Wednesday, October 8, 2014

Daily Crime Reports 08-10-2014

ದೈನಂದಿನ ಅಪರಾದ ವರದಿ.

ದಿನಾಂಕ 08.10.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

2

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಶರ್ಮಿಳಾ ರವರ ಮೊದಲ ಗಂಡ ತೀರಿ ಹೋದ ಬಳಿಕ ಪರಿಚಯವಾದ ಆರೋಪಿಯಾದ ಕೆ.ಆರ್. ಸದಾಶಿವ ಆಚಾರ್ಯ ಎಂಬವರನ್ನು ಪಿರ್ಯಾದಿದಾರರನ್ನು ದಿನಾಂಕ 17-10-2007 ರಂದು ಮುರುಡೇಶ್ವರ ದೇವಸ್ಧಾನದಲ್ಲಿ ವಿವಾಹವಾಗಿದ್ದು, ಬಳಿಕ ಆರೋಪಿಯು ಪಿರ್ಯಾದಿದಾರರ ಜೊತೆ ವಾಸವಾಗಿದ್ದು ಇತ್ತೀಚೇಗೆ 2 ನೇ ಆರೋಪಿಯಾದ ಕೆ.ಆರ್. ಚಂದ್ರಕಾಂತ್ ಎಂಬವರ ಕುಮ್ಮಕ್ಕಿನಿಂದ ಬೇರೆ ಮದುವೆಯಾಗಲು ಹುಡುಗಿ ನೋಡುತ್ತಿದ್ದು ಪಿರ್ಯಾದಿದಾರರಿಗೆ ನಿರಂತರವಾಗಿ ದೈಹಿಕವಾಗಿ ಹಲ್ಲೆ ನಡೆಸಿ ಅವ್ಯಾಚ್ಯ ಶಬ್ದದಿಂದ ಬೈದು ನಿಂದಿಸಿ ತನಗೆ ಡೈವೋರ್ಸು ಕೋಡಬೇಕೆಂದು ನಿಂದಿಸಿ ಮಾನಸಿಕ ಹಿಂಸೆ ನೀಡಿದ್ದಲ್ಲದೆ ದಿನಾಂಕ 27-9-2014 ರಂದು ಬೆಳಿಗ್ಗೆ 10-30 ಗಂಟೆಗೆ ಗಂಡಸರು ಎಷ್ಟು ಬೇಕಾದರೂ ಮದುವೆಯಾಗಬಹುದು ನೀನು ಮದುವೆಗೆ ಅಡ್ಡ ಬಂದರೆ ಕೊಲ್ಲದೆ ಬೀಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-10-2014 ರಂದು ಪಿರ್ಯಾದಿದಾರರಾದ ಶ್ರೀ ರಮೇಶ್ ಎಂ. ರವರು ತನ್ನ ಮಾವನಾದ ಜೋಸೆಫ್ ಎಂಬವರ ಜೊತೆ ಕಾರ್ನಾಡ್ ಅವರ ಮನೆಯಿಂದ ಕೆಲಸ ಮಾಡುವ ಸ್ಥಳವಾದ ಶೀನಿವಾಸ್ ಆಸ್ಪತ್ರೆ ಗೆ ಹೋಗುವ ಸಲುವಾಗಿ ಕಾರ್ನಾಡ್ ಜಂಕ್ಷನ್ ನಿಂದ ಬಸ್ ಇಳಿಯವರೇ ನಡೆದುಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 08.00 ಗಂಟೆಗೆ ಕಾರ್ನಾಡ್ ಕಡೆಗೆ ಕೆಎ,20 ವ್ಯೆ. 6157 ನೇ ನಂಬ್ರದ ಬೈಕ್ ನ್ನು ಅದರ ಸವಾರ ಜೋಸೆಫ್ ಎಂಬವರು ನಿರ್ಲಕ್ಚತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಪಿರ್ಯಾದಿದಾರರ ಮಾವನಿಗೆ ಢಿಕ್ಕಿಪಡಿಸಿದ್ದು, ಅಪಘಾತದಿಂದ ಜೋಸೆಫ್ ರವರ ತುಟಿ ಬಲಗೈಗೆ ರಕ್ತಗಾಯವಾಗಿದ್ದು ಇದಲ್ಲದೇ ಬಲಗಾಲಿಗೆ ಮೂಳೆಮುರಿತದ ಗಾಯವಾಗಿ ಸುರತ್ಕಲ್ ಮುಕ್ಕ ಶೀನಿವಾಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-10-2014 ರಂದು ಬೆಳಿಗ್ಗೆ 09.00 ಗಂಟೆಗೆ ಸುರತ್ಕಲ್ ಶಾರದ ಪ್ರೆಸ್ ಬಳಿ ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ಎಸ್.ಎಂ. ರವರು ಸಹ ಸವಾರರಾಗಿದ್ದ ಕೆಎ.19 .ಇಕೆ.9303 ಮೋಟಾರ್ ಸೈಕಲ್ ಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕಾರು ನಂಬ್ರ ಕೆಎ.19 ಎಮ್ ಪಿ.2044 ನೇ ದನ್ನು ಅದರ ಚಾಲಕ ಗೀತೇಶ್ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಪಿರ್ಯಾದಿದಾರರಿದ್ದ ಬೈಕ್ ಗೆ ಢಿಕ್ಕಿಪಡಿಸಿದ್ದು ಅಪಘಾತದಿಂದ ಬೈಕ್ ಸವಾರ ಜನಿತ್ ರವರ ತಲೆ ಕೈ ಕಾಲು ಹಾಗೂ ಸೋಂಟಕ್ಕೆ ಗುದ್ದಿದ ಹಾಗೂ ರಕ್ತ ಗಾಯಾವಾಗಿದ್ದು ಗಾಯಗೊಂಡ ಜನಿತ್ ರವರು ಮಂಗಳೂರು .ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

