Saturday, October 4, 2014

Daily Crime Reports 03-10.2014

ದೈನಂದಿನ ಅಪರಾದ ವರದಿ.

ದಿನಾಂಕ 03.10.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-10-2014 ರಂದು ರಾತ್ರಿ 22-30 ಗಂಟೆ ಸಮಯ ಬಾಳ ಗ್ರಾಮದ ಹೆಚ್ ಪಿ ಸಿ ಎಲ್ ಹೊಸ ಗೇಟ್ ಬಲಭಾಗದಲ್ಲಿರುವ ಎಲ್ ಪಿ ಜಿ ಟ್ಯಾಂಕರ್ ಪಾರ್ಕಿಂಗ್ ನಲ್ಲಿ ಮಹೇಂದ್ರನ್ ಎಂಬವರು ಟ್ಯಾಂಕರ್ ನಂಬ್ರ TN 47-J-5733 ಅಡಿ ಭಾಗದಲ್ಲಿ ಮಲಗಿದ್ದು ಟ್ಯಾಂಕರ್ ನ್ನು ಚಾಲಕ ಪಳನಿ ಅಂಡಿಯು ಸರಿಯಾಗಿ ನೋಡದೇ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಏಕಾಏಕಿ ಮುಂದಕ್ಕೆ ಚಲಾಯಿಸಿದ ಪರಿಣಾಮ ಮಹೇಂದ್ರನ್ ಹೊಟ್ಟೆಯ ಮೇಲೆ ಟ್ಯಾಂಕರ್ ಚಕ್ರಗಳು ಹರಿದು ಮೃತಪಟ್ಟಿದ್ದಾಗಿರುತ್ತದೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-10-2014 ರಂದು ರಾತ್ರಿ ಸುಮಾರು 8-30 ಗಂಟೆಗೆ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದ G T D C ಬಳಿ ನಡೆದುಕೊಂಡು ಹೋಗುತ್ತಿರುವಾಗ ಫಿರ್ಯಾದಿದಾರರಾದ ಶ್ರೀ ಅಶೋಕ ದೇವಾಡಿಗ ರವರ ಮುಂದಿನಿಂದ ಬೈಕಂಪಾಡಿ ಕಡೆಯಿಂದ ಜೋಕಟ್ಟೆ ಕಡೆಗೆ ಕಾರೊಂದನ್ನು ಅದರ ಚಾಲಕ ಅತೀ ವೇಗವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಶಾಹಿದ್ ಅಹಮ್ಮದ್ ರವರಿಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದು, ಗಾಯಾಳುವಿಗೆ ತಲೆಗೆ ಗಂಭೀರ ತರದ ಗುದ್ದಿದ ಗಾಯಾವಾಗಿದ್ದು, ಗಾಯಾಳುವನ್ನು ಜೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 02-10-2014 ರಂದು  00-30 ಗಂಟೆಗೆ ಮೃತಪಟ್ಟಿರುವುದಾಗಿದೆ.

 

