ದೈನಂದಿನ ಅಪರಾದ ವರದಿ.
ದಿನಾಂಕ 04.10.2014 ರ 18:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 2 |
ಸುಲಿಗೆ ಪ್ರಕರಣ | : | 2 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 3 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಪ್ರಜ್ಞಾ ಶೆಣೈ ರವರು ತಾನು 2007 ನೇ ಇಸವಿಯಲ್ಲಿ ಪುಂಡಲೀಕ ಶೆಣೈ ಎಂಬುವರೊಂದಿಗೆ ಮದುವೆಯಾಗಿದ್ದು , ಎರಡು ಜನ ಅವಳಿ ಮಕ್ಕಳು ಇರುತ್ತಾರೆ. ಪಿರ್ಯದಿದಾರರ ಗಂಡನ ಅಕ್ಕ ಕೀರ್ತಿ ಎಂಬವರು ಅಗಾಗ್ಗೆ ಮನೆಗೆ ಬರುತ್ತಿದ್ದು , ಪಿರ್ಯಾದಿದಾರರ ಬಗ್ಗೆ ಅತ್ತೆ ಗಾಯಾತ್ರಿ ರವರ ಬಳಿ ಇಲ್ಲಸಲ್ಲದ ಚಾಡಿ ಮಾತುಗಳನ್ನು ಹೇಳಿ ವೈಮನಸ್ಸು ಉಂಟು ಮಾಡುತ್ತಿದ್ದರಿಂದ ಅತ್ತೆಯು ಪಿರ್ಯಾದಿದಾರರಿಗೆ ಬೈದು ಹೀಯಾಳಿಸಿ ಹೊಡೆದು ಮಾನಸಿಕ ಹಿಂಸೆ ನೀಡುತ್ತಿದ್ದರು. ದಿನಾಂಕ-01-10-2014 ರಂದು ಅತ್ತೆ ಹೇಳಿ ಕೊಟ್ಟು ಗಂಡ ಕೈಯಿಂದ ಕೆನ್ನೆಗೆ ಹೊಡೆದಿರುತ್ತಾರೆ. ದಿನಾಂಕ 02-10-14 ರಂದು ಬೆಳಿಗ್ಗೆ ಗಂಡ, ಅತ್ತೆ ಮಾವ, ನಾದಿನಿ ಸೇರಿಕೊಂಡು ಪಿರ್ಯಾದಿದಾರರನ್ನು ಮನೆಯಿಂದ ಹೊರ ಹಾಕಿದ್ದು ರಾತ್ರಿ 19.30 ಗಂಟೆ ಮನೆಯೊಳಗೆ ಹೋದಾಗ ಅತ್ತೆ, ಮಾವ, ನಾದಿನಿ, ನಾದಿನಿ ಗಂಡ ಪಿರ್ಯಾದಿದಾರರನ್ನು ಹಿಡಿದು ಕೊಂಡು ಬಲವಂತವಾಗಿ ಸುಮಾರು 20 ಮಾತ್ರೆಗಳನ್ನು ನುಂಗುವಂತೆ ಮಾಡಿದ್ದು ಪುನ ರಾತ್ರಿ 8.00 ಗಂಟೆಗೆ 10 ಮಾತ್ರೆಗಳನ್ನು ಅವರೆಲ್ಲರೂ ಸೇರಿ ಬಲವಂತವಾಗಿ ಮಾತ್ರೆ ತಿನ್ನಿಸಿರುತ್ತಾರೆ. ಇದರಿಂದ ಪಿರ್ಯಾದಿದಾರರು ಮನೆಯಿಂದ ಹೊರಬಂದು ಪಿರ್ಯಾದಿದಾರರ ಅಕ್ಕನ ಗಂಡನಾದ ರಾಮಕೃಷ್ಣ ಶೆಣೈ ಎಂಬವರಿಗೆ ಪೋನ್ ಮಾಡಿದ್ದು ಅವರು ಬಂದು ಚಿಕಿತ್ಸೆಗೆ ಸೇರಿಸಿರುತ್ತಾರೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-10.2014 ರಂದು ಪಿರ್ಯಾದಿದಾರರಾದ ಶ್ರೀಮತಿ ಹೇಮಲತಾ ಶೆಟ್ಟಿ ರವರು ಅವರ ಅಮ್ಮ ಶ್ರೀಮತಿ ಪ್ರೇಮಾ, ಚಿಕ್ಕಮ್ಮ ಶ್ರೀಮತಿ ಗೀತಾ, ಗೀತಾರವರ ಮಗಳು ಉಷಾ ಹಾಗೂ ನೆರೆಯ ಶ್ರೀಮತಿ ಪ್ರಮೀಳಾರವರೊಂದಿಗೆ ಕೊಟ್ಟಾರದಲ್ಲಿರುವ ವಿದ್ಯಾ ಸರಸ್ವತಿ ದೇವಸ್ಥಾನಕ್ಕೆ ಹೋಗಿ ವಾಪಾಸು ಮನೆಯ ಕಡೆಗೆ ಉರ್ವಾಸ್ಟೋರ್-ಕೊಟ್ಟಾರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಾ, ರಾತ್ರಿ ಸಮಯ ಸುಮಾರು 9:30 ಗಂಟೆಗೆ ಕೊಟ್ಟಾರದಲ್ಲಿನ ಜಿಂಜರ್ ಹೋಟೆಲ್ ಎದುರುಗಡೆ ತಲುಪಿದಾಗ, ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ಉರ್ವಾಸ್ಟೋರ್ ಕಡೆಯಿಂದ ದ್ವಿಚಕ್ರ ವಾಹನ ನಂಬ್ರ ಕೆ.ಎ-19-ಇ.ಎಲ್-7987 ನೇದನ್ನು ಸವಾರನು ಹಿಂಬದಿಯಲ್ಲಿ ಒಬ್ಬರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಚಿಕ್ಕಮ್ಮ ಶ್ರೀಮತಿ ಗೀತಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ಗೀತಾರವರು ಮತ್ತು ದ್ವಿಚಕ್ರ ಸವಾರ ಹಾಗೂ ಹಿಂಬದಿಯ ಸಹಸವಾರನು ರಸ್ತೆಗೆ ಬಿದ್ದು , ಗೀತಾರವರ ಬಲಕಾಲಿನ ಹಿಮ್ಮಡಿ, ಎರಡೂ ಕೈಗಳ ಮಣಿಗಂಟಿನ ಬಳಿ, ಎಡಕಣ್ಣಿನ ಬಳಿ ಮತ್ತು ಶರೀರದ ಎಡಬದಿಗೆ ಗುದ್ದಿದ ತರದ ನೋವು ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ಒಂದು ಆಟೋ ರಿಕ್ಷಾದಲ್ಲಿ ನಗರದ ಎ.ಜೆ ಆಸ್ಪತ್ರೆಯಲ್ಲಿ ಒಳ-ರೋಗಿಯಾಗಿ ದಾಖಲಿಸಿರುವುದಾಗಿದೆ.
