ದೈನಂದಿನ ಅಪರಾದ ವರದಿ.
ದಿನಾಂಕ 27.10.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/10/2014 ರಂದು ಸುಮಾರು 21:00 ಗಂಟೆಗೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಬಿಪಿನ್ ಚಂದ್ರ ಶೆಟ್ಟಿ ರವರು ತನ್ನ ಬಾಬ್ತು ಕಾರು ನಂಬ್ರ KA-19-MC-9081 ನೇದರಲ್ಲಿ ಬಿಜೈ ಕಡೆಯಿಂದ ಜ್ಯೋತಿಯ ಕಡೆಗೆ ಹೋಗುತ್ತಿರುವಾಗ ಫಿರ್ಯಾದಿಯ ಕಾರಿನ ಹಿಂದುಗಡೆಯಿಂದ ಅಂದರೆ ಪಿ ವಿ ಎಸ್ ನಿಂದ ರಾಧಾ ಮೆಡಿಕಲ್ಸ ಕಡೆಗೆ ಬಸ್ಸು ನಂಬ್ರ KA-19-AA-6119 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಮಾಡುವ ಹಾಗೆ ಬಂದು ಕರಂಗಲಪಾಡಿಯ ರಾಧಾ ಮೆಡಿಕಲ್ಸ ಹತ್ತಿರ ಮುಂಭಾಗ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕ ನಮ್ಮ ಕಾರಿನ ಬಳಿ ಬಂದು ಅವಾಚ್ಯ ಶಬ್ದಗಳಿಂದ ಫಿರ್ಯಾದಿ ಹಾಗೂ ಅವರ ಹೆಂಡತಿಗೆ ಬೈದಿರುತ್ತಾರೆ ನಂತರ ಬಸ್ಸಿನ ಚಾಲಕನ ಹೆಸರು ಪ್ರವಿಣ ತಿಳಿದು ಬಂದಿರುತ್ತದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-10-2014 ರಂದು ಬೆಳಿಗ್ಗೆ 11.00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ರೋಶನ್ ಡಿ'ಸೋಜಾ ರವರು ಮನೆಯಲ್ಲಿ ಇಲ್ಲದ ಸಮಯ ಪಿರ್ಯಾದಿದಾರರ ತಾಯಿ ಪ್ರಾಯ ಸುಮಾರು 58 ವರ್ಷದ ಶ್ರೀಮತಿ ಲೆತೀಶಾ ಕುವೆಲ್ಲೊ ಎಂಬವರು ಅವರ ಗಂಡನಲ್ಲಿ ಮುಲ್ಕಿಯ ಸರಕಾರಿ ಆಸ್ಪತ್ರೆಗೆ ಔಷಧಿ ತರಲು ಹೋಗುವುದಾಗಿ ತಿಳಿಸಿ ಹೊರಟು ಹೋಗಿದ್ದು, ಸಂಜೆಯಾದರರು ಮನೆಗೆ ಬಾರದೆ ಇದ್ದು, ಪಿರ್ಯಾದಿದಾರರು ಸಂಬಂಧಿಕರ ಮನೆಯಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿದರು ಈವರೆಗೆ ಪತ್ತೆಯಾಗಿರುವುದಿಲ್ಲ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-10-2014 ರಂದು ರಾತ್ರಿ 21-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶ್ರೀಮ ಬಿ.ಶೆಟ್ಟಿ ಬಿಜೈಯಿಂದ ಜ್ಯೋತಿಗೆ ಬರುವ ಮಧ್ಯದಲ್ಲಿ ಪಿವಿಎಸ್ ವೃತ್ತದ ಬಳಿ, ಸದರಿ ಪಿರ್ಯಾದಿಯ ಕಾರು ಕೆಟ್ಟು ನಿಂತ ಕಾರಣ ಪಿರ್ಯಾದಿಯು ಕಾರಿನ ಹಿಂಬದಿ ನಿಂತಿರುವ ಸಮಯ KA-19 AA 6119 ನೆದರ ಕಂಡಕ್ಟರ್ ಪಿರ್ಯಾದಿಯ ಕಾರಿನ ಹಿಂಬದಿ ನಿಲ್ಲಿಸಿ ಹೋಗುವಂತೆ ಸೂಚಿಸಿ ಡ್ರೈವರ್ ನು ವೇಗವಾಗಿ ತಿರುಗಿಸಿ ಪಿರ್ಯಾದಿಯ ಕಾರಿಗೆ ತಾಗುವ ಹಾಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿ ರಾಧಾ ಮೆಡಿಕಲ್ಸ್ ಮುಂದೆ ಮಧ್ಯ ರಸ್ತೆಯಲ್ಲಿ ಪಿರ್ಯಾದಿಯ ಕಾರಿನ ಮುಂದೆ ನಿಲ್ಲಿಸಿ ಕೆಳಗೆ ಇಳಿದು ಪಿರ್ಯಾದಿದಾರರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೋಗಿರುತ್ತಾನೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಫರ್ಝೀನ್ ಎಂಬುವಳಿಗೆ ಸಜ್ಜಾದ್ ಎಂಬವನೊಂದಿಗೆ ದಿನಾಂಕ: 28.11.2013 ರಂದು ರಂದು ಮೇಘಾ ಪ್ಲಾಝಾ ಎಂಬಲ್ಲಿ ಮದುವೆಯಾಗಿದ್ದು ಮದುವೆಯ ಸಮಯ 55 ಪವನ್ ಚಿನ್ನಭರಣ ಕೊಟ್ಟಿದ್ದು, ಮದುವೆಯಾದ 10 ದಿನದಲ್ಲಿಯೇ ಸಣ್ಣ ವಿಚಾರಕ್ಕೆ ತಕರಾರು ಮಾಡಿ ಗಲಾಟೆ ಮಾಡಿದಲ್ಲದೆ, ಸುಮಾರು 9 ಪವನ್ ತೂಕದ ಚಿನ್ನದ ಸರವನ್ನು ಮಾರಾಟ ಮಾಡಿರುತ್ತಾನೆ. ಇದರಿಂದ ಭಯಗೊಂಡ ಪಿರ್ಯಾದಿದಾರರು ಸ್ವಲ್ಪ ಆಭರಣವನ್ನು ತಾಯಿಯ ಮನೆಯಲ್ಲಿ ಕೊಂಡು ಹೋಗಿ ಇಟ್ಟಿದ್ದು, ಈ ಆಭರಣವನ್ನು ವಾಪಾಸ್ಸು ತರುವಂತೆ ಪೀಡಿಸುತ್ತಿದ್ದುದಲ್ಲದೆ, ಪಿರ್ಯಾದಿಯ ತಾಯಿಗೆ ಪೋನ್ ಮಾಡಿ ಆಭರಣವನ್ನು ತರುವಂತೆ ಒತ್ತಡ ಹಾಕಿದ್ದು, ಮದುವೆ ಆದ 3 ತಿಂಗಳಲ್ಲಿ ಗರ್ಭಿಣಿ ಆಗಿದ್ದು, ಆರೋಪಿ ಸಜ್ಜನ್ ಈ ಮಗು ನನ್ನದ್ದಲ್ಲ ಎಂದು ಮಾನಸಿಕ ಕಿರುಕುಳ ನೀಡಿದ್ದು, ಈ ಮಗು ಸ್ವಲ್ಪ ದಿನದಲ್ಲಿ ಗರ್ಭಪಾತ ಆಗಿರುತ್ತದೆ. ಬಳಿಕ ಪುನಃ ಗರ್ಭವತಿ ಆಗಿದ್ದು, ವೈದ್ಯರಲ್ಲಿ ತೋರಿಸಿದಾಗ ಮಗು ಆರೋಗ್ಯ ಆಗಿಲ್ಲವೆಂದು ಆಸ್ಪತ್ರೆಯಲ್ಲಿ DNC ಮಾಡಿಸಲಾಗಿರುತ್ತದೆ. ಬಳಿಕ ಸುಮಾರು 25 ದಿನ ತಾಯಿಯ ಮನೆಯಲ್ಲಿ ವಿಶ್ರಾಂತಿ ಪಡೆದು ಗಂಡನ ಮನೆಗೆ ಬಂದಾಗ ಚಿನ್ನಾಭರಣ ತರುವಂತೆ ಪೀಡಿಸಿ ಮಾನಸಿಕ ದೈಹಿಕ ಕಿರುಕುಳ ನೀಡಿರುತ್ತಾರೆ. ದಿನಾಂಕ 16.10.2014 ರಂದು ಸಂಜೆ ಸುಮಾರು 5:30 ಗಂಟೆಗೆ ಮನೆಗೆ ಬಂದ ಆರೋಪಿ ಸಜ್ಜನ್ ಹುಸೈನ್ ಬಂಗಾರ ತರುವಂತೆ ಹೇಳಿ ಅವಾಚ್ಯ ಶಬದ್ದಿಂದ ಬೈದು ಕಾಲಿನಿಂದ ಶೂ ತೆಗೆದು ಪಿರ್ಯಾದಿಯ ಎಡ ಕೆಣ್ಣೆಗೆ, ಎದೆಗೆ, ಬಲಕೈಗೆ, ಹೊಡೆದಿರುತ್ತಾರೆ. ಆ ಸಮಯ ಸಜ್ಜನ್ ಹುಸೈನ್ ನ ತಂದೆ ಪಿರ್ಯಾದಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಕೈ ಆರೋಪಿಯ ತಾಯಿ ನಜೀಮಾ ರವರು ಕೋಣೆಯಿಂದ ಹೊರಗೆ ಬಾರದಂತೆ ಬಾಗಿಲು ಹಾಕಿ ಮನೆಯಲ್ಲಿ ಇದ್ದ ನಾದಿನಿ ಶಬಾನಾ ಪಿರ್ಯಾದಿಗೆ ಆರೋಪಿ ಹೊಡೆಯುದನ್ನು ನೋಡಿಯೂ ಕೂಡಾ ಸುಮ್ಮನಿದ್ದು, ಆರೋಪಿಗೆ ಸಹಕರಿಸಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ದಿನಾಂಕ 25-10-2014 ರಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಯೇನಾಪೋಯಾ ಆಸ್ಪತ್ರೆಗೆ ದಾಖಲಾಗಿರುವುದಾಗಿ ಆರೋಪಿ ಸಜ್ಜನ್ ಹುಸೈನ್ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿರುವುದಲ್ಲದೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು ಉಳಿದ ಆರೋಪಿಗಳು ಆರೋಪಿಗೆ ಪ್ರೋತ್ಸಾಹ ನೀಡಿರುತ್ತಾರೆ.