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 02.10.2014 ರಂದು ಪಿರ್ಯಾದಿದಾರರಾದ ಶ್ರೀ ವಿಕ್ರಮ್ ಗೌಡ್ ರವರು ತನ್ನ ಬಾಬ್ತು ಮಾರುತಿ ಓಮ್ನಿ ಕಾರು ನಂಬ್ರ ಕೆಎ.19.ಜೆಡ್.9784ನೇದರಲ್ಲಿ ವೀರೂಪಾಕ್ಷ ಎಂಬವರನ್ನು ಜೊತೆಯಲ್ಲಿ ಕುಳ್ಳಿರಿಸಿಕೊಂಡು ನಗರದ ನಂತೂರು ಕಡೆಯಿಂದ  ಕೂಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66ನೇದರಲ್ಲಿ  ಕಾರನ್ನು ಚಲಾಯಿಸಿಕೊಂಡು ಬಂದು ಕೋಡಿಕಲ್ ಕ್ರಾಸ್ ಬಳಿಗೆ ರಾತ್ರಿ 23.45 ಗಂಟೆಗೆ ತಲುಪಿದಾಗ ದ್ವಿ ಚಕ್ರ ವಾಹನ  ನಂಬ್ರ ಕೆಎ.19.ಈಡಿ 9716ನೇಯದನ್ನು ಅದರ ಸವಾರ  ಕೂಳೂರು ಕಡೆಯಿಂದ - ಕೊಟ್ಟಾರ ಚೌಕಿ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಯಾವುದೇ ಸೂಚನೆ ನೀಡದೇ ಕೋಡಿಕಲ್ ಕ್ರಾಸ್ ಬಳಿ ಬಲಕ್ಕೆ ಕೋಡಿಕಲ್ ಕಡೆಗೆ ತಿರುಗಿಸಿ  ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದುದರಿಂದ  ಕಾರು ಸ್ಕೂಟರನ್ನು  ಸುಮಾರು 10 ಅಡಿ ದೂರ ಎಳೆದುಕೊಂಡು ಹೋಗಿರುವುದಲ್ಲದೆ ಸ್ಕೂಟರ್ ರಸ್ತೆಗೆ ಬಿದ್ದಿರುವುದಾಗಿದೆ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ತುಟಿಗೆ ಮತ್ತು ಎಡ ತೋರು ಬೆರಳಿಗೆ ರಕ್ತ ಗಾಯ ಹಾಗೂ  ವಿರೂಪಾಕ್ಷ ರವರಿಗೆ ಮುಖಕ್ಕೆ ತರಚಿದ ಗಾಯ  ಹಾಗೂ ದ್ವಿಚಕ್ರ ವಾಹನದ ಸವಾರಿಗೆ ಸಾಮಾನ್ಯ ತರಹದಗಾಯ ಮತ್ತು ಸಹಾ ಸವಾರರಿಗೆ ಗಂಬೀರ ಸ್ವರೂಪದ  ಮೂಳೆ ಮರಿತದ ಗಾಯವಾಗಿ ಗಾಯಾಳುಗಳು ಚಿಕಿತ್ಸೆ ಬಗ್ಗೆ ನಗರದ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-10-2014 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಮಂಕಿಸ್ಟ್ಯಾಂಡ್ ಜಂಕ್ಷನ್ ಬಳಿ ಪಿರ್ಯಾದುದಾರರಾದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ಶ್ರೀಮತಿ ರೋಸಮ್ಮ ರವರು ಪಿ.ಸಿ 487 ನೇಯವರ ಜೊತೆಯಲ್ಲಿ ವಾಹನ ತಪಾಸಣೆ ಮತ್ತು ಸಂಚಾರ ನಿಯಂತ್ರಣೆ ಕರ್ತವ್ಯ ನಿರ್ವಹಿಸುತ್ತಿರುವ ಸಮಯ ಆರೋಪಿಯು ಕೆಎ-19-.ಜಿ-1819 ನಂಬ್ರದ ಮೋಟಾರು ಸೈಕಲ್ನ್ನು ಹೆಲ್ಮೆಟ್ ಧರಿಸದೇ ಸವಾರಿ ಮಾಡಿಕೊಂಡು ಬರುವುದನ್ನು ಕಂಡು ಸದ್ರಿ ಮೋಟಾರು ಸೈಕಲ್ನ್ನು ನಿಲ್ಲಿಸಲು ಸೂಚನೆ ನೀಡಿದಾಗ ಸದ್ರಿ ಮೋಟಾರು ಸೈಕಲ್ಸವಾರ ಕರ್ತವ್ಯ ನಿರತ ಪಿರ್ಯಾದುದಾರರ ಸೂಚನೆಯನ್ನು ಪಾಲಿಸದೇ ಮೋಟಾರು ಸೈಕಲ್ನ್ನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಎದುರಿನಿಂದ ಬರುತ್ತಿದ್ದ ಕೆಎ-19ಬಿ-8317 ನಂಬ್ರದ ಅಟೋರಿಕ್ಷಾಕ್ಕೆ ಢಿಕ್ಕಿಪಡಿಸಿದ ಪರಿಣಾಮ ಅಟೋರಿಕ್ಷಾ ಸವಾರ ಮತ್ತು ಅದರಲ್ಲಿದ್ದ ಪ್ರಯಾಣಿಸುತ್ತಿದ್ದ ಮಹಿಳೆಯರಿಬ್ಬರಿಗೆ ಮತ್ತು ಆರೋಪಿಗೆ ಕೂಡ ಗಾಯವಾಗಿರುತ್ತದೆ.

