ದೈನಂದಿನ ಅಪರಾದ ವರದಿ.
ದಿನಾಂಕ 20.10.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 2 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-10-2014 ರಂದು ಸಂಜೆ ಸಮಯ ಫಿರ್ಯಾದಿದಾರರಾದ ಶ್ರೀ ಉಮೇಶ್ ಮೂಲ್ಯ ರವರು ಅವರ ಮಾವ ವಾಮನವರೊಂದಿಗೆ ಹಳೆಯಂಗಡಿ- ಪಕ್ಷಿಕೆರೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಪಕ್ಷಿಕೆರೆ ಚರ್ಚಿನ ಸ್ವಲ್ಪ ಮುಂದಕ್ಕೆ ತಲುಪಿದಾಗ ಹಳೆಯಂಗಡಿ ಕಡೆಯಿಂದ ಪಕ್ಷಿಕೆರೆ ಕಡೆಗೆ ಬೈಕ್ ನಂಬ್ರ KA 05 EW 8210 ನೇಯದರ ಚಾಲಕ ಪ್ರದೀಪ್ ರವರು ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ನನ್ನ ಮಾವ ಮತ್ತು ಬೈಕ್ ಸವಾರ ಇಬ್ಬರೂ ರಸ್ತೆಗೆ ಬಿದ್ದು ಮಾವನವರಿಗೆ ತಲೆಗೆ ಗುದ್ದಿದ ಗಾಯವಾಗಿ ಕಿವಿಯಿಂದ ರಕ್ತ ಬರುತ್ತಿತ್ತು, ಗಲ್ಲಕ್ಕೆ ಮತ್ತು ಕೈಗಳಿಗೆ ತರಚಿದ ಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ, ಬೈಕ್ ಸವಾರ ಪ್ರದೇಪ್ ಹೊರ ರೋಗಿಯಾಗಿ ದಾಖಲಾಗಿರುತ್ತಾರೆ.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-10-2014 ರಂದು ಸಂಜೆ ಪಿರ್ಯಾದಿದಾರರಾದ ಶ್ರೀ ಪ್ರಕಾಶ್ ರವರು ತನ್ನ ಬಾಬ್ತು KA- 20 E- 4311 ನೇಯ ದ್ವಿಚಕ್ರ ವಾಹನದಲ್ಲಿ ಸವಾರರಾಗಿ ಮಾವನ ಮಗಳು ಸುಶ್ಮೀತಾಳನ್ನು ಸಹಸವಾರಳನ್ನಾಗಿ, ಪತ್ನಿ ಪ್ರಜ್ಞಾ @ ರೋಹಿಣಿ KA- 20 Q- 6647 ನೇ ದ್ವಿಚಕ್ರ ವಾಹನದಲ್ಲಿ ಸವಾರಳಾಗಿ ತಂಗಿ ಮಮತಾಳನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಪಿಲಿಕುಳದಿಂದ ಹೊರಟು ರಾ.