4.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 29.09.2014 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ರಫೀಕ್ ರವರು ತನ್ನ ಮಗಳ ಬಾಬ್ತು ಕಾರು ನಂಬ್ರ ಕೆಎ.19.ಎಂ.ಸಿ.5125 ನೇದನ್ನು ಮಂಗಳೂರು ನಗರದ ಕುದ್ರೋಳಿ ಹೆಚ್‌‌.ಬಿ.ಟಿ ಎದುರುಗಡೆ ಪಾರ್ಕ್ಮಾಡಿದ್ದು, ಮದ್ಯಾಹ್ನ ಸಮಯ 12:15 ಗಂಟೆಗೆ ಪಿರ್ಯಾದಿದಾರರು ಡ್ರೈವರ್ಸೀಟಿನ ಬಳಿಯ ಬಾಗಿಲನ್ನು ತೆರೆಯುವರೇ ತನ್ನ ಬಲ ಕೈಯನ್ನು ಹಾಕಿದಾಗ, ಕುದ್ರೋಳಿ ಕಡೆಯಿಂದ ಕಂಡತ್ಪಳ್ಳಿ ಕಡೆಗೆ ಟೆಂಪೋ ನಂಬ್ರ ಕೆ.-21--7581 ನ್ನು ಅದರ ಚಾಲಕರು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು ಬಾಗಿಲು ತೆಗೆಯುವರೇ ಕೈ ಹಾಕಿದ್ದಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೈಯ ಕಿರು ಬೆರಳಿಗೆ ಮತ್ತು ಉಂಗುರ ಬೆರಳಿಗೆ ಮೂಳೆ ಮುರಿತದ ಗಾಯ ಉಂಟಾಗಿರುತ್ತದೆ ಹಾಗೂ ಕಾರಿಗೂ ಜಖಂ ಉಂಟಾಗಿರುತ್ತದೆ. ಬಗ್ಗೆ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ನಗರದ ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ.

 

5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-10-2014 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹೈದರಾಲಿ ರವರು ಕೆಲಸ ಮಾಡುತ್ತಿರುವ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಜಂಕ್ಷನ ಬಳಿಯಿರುವ ನ್ಯಾಷನಲ್ ಹೋಟೆಲ್ ಗೆ ಮುಡಿಪು ದರ್ಕಾಸು ವಾಸಿ ಅಜ್ವಿನ್ ಎಂಬವರು ತಿಂಡಿ ತಿನ್ನಲು ಹೋಗಿದ್ದು, ಪಿರ್ಯಾಧಿದಾರರು ಹಿಂದಿನ ಬಾಕಿ ಹಣವನ್ನು ಕೇಳಿದಾಗ, ಅಜ್ವಿನ್ ನು ಪಿರ್ಯಾದಿದಾರರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಕಾಲರ್ ಪಟ್ಟಿ ಹಿಡಿದು ಎಳೆದು ಹಾಕಿ, ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಕೆನ್ನೆಗೆ ಹೊಡೆದು, ಕಾಲಿನ ತುಳಿದು ಹಲ್ಲೆ ನಡೆಸಿರುತ್ತಾರೆ. ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಹೋಟೆಲ್ ಸಿಬ್ಬಂದಿಗಳೂ ಬಂದು ಗಲಾಟೆಯನ್ನು ಬಿಡಿಸಿದಾಗ ಪಿರ್ಯಾಧಿದಾರರನ್ನು ಉದ್ದೇಶಿಸಿ, ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ.

 

6.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-10-2014 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ 07-10-2014 ರಂದು ಬೆಳಿಗ್ಗೆ 05-00 ಗಂಟೆಯ ಮಧ್ಯೆ ಅವಧಿಯಲ್ಲಿ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಕೆ.ಎಸ್. ರಾವ್ ನಗರ ದಲ್ಲಿರುವ ಪಿರ್ಯಾದಿದಾರರಾದ ಶ್ರೀ ಬಿ.ಎಂ.ಎ. ಖಾದರ್ ರವರ ಮನೆಯ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪಿರ್ಯಾದಿದಾರರ ಬಾಬ್ತು ಕೆಎ-53-ಎಂ-1681ನೇ ನಂಬ್ರದ ಆಲ್ಟೋ ಕಾರಿನ ಹಿಂದುಗಡೆಯ 2 ಟೈರುಗಳು (ಡಿಸ್ಕ್ ಸಮೇತ), ಕಾರಿನೊಳಗಿನ ಸ್ಟೀರಿಯೋ ಮತ್ತು ಮ್ಯಾಟ್‌‌ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ 18,000/- ಆಗಬಹುದು.

 

7.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.10.2014  ರಂದು 19.00 ಗಂಟೆಗೆ ಶಿಮಂತೂರು ಗ್ರಾಮದ ಅಂಗರಗುಡ್ಡೆ ಎಂಬಲ್ಲಿ  ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಮಟ್ಕಾ ಹಣವನ್ನು ಸಂಗ್ರಹಿಸುತ್ತಿದ್ದ  ಆದರ್ಶ ಎಂಬಾತನನ್ನು ಮುಲ್ಕಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಪರಮೇಶ್ವರ ರವರು ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ  510/-- ಮಟ್ಕಾ ಸಂಖ್ಯೆಗಳನ್ನು ಬರೆದಿರುವ ಬಿಳಿ ಹಾಳೆ -1, ಮಟ್ಕಾ ಸಂಖ್ಯೆಗಳನ್ನು ಬರೆಯಲು ಉಪಯೋಗಿಸಿದ ಪೆನ್ನು-1 ಹಾಗೂ ಮೊಬೈಲ್ ಪೋನ್ ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಅರೋಪಿ ಮಟ್ಕಾ ಜೂಜಾಟಕ್ಕಾಗಿ ಹಣವನ್ನು ಸಂಗ್ರಹಿಸಿ ಆರೋಪಿ ಲಿಯೋ ಕಾರ್ನೆಲಿಯೋ ಎಂಬಾತನಿಗೆ ನೀಡುತ್ತಿರುವುದಾಗಿದೆ.

 