3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಶ್ಲೋಹಿತ, (76 ವರ್ಷ) ಎಂಬವರು ತನ್ನ ತಮ್ಮನಾದ ವೇಣುಗೋಪಾಲ ಶೆಟ್ಟಿರವರೊಂದಿಗೆ ವಾಸವಾಗಿದ್ದು, ನಿವೃತ್ತಿ ಜೀವನ ನಡೆಸುತ್ತಿರುವುದಾಗಿದ್ದು. ದಿನಾಂಕ 13-09-2014 ರಂದು ರಾತ್ರಿ 8-30 ಗಂಟೆಗೆ ನಾನು ತಮ್ಮನೊಂದಿಗೆ ಬೆಂಗಳೂರಿಗೆ ಹೋಗಿದ್ದು ತಮ್ಮ ನು ದಿನಾಂಕ 23-09-2014 ರಂದು ವಾಪಾಸ್ಸು ಮನೆಗೆ ಬಂದಿದ್ದು ಬಳಿಕ ದಿನಾಂಕ 27-09-2014 ರಂದು ಸಂಜೆ 4-00 ಗಂಟೆಗೆ ಮತ್ತೆ ಬೆಂಗಳೂರಿಗೆ ತೆರಳಿರುತ್ತಾರೆ. ದಿನಾಂಕ 02-10-2014 ರಂದು ಪಿರ್ಯಾದಿದಾರರ ತಮ್ಮನು ಮಂಗಳೂರಿಗೆ ಬಂದಿದ್ದು ಮನೆಗೆ ಹೋಗಿ ಮನೆಯ ಬೀಗ ತೆರೆದು ಬಾಗಿಲು ದೂಡಿದಾಗ ಅದು ತೆರೆಯದೇ ಇದ್ದು ಬಳಿಕ ಜೋರಾಗಿ ದೂಡಿದಾಗ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡಿದಾಗ ಮನೆಯ ಹಿಂಬದಿ ಬಾಗಿಲು ತೆರೆದುಕೊಂಡಿರುವುದು ಕಂಡು ಬಂತು, ಬಳಿಕ ಬೆಡ್ರೂಮಿಗೆ ಹೋಗಿ ನೋಡಿದಾಗ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಕಂಡು ಬಂದಿದ್ದು ನಂತರ ತನ್ನ ರೂಮಿಗೆ ಬಂದು ನೋಡಿದಾಗ ಅಲ್ಲಿಯೂ ಕೂಡ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿರುವುದಾಗಿ ಪಿರ್ಯಾದಿದಾರರಿಗೆ ಫೋನ್ ಮಾಡಿ ತಿಳಿಸಿದರು. ನಂತರ ಪಿರ್ಯಾದಿದಾರರು ದಿನಾಂಕ 03-10-2014 ರಂದು ಬೆಂಗಳೂರಿನಿಂದ ಮನೆಗೆ ಬಂದು ನೊಡಿದಾಗ ಬೆಡ್ರೂಮಿನಲ್ಲಿದ್ದ ಕಬ್ಬಿಣದ ಕಪಾಟನ್ನು ಮಲಗುವ ಮಂಚದ ಮೇಲೆ ಹಾಕಿ ಅದನ್ನು ಯಾವುದೋ ಆಯುಧ ಬಳಸಿ ತೆರೆದಿರುವುದು ಕಂಡು ಬಂದಿದ್ದು, ಕಬ್ಬಿಣದ ಕಪಾಟು ಹಾಗೂ ಮರದ ಕಪಾಟಿನಲ್ಲಿದ್ದ ಚಿನ್ನದ ಆಭರಣಗಳು, ನಗದು ಹಣ ಮತ್ತು ಲ್ಯಾಪ್ ಟಾಪ್‌ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇವುಗಳ ಒಟ್ಟು ಅಂದಾಜು ಮೌಲ್ಯ 2,81,000 ಆಗಬಹುದು.
