅಪರಿಚಿತ ಗಂಡಸಿಗೆ ಢಿಕ್ಕಿಪಡಿಸಿದ ಪರಿಣಾಮ ಅಪರಿಚಿತ ಗಂಡಸು ಕಾಂಕ್ರೀಟ್ ರಸ್ತೆಗೆ ಬಿದ್ದು, ಆತನ ತಲೆಗೆ, ಹಣೆಗೆ ಮತ್ತು ಎಡಕಿವಿಯ ಬಳಿ ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 05-10-2014 ರಂದು ಸುಮಾರು 00-30 ಗಂಟೆಗೆ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿದ ವಾಹನದ ಚಾಲಕ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿರುತ್ತಾನೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಝರುದ್ದೀನ್ ರವರು ಕಾರು ನಂಬ್ರ ಕೆಎ-19ಎಂಎನ್-5546 ನೇಯದರಲ್ಲಿ ಬಾಡಿಗೆ ರೂಪದಲ್ಲಿ ಚಾಲಕನಾಗಿ ದಿನಾಂಕ 05.10.2014 ರಂದು ಮಂಗಳೂರು ಬಜಾಲ್ನಿಂದ ಕೈರಂಗಳ ಗ್ರಾಮದ ನಡುಪದವು ಎಂಬಲ್ಲಿಗೆ ಬಾವುಚ ಮತ್ತು ಅವರ ಮನೆಯವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಸಂಚರಿಸುತ್ತಾ ಸಂಜೆ 5:30 ಗಂಟೆಗೆ ಮಂಗಳೂರು ತಾಲೂಕು, ಕೊಣಾಜೆ ಗ್ರಾಮದ, ನಾಟೆಕಲ್ ಕ್ರಾಸ್ ಗ್ರೀನ್‌ಭಾಗ್ ಎಂಬಲ್ಲಿಗೆ ತಲುಪುತ್ತದ್ದಂತೆಯೇ ಎದುರಿನಿಂದ ಅಂದರೆ ಕೊಣಾಜೆ ಕಡೆಯಿಂದ ಆಟೋರಿಕ್ಷಾ ನಂಬ್ರ ಕೆಎ-19ಡಿ-337 ನೇಯದನ್ನು ಅದರ ಚಾಲಕ ನಿಸಾರ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಭಾಗಕ್ಕೆ ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಅದರ ಚಾಲಕ ಆರೋಪಿ ನಿಸಾರ್ ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ 5 ಜನ ಪ್ರಯಾಣಿಕರಿಗೆ ರಕ್ತಗಾಯವಾಗಿದ್ದು ಅಲ್ಲದೇ ಫಿರ್ಯಾದಿರಾರರಿಗೆ ಕೂಡಾ ಗುದ್ದಿದ ನೋವುಂಟಾಗಿದ್ದು ಅಲ್ಲಿದೇ ಕಾರಿನಲ್ಲಿ ಪ್ರಾಯಾಣಿಸುತ್ತಿದ್ದ ಐಫಾ (06) ಎಂಬವರಿಗೆ ಮುಖಕ್ಕೆ ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ. ಗಾಯಾಳುಗಳ ಪೈಕಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದವರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹಾಗೂ ಐಫಾ ದೇರಳಕಟ್ಟೆ ಯೆನಪೋಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.
No comments:
Post a Comment