 

5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಪಿಎಸ್ಐ ಶ್ರೀ ಸುಧಾಕರ ರವರಿಗೆ ದೊರೆತ ಖಚಿತ ವರ್ತಮಾನದಂತೆ ದಿನಾಂಕ 03.10.2014  ರಂದು 00:15 ಗಂಟೆಗೆ ಮಂಗಳೂರು ತಾಲೂಕು, ಪಾವೂರು ಗ್ರಾಮದ, ಮಲಾರ್ಬದ್ರಿಯಾನಗರ ಎಂಬಲ್ಲಿ ರಸ್ತೆಯ ಬದಿಯಲ್ಲಿ ಶೆಡ್ ಬದಿಯಲ್ಲಿ ಲಾರಿ ನಂಬ್ರ ಕೆಎಲ್‌-18-ಸಿ-2387 ನೇಯದಕ್ಕೆ ಆರೋಪಿಗಳಾದ ಶಾಜು ಮತ್ತು ಇನ್ನೊಬ್ಬನು ಪ್ಲಾಸ್ಟಿಕ್ಚೀಲಗಳಲ್ಲಿ ರೆಡಿಮಿಕ್ಸ್ಮರಳನ್ನು ತುಂಬಿಸುತ್ತಿದ್ದು, ಫಿರ್ಯಾದಿದಾರರನ್ನು ಕಂಡು ಓಡಿ ಪರಾರಿಯಾಗಿರುತ್ತಾರೆ. ಫಿರ್ಯಾದಿದಾರರು ಪರಿಶೀಲಿಸಲಾಗಿ ಲಾರಿಯಲ್ಲಿ ಸುಮಾರು 100 ರಿಂದ 150 ಪ್ಲಾಸ್ಟಿಕ್ಚೀಲಗಳಲ್ಲಿ ರೆಡಿಮಿಕ್ಸ್ಮರಳನ್ನು ತುಂಬಿಸಿದ್ದು, ಆರೋಪಿಗಳು ಮರಳನ್ನು ಎಲ್ಲಿಂದಲೂ ಕಳವು ಮಾಡಿ ತಂದು ಅದಕ್ಕೆ ಸಿಮೆಂಟ್ಹುಡಿ ಸೇರಿಸಿ ರೆಡಿಮಿಕ್ಸ್ತಯಾರಿಸಿ ಪ್ಲಾಸ್ಟಿಕ್ಗೋಣಿ ಚೀಲಗಳಲ್ಲಿ  ತುಂಬಿ, ಕರ್ನಾಟಕ ಸರಕಾರಕ್ಕೆ ಸೂಕ್ತ ರಾಜಧನವನ್ನು ಪಾವತಿಸದೇ, ಯಾವುದೇ ದಾಖಲೆ ಪತ್ರಗಳಿಲ್ಲದೇ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಹೊರ ಜಿಲ್ಲೆಗೆ ಅಥವಾ ಹೊರ ರಾಜ್ಯಕ್ಕೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದುದನ್ನು ಪತ್ತೆ ಹಚ್ಚಿ ಪಂಚರ ಸಮಕ್ಷಮಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡು, ಮುಂದಿನ ಕಾನೂನು ಕ್ರಮದ ಬಗ್ಗೆ ವರದಿ ಸಮೇತ ಠಾಣೆಗೆ ಹಾಜರು ಪಡಿಸಿರುವುದಾಗಿದೆ.

 