8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06/07-10.2014 ರಂದು  ರಾತ್ರಿ  ಯಾರೋ ಕಳ್ಳರು  ಮಂಗಳೂರು  ತಾಲೂಕು  ಪ್ರಾಂತ್ಯ ಗ್ರಾಮದ ಜೈನ ಪೇಟೆ ಎಂಬಲ್ಲಿರುವ  ಹಿರೇಅಮ್ಮನವರ ಬಸದಿಯ  ಗೇಟಿನ  ಬೀಗವನ್ನು  ಮುರಿದು ಒಳ ಪ್ರವೇಶಿಸಿ  ಆವರಣದ ಒಳಗೆ ಪ್ರವೇಶಿಸಿ ಬಳಿಕ ಬಸದಿಯ  ಉತ್ತರ ಬದಿಯ  ಗೋಡೆಯಲ್ಲಿದ್ದ ಮತ್ತು  ಬಸದಿಯ  ತೀರ್ಥಂಕರ ಮಂಟಪದ ಉತ್ತರ ಬದಿಯಲ್ಲಿದ್ದ ಮರದ ಬಾಗಿಲನ್ನು ಬಲವಂತವಾಗಿ ತೆರೆದು ತೀರ್ಥಂಕರ ಮಠದಲ್ಲಿದ್ದ ಸುಮಾರು 1 ಕೆ.ಜಿ  ತೂಕದ ಬೆಳ್ಳಿಯ  ಆರತಿ, ತೀರ್ಥಂಕರ ಮಂಟಪದ ಎದುರು ಇದ್ದ ಗಂದದ ಕುಠೀರದ ಮೇಲೆ ಇದ್ದ ಸುಮಾರು 20 ಗ್ರಾಂ  ತೂಕದ ಬೆಳ್ಳಿಯ ಲೋಟ ಹಾಗೂ ಅಲ್ಲೆ ಅಡ್ಡ ಗೋಡೆಯ ಮೇಲೆ ಇದ್ದ 80 ಗ್ರಾಂ  ತೂಕದ ಬೆಳ್ಳಿಯ  ತಟ್ಟೆ,  ಮತ್ತು  ಬಸದಿಯ ಒಳಗೆ ಘಂಟೆಯ ಮಂಟಪ ಎಂಬಲ್ಲಿದ್ದ ಕಾಣಿಕೆ ಡಬ್ಬಿಯಿಂದ ಸುಮಾರು 25000/- ರೂಪಾಯಿ ನಗದು  ಹಣ ಒಟ್ಟು ಸುಮಾರು 50,000/- ಸೊತ್ತುಗಳನ್ನು ಕಳವು  ಮಾಡಿಕೊಂಡು ಹೋಗಿರುತ್ತಾರೆ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-10-2014 ರಂದು ಸಮಯ ಸುಮಾರು 01-45 ಗಂಟೆಗೆ ಪಿರ್ಯಾದುದಾರರಾದ ಶ್ರೀ ವಿಘ್ನೇಶ್ ಮಯ್ಯಾ ರವರು ಊಟಕ್ಕೆ ಕುಳಿತಿದ್ದ ಸಮಯ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಗಣೇಶ್ಭಟ್‌, ಗಿರೀಶ್ಭಟ್‌, ಹರಿ ಭಟ್‌, ಸುದರ್ಶನ ಬನ್ನಿಂತಾಯ ಎಂಬುವವರು ಅವಾಚ್ಯ ಶಬ್ದಗಳಿಂದ ಬೈದು ಗಣೇಶ್ಭಟ್ಎಂಬುವವರು ಅಲ್ಲಿಯೇ ಇದ್ದ ಮರದ ಸೊಂಟೆಯಿಂದ ಪಿರ್ಯಾದುದಾರರ ಬಲಕೈ ತೊಳಿಗೆ, ಕೋಲುಕೈಗೆ ಬಲವಾಗಿ ಹೊಡೆದು ರಕ್ತಗಾಯವುಂಟು ಮಾಡಿದ್ದಲ್ಲದೆ ಗಿರೀಶ್ಭಟ್‌, ಹರಿಭಟ್‌, ಸುದರ್ಶನ್ಬನ್ನಿಂತಾಯ ರವರು ಪಿರ್ಯಾದುದಾರರ ಕುತ್ತಿಗೆಯನ್ನು ಹಿಡಿದು ಕೈಯಿಂದ ಮುಖಕ್ಕೆ ಹೊಡೆದು ಬೆನ್ನಿಗೆ ಗುದ್ದಿರುತ್ತಾರೆ ನಂತರ ಪಿರ್ಯಾದುದಾರರನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ ಹಲ್ಲೆ ನಡೆಸಿದ ನಂತರ ರಾಜಿ ಪಂಜಾಯಿತಿಗೆ ಬಂದಿದ್ದು ಇದರಲ್ಲಿ ಪಿರ್ಯಾದಿದಾರರಿಗೆ ನ್ಯಾಯ ದೊರಕದೇ ಇರುವುದರಿಂದ ದಿನಾಂಕ 07-10-2014 ರಂದು ಠಾಣೆಗೆ ಬಂದು ದೂರು ನೀಡಿದ್ದಾಗಿರುತ್ತದೆ.