4.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01.10.2014 ರಂದು ರಾತ್ರಿ 09.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಶ್ವಿನ್ ಕುಮಾರ್ ಎಂ. ರವರು ಹುಬ್ಬಳ್ಳಿಯ ಸ್ವಂತ ಅಕ್ಕನ ಮನೆಗೆ ಕುಟುಂಬದೊಂದಿಗೆ ತೆರಳಿದ್ದು, ದಿನಾಂಕ 02.10.2014 ರಂದು ಮಧ್ಯರಾತ್ರಿ 12.37 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರ 9448255198 ನೇದಕ್ಕೆ ಮನೆಯಲ್ಲಿ ಅಳವಡಿಸಲಾದ ಸೆಕ್ಯೂರಿಟಿ ಸೆನ್ಸಾರ್ ಅಲರ್ಟ್ ಸಿಸ್ಟಮ್ ನಿಂದ ಕರೆ ಹಾಗೂ ಸಂದೇಶ ಬಂದಿದ್ದು, ಈ ಸಮಯದಲ್ಲಿ ಪಿರ್ಯಾದಿದಾರರು ಮಲಗಿದ್ದು, ಮಲಗುವ ಮುನ್ನ ಮೊಬೈಲ್ ನ್ನು ಸೈಲೆಂಟ್ ಮೋಡ್ -ನಲ್ಲಿರಿಸಿದ್ದರಿಂದ ಮೊಬೈಲ್ ಗೆ ಕರೆ ಹಾಗೂ ಸಂದೇಶ ಬಂದಿರುವುದು ಗೊತ್ತಾಗಿರುವುದಿಲ್ಲ. ದಿನಾಂಕ 03.10.2014 ರಂದು ಬೆಳಿಗ್ಗೆ ಸುಮಾರು 06.58 ಗಂಟೆಗೆ ತನ್ನ ಮೊಬೈಲ್ ಗೆ ಸೆಕ್ಯೂರಿಟಿ ಸೆನ್ಸಾರ್ ಅಲರ್ಟ್ ಸಿಸ್ಟಮ್ ನಿಂದ ಬಂದಿದ್ದ ಕರೆ ಹಾಗೂ ಸಂದೇಶ ವನ್ನು ನೋಡಿದ್ದು, ಆ ಕೂಡಲೇ ಮಂಗಳೂರಿನ ತಮ್ಮ ನೆರೆಮನೆಯವರಾದ ಎ.ಎಸ್. ಭಟ್ ಎಂಬುವವರ ಮೊ ನಂಬ್ರ 9448529226 ನೇದಕ್ಕೆ ಕರೆ ಮಾಡಿ, ಸಂದೇಶ ಬಂದ ವಿಚಾರವನ್ನು ತಿಳಿಸಿ ಮನೆ ಕಡೆಗೆ ಹೋಗುವರೇ ತಿಳಿಸಿದ್ದು, ನಂತರ ಎ.ಎಸ್. ಭಟ್ ರವರು ಪಿರ್ಯಾದಿದಾರರ ಮನೆಯನ್ನು ನೋಡಲಾಗಿ ಮನೆಯ ಎದುರಿನ ಬಾಗಿಲನ್ನು ಯಾವುದೋ ಬಲವಾದ ಆಯುಧದಿಂದ ಮುರಿದಿದ್ದು ಯಾರೋ ಕಳ್ಳರು ಒಳಪ್ರವೇಶಿಸಿರುವುದಾಗಿ ತಿಳಿಸಿದ್ದು ಆ ಕೂಡಲೇ ಹುಬ್ಬಳ್ಳಿಯಿಂದ ವಾಪಾಸ್ಸು ಮಂಗಳೂರಿಗೆ ಮಧ್ಯಾಹ್ನ ಬಂದಿದ್ದು ಮನೆಯನ್ನು ನೋಡಲಾಗಿ ಮನೆಯ ಎಲ್ಲಾ ರೂಮಿನಲ್ಲಿದ್ದ ಬಟ್ಟೆ ಹಾಗೂ ಇತರೆ ಎಲ್ಲಾವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಪಿರ್ಯಾದಿದಾರರ ತಂದೆಯ ಬೆಡ್ ರೂಮಿನ ಮರದ ಕಪಾಟಿನಲ್ಲಿದ್ದ ಬಂಗಾರದ ಒಡವೆಗಳು, ಮೊಬೈಲ್ ಫೋನ್, ನಗದು ಹಣವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ 2,90,000 ಆಗಬಹುದು.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02/03-10-2014 ರಂದು ಪಿರ್ಯಾದಿದಾರರಾದ ಶ್ರೀ ರುಷಿ ಬಾಗ್ ರವರು ಮತ್ತು ಶಂಕರ್ ಲಾಲ್ ಬೆರ್ಸಾ ರವರು ರಾತ್ರಿ 8-00 ಗಂಟೆಯಿಂದ ದಿನಾಂಕ 03-10-2014 ರಂದು ಬೆಳಿಗ್ಗೆ 06-00 ಗಂಟೆಯ ವರೆಗೆ ಕುದುರೆಮುಖ ಜಂಕ್ಷನ್ ನಿಂದ ಐ,ಓ,ಸಿ ರಸ್ತೆಯ ಮಧ್ಯ ರಸ್ತೆಯ ಬದಿಯಲ್ಲಿರುವ ಸೆಕ್ಯೂರಿಟಿ ಬೂತಿನಲ್ಲಿ ಎಂ.ಸಿ.ಎಫ್. ಕಂಪೆನಿಗೆ ಸಂಬಂದಿಸಿದ ಪೈಪ್ ಲೈನ್ ನನ್ನು ಕಾವಲು ಕಾಯುತ್ತಿದ್ದ ಸಮಯ ಬೆಳಿಗ್ಗೆ 05-30 ಗಂಟೆಗೆ ಕೆಂಪು ಬಣ್ಣದ ಮೋಟಾರು ಸೈಕಲ್ ಒಂದರಲ್ಲಿ ತಣ್ಣೀರುಬಾವಿ ಕಡೆಯಿಂದ 3 ಮಂದಿ ಅಪರಿಚಿತ ಯುವಕರು ಪಿರ್ಯಾದಿದಾರರು ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಬೂತ್ ನ ಕಡೆಗೆ ಬಂದವರು ಮೋಟಾರು ಸೈಕಲ್ ನ್ನು ನಿಲ್ಲಿಸಿ ಪಿರ್ಯಾದಿದಾರರಲ್ಲಿ ಕುಡಿಯಲು ನೀರು ಕೊಡುವಂತೆ ಕೇಳಿದರು. ಅದಕ್ಕೆ ಪಿರ್ಯಾದಿದಾರರು ಸೆಕ್ಯೂರಿಟಿ ಬೂತಿನ ಒಳಗಿನಿಂದಲೆ ನೀರು ಇಲ್ಲ ಎಂದು ಹೇಳಿದಾಗ ಮೋಟಾರು ಸೈಕಲಿನಲ್ಲಿ ಬಂದ 3 ಮಂದಿ ಅಪರಿಚಿತ ಯುವಕರು ಪಿರ್ಯದಿದಾರರನ್ನು ಉದ್ದೇಶಿಸಿ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು 3 ಮಂದಿ ಕೂಡಾ ಕೈಗಳಿಂದ ಸೆಕ್ಯೂರಿಟಿ ಬೂತಿಗೆ ಸುತ್ತಲು ಅಳವಡಿಸಿದ್ದ ಗಾಜುಗಳನ್ನು ಒಡೆದಿದ್ದು, ಅದನ್ನು ತಡೆಯಲು ಹೋದ ಪಿರ್ಯಾದಿಗೆ ಮತ್ತು ಶಂಕರ್ ಲಾಲ್ ಬೆರ್ಸಾ ಅವರಿಗೆ ಅಪರಿಚಿತ ಯುವಕರ ಪೈಕಿ ಓರ್ವನ್ನು ತನ್ನ ಸೊಂಟದಲ್ಲಿ ಇರಿಸಿಕೊಂಡಿದ್ದ ಉದ್ದನೆಯ ಚೂರಿಯನ್ನು ತೆಗೆದು ಏಕಾ ಏಕಿ ಪಿರ್ಯಾದಿದಾರರ ಎರಡು ಕೈಗಳ ತೋಳಿಗೆ ಮತ್ತು ಸೊಂಟದ ಎಡ ಬದಿಗೆ ಚೂರಿಯಿಂದ ಗೀರಿದನು. ಇದನ್ನು ತಡೆಯಲು ಬಂದ ಶಂಕರ್ ಲಾಲ್ ಬೆರ್ಸಾನಿಗೂ ಕೂಡಾ ಅಪರಿಚಿತ ಯುವಕನು ಅದೇ ಚೂರಿಯಿಂದ ಬಿಸಿ ಬಲ ಕೈಯ ಮಣಿಗಂಟಿನ ಬಳಿಗೆ ಮತ್ತು ಬಲ ಕಾಲಿನ ತೊಡೆಗೆ ತಿವಿದನು ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಅಪರಿಚಿತ ಯುವರು ಬಂದಿದ್ದ ಮೋಟಾರು ಸೈಕಲಿನಲ್ಲಿ ತಣ್ಣೀರುಬಾವಿ ಕಡೆಗೆ ಹೊರಟು ಹೋಗಿರುವುದಾಗಿದೆ.
6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-10-2014 ರಂದು ಮಧ್ಯಾಹ್ನ 1:00 ಗಂಟೆಯಿಂದ 1:30 ಗಂಟೆಯ ಮಧ್ಯ ಅವಧಿಯಲ್ಲಿ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಬದ್ರಿಯಾ ಮಸೀದಿ ವಠಾರದಲ್ಲಿ ಪಿರ್ಯಾದಿದಾರರಾದ ಶ್ರೀ ಯು.ಕೆ. ಮೋನು ರವರ ಬಾಬ್ತು ಪಾರ್ಕ್ ಮಾಡಿದ BMW ಕಾರು ನಂಬ್ರ ಕೆಎ-19-ಎಂಪಿ-9986 ನೇದರ 2 Logo ಗಳನ್ನು ಯಾರೋ ಕಳ್ಳರು ರಾಡಿನಿಂದ ಜಜ್ಜಿ ಕಾರಿಗೆ ಹಾನಿ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳವಾದ Logo ಗಳ ಮೌಲ್ಯ ತಿಳಿಯದೇ ಇದ್ದು, ಮುಂದಕ್ಕೆ ತಿಳಿಸುವುದಾಗಿ ತಿಳಿಸಿರುತ್ತಾರೆ.
7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರೇಮಾನಂದ ರವರು ತಾನು ಚಾಲಕನಾಗಿ ದುಡಿದುಕೊಂಡಿರುವ KL 57A 1219ನೇ ಲೈಲ್ಯಾಂಡ್ ಟಾರ್ಸಿ ಲಾರಿಯಲ್ಲಿ ಕ್ಲೀನರ್ ರಾಗಿನ್ ರವರೊಂದಿಗೆ ತನ್ನ ಮಾಲೀಕ ಮುಸ್ತಫಾ ರವರು ತಿಳಿಸಿದಂತೆ ದಿನಾಂಕ 02-10-2014ರಂದು ಬೆಳಿಗ್ಗೆ 06-00 ಗಂಟೆಗೆ ಗೋವಾದಿಂದ ಕಬ್ಬಿಣದ ಸರಳುಗಳನ್ನು ಲೋಡ್ ಮಾಡಿಕೊಂಡು ಕ್ಯಾಲಿಕಟ್ ಗೆ ತೆರಳುತ್ತಿದ್ದು, ದಾರಿ ಮಧ್ಯೆ ರಾತ್ರಿ ವಿಶ್ರಾಂತಿಸುವರೇ ಮಂಗಳೂರು ನಗರದ ಬಿ.ಎಸ್.ಎನ್.ಎಲ್ ಕಛೇರಿಯಿಂದ ಸ್ವಲ್ಪ ಮುಂದೆ ರಾ.ಹೆ. 66 ರ ರಸ್ತೆ ಬದಿಯಲ್ಲಿ ಲಾರಿಯನ್ನು ಪಾರ್ಕ್ ಮಾಡಿ ಲಾರಿಯಲ್ಲಿ ಮಲಗಿದ್ದ ಸಮಯ ಸುಮಾರು 02-50 ಗಂಟೆಗೆ ಸುಮಾರು 25 ರಿಂದ 28 ವಯಸ್ಸಿನ ಯಾರೋ ಮೂವರು ಅಪರಿಚಿತ ವ್ಯಕ್ತಿಗಳು ತಮ್ಮನ್ನು ಎಬ್ಬಿಸಿ ಅವರುಗಳ ಪೈಕಿ ಓರ್ವ ಡ್ರೈವರ್ ಸೀಟ್ ಕಡೆಯಿಂದಲೂ ಮತ್ತಿಬ್ಬರು ಕ್ಲೀನರ್ ಸೀಟ್ ಕಡೆಯಿಂದಲೂ ಲಾರಿಯೊಳಗೆ ಬಂದು ಹಣವನ್ನು ಕೊಡುವಂತೆ ಮಲಯಾಳಿ ಭಾಷೆಯಲ್ಲಿ ತಿಳಿಸಿದ್ದು, ಹಣ ಕೊಡಲು ನಿರಾಕರಿಸಿದಾಗ ಅವರುಗಳ ಪೈಕಿ ಓರ್ವ ಚೂರಿಯನ್ನು ತೋರಿಸಿ ಪಿರ್ಯಾದಿದಾರರ ಕಿಸೆಯಲ್ಲಿದ್ದ ನಗದು ಹಣ ರೂ.15,000/-ವನ್ನು ಹಾಗೂ ನೋಕಿಯಾ ಮೊಬೈಲ್ ಫೋನ್ ನ್ನು ಬಲಾತ್ಕಾರವಾಗಿ ಕಿತ್ತುಕೊಂಡಿದ್ದು, ಈ ಬಗ್ಗೆ ಪ್ರತಿರೋಧ ವ್ಯಕ್ತಪಡಿಸಿದ ಸಮಯ ಕ್ಲೀನರ್ ರಾಗಿನ್ ರವರಿಗೆ ಚೂರಿ ತೋರಿಸಿ ಜೀವ ಬೆದರಿಕೆಯೊಡ್ಡಿದ್ದು ಸದ್ರಿಯವರುಗಳು ಸ್ವಲ್ಪ ಸಮಯದ ನಂತರ KA 19 5607ನೇ ಬಿಳಿ ಬಣ್ಣದ ಕಾರು ಹತ್ತಿ ಕೊಟ್ಟಾರ ಕಡೆಗೆ ಪರಾರಿಯಾಗಿರುವುದಾಗಿ ಪಕ್ಕದ ಟ್ಯಾಂಕರಿನವರಿಂದ ತಿಳಿದು ಬಂದಿರುವುದಾಗಿದೆ.
8.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರಯಾಂಜನ್ ರವರು ತಾನು ಚಾಲಕನಾಗಿ ದುಡಿದುಕೊಂಡಿರುವ KA 01 AD 2873ನೇ LPG ಗ್ಯಾಸ್ ಟ್ಯಾಂಕರಿನಲ್ಲಿ ದಿನಾಂಕ 02-10-2014 ರಂದು MRPL ನಿಂದ ಗ್ಯಾಸ್ ತುಂಬಿಸಿಕೊಂಡು ಕ್ಲೀನರ್ ಸಕಲ್ ದೀಪ್ ಕುಮಾರ್ ರವರೊಂದಿಗೆ ಚೆನ್ನೈಗೆ ತೆರಳುತ್ತಿದ್ದು, ದಾರಿ ಮಧ್ಯೆ ರಾತ್ರಿ ವಿಶ್ರಾಂತಿಸುವರೇ ಮಂಗಳೂರು ನಗರದ ಬಿ.ಎಸ್.ಎನ್.ಎಲ್ ಕಛೇರಿಯಿಂದ ಸ್ವಲ್ಪ ಮುಂದೆ ರಾ.ಹೆ. 66 ರ ರಸ್ತೆ ಬದಿಯಲ್ಲಿ ಲಾರಿಯನ್ನು ಪಾರ್ಕ್ ಮಾಡಿ ಲಾರಿಯಲ್ಲಿ ಮಲಗಿದ್ದ ಸಮಯ ಸುಮಾರು 03-00 ಗಂಟೆಗೆ ಪಿರ್ಯಾದಿದಾರರ ಕಾಲಿಗೆ ಯಾರೋ ಯಾವುದೋ ಚೂಪಾದ ಆಯುಧದಿಂದ ಚುಚ್ಚಿದಂತಾಗಿ ನೋವಿನಿಂದ ಎದ್ದಿದ್ದು ಅದೇ ಸಮಯ ಕ್ಲೀನರ್ ಕೂಡಾ ಎದ್ದಿದ್ದು ನೋಡಲಾಗಿ ಸುಮಾರು 25 ರಿಂದ 28 ವಯಸ್ಸಿನ ಯಾರೋ ಮೂವರು ಅಪರಿಚಿತ ವ್ಯಕ್ತಿಗಳ ಪೈಕಿ ಓರ್ವ ಡ್ರೈವರ್ ಸೀಟ್ ಕಡೆಯಿಂದಲೂ ಮತ್ತಿಬ್ಬರು ಕ್ಲೀನರ್ ಸೀಟ್ ಕಡೆಯಿಂದಲೂ ಲಾರಿಯೊಳಗೆ ಬಂದಿದ್ದು ಏಕಾಏಕಿ ಪಿರ್ಯಾದಿದಾರರಿಗೆ ಹಾಗೂ ಕ್ಲೀನರ್ ಗೆ ಹಲ್ಲೆ ನಡೆಸಿ ಪಿರ್ಯಾದಿದಾರರ ಕಿಸೆಯಲ್ಲಿದ ಸುಮಾರು 7,000/- ರೂ ನಗದು ಹಣವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಅವರುಗಳ ಪೈಕಿ ಓರ್ವ ಚೂರಿಯಿಂದ ಕ್ಲೀನರ್ ಸಕಲ್ ದೀಪ್ ಕುಮಾರ್ ರವರಿಗೆ ಇರಿಯಲು ಬಂದಾಗ ಸಕಲ್ ದೀಪ್ ಕುಮಾರ್ ರವರು ಪ್ರತಿರೋಧ ವ್ಯಕ್ತ ಪಡಿಸಿ ಚೂರಿಯನ್ನು ಹಿಡಿದಿಟ್ಟಿದ್ದು, ಸದ್ರಿಯವರುಗಳು ಪಿರ್ಯಾದಿದಾರರಿಗೆ ಹಾಗೂ ಕ್ಲೀನರ್ ಗೆ ಹಲ್ಲೆ ನಡೆಸಿ ದೂಡಿ ಹಾಕಿ ಟ್ಯಾಂಕರಿನಿಂದ ಇಳಿದು ಟ್ಯಾಂಕರಿನ ಹಿಂಭಾಗದಲ್ಲಿ ನಿಲ್ಲಿಸಿದ್ದ KA 19 5607ನೇ ಬಿಳಿ ಬಣ್ಣದ ಕಾರು ಹತ್ತಿ ಕೊಟ್ಟಾರ ಕಡೆಗೆ ಪರಾರಿಯಾಗಿರುತ್ತಾರೆ, ಸದ್ರಿ ವ್ಯಕ್ತಿಗಳು ಇನ್ನೊಂದು ಪಕ್ಕದ ಲಾರಿಯವರಿಂದಲೂ ಇದೇ ರೀತಿ ಲೂಟಿಗೈದಿರುವ ಬಗ್ಗೆ ಸದ್ರಿ ಲಾರಿಯವರಿಂದ ತಿಳಿದು ಬಂದಿರುವುದಾಗಿದೆ.