6.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಣ್ಣು ಎಂಬವರು ಮೂಡುಶೆಡ್ಡೆ ಶಾಲೆಪದವು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 30-09-2014 ರಂದು ಪಿರ್ಯಾದಿದಾರರು ಬೆಳಿಗ್ಗೆ ಮನೆಯಲ್ಲಿರುವಾಗ ಅವರ ಮನೆಯ ಅಂಗಳಕ್ಕೆ ಹರೀಶ ಮತು ಇತರ ಇಬ್ಬರು ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದದಿಂದ, ಬೈದು ಹರೀಶ ಎಂಬವರು ಪಿರ್ಯಾದಿದಾರರಿಗೆ ಮರದ ಕಟ್ಟಿಗೆಯಿಂದ ಎಡಕಾಲಿನ ಮೊಣ ಗಂಟಿಗೆ ಮತ್ತು ಸೊಂಟಕ್ಕೆ ಹೊಡೆದಿರುತ್ತಾರೆ. ಅವರೊಂದಿಗೆ ಇದ್ದ ಇಬ್ಬರು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಮತ್ತು ಕುತ್ತಿಗೆಯ ಕೆಳ ಭಾಗಕ್ಕೆ ಹೊಡೆದಿರುತ್ತಾರೆ. ನಂತರ ಪಿರ್ಯಾದಿದಾರರು ಮನೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದ, ತನ್ನ ತಂಗಿ ಮನೆಯಾದ ಪುತ್ತೂರಿನ ಆರ್ಯಾಪು ಎಂಬಲ್ಲಿಗೆ ತೆರಳಿ ತಂಗಿ ಪದ್ಮಾವತಿಯೊಂದಿಗೆ,  ಚಿಕಿತ್ಸೆ  ಬಗ್ಗೆ ಪುತ್ತೂರಿನ ಸರಕಾರಿ ಅಸ್ಪತ್ರೆಗೆ ತೆರಳಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-10-2014 ರಂದು ರಾತ್ರಿ 09-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪ್ರದೀಪ್ ರವರು ಮನೆಯ ಮುಂದೆ ಆಯುಧ ಪೂಜಾ ನಿಮಿತ್ತ ಪಿರ್ಯಾದಿದಾರರು ಮೋಟಾರ್ ಬೈಕು ಮತ್ತು ಕಾರನ್ನು ತೊಳೆಯುತ್ತಿರುವ ಸಮಯ ಆಲ್ವಿನ್ ಪಿಂಟೋ ಮತ್ತು ಅವರ ತಾಯಿ ಸಿಸಿಲಿಯಾ ಪಿಂಟೋರವರು ಚರಂಡಿ ನೀರನ್ನು ಸರಿಪಡಿಸುವರೇ ಕೈಯಲ್ಲಿ ಹಾರೆಯನ್ನು ಹಿಡಿದುಕೊಂಡು ಪಿರ್ಯಾದಿದಾರರಿಗೆ  ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತ ಕೆಳಗೆ ದೂಡಿ ಕಲ್ಲಿನಿಂದ ಪಿರ್ಯಾದಿದಾರರ ಕಣ್ಣಿನ ಮೇಲ್ಭಾಗಕ್ಕೆ ಮತ್ತು ತಲೆಗೆ ರಕ್ತಗಾಯ ಮಾಡಿರುವುದಾಗಿದೆ.

 

8.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-10-2014 ರಂದು ರಾತ್ರಿ 09-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಲ್ವಿನ್ ಜಾನ್ ಪಿಂಟೋ ರವರು ತನ್ನ ಮನೆಯ ಕಡೆಗೆ ನೀರು ಬರುತ್ತಿರುವುದನ್ನು ಮಣ್ಣಿನಿಂದ ಸರಿಮಾಡಿ ಮನೆಯ ಕಡೆ ಹರಿದು ಬರುವ ನೀರನ್ನು ನಿಲ್ಲಿಸುವ ಸಮಯ ಆರೊಪಿ ಪ್ರದೀಪ್ ನು ಏಕಾಏಕಿ ಪಿರ್ಯಾದಿಗೆ ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯಗೊಳಿಸಿರುವುಲ್ಲದೆ, ಪಿರ್ಯಾದಿಯ ತಾಯಿಯು ಬಿಡಿಸಲು ಬಂದಾಗ ಆರೋಪಿ ಪ್ರದೀಪ್ ಮತ್ತು ಆತನ ಜೊತೆಗೆ ಶ್ರಿಧರ್ ಹಾಗೂ ರಾಕೇಶ್ಶ್ ಎಂಬವರು ಸೇರಿ ಪಿರ್ಯಾದಿ & ಅವರ ತಾಯಿ ಶ್ರೀಮತಿ ಸಿಸಿಲಿಯಾ ಪಿಂಟೋಯವರಿಗೆ ನೆಲಕ್ಕೆ ಕೆಡವಿ ಕಬ್ಬಿಣದ ರಾಡ್ ನಿಂದ  ಹೋಡೆದು  ರಕ್ತಗಾಯ ಮಾಡಿರುವುದಾಗಿದೆ.

 