ಹೆ 66 ರಲ್ಲಿ ಹೋಗುತ್ತಾ ಸಂಜೆ ಸಮಯ 04-45 ಗಂಟೆಗೆ ಮುಕ್ಕಾ ಎಂಬಲ್ಲಿಗೆ ತಲುಪಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KL- 11 S- 2275 ನೇ ಲಾರಿಯನ್ನು ಅದರ ಚಾಲಕ ಸಾಜಿ ಎಂಬಾತನು ಕುಡಿತದ ಅಮಲಿನಲ್ಲಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಪಿರ್ಯಾದಿದಾರರಿಂದ 15' ಅಡಿ ಅಂತರದಲ್ಲಿ ಮುಂದಿನಿಂದ ಪತ್ನಿ ಚಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನದ ಹಿಂದುಗಡೆಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಮೇತ ಲಾರಿಯ ಎಡಗಡೆಯ ಹಿಂದಿನ ಟೈಯರಿನ ಅಡಿಗೆ ಸಿಲುಕಿ ಸುಮಾರು 15 ಅಡಿಗಳಷ್ಟು ದೂರ ಮುಂದಕ್ಕೆ ಎಳೆದುಕೊಂಡು ಹೋದ ಪರಿಣಾಮ ಪತ್ನಿಯ ಬಲಗೈಗೆ ಮೂಳೆ ಮುರಿತ ಗಾಯವಾಗಿದ್ದಲ್ಲದೆ, ತಂಗಿ ಮಮತಾಳ ಸೊಂಟಕ್ಕೆ ಗಂಭೀರ ಸ್ವರೂಪದ ಮೂಳೆ ಮುರಿತದ ಹಾಗೂ ರಕ್ತ ಗಾಯವಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪ್ಲಾಮಾ ಡೆವಲಫರರ್ಸ್ ಕಂಪೆನಿಯಲ್ಲಿ 2013 ನೇ ಇಸವಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಸುಭಾಷ್ ನಾಯ್ಕ್ ಮತ್ತು ಯಜ್ಞೇಶ್ ರಾವ್ ಎಂಬವರು ಸಂಸ್ಥೆಗೆ ಸೇರಿದ ಫ್ಲಾಟ್ ಗಳ ಸೇಲ್ ಮಾಡುವ ಸಮಯ ಕಂಪನಿಯ ಚೆಕ್ ನ್ನು ಬ್ಯಾಂಕಿನಲ್ಲಿ ಹಾಕಿ ಇನ್ನೊಬ್ಬರಿಗೆ ಸೇರ ಬೇಕಾದ ಹಣದ ಮತ್ತು ಕಂಪನಿಗೆ ಗೊತ್ತಿಲ್ಲದೆ ಬೇರೆಯವರ ಹೆಸರನ್ನು ನಮೂದಿಸಿ ಕಂಪನಿಗೆ ಸೇರಿದ ಹಣವನ್ನು ಸ್ವಂತ ಲಾಭಕ್ಕಾಗಿ ಉಪಯೋಗಿಸಿ ಮೋಸ ಮಾಡಿ ವಂಚನೆ ಮಾಡಿರುವುದಾಗಿದೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17/10/2014 ರಂದು ಫಿರ್ಯಾದುದಾರರಾದ ಶ್ರೀ ರಾಮಕೃಷ್ಣ ಐತಾಳ್ ರವರು ತನ್ನ ಬಾಬ್ತು ಬೈಕ ನಂಬ್ರ KA-19-EK-0542 ನೇ ದರಲ್ಲಿ ಸವಾರನಾಗಿ ಮದ್ಯಾಹ್ನ 14:45 ಗಂಟೆಗೆ ಏರಪೋರ್ಟ ರೋಡನಿಂದ ಕುಂಟಿಕಾನ ಕಡೆಗೆ ಹೋಗುತ್ತಿದ್ದಾಗ ಕೊಂಚಾಡಿ ದೇರೆಬೈಲು ಎಂಬಲ್ಲಿ ಒಂದು ಗೂಡ್ಸ ಟೆಂಪೋ ನಂಬ್ರ KA-20-A-3207 ನೇ ದರ ಚಾಲಕ ಕುಂಟಿಕಾನ ಕಡೆಯಿಂದ ಎಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಢು ಬಂದು ಫಿರ್ಯಾದುದಾರು ಚಲಾಯಿಸುತ್ತಿದ್ದ ಮೋಟಾರು ಸೈಕಲಗೆ ಡಿಕ್ಕಿ ಮಾಡಿರುತ್ತಾರೆ ಈ ಪರಿಣಾಮ ಫಿರ್ಯಾದುದುದಾರರು ರಸ್ತೆಗೆ ಬಿದ್ದು ಕಾಲಿಗೆ ಬಲಕೈ ರಿಸ್ಟಗೆ ಹಾಗೂ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ A J ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಹಮ್ಮದ್ ಬಾವ(42) ಎಂಬವರು ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ಎಂಬಲ್ಲಿ ಹೊಸದಾದ ಮನೆಯನ್ನು ಕಟ್ಟಿಸುತ್ತಿದ್ದು, ಸದ್ರಿ ಮನೆಯ ಅಂಗಳದ ಮೂಲೆಯಲ್ಲಿ ಒಂದು ಬೋರ್ ವೆಲ್ ಮಾಡಿಸಿದ್ದು, ಈ ಬೋರ್ ವೆಲ್ ಗೆ 1 1/2 ಹೆಚ್ ಪಿ ಯ ಪಂಪ್ ಸೆಟ್ ನ್ನು ಅಳವಡಿಸಿದ್ದು, ದಿನಾಂಕ 17-10-2014 ರಂದು ಸಂಜೆ 6-00 ಗಂಟೆಗೆ ಕೆಲಸವನ್ನು ಮುಗಿಸಿ ಮನೆಗೆ ಹೋಗಿದ್ದು, ದಿನಾಂಕ 18-10-2014 ರಂದು ಮದ್ಯಾಹ್ನ 12-00 ಗಂಟೆಗೆ ಕೆಲಸದವರಾದ ಪೀಟರ್ ಎಂಬವರು ಪೋನು ಮಾಡಿ ಪಂಪ್ ಕಳವಾಗಿರುತ್ತದೆ ಎಂದು ತಿಳಿಸಿದಂತೆ ಹೋಗಿ ನೋಡಿದಾಗ ಯಾರೋ ಕಳ್ಳರು ಬೋರ್ ವೆಲ್ ನಿಂದ ಪಂಪ್ ಸೆಟ್ ನ್ನು ಕಿತ್ತು ತೆಗೆದುಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಸದ್ರಿ ಪಂಪ್ ಸೆಟ್ ನ ಅಂದಾಜು ಮೌಲ್ಯ 15,000/- ರೂ ಆಗಬಹುದು.
6.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಎ. ದಿವಾಕರ ಹೆಗ್ಡೆಯವರು ದಿನಾಂಕ 9-10-2014 ರಂದು ತನ್ನ ಪತ್ನಿ ಸಮೇತ ಬೆಂಗಳೂರಿನಲ್ಲಿರುವ ತಮ್ಮ ಮಗನ ಮನೆಗೆ ಹೋಗಿದ್ದು, ದಿನಾಂಕ 18-10-2014 ರಂದು ಅವರ ಮನೆಯ ಕೆಲಸಕ್ಕೆ ಬರುವ ಶಾಂತಾ ಎಂಬವರು ಫೋನ್ ಮಾಡಿ ಮನೆಯ ಹಿಂಬದಿಯ ಬಾಗಿಲು ತೆರೆದಿದ್ದು, ಮನೆಯ ಗೇಟಿಗೆ ಹಾಕಿದ ಬೀಗ ಕೂಡಾ ಕಾಣಿಸದೇ ಇದ್ದುದಾಗಿ ತಿಳಿಸಿದಂತೆ, ಫಿರ್ಯಾದಿಯವರು ತನ್ನ ಭಾವ ಶ್ರೀ ಎಂ. ಸದಾಶಿವ ಹೆಗ್ಡೆ ಯವರಿಗೆ ತಮ್ಮ ಮನೆಗೆ ಹೋಗಿ ನೋಡಲು ತಿಳಿಸಿದ್ದು ಅವರು ಬಂದು ಮನೆಯ ಒಳಗೆ ನೋಡಿದಾಗ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಕೂಡಲೇ ಫಿರ್ಯಾದಿಯವರು ಬೆಂಗಳೂರಿನಿಂದ ಬಂದು ನೋಡಿ ಪರಿಶೀಲಿದಾಗ ಬೆಳ್ಳಿಯ ಸಾಮಾಗ್ರಿ, ರೇಷ್ಮೆ ಸೀರೆಗಳು, ಹ್ಯಾಂಡಿ ಕ್ಯಾಮೆರಾ, ರೇಡೋ ವಾಚ್ ಗಳು, ಕಾರ್ ವಾಶ್ ಮೆಶಿನ್, ಲೈಟ್ ಚಾರ್ಜರ್, ಡಿ.ವಿ.ಡಿ ಪ್ಲೇಯರ್, ಕೇಬಲ್ ಸೆಟ್ ಆಪ್ ಬಾಕ್ಸ್, ಇನ್ವರ್ಟರ್, ಎರಡು ಲೇಡೀಸ್ ವಾಚುಗಳು ಒಟ್ಟು ರೂ 1,00,000 ಮೌಲ್ಯದ ಸೊತ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಥೋಮಸ್ ಬೆಜಿಲ್ ಅಂಬತ್ ರವರು ಈ ಹಿಂದೆ ಕೆಂಜಾರಿನಲ್ಲಿರುವ ಸಿಐಎಸ್ಎಫ್ ನಲ್ಲಿ ಪ್ಲೇಟ್ ಕೆಟರಿಂಗ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಈಗ ಸುಮಾರು 3 ತಿಂಗಳ ಹಿಂದೆ ಕೆಲಸ ಬಿಟ್ಟಿರುತ್ತಾರೆ. 3 ತಿಂಗಳ ಹಿಂದೆ ಫಿರ್ಯಾದಿದಾರರ ಮೊಬೈಲ್ ದೂರವಾಣಿಗೆ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಸಮೀರ್ ಜೋಷಿ ಸನ್ ಶೈನ್ ಪ್ಲೇಸ್ ಮೆಂಟ್ ಥಾಯ್ ಲ್ಯಾಂಡಿನಿಂದ ಮಾತನಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡು ತನಗೆ ಥಾಯ್ ಲ್ಯಾಂಡಿನಲ್ಲಿ ಕೆಲಸಕ್ಕೆ 20 ಜನರ ಅಗತ್ಯವಿದೆ ಎಂದು ತಿಳಿಸಿದ್ದು, ಅದರಂತೆ ಫಿರ್ಯಾದಿದಾರರು ಮಂಗಳೂರಿನ ಬಲ್ಮಠ ರಸ್ತೆಯ ಕ್ರಿಸ್ಟಲ್ ಆರ್ಕೆಡ್ ಬಿಲ್ಡಿಂಗ್ ನಲ್ಲಿರುವ ಮಿಟಾ ಮ್ಯಾನ್ ಪವರಿನ ಮಹೇಶ್ ಚಂದ್ರರವರಿಗೆ ಫೋನ್ ವಿವರವನ್ನು ಕೊಟ್ಟಿದ್ದು, ಮಹೇಶ್ ಚಂದ್ರರವರು ಸನ್ ಶೈನ್ ಪ್ಲೇಸ್ ಮೆಂಟಿನೊಂದಿಗೆ ಪತ್ರ ವ್ಯವಹಾರ ನಡೆಸಿ ಪತ್ರಿಕೆಯಲ್ಲಿ ಜಾಹಿರಾತು ನೀಡಿ ಬಳಿ ಅಭ್ಯರ್ಥಿಗಳ ಇಂಟರ್ ವ್ಯೂ ನಡೆಸಿರುತ್ತಾರೆ. ಸದ್ರಿ ಇಂಟರ್ ವ್ಯೂ ನಲ್ಲಿ ನಿರಂಜನ್ ಹಾಗೂ ಡೆವಿನ್ ರವರು ಸೇರಿದಂತೆ 20 ಜನರು ಆಯ್ಕೆ ಯಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ತಲಾ ಒಂದುವರೆ ಲಕ್ಷ ಹಣವನ್ನು ಮಿಟಾ ಮ್ಯಾನ್ ಪವರ್ ಸಂಸ್ಥೆಯ ಮಹೇಶ್‌ಚಂದ್ರರವರಿಗೆ ಕೊಟ್ಟು ಆಗಸ್ತ್ 23 ರಂದು 20 ಜನರು ಥಾಯ್ಲಾಂಡಿಗೆ ತೆರಳಿದ್ದು, ತಲಾ ಮೂರು ಕಾಲು ಲಕ್ಷದ ಡಾಲರನ್ನು ಸನ್ ಶೈನ್ ಪ್ಲೇಸ್ ಮೆಂಟ್‌ಗೆ ನೀಡಿರುತ್ತಾರೆ. ಆದರೆ ಕಂಪೆನಿಯವರು 15 ದಿನದಲ್ಲಿ ವೀಸಾ ಹಾಗೂ ಕೆಲಸವನ್ನು ನೀಡುವುದಾಗಿ 20 ಜನರಿಗೆ ತಿಳಿಸಿದ್ದು, ಈ ವರೆಗೆ ಕೊಡದೇ ಮೋಸ ಮಾಡಿರುತ್ತಾರೆ. ಇದರಿಂದ ಸಿಟ್ಟುಗೊಂಡ 20 ಜನರ ತಂಡ, ವಾಪಾಸು ಭಾರತಕ್ಕೆ ಬಂದಿದ್ದು, ದಿನಾಂಕ 14-10-2014 ರಂದು ಪಿರ್ಯಾದಿದಾರರು ಬೆಂಗಳೂರಿನ ಏರ್ ಪೋರ್ಟಿಗೆ ಬಂದಿಳಿದಾಗ ನಿರಂಜನ್ ಹಾಗೂ ಡೆವಿನ್ ಚೌಟರವರು ಯಾವುದೋ ಒಂದು ಕಾರಿನಲ್ಲಿ ಮಂಗಳೂರಿಗೆಂದು ಕೂರಿಸಿಕೊಂಡು ಬರುವಾಗ ಫಿರ್ಯಾದಿದಾರರಿಗೆ ಪೈಪಿನಿಂದ ಎಡಕೈಗೆ, ಎಡಕಾಲಿಗೆ ಮತ್ತು ಹಣೆಯ ಎಡಭಾಗಕ್ಕೆ ಹಲ್ಲೆ ನಡೆಸಿ, ವುಡ್ಸೈಟ್ ಹೋಟೇಲ್ಗೆ ಕರೆದುಕೊಂಡು ಹೋಗಿ ನಂತರ ಮಿಟಾ ಮ್ಯಾನ್ ಪವರ್ ಆಫೀಸಿಗೆ ಹೋಗಿ ಬಿಟ್ಟು ಹೋಗಿರುತ್ತಾರೆ. ಹಲ್ಲೆಯಿಂದಾಗಿ ಪಿರ್ಯಾದಿದಾರರು ದಿನಾಂಕ 16-10-2014 ರಂದು ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಬಳಿಕ ದಿನಾಂಕ 17-10-2014 ರಂದು ಫಿರ್ಯಾದಿದಾರರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಜೇಶ್ ರವರ ಮಗ ಕಿಶನ್ ಪ್ರಾಯ 16 ವರ್ಷ ಎಂಬವನು ತನ್ನ ತಂದೆಯೊಂದಿಗೆ ಬೈಕಂಪಾಡಿಯ ಭಗವತಿ ಗ್ಯಾರೇಜ್ ನಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದು ದಿನಾಂಕ 17-10-2014 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದ ಕಿಶನ್ ಎಂಬಾತನು ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ಹೊರ ಹೋದವನು