9.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04.10.2014 ರಂದು ಪಿರ್ಯಾದಿದಾರರಾದ ಭಾರತ್ ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ: ಕೆಎ-19-ಇಕೆ-1442ನ್ನು ಪಿರ್ಯಾದಿದಾರರು ಅವರ ಮನೆಯ ಕಡೆಯಿಂದ ಮೂಡಬಿದ್ರೆ ಕಡೆಗೆ ಚಲಾಯಿಸಿಕೊಂಡು ಸಂಪಿಗೆ ಮಾವಿನ ಕಟ್ಟೆ ಎಂಬಲ್ಲಿಗೆ ತಲಪುವಾಗ ಸಮಯ ಸುಮಾರು 10.30 ಗಂಟೆಗೆ ಮಾವಿನಕಟ್ಟೆ ಕ್ರಾಸ್ ರಸ್ತೆಯಿಂದ ಅಟೋ ರಿಕ್ಷಾ ನಂಬ್ರ: ಕೆಎ-19-ಎಎ-5152 ನೇಯದರ ಚಾಲಕನು ತನ್ನ ಬಾಬ್ತು ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಭುಜಕ್ಕೆ ಮತ್ತು ಕೈಗೆ ಗುದ್ದಿದ ಗಾಯವಾಗಿರುತ್ತದೆ. ಮತ್ತು ಬೈಕ್ ಕೂಡಾ ಜಖಂ ಗೊಂಡಿದ್ದು, ಮೂಡಬಿದ್ರೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿರುತ್ತಾರೆ.
10.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-10-2014 ರಂದು ಬೆಳಿಗ್ಗೆ 11-10 ಗಂಟೆಯಿಂದ ಅಪರಾಹ್ನ 1-00 ಗಂಟೆ ಮದ್ಯೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ಬಿ. ಹರೀಶ್ ರಾವ್ ರವರ ಮನೆಯ ಹಿಂಬದಿ ಬಾಗಿಲಿನ ಮೂಲಕ ಒಳ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು 11000/- ರೂ ನಗದು ಹಣ ಹಾಗೂ ಸುಮಾರು 1,75,000/-ರೂ ಬೆಲೆ ಬಾಳುವ 70 ಗ್ರಾಂ ತೂಕದ ಚಿನ್ನಾಭರಣಗಳನ್ನು (1 ಜೊತೆ ಬೆಂಡೋಲೆ ಸುಮಾರು 4 ಗ್ರಾಂ, 1 ಉಂಗುರ ಸುಮಾರು 4 ಗ್ರಾಂ, 1 ನೆಕ್ಲೇಸ್ ಸುಮಾರು 6 ಗ್ರಾಂ, 2 ಬಳೆಗಳು ಸುಮಾರು 20 ಗ್ರಾಂ, 1 ಮುತ್ತಿನ ಸರ ಸುಮಾರು 16 ಗ್ರಾಂ, 1 ಲಕ್ಷ್ಮಿ ಪೆಂಡೆಂಟ್ ಸರ ಸುಮಾರು 20 ಗ್ರಾಂ) ಕಳವು ಮಾಡಿಕೊಂಡು ಹೋಗಿರುವುದಾಗಿದೆ.
11.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03/10/2014 ರಂದು ಪಿರ್ಯಾದಿದಾರರಾದ ಶ್ರೀ ಅನ್ಸಾರ್ ಖಾನ್ ರವರು ವಿಜಯ ಮಸಾಲ್ ವನ್ನು ಸೇಲ್ ವ್ಯವಹಾರ ಮಾಡಿಕೊಂಡಿದ್ದು. ತನ್ನ ಪಾರ್ಟ್ನರ್ ಶೇಖರ್ ಹೆಗಡೆ ಎಂಬುವರ ಜೊತೆ ಸುರಲ್ಪಾಡಿ, ಗುರುಕಂಬ್ಳ ಅಡ್ಡ ರಸ್ತೆಯ ಮದ್ಯೆದಲ್ಲಿ ವ್ಯವಹಾರದ ಬಗ್ಗೆ ತನ್ನ ಬಾಬ್ತು ಕೆಎ:19 ಡಿ:1352 ನೇ ಟೆಂಪೋವನ್ನು ನಿಲ್ಲಿಸಿಕೊಂಡು ಮಾತಾನಾಡುತ್ತಿದ್ದಾಗ. ಅಲ್ಲಿಗೆ ನಾರಾಯಣ ಗೌಡ ನ ಮಗ ಹೊನ್ನಯ್ಯ ಮತ್ತು ಬೊಳಪ್ಪಗೌಡ ನ ಮಗ ಹಾಗೂ ಇತರ ಇಬ್ಬರು ಬೈಕ್ ನಲ್ಲಿ ಬಂದು ಟೆಂಪೋ ಚೆಕ್ ಮಾಡಲಿಕ್ಕೀದೇ ಓಪನ್ ಮಾಡಿ ಎಂದು ಪಿರ್ಯಾದಿದಾರರಲ್ಲಿ ಕೇಳಿದಾಗ, ಅದಕ್ಕೆ ಪಿರ್ಯಾದಿದಾರರು ನನ್ನ ಟೆಂಪೊ ಚೆಕ್ ಮಾಡಲಿಕ್ಕೆ ನೀನು ಯಾರು? ಎಂದು ಹೇಳಿದಾಗ ಆರೋಪಿಗಳೂ ಪಿರ್ಯಾದಿದಾರರನ್ನು ಶೇಖರ ಹೆಗಡೆ ಎಂಬುವರನ್ನು "ಓಪನ್ ಮಲ್ಪು ಗಾಡಿನ್" ಎಂದು ತುಳುವಿನಲ್ಲಿ ಅವಾಚ್ಯಶಬ್ದಗಳಿಂದ ಬೈದು ಅಲ್ಲಿಂದ ಶೇಖರ ಹೆಗಡೆ ರವರು ಟೆಂಫೋವನ್ನು ಚಲಾಯಿಸಿಕೊಂಡು ಕೈಕಂಬ ಕಡೆ ಹೋಗುತ್ತಿದ್ದಾಗ ಬೈಕನಲ್ಲಿ ಬಂದ ಆರೋಪಿಗಳೂ ಕಲ್ಲು ಎಸೆದ ಪರಿಣಾಮ ಟೆಂಪೋದ ಬಲ ಬದಿಯ ಸೈಡ್ ಮೀರರ್ ಜಖಂಗೊಂಡಿರುತ್ತದೆ.
