ದೈನಂದಿನ ಅಪರಾದ ವರದಿ.
ದಿನಾಂಕ 10.10.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 3 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 09.10.2014 ರಂದು ಮದ್ಯಾಹ್ನ ಪಿರ್ಯಾದಿದಾರರಾದ ಡಾ. ಶ್ಯಾಮ್ ಎಸ್. ಭಟ್ ರವರು ತನ್ನ ಪತ್ನಿಯ ಬಾಬ್ತು ಕಾರು ನಂಬ್ರ ಕೆಎಲ್-14-ಎಲ್-3249 ನೇಯದನ್ನು ಮಂಗಳೂರು ನಗರದ ನವಭಾರತ್ನಿಂದ ಹಂಪನ್ಕಟ್ಟೆ ಕಡೆಗೆ ಚಲಾಯಿಸುತ್ತಾ ಸಮಯ ಮದ್ಯಾಹ್ನ12:50 ಗಂಟೆಗೆ ಸಿಟಿ ಸೆಂಟರ್ ಕ್ರಾಸ್ ರಸ್ತೆಯ ಬಳಿಗೆ ತಲುಪಿದಾಗ, ಬಾವುಟಗುಡ್ಡೆಯ ಕಡೆಯಿಂದ ಸಿಟಿ ಸೆಂಟರ್ ಕ್ರಾಸ್ ರಸ್ತೆಯಲ್ಲಿ ಮೆಟಡೋರ್ ಟೆಂಪೋ ನಂಬ್ರ ಕೆ.ಎ-19-9633 ನೇದನ್ನು ಅದರ ಚಾಲಕ ಪ್ರಕಾಶ್ ಎಂಬವರು ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಎಡಭಾಗಕ್ಕೆ ಡಿಕ್ಕಿ ಹೊಡೆದ, ಪರಿಣಾಮ ಪಿರ್ಯಾದಿದಾರರ ಕಾರಿನ 2 ಬಾಗಿಲುಗಳು, ಕಾರಿನ ಅಡಿ ಭಾಗ ಹಾಗೂ ಬಲಗಡೆಯ ಟಯರ್ಗೆ ಹಾನಿಯಾಗಿರುತ್ತದೆ. ಸದ್ರಿ ಟೆಂಪೋ ಚಾಲಕನು ವಿಪರೀತ ಮದ್ಯ ಸೇವನೆ ಮಾಡಿರುತ್ತಾನೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಶರಣಪ್ಪ ರವರು ತನ್ನ ಸಂಸಾರ ಸಮೇತ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡಿನಲ್ಲಿ ವಾಸವಾಗಿದ್ದು, ಸದ್ರಿಯವರು ದಿನಾಂಕ 07-10-2014 ರಂದು ತನ್ನ ಸ್ವಂತ ಊರಾದ ಸವದತ್ತಿ ಯಲ್ಲಮ್ಮನ ಜಾತ್ರೆಗೆ ಹೋದವರು ವಾಪಾಸ್ ಮನೆಗೆ ಬಂದಾಗ ತನ್ನ ಪತ್ನಿ ಭಾಗಮ್ಮ (30 ವರ್ಷ) ಮತ್ತು ಮಗ ಮಣಿಕಂಠ (6 ವರ್ಷ) ಮನೆಯಿಂದ ಕಾಣೆಯಾಗಿರುತ್ತಾರೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : 2014ನೇ ಆಗಸ್ಟ್ ತಿಂಗಳಲ್ಲಿ ಪಿರ್ಯಾದಿದಾರರಾದ ಎಮಿಲ್ಡಾ ಸಲ್ದಾನಾ ರವರ ಬಾಬ್ತು ಕಿಲ್ಪಾಡಿ ಗ್ರಾಮದಲ್ಲಿರುವ ಜಾಗದಲ್ಲಿ ಆರೋಪಿಗಳಾದ ಕಿಲ್ಪಾಡಿ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ, ಮನೋಹರ ಕೋಟ್ಯಾನ್ ಮತ್ತು ಜಯ ಕೋಟ್ಯಾನ್ ರವರು ಅತಿಕ್ರಮ ಪ್ರವೇಶ ಮಾಡಿ 9-10 ತೆಂಗಿನ ಮರಗಳನ್ನು ಕಡಿದು ಹಾನಿಗೊಳಿಸಿ ಪಿರ್ಯಾದಿದಾರರಿಗೆ ಸುಮಾರು 2 ಲಕ್ಷ ರೂ ನಷ್ಟ ಉಂಟುಮಾಡಿರುತ್ತಾರೆ.
4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಸಿಹಾಬ್ ರವರು ಮಂಗಳೂರು ನಗರದ ರಾವ್ & ರಾವ್ ಸರ್ಕಲ್ ನ ಎದುರುಗಡೆ ಅಶ್ರಫ್ ರವರ ಗುಜಿರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 09.10.2014 ರಂದು ಎಂದಿನಂತೆ ಕೆಲಸಕ್ಕೆ ಹೋಗಿರುವ ಸಮಯ ಪತ್ನಿಯಾದ ಶ್ರೀಮತಿ ಸಫಾನಳು ಹೆಣ್ಣು ಮಗು ಮತ್ತು ಮಗ ಮಹಮ್ಮದ್ ಶಫೀಕ್ ನೊಂದಿಗೆ ಎ.ಜೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು 12.00 ಗಂಟೆಗೆ ಪಿರ್ಯಾದಿದಾರರ ಅಂಗಡಿಗೆ ಬಂದು ನಂತರ ಮಂಗಳೂರು ಕುದ್ರೋಳಿ ಎ1 ಫ್ಲಾಟ್ ಹತ್ತಿರದ ಚಾಯಾಮುಖಿ ಕಂಪೌಂಡ್ ಮನೆಗೆ ಹೋಗಿದ್ದು, ಸ್ವಲ್ಪ ಸಮಯದ ನಂತರ ಪಿರ್ಯಾದಿದಾರರ ಮೊದಲನೇ ಮಗನಾದ ಮಹಮ್ಮದ್ ಶಫೀಕ್ ನು ಸಮಯ 12.30 ಗಂಟೆಗೆ ಮನೆಯಿಂದ ಆಟವಾಡಲೆಂದು ಪತ್ನಿಯಲ್ಲಿ ಹೇಳಿ ಹೋಗಿದ್ದು, ವಾಪಾಸ್ಸು ಮನೆಗೆ ಬರಲಿಲ್ಲ ಎಂಬುದಾಗಿ ತಿಳಿಸಿದ ಮೇರೆಗೆ ತಕ್ಷಣ ಪಿರ್ಯಾದಿದಾರರು ಮನೆಗೆ ಹೋಗಿ ವಿಚಾರ ತಿಳಿದು ಸ್ನೇಹಿತರೊಂದಿಗೆ ಕುದ್ರೋಳಿ, ಕಂಡತ್ ಪಳ್ಳಿ, ಬಂದರು, ಮೊದಲಾದ ಕಡೆಗಳಲ್ಲಿ ಹುಡುಕಿದರೂ ಇಷ್ಟರವರೆಗೆ ಪತ್ತೆಯಾಗದೇ ಇರುವುದಾಗಿದೆ. ಕಾಣೆಯಾದ ಮಹಮ್ಮದ್ ಶಫೀಕ್ ಚಹರೆ ವಿವರ: ಪ್ರಾಯ 7 ವರ್ಷ, ಎತ್ತರ 4' ಅಡಿ, ಬಿಳಿ ಮೈ ಬಣ್ಣ, ಕೆಂಪು ಕಾಲರ್ ಹೊಂದಿರುವ ಕಾಫಿ ಕಲರ್ ನ ಟೀ ಷರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಕಲರ್ ನ ಚಪ್ಪಲ್ ಧರಿಸಿರುತ್ತಾನೆ. ಕನ್ನಡ, ಬ್ಯಾರಿ ಭಾಷೆ ಮಾತನಾಡುತ್ತಾನೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-10-2014 ರಂದು ಫಿರ್ಯಾದಿದಾರರಾದ ಶ್ರೀ ಕಿಶೋರ್ ನಾಯಕ್ ರವರು ಮಂಗಳೂರು ನಗರದ ಸುವರ್ಣ ಲೇನ್ ಹಸನ್ ಹೆರಿಟೇಜ್ ಬಿಲ್ಡಿಂಗ್ ನ ನೆಲ ಅಂತಸ್ತಿನಲ್ಲಿರುವ ABLE PHARMA ಎಂಬ ತನ್ನ ಔಷದಿ ಅಂಗಡಿಯಲ್ಲಿ ಇದ್ದಾಗ, ಮದ್ಯಾಹ್ನ ಸುಮಾರು 12-15 ಗಂಟೆಗೆ KA 19 MC 2507 ಬಿಳಿ ಬಣ್ಣದ ನ್ಯಾನೋ ಕಾರನ್ನು ಅದರ ಚಾಲಕ ಫಿರ್ಯಾದಿದಾರರ ಅಂಗಡಿಯ ಎದುರು ಜನ ಹಾಗೂ ವಾಹನ ಸಂಚಾರಕ್ಕೆ ಅಡಚನೆಯಾಗುವಂತೆ ನಿಲ್ಲಿಸಿ ಹೋಗಿರುವುದನ್ನು ತೆಗೆದು ಬದಿಗೆ ನಿಲ್ಲಿಸಲು ಫಿರ್ಯಾದುದಾರರು ಹೇಳಿದ ದ್ವೇಷದಿಂದ ಆರೋಪಿ ನ್ಯಾನೋ ಕಾರಿನ ಚಾಲಕನು, ಫಿರ್ಯಾದಿದಾರರಿಗೆ ಹಲ್ಲೆ ಮಾಡಿ ಬೆದರಿಕೆ ಒಡ್ಡುವ ಸಮಾನ ಉದ್ದೇಶ ಹೊಂದಿ ಇತರ ಐದಾರು ಯುವಕರನ್ನು ಅಕ್ರಮ ಕೂಟ ಸೇರಿಸಿಕೊಂಡು ಬಂದು, ಫಿರ್ಯಾದಿದಾರರು ಅಂಗಡಿಯಿಂದ ತಾನು ಕಾರು ನಿಲ್ಲಿಸಿದ ಜಾಗಕ್ಕೆ ಹೋದಾಗ ಮದ್ಯಾಹ್ನ ಸುಮಾರು 1-30 ಗಂಟೆಗೆ ಅಕ್ರಮ ತಡೆ ಒಡ್ಡಿ, ಹಲ್ಲೆಗೆ ಮುಂದಾಗಿ, ಅವಾಚ್ಯ ಶಬ್ದಗಳಿಂದ ಬೈದು ಕೈಕಾಲು ಕಡಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಉಳ್ಳಾಲ ಗ್ರಾಮದ ಕಾಪಿಕಾಡ್ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಇದರ ಪ್ರಧಾನ ಅರ್ಚಕರಾದ ಶ್ರೀ ರಾಮಚಂದ್ರ ಭಟ್ಟರು ಎಂದಿನಂತೆ ದಿನಾಂಕ 08-10-2014 ರಂದು ರಾತ್ರಿ ಸುಮಾರು 9.00 ಗಂಟೆ ಸಮಯಕ್ಕೆ ಪೂಜೆ ಮುಗಿಸಿ ದೇವಸ್ಥಾನದ ಎಲ್ಲಾ ಬಾಗಿಲನ್ನು ಭದ್ರಪಡಿಸಿ ಬೀಗ ಹಾಕಿ ಹೋದವರು ದಿನಾಂಕ 09-10-2014 ರಂದು ಬೆಳಿಗ್ಗೆ ಸುಮಾರು 5-45 ಗಂಟೆಗೆ ಪೂಜೆಗಾಗಿ ದೇವಸ್ಥಾನಕ್ಕೆ ಬಂದವರು ದೇವಸ್ಥಾನದ ಎದುರು ಬಾಗಿಲಿನ ಬೀಗ ಮುರಿದಿದ್ದನ್ನು ನೋಡಿ ಫಿರ್ಯಾದಿದಾರರಾದ ಹಾಗೂ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಗಣೇಶ್ ಕಾಪಿಕಾಡ್ ಅವರಿಗೆ ಫೋನ್ ಮಾಡಿ ತಿಳಿಸಿ ನಂತರ ಫಿರ್ಯಾದಿದಾರರು ದೇವಸ್ಥಾನಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ದೇವಸ್ಥಾನದ ಬೀಗ ಮುರಿದು ಒಳಪ್ರವೇಶಿಸಿ ಒಳಗೆ ಅರ್ಚಕರು ಉಪಯೋಗಿಸುವ ಕೊಠಡಿಯ ಬೀಗ ಮುರಿದು ಒಳಪ್ರವೇಶಿಸಿ ಕೊಠಡಿಯಲ್ಲಿರಿಸಿದ ಬೆಳ್ಳಿಯ ಹರಿವಾಣ ( ¼ ಕೆ.ಜಿ.) ಬೆಳ್ಳಿಯ ಕಲಶ ಬಿಂದಿಗೆ ( ½ ಕೆ.ಜಿ.) ಅಲ್ಲದೆ ಡ್ರಾವರ್ ನಲ್ಲಿರಿಸಿದ ಸುಮಾರು 7,000/- ರೂ. ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 15,000/- ರೂ. ಆಗಬಹುದು.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-10-2014 ರಂದು ಮಧ್ಯಾಹ್ನ 2-30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಲಸ್ಲಿ ಲಾಟ್ಸನ್ ಡಿ'ಸೋಜಾ ರವರು ಅಡ್ಲಿನ್ ಎಂಬವರು ಸವಾರಿ ಮಾಡುತ್ತಿದ್ದ ಕೆಎ 19 ಇಹೆಚ್ 7405 ನೇ ಮೋಟಾರು