ದೈನಂದಿನ ಅಪರಾದ ವರದಿ.
ದಿನಾಂಕ 07.10.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-10-2014 ರಂದು ಪಿರ್ಯಾದಿದಾರರಾದ ಶ್ರೀ ಹರಿಶ್ಚಂದ್ರ ಪಿ. ಸಾಲ್ಯಾನ್ ರವರು ತನ್ನ ಮಗ ತುಷಾರ್ ಸಾಲ್ಯಾನ್ ಎಂಬವರು ತನ್ನ ಬಾಬ್ತು ಕೆ ಎ 19 ಇ ಕೆ 9616 ನೇ ಬೈಕಿನಲ್ಲಿ ಸವಾರರಾಗಿ ಫಿರ್ಯಾದಿದಾರರು ಸಹಸವಾರರಾಗಿ ಲಿಂಗಪ್ಪಯ್ಯ ಕಾಡಿನಿಂದ ಕೊಲ್ನಾಡು ಕಡೆಗೆ ರಸ್ತೆಯಲ್ಲಿ ಮಧ್ಯಾಹ್ನ 3-00 ಗಂಟೆಗೆ ಚಲಾಯಿಸಿಕೊಂಡು ಬರುತ್ತಾ ಕೊಲ್ನಾಡು ಜಂಕ್ಷನ್ ತಲುಪಿದಾಗ ಎದುರುಗಡೆಯಿಂದ ಕೆ ಎ 19 ಇ ಡಿ 619 ನೇ ನಂಬ್ರದ ಅದರ ಸವಾರ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ತುಷಾರ್ ಸಾಲ್ಯಾನ್ ರವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು, ಹಿಂದುಗಡೆ ಕುಳಿತಿದ್ದ ಪಿರ್ಯಾದಿದಾರರು ಹಾರಿ ತಪ್ಪಿಸಿಕೊಂಡು ಯಾವುದೇ ಗಾಯವಾಗದೇ ಪಾರಾಗಿದ್ದು, ಸವಾರ ತುಷಾರ್ ಸಾಲ್ಯಾನ್ ರವರಿಗೆ ಎಡಗಾಲಿಗೆ ಮೂಳೆಮುರಿತದ ರಕ್ತ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-10-2014ರಂದು ರಾತ್ರಿ 12-00 ಗಂಟೆಗೆ ಮಂಗಳೂರಿನಿಂದ ಕಿನ್ನಿಗೋಳಿಗೆ ಪಿರ್ಯಾದಿದಾರರಾದ ಶ್ರೀ ಪವನ್ ರಾಜ್ ರವರು ತನ್ನ ನೆರೆ ಮನೆಯ ವಿದ್ಯಾಧಾರ ಆಚಾರ ಎಂಬವರು ಅವರ ಬಾಬ್ತು ಬೈಕ್ ನಂಬ್ರ ಕೆ ಎ 19 ಇ ಎಚ್ 8631 ನೇಯದರಲ್ಲಿ ಸವಾರರಾಗಿಯೂ ಪಿರ್ಯಾದಿದಾರರು ಸಹಸವಾರರಾಗಿಯೂ ಪದ್ಮನೂರು ಜಂಕ್ಷನ್ ಬಳಿ ತಲುಪಿದಾಗ ಎದುರಿನಿಂದ ಕೆ ಎ 20 ಕೆ 3544 ನೇಯದರಲ್ಲಿ ಅದರ ಸವಾರ ಗಣೇಶ ಭಟ್ ಎಂಬವರ ತೀರಾ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ವಿದ್ಯಾಧಾರ ಆಚಾರರವರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕ್ ಗಳು ರಸ್ತೆಗೆ ಬಿದ್ದು ವಿದ್ಯಾಧಾರ ಆಚಾರ ರವರಿಗೆ ಎಡಗಣ್ಣಿನ ಅಂಚಿಗೆ, ಎಡಗೈ ಮತ್ತು ಎಡಗಾಲಿಗೆ ರಕ್ತ ಗಾಯವಾಗಿ ಹಿಂದುಗಡೆ ಕುಳಿತಿದ್ದ ಪಿರ್ಯಾದಿದಾರರಿಗೆ ಎಡಗಾಲಿಗೆ ಗಾಯವಾಗಿದ್ದು ಆರೋಪಿ ಸವಾರ ಗಣೇಶ ಭಟ್ ರವರ ಎಡಗಾಲಿಗೂ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಶ್ರೀ ವಿದ್ಯಾಧಾರ ಆಚಾರರು ಮತ್ತು ಗಣೇಶ ಭಟ್ ರವರು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 06.10.2014 ರಂದು ಪಿರ್ಯಾದಿದಾರರಾದ ಶ್ರೀ ನವೀನ್ ಕುಮಾರ್ ರವರು ತನ್ನ ಬಾಬ್ತು ಕೆನಟಿಕ್ ಹೋಂಡಾ ಸ್ಕೂಟರ್ ನಂಬ್ರ ಕೆಎ.19.