12.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಡೇವಿಡ್ ಡಿ'ಸೋಜಾ ರವರು ಉಳ್ಳಾಲ ಹೊಯಿಗೆ ವಾಸಿ ಪ್ರವೀಣ್ ವೇಗಸ್ ರವರ ಬಾಬ್ತು ಪರ್ಲ್ ಎಂಬ ನಾಡ ದೋಣಿ ಆರ್.ಸಿ. ನಂಬ್ರ ಐಎನ್ ಡಿ ಕೆಎ-01-ಎಂಒ- 2852 ರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಇವರು ದಿನಾಂಕ 30.09.2014 ರಂದು 02.00 ಗಂಟೆಯ ಹೊತ್ತಿಗೆ ಕಲ್ಲಾಪು ವಾಸಿ ದಿ: ಮಾರ್ಷಲ್ ಪೆರಾವೋ ರವರ ಮಗ 45 ವರ್ಷ ಪ್ರಾಯದ ಸಿರಿಲ್ ಪೆರಾವೋ ಎಂಬವರ ಜೊತೆಗೆ ಮಧ್ಯಾಹ್ನ 2.00 ಗಂಟೆಗೆ ಅರಬಿ ಸಮುದ್ರಕ್ಕೆ ಮೀನುಗಾರಿಕೆಯ ಬಗ್ಗೆ ಉಳ್ಳಾಲ ಹೊಯಿಗೆ ಎಂಬಲ್ಲಿಂದ ಹೊರಟು ಹೋದವರು ಸುಮಾರು 8 ಕೀ.ಮೀ ದೂರ ಪಶ್ಚಿಮ ದಿಕ್ಕಿನ ಅಂತರದಲ್ಲಿ (25 ಮಾರ್ಪ್ ದೂರ) ಮೀನುಗಾರಿಕೆಯನ್ನು ಮಾಡುತ್ತಿದ್ದ ಸಮಯ ಅಂದರೆ ದಿನಾಂಕ 02.10.2014 ರಂದು ಬೆಳಿಗ್ಗೆ ಸುಮಾರು 7.00 ಗಂಟೆಗೆ ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನ ಕಡೆಗೆ ಸಮುದ್ರದಲ್ಲಿ ಮೀನುಗಾರಿಕೆಯನ್ನು ಮಾಡಿಕೊಂಡು ಒಂದು ಟ್ರಾಲ್ ಬೋಟ್ ನಂಬ್ರ ಐಎನ್ ಡಿ –ಕೆಎ-01-ಎಂಎಂ-401 ನೇದರ ಚಾಲಕ ಮೊಹಿಯುದ್ದೀನ್ (26) ತಂದೆ: ಸೀನಿ ಇಬ್ರಾಹಿಂ, ವಾಸ: ಡೋರ್ ನಂಬ್ರ 7-9 ವೆಸ್ಟ್ ಸ್ಟ್ರೀಟ್ ಮಂಟಪಂ, ರಾಮ್ ನಾಡ್ ಜಿಲ್ಲೆ, ತಮಿಳುನಾಡು ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತನ್ನ ಟ್ರಾಲ್ ಬೋಟ್ ನ್ನು ಚಲಾಯಿಸಿ ಫಿರ್ಯಾದಿದಾರರ ನಾಡದೋಣಿಯ ಮಧ್ಯ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮತ್ತು ಸಿರಿಲ್ ಪೆರಾವೋ ದೋಣಿಯಿಂದ ಎಸೆಯಲ್ಪಟ್ಟು ಸಮುದ್ರದ ನೀರಿಗೆ ಬಿದ್ದು, ಇವರ ನಾಡ ದೋಣಿಯು ಸುಮಾರು 50 ಮೀಟರ್ ದೂರ ಮುಂದಕ್ಕೆ ಹೋಯಿತು. ಆಗ ಮೀನುಗಾರಿಕೆಗೆ ಹಾಕಿರುವ ಬಲೆಯು ಇವರ ದೋನಿಯ ಟ್ರಾಲ್ ಬೋಟ್ ನ ಪ್ಯಾನ್ ಗೆ ಸಿಕ್ಕಿಕೊಂಡು ಬೋಟ್ ನಿಂತಿತು. ನಂತರ ಫಿರ್ಯಾದಿದಾರರು ನೀರಿನಲ್ಲಿ ಈಜಿ ಕೊಂಡು ನೀರಿಗೆ ಬಿದ್ದ ಸಿರಿಲ್ ಘೆರಾವೋ ಎಂಬವರನ್ನು ನೀರಿನಿಂದ ಎಳೆದುಕೊಂಡು ಬಂದು ಅವರ ದೋಣಿಗೆ ಹಾಕಿ ನೋಡಿದಾಗ ಸಿರಿಲ್ ಪೆರಾವೋರವರು ಮೃತ ಪಟ್ಟಿರುತ್ತಾರೆ. ಫಿರ್ಯಾದಿದಾರರು ಕೂಡಾ ಅಸ್ವಸ್ಥರಾಗಿದ್ದು, ನಂತರ ಡಿಕ್ಕಿ ಹೊಡೆದ ಟ್ರಾಲ್ ಬೋಟ್ ನವರು ಅವರ ದೋಣಿಯಲ್ಲಿ ಫಿರ್ಯಾದಿದಾರರನ್ನು ಮತ್ತು ಮೃತ ಸಿರಿಲ್ ಪೆರಾವೋ ರವರ ಮೃತ ದೇಹವನ್ನು ಹಾಕಿ ಕೊಂಡು ದಿನಾಂಕ 03.10.2014 ರಂದು ಬೆಳಿಗ್ಗೆ ಸುಮಾರು 3.00 ಗಂಟೆ ಸುಮಾರಿಗೆ ಸಮುದ್ರ ದಡಕ್ಕೆ ಬಂದು ತಲುಪಿಸಿದರು.