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-10-2014 ರಂದು ರಾತ್ರಿ 23-00 ಗಂಟೆಯಿಂದ ದಿನಾಂಕ 26-10-2014 ರಂದು 03-00 ಗಂಟೆಯ ಮದ್ಯೆ ಯಾರೋ ಕಳ್ಳರು ಸುರತ್ಕಲ್ ಗ್ರಾಮದ ಶ್ರೀನಿವಾಸ ನಗರದಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ನಝೀಯಾ ತಬುಶುಮ್ ರವರ ಮನೆಯ ಹಿಂಬದಿ ಬಾಗಿಲನ್ನು ಕಿಟಕಿಯ ಮೂಲಕ ತೆಗೆದು ಒಳ ಪ್ರವೇಶಿಸಿ ಕಪಾಟಿನಲ್ಲಿದ್ದ 1) 30 ಗ್ರಾಂ ತೂಕದ ಬಂಗಾರದ ಬಳೆಗಳು -4, 2) 6 ಗ್ರಾಂ ತೂಕದ ಕಿವಿಯ ಬಂಗಾರದ ಓಲೆ-1 ಜೊತೆ., 3) 16 ಗ್ರಾಂ ತೂಕದ ಕರಿಮಣಿ ಸರ-1, 4) ನಗದು ಹಣ 25000/-ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ 1,25,000/- ರೂ ಆಗಬಹುದು.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.10.2014 ರಂದು ಪಿರ್ಯಾದುದಾರರಾದ ಶ್ರೀ ವಾಯ್.ವಿ. ಕಲ್ಯಾಣ ರವರು ಮಂಗಳೂರು ನಗರದ ಯೆಯ್ಯಾಡಿ ಮಧುವನ್ ಬಾರ್ ಹತ್ತಿರದ ಅಂಗಡಿಯಿಂದ ಸಾಮಾನುಗಳನ್ನು ಖರೀದಿಸಿ ತನ್ನ ರೂಂ ಕಡೆಗೆ ನಡೆದುಕೊಂಡು ಬರುತ್ತಾ ಯೆಯ್ಯಾಡಿ ರಿಕ್ಷಾ ಪಾರ್ಕ್ ಹತ್ತಿರ ರಸ್ತೆ ದಾಟಿ ಮಧ್ಯದಲ್ಲಿರುವ ಡಿವೈಡರಿನಿಂದ ಕೆಳಗೆ ಇಳಿದು ರಸ್ತೆ ದಾಟುವರೇ ನಿಂತುಕೊಂಡಿದ್ದ ಸಮಯ ರಾತ್ರಿ ಸುಮಾರು 9:30 ಗಂಟೆ ಸಮಯಕ್ಕೆ ಪದವಿನಂಗಡಿ ಕಡೆಯಿಂದ ಕೆ.ಪಿ.ಟಿ ಕಡೆಗೆ KL-14-Q-3836ನೇ ನಂಬ್ರದ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿವೈಡರಿನ ಹತ್ತಿರ ಡಾಮಾರು ರಸ್ತೆಯಲ್ಲಿ ನಿಂತಿದ್ದ ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಮಗಿಚಿ ಬಿದ್ದು, ಪಿರ್ಯಾದುದಾರರ ಎರಡೂ ಕೈಗಳಿಗೆ ಮತ್ತು ಎಡ ಕಾಲಿಗೆ ಮೂಳೆ ಮುರಿತದ ಹಾಗೂ ಮುಖಕ್ಕೆ ತರಚಿದ ಗಾಯಗೊಂಡವರನ್ನು ಅವರ ಗೆಳೆಯ ವಿಶಾಲ್ ಎಂಬವರು ಚಿಕಿತ್ಸೆಯ ಬಗ್ಗೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಳಿಸಿರುವುದಾಗಿದೆ.
No comments:
Post a Comment