ಹೆಚ್.6665ನೇದನ್ನು ಮಂಗಳೂರು ನಗರದ ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ ಎಂ ಜಿ ರಸ್ತೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಕಡೆಗೆ ಚಲಾಯಿಸಿಕೊಂಡು ಹೋಗಿ ಲಾಲ್ ಭಾಗ್ ಜಂಕ್ಷನ್ ತಲುಪುವ ಸಮಯ ಬೆಳಿಗ್ಗೆ 09.00 ಗಂಟೆಗೆ ಆರೋಪಿ ಬಸ್ಸು ನಂಬ್ರ ಕೆಎ.19.ಸಿ.72ನೇಯದನ್ನು ಅದರ ಚಾಲಕ ಲೇಡಿಹಿಲ್ ಕಡೆಯಿಂದ ಪಿ ವಿ ಎಸ್ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಯ ಹಿಂಬಾಗ, ಎಡ ಕೈ ಮೊಣಗಂಟಿಗೆ, ಎಡ ಕಾಲಿಗೆ ಗಾಯವಾಗಿ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06-10-2014 ರಂದು ಪಿರ್ಯಾದಿದಾರರಾದ ಶ್ರೀ ಅಬೂಬಕ್ಕರ್ ರವರು ಅವರ ಬಾಬ್ತು KA-19K 5901ನೇ M80 ದ್ವಿಚಕ್ರ ವಾಹನದಲ್ಲಿ ಸವಾರನಾಗಿ ಅವರ ಮನೆಯಿಂದ ಬಾಳೆಪುಣಿ ಗ್ರಾಮದ ಮೂಳೂರು ಎಂಬಲ್ಲಿನ ಹೆಂಡತಿ ಮನೆಯಾದ ಮೊಂಟೆಪದವಿಗೆ ಸಂಚರಿಸುತ್ತಾ ಹೊರಟು ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ನಂದಾರಪಡ್ಪು ಎಂಬಲ್ಲಿ ಸಂಜೆ ಸುಮಾರು 5-30 ಗಂಟೆಗೆ ತಲುಪಿದಾಗ ಕಾರು ನಂಬ್ರ KA-19 MC2665 ನೇ ಚಾಲಕ ಗಣೇಶ್ ಪ್ರಸಾದ್ ಎಂಬಾತನು ಆತನ ಬಾಬ್ತು ಮಾರುತಿ ಶಿಪ್ಟ್ ಕಾರನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿನ ಮೊಣಗಂಟಿಗೆ ರಕ್ತದ ಗಾಯ ಮತ್ತು ಬಲಕೈಯ ಮಣಿಗಂಟಿನ ಬಳಿ ಗುದ್ದಿದ ನೋವು ಉಂಟಾಗಿದ್ದು, ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ಸಹಾರಾ ಆಸ್ಪತ್ರೆಗೆ ತಂದು ದಾಖಲಿಸಿದಲ್ಲಿ ವೈಧ್ಯರು ಪಿರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06.10.2014 ರಂದು ಖಚಿತ ವರ್ತಮಾನದ ಮೇರೆಗೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಅನಂತಪದ್ಮನಾಭ ರವರು ಹಾಗೂ ಪಿಎಸ್ಐ ರಮೇಶ್ ಕುಮಾರ್ .