 

10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-10-2014 ರಂದು ತಲಪಾಡಿ ಗ್ರಾಮದ ದೇವಿಪುರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಬಗ್ಗೆ ಪಿರ್ಯಾದುದಾರರಾದ ಶ್ರೀ ಗೀರೀಶ್ ಭಟ್ ರವರು ಅವರ ಅಣ್ಣತಮ್ಮಂದಿರ ಜೊತೆ ದೇವಸ್ಥಾನದಲ್ಲಿ ಸೇರಿದ್ದು ಮದ್ಯಾಹ್ನದ ಮಹಾ ಪೂಜೆಯಾದ ಬಳಿಕ ಅನ್ನಸಂತರ್ಪಣೆ ಇದ್ದು, ಸಮಯ ಸುಮಾರು ಮಧ್ಯಾಹ್ನ 02.00 ಗಂಟೆಗೆ ವಿಘ್ನೇಶ್ ಮಯ್ಯ ರವರು ಸುದರ್ಶನ್ ಬನ್ನಂತಾಯ ರವರನ್ನು ಏಕಾಏಕಿಯಾಗಿ ಕೈಯಿಂದ  ಸುದರ್ಶನ್ ಬನ್ನಂತಾಯರವರಿಗೆ  ಹೊಡೆದಿದ್ದು, ಫಿರ್ಯಾದಿದಾರರು  ಜಾತ್ರೆಯ ಸಮಯ ನಾವು ರೀತಿ ಗಲಾಟೆ ಮಾಡುವುದು ಸರಿಯಲ್ಲ ಎಂದು ತಿಳಿಸಿದಾಗ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಮಗೆ ಬಹಳ ಅಹಂಕಾರ ಇದೆ ಎಂದು ಬೈಯುತ್ತಾ ಆತನ ಕೈಯಲ್ಲಿದ್ದ ಸ್ಟೀಲ್ ಸೌಟ್ ನಿಂದ ಫಿರ್ಯಾದಿದಾರರ ಕಣ್ಣಿನ ಬಳಿ ಹೊಡೆದನು. ಸದ್ರಿ ಸಮಯ  ಬಿಡಿಸಲು ಬಂದ ಫಿರ್ಯಾದಿದಾರರ ತಮ್ಮ ಗಣೇಶ್ ಭಟ್, ಅಣ್ಣ ಹರಿ ಭಟ್ ರವರಿಗೂ ಸೌಟ್ ನಿಂದ ಬೆನ್ನಿಗೆ ಮತ್ತು ಕೈಕಾಲುಗಳಿಗೆ ಹೊಡೆದಿರುವುದನ್ನು ಕಂಡ ದೇವಸ್ಥಾನದಲ್ಲಿದ್ದ ಸಾರ್ವಜನಿಕರು ಬರುತ್ತಿರುವಾಗ ಆತನು ಪಾತ್ರೆಯಲ್ಲಿದ್ದ ಸಾಂಬಾರನ್ನು ಚೆಲ್ಲಿಕೊಂಡು ಫಿರ್ಯಾದಿದಾರರನ್ನು ಉದ್ದೇಶಿಸಿ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.  ಹಲ್ಲೆ ನಡೆದ ಬಳಿಕ ರಾಜಿ ಪಂಚಾತಿಗೆ ಬಂದಿದ್ದು, ಆದರೆ ಫಿರ್ಯಾದಿದಾರರಿಗೆ ಸರಿಯಾದ ನ್ಯಾಯ ಸಿಗದೇ ಇದ್ದುದರಿಂದ ದಿನಾಂಕ 07-10-2014 ರಂದು ಠಾಣೆಗೆ ಬಂದು ತಡವಾಗಿ ದೂರು ನೀಡಿರುವುದಾಗಿದೆ.

 

11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 6-10-2014 ರಂದು  19.30  ಗಂಟೆಯ ನಂತರದಿಂದ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹದಿಂದ ಆಕಾಶ್‌ (16) ಎಂಬಾತನು ಕಾಣೆಯಾಗಿದ್ದು, ಕಾಣೆಯಾದ ಆಕಾಶ್ರವರನ್ನು ಪಾಲಕರು ತಮ್ಮ ಸಂಬಂಧಿಕರ ಮನೆ, ಆಸುಪಾಸಿನಲ್ಲಿ ಹಾಗೂ ಆತನ ಸ್ನೇಹಿತರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗದೇ ಇರುವುದಾಗಿದೆ. ಕಾಣೆಯಾದ ಆಕಾಶ್ ರವರ ಚಹರೆ ವಿವರ: ಹೆಸರು: ಆಕಾಶ್, (16), ಎತ್ತರ: 5'10", ಬಣ್ಣ: ಗೋಧಿ ಮೈಬಣ್ಣ,  ಧರಿಸಿದ ಬಟ್ಟೆ ಬರೆ: ಕಂದು ಬಣ್ಣದ ಟೀ ಶರ್ಟ್, ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಮಾತನಾಡುವ ಭಾಷೆ: ಕನ್ನಡ, ತುಳು, ಇಂಗ್ಲೀಷ್, ಹಿಂದಿ. ಎಡ ಕಾಲಿನ ಮೊಣ ಗಂಟಿನಲ್ಲಿ ಹಳೆಯ ಗಾಯದ ಗುರುತು ಇದೆ.