ಸೈಕಲ್‌ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಮುನ್ನೂರು ಗ್ರಾಮದ ರಾಣಿಪುರ ಎಂಬಲ್ಲಿ ತಲುಪುತ್ತಿದ್ದಂತೆ ಅವರ ಎದುರಿನಿಂದ ಅಂದರೆ ಕುತ್ತಾರು ಕಡೆಯಿಂದ ಕೆಎ 19 ಬಿ 5618 ನೇ ಆಟೋ ರಿಕ್ಷಾವನ್ನು ಅದರ ಚಾಲಕ ಸೂರಜ್ ಎಂಬವರು ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದನು. ಇದರಿಂದ ರಸ್ತೆಗೆ ಬಿದ್ದ ಪಿರ್ಯಾದಿ ಮೊಣಗಂಟಿಗೆ ರಕ್ತ ಗಾಯ ಹಾಗು ಮೈಕೈಗೆ ಗುದ್ದಿದ ಗಾಯವಾಗಿರುತ್ತದೆ. ಅಡ್ಲಿನ್ರವರ ಬಲಕಾಲಿನ ಮೂಳೆ ಮುರಿತವಾಗಿರುತ್ತದೆ. ಗಾಯಾಳಿಬ್ಬರು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ವಿಜಯ್ ಕುಮಾರ್ ಶೆಟ್ಟಿ ರವರ ಅಣ್ಣ ಸತೀಶ ಶೆಟ್ಟಿಯವರ ಮಗ ಕಾರ್ತಿಕ್ ಶೆಟ್ಟಿ (18) ಯವರ ಮೇಲ್ದವಡೆಯ ಹೊರಚಾಚಿದ ಹಲ್ಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಸರಿಪಡಿಸಿಕೊಡುವುದಾಗಿ ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿ ಎಂಬಲ್ಲಿರುವ ಡಾ: ಜಾಸ್ಮೀನ್ ರವರ ಕ್ಲೀನಿಕ್‌ಗೆ ಪ್ರತೀ ವಾರಕ್ಕೊಮ್ಮೆ ಭೇಟಿ ನೀಡುವ ಡಾ: ಸುಬ್ರಹ್ಮಣ್ಯ ಶೆಟ್ಟಿಯವರ ಸಲಹೆ ಹಾಗೂ ಅವರ ಒತ್ತಾಯದ ಮೇರೆಗೆ ಕಾರ್ತಿಕ್ ಶೆಟ್ಟಿಯನ್ನು ದಿನಾಂಕ. 29-9-2014 ರಂದು ಮಂಗಳೂರು ದೇರಳಕಟ್ಟೆ ಯೇನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕರೆದುಕೊಂಡು ಬಂದು ಡಾ: ಸುಬ್ರಹ್ಮಣ್ಯ ಶೆಟ್ಟಿಯವರಲ್ಲಿ ತಪಾಸಣೆ ನಡೆಸಿ ಅದೇ ದಿನ ಸದ್ರಿ ಆಸ್ಪತ್ರೆಯಲ್ಲಿ ಕಾರ್ತಿಕ್ ಶೆಟ್ಟಿಯನ್ನು ಒಳರೋಗಿಯಾಗಿ ದಾಖಲಿಸಿದ್ದು. ನಂತರ ದಿನಾಂಕ.4-10-2014 ರಂದು ಕಾರ್ತಿಕ್ ಶೆಟ್ಟಿಯ ಮೇಲ್ದವಡೆಯ ಹೊರಚಾಚಿದ ಹಲ್ಲನ್ನು ಸರಿಪಡಿಸುವ ಸಲುವಾಗಿ ಡಾ: ಮುಸ್ತಾಫ ಮತ್ತು ಡಾ: ಶಹಝಾನ ರವರು ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿದ್ದು, ಆದರೆ ವೈದ್ಯರ ನಿರ್ಲಕ್ಷತನದ ಚಿಕಿತ್ಸೆಯಿಂದ ಕಾರ್ತಿಕ್ ಶೆಟ್ಟಿಯು ದಿನಾಂಕ. 7-10-2014 ರಂದು ಮದ್ಯಾಹ್ನ 1-30 ಗಂಟೆಗೆ ಮೃತ ಪಟ್ಟಿರುತ್ತಾರೆ. ಮೃತ ಕಾರ್ತಿಕ್ ಶೆಟ್ಟಿಯ ತಂದೆಯವರಿಗಾಗಲಿ, ಫಿರ್ಯಾದಿದಾರರಿಗಾಗಲಿ ಮತ್ತು ಅವರ ಸಂಬಂಧಿಕರಿಗೆ ಕಾನೂನಿನ ಅರಿವು ಇಲ್ಲದ ಕಾರಣ ಮೃತ ಕಾರ್ತಿಕ್ ಶೆಟ್ಟಿಯ ಮೃತ ದೇಹದ ಮೇಲೆ ಮರಣೋತ್ತರ ಪರೀಕ್ಷೆಯ ಕ್ರಮವನ್ನು ಜರುಗಿಸುವ ಬಗ್ಗೆ ಹೋಗದೇ ಹಾಗೂ ಮೃತ ದೇಹವನ್ನು ಅವರ ಸಂಪ್ರದಾಯದ ಕ್ರಮದಂತೆ ಅವರ ಮನೆಯ ಜಾಗದಲ್ಲಿಯೇ ದಹನ ಕಾರ್ಯವನ್ನು ದಿನಾಂಕ. 7-10-2014 ರಂದು ನಡೆಸಿದ್ದು, ದಿನಾಂಕ 9-10-2014 ರಂದು ಮೃತ ಕಾರ್ತಿಕ್ ಶೆಟ್ಟಿಯ ಕಾಲೇಜಿನ ಸ್ನೇಹಿತರು ಇವರ ಮನೆಗೆ ಬಂದು ಕಾರ್ತಿಕ್ ಶೆಟ್ಟಿಯ ಮರಣಕ್ಕೆ ವೈದ್ಯರ ನಿರ್ಲಕ್ಷತನವೇ ಕಾರಣವಾಗಿರುತ್ತದೆ. ಈ ಬಗ್ಗೆ ಪೊಲೀಸ್ ಕಂಪ್ಲೆಂಟ್ ಕೊಡಬೇಕು ಎಂದು ತಿಳಿಸಿದ ಮೇರೆಗೆ ಫಿರ್ಯಾದಿದಾರರು ದಿನಾಂಕ. 9-10-2014 ರಂದು ಠಾಣೆಗೆ ದೂರು ನೀಡಿರುವುದಾಗಿದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.10.2014 ರಂದು ಪಿರ್ಯಾದಿದಾರರಾದ ಶ್ರೀ ಅಜಿತ್ ಕುಮಾರ್ ರವರು ತನ್ನ ಬಾಬ್ತು ಕೆಎ19ಎಕ್ಸ್6006 ನೇ ಮೋಟಾರ್ ಸೈಕಲ್‌ನಲ್ಲಿ ಮನೋಹರ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಪಂಡಿತ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಜಪ್ಪಿನಮೊಗರು ದ್ವಾರದ ಬಳಿ ತಲುಪಿದಾಗ ತೊಕ್ಕೊಟ್ಟು ಕಟೆಯಿಂದ KL14K8790 ಮಾರುತಿ ರಿಟ್ಜ್ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಗತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್‌ನ ಮುಂದುಗಡೆ ಹೋಗುತ್ತಿದ್ದ ಆಟೋ ರಿಕ್ಷಾ ನಂಬ್ರ: KA19B3442 ನೇದಕ್ಕೆ ಡಿಕ್ಕಿಹೊಡೆದು ನಂತರ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ ಆಟೋ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರು ಮತ್ತು ಪಿರ್ಯಾದಿದಾರರು ತನ್ನ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಮೋಟಾರ್ ಸೈಕಲ್‌ನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣ ಮಾಡುತ್ತಿದ್ದ ಮನೋಹರ್ ರವರ ಸೊಂಟಕ್ಕೆ ಹಾಗೂ ಬಲಕೈ ಮತ್ತು ಬಲಕಾಲಿಗೆ ಗುದ್ದಿದ ಜಖಂ ಆಗಿದ್ದು ಅಲ್ಲದೆ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರಿಗೆ ಗುದ್ದಿ ರಕ್ತಬರುವ ಗಾಯ ಉಂಟಾಗಿರುತ್ತದೆ.
No comments:
Post a Comment