9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-10-2014 ರಂದು  ರಾತ್ರಿ 7-30 ಗಂಟೆಯ ವೇಳೆಗೆ ಮಂಗಳೂರು ನಗರದ ಮಂಗಳಾದೇವಿ ದ್ವಾರದ ಬಳಿಯಲ್ಲಿರುವ ಸುವರ್ಣ ವೈನ್ಸ್ ಹೊರಗಡೆ ಪಿರ್ಯಾದಿದಾರರಾದ ಶ್ರೀ ರೋಶನ್ ಲಸ್ರಾದೋ ರವರು ನಿಂತುಕೊಂಡಿದ್ದಾಗ ಫಿರ್ಯಾದುದಾರರಿಗೆ ಪರಿಚಯದ ವಿಘ್ನೇಶ್ ಹಾಗೂ ವಿಖ್ಯಾತ್ ಇವರುಗಳು ಜೊತೆಯಾಗಿ ಬಂದು ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ ಆರೋಪಿ ವಿಖ್ಯಾತ್ ನು ಫಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾದುದಾರರು ಅವರಲ್ಲಿ ಪ್ರಶ್ನಿಸಿದಾಗ ವಿಘ್ನೇಶನು ಫಿರ್ಯಾದುದಾರರಲ್ಲಿ " ಎಂಕ್ಲೆನ ಕಥೆ ನಿಕ್ಕ್ ಗೊತ್ತುಜ್ಜಿ, ಜಾಸ್ತಿ ಪಾತೆರ್0 ನಿನನ್ ದೀಪುಜಿ" ಎಂದು ಹೇಳಿ ಆತನ ಕೈಯಲ್ಲಿದ್ದ ಒಂದು ಬಾಟಲಿಯಿಂದ ಫಿರ್ಯಾದುದಾರರ ತಲೆಯ ಮೇಲೆ ಬಲವಾಗಿ ಬೀಸಿ ಹೊಡೆದ ಪರಿಣಾಮ ಫಿರ್ಯಾದುದಾರರ ತಲೆಗೆ ರಕ್ತಗಾಯವಾಗಿರುವುದಲ್ಲದೇ ಅದೇ ಬಾಟಲಿಯಿಂದ ವಿಖ್ಯಾತ್ ನು "ನಿನನ್ ಕೆರಂದೆ ಬುಡ್ಪುಜಿ" ಎಂದು ಹೇಳಿ ಹೊಟ್ಟೆಗೆ ಅದೇ ಬಾಟಲಿಯಿಂದ ತಿವಿದು ಕೊಲೆ ಮಾಡಲು ಪ್ರಯತ್ನಿಸಿದ್ದು, ಫಿರ್ಯಾದುದಾರರು ಅದೇ ವೇಳೆಗೆ ಬೊಬ್ಬೆ ಹಾಕಿ ತಪ್ಪಿಸಲು ಪ್ರಯತ್ನಿಸಿದಾಗ ಫಿರ್ಯಾದುದಾರರ ಗೆಳೆಯರು ಬಳಿಗೆ ಬಂದಾಗ ಆರೋಪಿಗಳು ಬಾಟಲಿಯನ್ನು ಅಲ್ಲೇ ಬಿಸಾಡಿ ಆರೋಪಿ ವಿಖ್ಯಾತ್ ನು "ದುಂಬುಗುಲಾ ನಿನನ್ ಕೆರಂದೆ ಬುಡ್ಪುಜಿ" ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಓಡಿ ಪರಾರಿಯಾಗಿರುತ್ತಾರೆ. ಘಟನೆಯ ವೇಳೆಗೆ ಫಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಸರ ಬಿದ್ದು ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಸಿಕ್ಕಿರುವುದಿಲ್ಲ. ಫಿರ್ಯಾದುದಾರರು ವಿಖ್ಯಾತ್ ಹಾಗೂ ವಿಘ್ನೇಶ್ ರವರನ್ನು ದುರುಗುಟ್ಟಿ ನೋಡಿದರು ಎಂಬ ಕಾರಣವನ್ನು ನೆಪವಾಗಿ ಇಟ್ಟುಕೊಂಡು ರೀತಿ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ.

 

10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30/09/2014 ರಂದು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಖಾದರ್ ರವರ ಅಣ್ಣನ ಹೆಂಡತಿ ಶ್ರೀಮತಿ ಮರಿಯಮ್ಮ 48 ವರ್ಷ ಎಂಬವರು ಪಿರ್ಯಾದಿದಾರರ ತಂಗಿಯ ಮನೆಗೆ ಹೋಗುವರೇ ಬಸ್ಸಿನಲ್ಲಿ ಹತ್ತಿ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ ಎಂಬಲ್ಲಿ ಬಸ್ಸಿನಿಂದ ಇಳಿದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ ಸುಮಾರು 10.30 ಗಂಟೆಗೆ ಮೂಡಬಿದ್ರೆ ಕಡೆಯಿಂದ ಕೈಕಂಬದ ಕಡೆಗೆ ಕಾರು ನಂಬ್ರ KA 20 N 7938 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮರಿಯಮ್ಮರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮರಿಯಮ್ಮರವರಿಗೆ ಕೈಗಳಿಗೆ ಮತ್ತು ಕಾಲುಗಳ ಗಂಟಿಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

No comments:

Post a Comment