ಸಂಜೆ 6-00 ಗಂಟೆ ನಂತರ ಆತನ ಬಳಿ ಇದ್ದ ಮೊಬೈಲ್ ದೂರವಾಣಿ ಸ್ವಿಚ್ ಆಪ್ ಆಗಿದ್ದು, ಆತನು ಈ ವರೆಗೂ ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದ ಕಿಶನ್ ರವರ ಚಹರೆ: ಹೆಸರು: ಕಿಶನ್, ಎತ್ತರ: 5 ಅಡಿ, ಬಣ್ಣ: ಗೋಧಿ ಮೈ ಬಣ್ಣ, ಗೊತ್ತಿರುವ ಭಾಷೆ: ತುಳು, ಕನ್ನಡ, ಕಪ್ಪು ಪ್ಯಾಂಟ್ ಹಾಗೂ ಹಳದಿ ಗೆರೆಯುಳ್ಳ ಅಂಗಿ ಧರಿಸಿರುವುದಾಗಿದೆ.
9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ನಾರಾಯಣ ಕೆ. ರವರು ಮಂಗಳೂರು ಸದರ್ನ್ ರೈಲ್ವೆಯಲ್ಲಿ ನೌಕರನಾಗಿದ್ದು, ದಿನಾಂಕ 18-10-2014 ರಂದು ಬೆಳಿಗ್ಗೆ 8-15 ಗಂಟೆಗೆ ತನ್ನ ಕರ್ತವ್ಯಕ್ಕೆ ಸಂಬಂದಿಸಿದ ಡಿಸೇಲ್ ಹಾಗೂ ಇತರ ಸಾಮಾನುಗಳನ್ನು ಮಂಗಳೂರಿನ ರೈಲ್ವೆ ಸೀನಿಯರ್ ಸೆಕ್ಷನ್ ಇಂಜಿನಿಯರ್ ಗೆ ಸಂಬಂದಿಸಿದ ಕಛೇರಿಯ ಎದುರಗಡೆ ಇರುವ ರಸ್ತೆಯ ಬದಿಯಲ್ಲಿ ಲೋಡ್ ಮಾಡುತ್ತಿರುವಾಗ ಅದೇ ರಸ್ತೆಯಲ್ಲಿ ಹಿಂದುಗಡೆಯಿಂದ ಬಂದ ರಿಕ್ಷಾ ಚಾಲಕನು ಫಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಫಿರ್ಯಾದುದಾರರು ಆತನಲ್ಲಿ ಈ ಬಗ್ಗೆ ಕೇಳಲು ನೀನು ಯಾರು ಎಂದು ಹೇಳಿದಾಗ ರಿಕ್ಷಾ ಚಾಲಕನು ರಿಕ್ಷಾದಿಂದ ಇಳಿದು ಫಿರ್ಯಾದಿದಾರರ ಬಳಿಗೆ ಬಂದು ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ ಶರ್ಟ್ ನ ಕಾಲರ್ ಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಫಿರ್ಯಾದುದಾರರ ಎದೆಯ ಎಡ ಭಾಗಕ್ಕೆ ಹೊಡೆದುದಲ್ಲದೇ ಎಡ ಕೈಯನ್ನು ಹಿಡಿದು ಎಳೆದು ವಾಪಾಸು ಮುಖದ ಎಡ ಭಾಗಕ್ಕೆ ಬಲವಾಗಿ ಹೊಡೆದಿರುತ್ತಾನೆ. ಅದೇ ವೇಳೆಗೆ ಕಛೇರಿಯ ಸಿಬ್ಬಂದಿಗಳು ಘಟನೆ ನೋಡಿ ಸ್ಥಳಕ್ಕೆ ಬಂದಾಗ ರಿಕ್ಷಾ ಚಾಲಕನು ಫಿರ್ಯಾದುದಾರರನ್ನು ಉದ್ದೇಶಿಸಿ ತುಳು ಭಾಷೆಯಲ್ಲಿ ಜೀವ ಬೆದರಿಕೆ ಹಾಕಿ ರಿಕ್ಷಾ ಸಮೇತಾ ಅಲ್ಲಿಂದ ಹೊರಟು ಹೋಗಿರುತ್ತಾನೆ.ರಿಕ್ಷಾ ನಂಬ್ರ KA 19 B 2408 ಆಗಿರುತ್ತದೆ.