13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.10.2014 ರಂದು ಪಿರ್ಯಾದಿದಾರರಾದ ಶ್ರೀ ಲುವಿಸ್ ಡಿ'ಸೋಜಾ ರವರು ತನ್ನ ಪತ್ನಿಯ ತಂಗಿಯ ಮನೆಗೆ ಹೋಗುವರೇ ಅವರ ಬಾಬ್ತು KA19EL6701 ನೇ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ತನ್ನ ಪತ್ನಿ ವಾಯಿಲೆಟ್ ಡಿ'ಸೋಜಾ ರವರನ್ನು ಹಿಂಬದಿ ಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಮರಕಡದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುತ್ತಾ ಪಂಪ್ವೆಲ್ ಪೆಂಟಗಾನ್ ಎದುರು ಸಿಟಿ ಬಸ್ಸ್‌ಸ್ಟಾಂಡ್‌ನ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಸ್ಕೂಟರ್ ಹಿಂಬಾಗದಿಂದ ಕೆಎ22ಬಿ9439 ನೇ ಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಸ್ಕೂಟರ್‌ನ ಹಿಂಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಪತ್ನಿ ಸ್ಕೂಟರ್ ಸಮೇತ ಡಾಮರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕೈಗೆ ಮತ್ತು ಬಲಕಾಲಿಗೆ ಗುದ್ದಿದ ಮತ್ತು ತರಚಿದ ಗಾಯವುಂಟಾಗಿದ್ದಲ್ಲದೆ ಅವರ ಪತ್ನಿ ಶ್ರೀಮತಿ. ವಾಯಿಲೆಟ್ ಡಿ'ಸೋಜಾ ರವರ ತಲೆಗೆ, ಬಲಕಾಲಿಗೆ ರಕ್ತಬರುವ ಗಾಯವುಂಟಾಗಿದ್ದು, ಬಲಕಾಲಿಗೆ ತೀವ್ರತರದ ಜಖಂ ಆಗಿ ಮೂಳೆಮುರಿತದ ಗಾಯವಾಗಿರುತ್ತದೆ.
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಎಂ.ಡಿ. ಕೃಷ್ಣಪ್ಪ ರವರು ಪಂಪ್ವೆಲ್ ಬಳಿ ಗೂಡಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ದಿನಾಂಕ 03.10.2014 ರಂದು ಮಧ್ಯಾಹ್ನ 1.00 ಗಂಟೆ ವೇಳೆಗೆ ಆರೋಪಿಗಳಾದ ಬಶೀರ್, ಇರ್ಷಾದ್ ಮತ್ತು ಶಾರೂಖ್ ಎಂಬವರು ಪಿರ್ಯಾಧಿದಾರರ ಗೂಡಂಗಡಿ ಬಳಿ ರಿಕ್ಷಾ ಟೆಂಪೋ ಕೆಎ-19-ಬಿ-5496 ನೇ ದನ್ನು ತಂದು ನಿಲ್ಲಿಸಿ ಹಣ್ಣು ಹಂಪಲು ವ್ಯಾಪಾರ ಮಾಡುತ್ತಿದ್ದಾಗ ಅವರೊಡನೆ ಪಿರ್ಯಾದಿದಾರರು ನೀವು ಇಲ್ಲಿ ವ್ಯಾಪಾರ ಮಾಡಿದರೆ ನನ್ನ ವ್ಯಾಫಾರಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದ್ದರಿಂದ ಮಧ್ಯಾಹ್ನ 1.30 ಗಂಟೆ ವೇಳೆಗೆ ಸದ್ರಿ ಆರೋಪಿಗಳು ಪಿರ್ಯಾದಿದಾರರ ಅಂಗಡಿ ಬಳಿ ಬಂದು ಅವಾಚ್ಯ ಶಬ್ದದಿಂದ ಬೈದುದಲ್ಲದೆ ಕೈಯಿಂದ ಹೊಡೆದಿದ್ದು ಆರೋಪಿ ಇರ್ಶಾದ್ ಎಂಬವನನ್ನು ಪಿರ್ಯಾದಿದಾರರ ಕಿಸೆಯಲ್ಲಿದ್ದ ರೂಪಾಯಿ 2100 ನ್ನು ಕಸಿದುಕೊಂಡು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ.
15.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.10.2014 ರಂದು ಬೆಳಿಗ್ಗೆ ಸುಮಾರು ಮಧ್ಯಾಹ್ನ ಸುಮಾರು 14:00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಇರ್ಷಾದ್ ಎಂಬವರು ಮಂಗಳೂರು ನಗರದ ಪಂಪ್ವೆಲ್ ಸರ್ಕ್ಲ್ ಬಳಿ ಇರುವ ಮಸೀದಿಯ ಮುಂಭಾಗ ಆಟೋ ಟೆಂಪೋ KA-19-B-5496 ರಲ್ಲಿ ಹಣ್ಣು ಹಂಪಲುಗಳನ್ನು ಸುರಾಕ್ ಎಂಬವನೊಂದಿಗೆ ವ್ಯಾಪಾರ ಮಾಡುತ್ತಿದ್ದಂತೆ ಅಲ್ಲಿಯೇ ಸಮೀಪದ ಗೂಡಂಗಡಿ ವ್ಯಾಪಾರಿ ಕೃಷ್ಣಪ್ಪ ಎಂಬವರು ಅಲ್ಲಿಗೆ ಬಂದು ಪಿರ್ಯಾದಿದಾರರಲ್ಲಿ ಮತ್ತು ಸುರಾಕ್ ಎಂಬವರಲ್ಲಿ ಈ ಸ್ಥಳದಲ್ಲಿ ವ್ಯಾಪಾರ ಮಾಡಬಾರದು ಎಂದು ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದು ನೋವುಗೊಳಿಸಿರುವುದಲ್ಲದೇ ಪಿರ್ಯಾದಿದಾರರ ಕಿಸೆಯಲ್ಲಿದ್ದ ರೂ. 1000 ವನ್ನು ಆರೋಪಿ ಬಲತ್ಕಾರವಾಗಿ ಕಸಿದುಕೊಂಡು ಪಿರ್ಯಾದಿದಾರರ ಬಾಬ್ತು ಆಟೋ ಟೆಂಪೋದ ಗ್ಲಾಸಿಗೆ ಕಲ್ಲಿನಿಂದ ಹೊಡೆದು ಗ್ಲಾಸು ಹುಡಿಮಾಡಿ ನಷ್ಟವನ್ನುಂಟುಮಾಡಿ ಇನ್ನು ಮುಂದೆ ಈ ಸ್ಥಳದಲ್ಲಿ ಆಟೋ ಟೆಂಪೋದಲ್ಲಿ ಹಣ್ಣು ಹಂಪಲು ಮಾರಾಟ ಮಾಡಿದರೆ ಕೈಕಾಲು ಮುರಿದು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿದೆ.
No comments:
Post a Comment