ಹಾಗೂ ಸಿಬ್ಬಂದಿಗಳೊಂದಿಗೆ, ಖಚಿತ ವರ್ತಮಾನದ ಮೇರೆಗೆ ನೆಲ್ಲಿಕಾರು ಗ್ರಾಮದ ಬೋರುಗಗುಡ್ಡೆ ಮಿಂಜಾರು ಎಂಬಲ್ಲಿ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಉಳಾಯಿ ಪಿದಾಯಿ ಆಟ ಆಡುತಿದ್ದ ಮಾಹಿತಿಯಂತೆ, ಪಂಚರೊಂದಿಗೆ ದಾಳಿ ಮಾಡಿದಾಗ ಜೂಜಾಟ ನಿರತರು ಓಡಿ ಹೋಗಲು ಪ್ರಯತ್ನಿಸಿ ಅವರಲ್ಲಿ ಮೊಹಮ್ಮದ್ ಖಾದೀರ್, ಪ್ರಸನ್ನ, ಅಬ್ದುಲ್ ರಜಾಕ್, ಹುಸ್ಮಾನ್, ಅರುಣ್ ಭಂಡಾರಿ, ಶಶಿಧರ ಪೂಜಾರಿ ವರನ್ನು ವಶಕ್ಕೆ ಪಡೆದು ಉಳಿದವರು ಓಡಿ ಹೋಗಿದ್ದು ಆಟಕ್ಕೆ ಉಪಯೋಗಿಸಿದ ರೂಪಾಯಿ 625 ಹಾಗೂ 3 ಅಟೋ ರಿಕ್ಷಾ, ಆರು ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡು ಕ್ರಮ ಜರುಗಿಸಿದ್ದಾಗಿದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04.10.2014 ರಂದು ಪಿರ್ಯಾದುದಾರರಾದ ಶ್ರೀ ಲೋಕೇಶ್ ರವರು ತನ್ನ ಬಾಬ್ತು KA-13-Y-1336ನೇ ನಂಬ್ರದ ಮೋಟಾರ್ ಸೈಕಲ್ಲನ್ನು ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ 75 ನೇದರಲ್ಲಿ ಸವಾರಿಮಾಡಿಕೊಂಡು ಬರುತ್ತಾ ವಳಚ್ಚಿಲ್ ಮಸೀದಿಯ ಹತ್ತಿರದಲ್ಲಿರುವ ವಳಚ್ಚಿಲ್ ಪದವು ರಸ್ತೆಯು ರಾಷ್ಟ್ರೀಯ ಹೆದ್ದಾರಿಗೆ ಬಂದು ಸೇರುವ ಡಿವೈಡರ್ ತೆರೆದಿರುವ ಸ್ಥಳಕ್ಕೆ ಬಂದು ತಲುಪಿದಾಗ ಬೆಳಿಗ್ಗೆ ಸುಮಾರು 08:00 ಗಂಟೆ ಸಮಯಕ್ಕೆ ಪಿರ್ಯಾದುದಾರರ ಬೈಕಿನ ಹಿಂದುಗಡೆಯಿಂದ KA-19-AA-3587ನೇ ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಮಜೀದ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಾಸಿಕೊಂಡು ಬಂದು ಪಿರ್ಯಾದುದಾರರ ಬೈಕ್ನ್ನು ಓವರ್ಟೇಕ್ ಮಾಡಿ ಒಮ್ಮೆಲೆ ಟಿಪ್ಪರನ್ನು ಎಡಕ್ಕೆ ಚಲಾಯಿಸಿದ ಪರಿಣಾಮ ಸದ್ರಿ ಟಿಪ್ಪರ್ ಲಾರಿಯ ಹಿಂಭಾಗದ ಚಕ್ರ ಮತ್ತು ಮಡ್ಗಾರ್ಡ್ (ಎಡಬದಿಯ ಹಿಂಭಾಗದ) ಪಿರ್ಯಾದುರಾರರ ಬೈಕಿಗೆ ತಾಗಿದ ಪರಿಣಾಮ ಪಿರ್ಯಾದುದಾರರು ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ತಲೆಗೆ ರಕ್ತ ಗಾಯ, ಎದೆಗೆ ಗುದ್ದಿದ ಗಾಯ, ಬಲಕಾಲು ಮೊಣಗಂಟಿಗೆ ರಕ್ತ ಗಾಯ ಹಾಗೂ ಬಲಕೈಗೆ ತರಚಿದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲುಗೊಂಡಿರುವುದಾಗಿದೆ.
No comments:
Post a Comment