10.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಹುಸೈನ್ ರವರು ರಿಕ್ಷಾ ಚಾಲಕರಾಗಿದ್ದು, ದಿನಾಂಕ 18-10-2014 ರಂದು ಬೆಳಿಗ್ಗೆ 8-45 ಗಂಟೆ ಸಮಯಕ್ಕೆ ಅತ್ತಾವರ ಕಟ್ಟೆಯ ಬಳಿಯಿಂದ ಓರ್ವ ಪ್ರಯಾಣಿಕನನ್ನು ರೈಲ್ವೆ ಕಾಲನಿಗೆ ಬಿಡಲು ಹೋದಾಗ ರೈಲ್ವೆ ಕಾಲನಿಗೆ ಹೋಗುವ ದಾರಿಯಲ್ಲಿರುವ ರೈಲ್ವೆ PWD ಕಛೇರಿಯ ಬಳಿ ಒಂದು ಗೂಡ್ಸ್ ಟೆಂಪೊವನ್ನು ಅದರ ಚಾಲಕನು ರಸ್ತೆ ಮದ್ಯೆ ನಿಲ್ಲಿಸಿದ್ದು, ಫಿರ್ಯಾದುದಾರರು ಅವರಲ್ಲಿ ಟೆಂಪೊವನ್ನು ಯಾಕೆ ರಸ್ತೆ ಮಧ್ಯೆ ನಿಲ್ಲಿಸಿದ್ದೀರಿ ಎಂಬುದಾಗಿ ಕೆಳುವಷ್ಟರಲ್ಲಿ 3 ರಿಂದ 4 ಜನರು ಫಿರ್ಯಾದುದಾರರ ಬಳಿಗೆ ಬಂದು ಫಿರ್ಯಾದುದಾರರನ್ನು ರಿಕ್ಷಾ ಸಮೇತಾ ತಡೆದು ನಿಲ್ಲಿಸಿ "ನಿನಗೆ ರೈಲ್ವೆ ಕಾಲನಿಯಲ್ಲಿ ನಿನಗೇನು ಕೆಲಸ" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದುದಾರರ ಶರ್ಟ್ ಹಿಡಿದು ಎಳೆದು ಬನಿಯಾನ್ ಹರಿದು ಹಾಕಿ ಅವರೆಲ್ಲರೂ ಕೈಗಳಿಂದ ಮುಖಕ್ಕೆ ಹೊಡೆದು ಬಲ ಭುಜಕ್ಕೆ ಕಬ್ಬಿಣದ ರಾಡ್ ನಿಂದ ಹೊಡೆದು ಕೆಳಕ್ಕೆ ಬೀಳಿಸಿ ಎಲ್ಲರೂ ಕಾಲಿನಿಂದ ತುಳಿದು ಇನ್ನು ರೈಲ್ವೆ ಕಾಲನಿಗೆ ಬಂದಲ್ಲಿ ನಿನ್ನನ್ನು ರೈಲ್ವೆ ಪಟ್ಟಿಗೆ ಹಾಕಿ ಕೊಲೆ ಮಾಡುತ್ತೇವೆ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಫಿರ್ಯಾದುದಾರರ ಬೊಬ್ಬೆ ಕೇಳಿ ರೈಲ್ವೆ ಸ್ಟೇಶನ್ ಪಾರ್ಕಿನ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಬಂದು ಫಿರ್ಯಾದುದಾರರನ್ನು ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ.
11.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-10-2014 ರಂದು ಪಿರ್ಯಾದಿದಾರರಾದ ಶ್ರೀ ಚರಣ್ ಚನ್ನಬಸಪ್ಪ ಸುರುಲೇಶ್ವರ ರವರು ಮಂಗಳೂರು ನಗರಕ್ಕೆ ