ದೈನಂದಿನ ಅಪರಾದ ವರದಿ.
ದಿನಾಂಕ 22.10.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-10-2014ರಂದು ಫಿರ್ಯಾದಿದಾರರಾದ ಶ್ರೀ ಕೌಶಿಕ್ ಕುಮಾರ್ ರವರು ತನ್ನ ತಂದೆಯವರ ಬಾಬ್ತು KA-20 U- 2265 ನೇ ನಂಬ್ರದ ಬೈಕಿನ ಸವಾರರಾಗಿ ಕಾರ್ತಿಕ್ ಸಹಸವಾರರಾಗಿ ಕಿನ್ನಿಗೋಳಿ-ಮುಲ್ಕಿ ರಸ್ತೆಯ S-ಕೋಡಿ ಸರ್ಕಲ್ ಬಳಿಗೆ ಸಂಜೆ 06-45 ಗಂಟೆಗೆ ತುಪಿದಾಗ ಪಕ್ಷಿಕೆರೆ ಕಡೆಯಿಂದ ಕಿನ್ನಿಗೋಳಿ ಕಡೆಗೆ KA- 19 D- 8534 ನೇ ನಂಬ್ರದ ಆಟೋರಿಕ್ಷಾವೊಂದರ ಚಾಲಕ ಅಜೀದ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಫಿರ್ಯಾದಿದಾರರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರ ಎಡಗೈ ಮೂಳೆ ಮುರಿತದ ಹಾಗೂ ಸಹಸವಾರರಾದ ಕಾರ್ತಿಕ್ ರವರಿಗೆ ಎಡಗೈ ಹಾಗೂ ಎಡಗಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 20.10.2014 ರಂದು ಸಂಜೆ 18.00 ಗಂಟೆಗೆ ಮಂಗಳೂರು ನಗರದ ಆಶೋಕ ನಗರ - ಉರ್ವಾ ಮಾರ್ಕೆಟ್ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪಿರ್ಯಾದಿದಾರರಾದ ಶ್ರೀ ಪ್ರವೀಣ್ ಪಿ. ರವರು ತನ್ನ ಬಾಬ್ತು ಬುಲೆಟ್ ಮೋಟಾರು ಸೈಕಲ್ ಕೆಎ.19.ಈಎಲ್ 3726ನೇದನ್ನು ಉರ್ವಾ ಮಾರ್ಕೆಟ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ರಾಧಕೃಷ್ಣ ಮಂದಿರದ ಬಳಿ ತಲುಪಿದ ಸಮಯ ನಂಬ್ರ ತಿಳಿಯದ ಒಂದು ಮೋಟಾರು ಸೈಕಲನ್ನು ಅದರ ಸವಾರರು ಉರ್ವಾ ಮಾರ್ಕೆಟ್ ಕಡೆಯಿಂದ ಅಶೋಕ ನಗರ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ ಸೈಕಲ್ ಸವಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಪರಿಣಾಮ ಪಿರ್ಯಾದಿದಾರರಿಗೆ ಎಡ ಭುಜದ ಮೂಳೆ ಮುರಿತದ ಗಾಯ ಮತ್ತು ತಲೆಯ ಎಡ ಬದಿಗೆ ರಕ್ತ ಗಾಯ ಮತ್ತು ಬಲ ಕಾಲಿನ ಮೊಣಗಂಟಿಗೆ ಹಾಗೂ ಗಲ್ಲಕ್ಕೆ ಹಾಗೂ ಎಡ ಕಾಲಿನ ಎರಡೂ ಕಾಲಿಗೂ ತರಚಿದ ಗಾಯವಾಗಿ ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.10.2014 ರಂದು ಸಂಜೆ 7.10 ಗಂಟೆಗೆ ಮಂಗಳೂರು ನಗರದ ಸರ್ಕಾರಿ ಕಾಲೇಜ್ ಬಳಿ ಹಂಪನಕಟ್ಟೆ ಕಡೆಯಿಂದ ಎ.ಬಿ ಶೆಟ್ಟಿ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ KA19-EK-5160 ನಂಬ್ರದ ಸ್ಕೂಟರ್ ನ್ನು ಆರೋಫಿಯು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿ ಮಗುವನ್ನು ಹಿಡಿದುಕೊಂಡು ನಿಂತಿದ್ದ ಫಿರ್ಯಾದುದಾರರಾದ ಶ್ರೀಮತಿ ರೇಣುಕಾ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರ ತಲೆಗೆ, ಬಲ ಕೈಗೆ, ಎಡಕಾಲಿನ ತೊಡೆಗೆ, ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿದ್ದು, 2 ವರ್ಷ ಪ್ರಾಯದ ಫಿರ್ಯಾದುದಾರರ ಮಗು ಶಿವನಂದ್ ರವರ ಮುಖಕ್ಕೆ ತರಚಿದ ಗಾಯವಾಗಿದ್ದು, ಮಗು ಶಿವನಂದ್ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.10.2014 ರಂದು ಬೆಳಿಗ್ಗೆ ಫಿರ್ಯಾದಿದಾರರಾದ ಶ್ರೀ ಮಂಜುನಾಥ ಯಮನಪ್ಪ ರವರು ಮತ್ತು ಅವರ ಸಂಬಂಧಿಕರು ಬಂಟ್ವಾಳ ತಾಲೂಕು, ಫಜೀರು ಗ್ರಾಮದ, ಭರತ್‌ರಾಜ್ ಎಂಬವರ ಬಾಬ್ತು ಫಜೀರು ಕಪ್ಪು ಕಲ್ಲಿನ ಕೋರೆಯಲ್ಲಿ ಕೂಲಿ ಮಾಡಿಕೊಂಡಿರುವಾಗ ಬೆಳಿಗ್ಗೆ ಸುಮಾರು 09:00 ಗಂಟೆಗೆ ಟಿಪ್ಪರ್ ಲಾರಿ ನಂಬ್ರ ಸಿಟಿಎ-9852 ನೇಯವದನ್ನು ಅದರ ಚಾಲಕ ಮೋಹನದಾಸ್ ಎಂಬಾತನು ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸಿ ಕಲ್ಲುರಾಶಿಯ ಬಳಿಯಲ್ಲಿ ಕೆಲಸ ಮಾಡುತ್ತಿದ್ದ ಮುತ್ತವ್ವ ಎಂಬವರಿಗೆ ಲಾರಿಯ ಹಿಂಭಾಗವು ತಾಗಿ ಕಲ್ಲಿನ ರಾಶಿಯಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಹೊರ ತೆಗೆಯಲು ಫಿರ್ಯಾದಿದಾರರು ಪ್ರಯತ್ನಿಸಿದಾಗ ಹಿಮ್ಮುಖವಾಗಿ ಚಲಿಸಿದ ಲಾರಿಯ ಹಿಂಭಾಗ ಫಿರ್ಯಾದಿದಾರರ ತಲೆಗೆ, ಎಡಕೈಗೆ ಎಡಕಾಲಿನ ಪಾದಕ್ಕೆ ರಕ್ತಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷೀಸಿ ಗಾಯಾಳು ಮುತ್ತವ್ವಳು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಘಟನೆಗೆ ಕಾರಣವೇನೆಂದರೆ ಲಾರಿ ನಂಬ್ರ ಸಿಟಿಎ-9852 ರ ಚಾಲಕ ಮೋಹನದಾಸ್ ಲಾರಿಯನ್ನು ನಿರ್ಲಕ್ಷತನದಿಂದ ಹಿಮ್ಮುಖವಾಗಿ ಯಾವುದೇ ಸೂಚನೆ ನೀಡದೇ ಚಲಾಯಿಸಿದ ಪರಿಣಾಮ ಹಾಗೂ ಕೋರೆಯ ಮೇಲ್ವಿಚಾರಕರು ಸರಿಯಾದ ಮುಂಜಾಗ್ರತಾ ಕ್ರಮವನ್ನು ವಹಿಸಿಕೊಳ್ಳದಿರುವುದೇ ಕಾರಣವಾಗಿರುತ್ತದೆ.
5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಜೆಸಿಂತಾ ಕ್ವಾರ್ಡರ್ಸ್ ರವರ ಬಾಬ್ತು ಮುಲ್ಕಿ ಆರ್.ಆರ್ ಟವರ್ ಎಂಬಲ್ಲಿರುವ ಸುರಭಿ ಎಲೆಕ್ಟ್ರಾನಿಕ್ ಮತ್ತು ಪರ್ನಿಚರ್ ಅಂಗಡಿಗೆ ದಿನಾಂಕ 20-10-2014 ರಂದು ರಾತ್ರಿ 9.30 ಗಂಟೆಗೆ ಬೀಗ ಹಾಕಿ ಹೋಗಿದ್ದು ಮರುದಿನ ದಿನಾಂಕ 21-10-2014 ರಂದು ಬೆಳಿಗ್ಗೆ ಪಿರ್ಯಾದಿದಾರರು ಮತ್ತು ಕೆಲಸದವರು ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶಟರ್ ಬಾಗಿಲು ತೆರೆದ ಸ್ಥಿತಿಯಲ್ಲಿ ಕಂಡು ಬಂದಿದ್ದು ಒಳಗೆ ಹೋಗಿ ನೋಡಿದಾಗ ಡ್ರಾವರಿನಲ್ಲಿ ಇಟ್ಟಿದ್ದ ದಿನಾಂಕ 20-10-2014 ದಿನದ ವ್ಯಾಪಾರದ ನಗದು ಹಣ ರೂ 75,000/- ನ್ನು ಯಾರೋ ಕಳ್ಳರು ಒಳ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂಗಡಿಯಲ್ಲಿ ಇಟ್ಟಿದ್ದ ಇತರ ಯಾವುದೇ ಸಾಮಾಗ್ರಿಗಳು ಕಳ್ಳತನ ಆಗಿರುವುದಿಲ್ಲ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕೃಷ್ಣಾ ಕೆ. ರವರ ಮಗ ಪ್ರಾಯ 23 ವರ್ಷದ ಮಿಥುನ್ ಕುಮಾರ್ ಎಂಬವರಿಗೆ ದಿನಾಂಕ 04-06-2014 ರಂದು ಆತನ ಮೊಬೈಲ್ ಗೆ ಒಂದು ಫೋನ್ ಕಾಲ್ ಬಂದ ಕೂಡಲೇ ಇಂಟರ್ ವ್ಯೂವ್ ಇದೆ ಬೆಂಗಳೂರಿಗೆ ಇಂಟರ್ ವ್ಯೂವ್ ಅಟೆಂಡ್ ಮಾಡಿ ಬರಲು ಹೋಗಬೇಕಾಗಿದೆ ಎಂದು ಹೇಳಿ ಮನೆಯಿಂದ ಹೋದವನು ಈ ತನಕ ಮನೆಗೆ ಬಾರದೇ ಇದ್ದು, ಪಿರ್ಯಾದಿಯವರು ಸಂಬಂಧಿಕರ ಮನೆಯಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿ ಈವರೆಗೆ ಪತ್ತೆಯಾಗದೇ ಇರುವುದಾಗಿದೆ.
7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮನೋಜ್ ಎಂಬವರು ಬೀದಿ ವ್ಯಾಪರ ಮಡುತ್ತಿದ್ದು, ಎಂದಿನಂತೆ ರಾತ್ರಿ ಸಮಯ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಮೀನು ಬಾಕ್ಸುಗಳನ್ನು ಇಟ್ಟು, ಚಾ ಕುಡಿಯಲು ಮಂಗಳೂರು ಸೆಂಟ್ರಲ್ ಮಾರ್ಕೆಟ್ ಬಳಿ ಹೋಗುತ್ತಿದ್ದಾಗ ದಿನಾಂಕ 22-10-2014 ರಂದು 02:30 ಗಂಟೆಗೆ ಸೆಂಟ್ರಲ್ ಮಾರ್ಕೆಟ್ ನ ಕಸ ಬಿಸಾಡುವ ಸ್ಥಳದಲ್ಲಿ 3 ಮೋಟಾರ್ ಸೈಕಲ್ ನಲ್ಲಿ 6 ಮಂದಿ ಅಪರಿಚಿತರು ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ವಿನಾಕಾರಣ ಕೈಯಿಂದ ಹಲ್ಲೆ ನಡೆಸಿ ನೆಲಕ್ಕೆ ಬೀಳಿಸಿ ನೆಲದಲ್ಲಿ ಉರುಳಾಡಿಸಿ, ಕಾಲಿನಿಂದ ತುಳಿದು ಜೆಲ್ಲಿ ಕಲ್ಲಿನಿಂದ ಪಿರ್ಯಾದಿದಾರರ ತಲೆಗೆ ಹಲ್ಲೆ ನಡೆಸಿ ರಕ್ತಗಾಯ ಮಾಡಿದಲ್ಲದೇ ಉರುಳಾಟ ದ ಸಮಯ ಪಿರ್ಯಾದಿದಾರರಲ್ಲಿದ್ದ ರೂ. 8,000/- ನಗದು ಹಣ ಕಳೆದು ಹೋಗಿರುವುದಾಗಿದೆ.
8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜಯಂತ್ ಶೆಟ್ಟಿ ರವರ ತಮ್ಮ ಅಶೋಕ್ ಶೆಟ್ಟಿ ( 41 ) ಎಂಬವವನು ದಿನಾಂಕ 22.09.2014 ರಂದು ಬಾಯಿಯಲ್ಲಿ ಹುಣ್ಣು ಆದ ಔಷದಿ ತರಲೆಂದು ಮಂಗಳೂರಿಗೆ ಹೋದವನು ವಾಪಾಸ್ಸು ಮನಗೆ ಬಾರದೇ ಕಾಣೆಯಾಗಿರುತ್ತಾನೆ. ಈತನನ್ನು ಪಿರ್ಯಾದಿದಾರರ ಸಂಬಂಧಿಕರ ಮನೆಯಲ್ಲಿ ಹಾಗೂ ಈ ಹಿಂದೆ ಆತ ಕೆಲಸ ಮಾಡುತ್ತಿದ್ದ ಮುಂಬಯಿ ಮತ್ತು ಪುಣೆಗೆ ಹೋಗಿರಬಹುದೆಂದು ಯೋಚಿಸಿ ಅಲ್ಲಿ ಹುಡುಕಾಡಿದ್ದು ಈ ವರೆಗೆ ಆತನು ಪತ್ತೆಯಾಗಿರುವುದಿಲ್ಲ. ಕಾಣೆಯಾದ ಅಶೋಕ್ ಶೆಟ್ಟಿ ಎಂಬವನ ಗಂಡಸಿನ ಚಹರೆ ವಿವರ : ಹೆಸರು: ಅಶೋಕ್ ಶೆಟ್ಟಿ, ಪ್ರಾಯ: 41 ವರ್ಷ, 5 ಅಡಿ, 6 ಇಂಚು ಎತ್ತರ, ಗೋದಿ ಮೈಬಣ್ಣ, , ಎರಡೂ ಕೈಯಲ್ಲಿ ಹಚ್ಚೆಯ ಗುರುತು ಇರುತ್ತದೆ. ಬಿಕಾಂ ಪದವಿದರನಾಗಿದ್ದು ಹಿಂದಿ, ಕನ್ನಡ, ತುಳು, ಇಂಗ್ಲೀಷ್, ಮರಾಠಿ ಭಾಷೆಗಳನ್ನು ಮಾತಾಡುತ್ತಾರೆ, ಹೋಗುವಾಗ ಕೆಂಪು ಬಣ್ಣದ ಪುಲ್ ಹ್ಯಾಂಡ್ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
No comments:
Post a Comment