 

12.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 5-10-2014 ಸಂಜೆ 7-00 ಗಂಟೆಯಿಂದ 7-10-2014 ಸಂಜೆ 3-00 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಡಿ.ಹೆಚ್. ಕಂಪೌಂಡು ಡೋರ್ ನಂ. 5-119/1 ಫಿರ್ಯಾದಿದಾರರಾದ ಶ್ರೀ ಹಸನ್ಬಾವ ಡಿ.ಎಂ. ರವರ ವಾಸ್ತವ್ಯದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರ ಮನೆಯ ಹಿಂಬಾಗಿಲನ್ನು ಯಾವುದೋ ಆಯುಧದಿಂದ ಮುರಿದು ತೆಗೆದು ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ ಬೆಡ್ರೂಮ್ನಲ್ಲಿಟ್ಟಿದ್ದ ಗೋದ್ರೆಜ್ಕಪಾಟಿನ ಬಾಗಿಲನ್ನು ಬಲಾತ್ಕಾರವಾಗಿ ಮೀಟಿ ತೆರೆದು ಪ್ಲಾಸ್ಟಿಕ್ ಕರಡಿಗೆಯಲ್ಲಿದ್ದ ಸುಮಾರು 60 ಸಾವಿರ ರೂಪಾಯಿ ಬೆಲೆಬಾಳುವ ಸುಮಾರು 3 ಪವನ್ತೂಕದ ಮಗುವಿನ ಚಿನ್ನದ 2 ಕೈ ಬಳೆಗಳು ಹಾಗೂ ಒಂದು ಜೊತೆ ಕಿವಿಯ ಓಲೆ ಮತ್ತು ಮನೆಯ ಕಂಪೌಂಡಿನ ಒಳಗೆ ಇಟ್ಟಿದ್ದ  ಸುಮಾರು 40 ಸಾವಿರ ರೂಪಾಯಿ ಬೆಲೆ ಬಾಳುವ ಕೆಎ-19-ಇಇ-1904 ನೇ ನಂಬ್ರದ ಯಮಹಾ ಎಸ್ಝಡ್ಆರ್ಮೋಟಾರು ಸೈಕಲನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ.1,00,000-00 ಆಗಬಹುದು.

 

13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.10.2014 ರಂದು ಸಹ್ಯಾದ್ರಿ ಕಾಲೇಜಿನ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 75 ರಸ್ತೆಯ ಬದಿಯಲ್ಲಿ  ಪಿರ್ಯಾಧಿದಾರರಾದ ಶ್ರೀ ಶಿವಕುಮಾರ್ ರವರು ಟೆಂಪೋವೊಂದರಲ್ಲಿ ಕುಳಿತುಕೊಂಡಿದ್ದ ವೇಳೆ ಬೆಳಿಗ್ಗೆ ಸುಮಾರು  11.30 ಗಂಟೆಗೆ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ಸುಜಾತ ಎಂಬವರು ಬಸ್ಸ್‌‌ ಸ್ಟಾಪ್‌‌ ಕಡೆಗೆ ಬರುವರೇ ರಾಹೆ:75 ರಸ್ತೆಯನ್ನು ದಾಟುತ್ತಿರುವ ಸಮಯ  ಫರಂಗಿಪೆಟೆ ಕಡೆಯಿಂದ  ಮಂಗಳೂರು ಕಡೆಗೆ  ಕೆಎ19ಪಿ5631 ನೇ ಆಲ್ಟೋ ಕಾರನ್ನು  ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆ ದಾಟುತ್ತಿದ್ದ ಸುಜಾತ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ಕಾರಿನ ಮೇಲೆಕ್ಕೆ ಎಸೆಯಲ್ಪಟ್ಟು ಅಲ್ಲಿಂದ ರಸ್ತೆಗೆ ಬಿದ್ದು ಅವರ ತಲೆಗೆ ಕಾಲಿಗೆ ಕೈಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ.

No comments:

Post a Comment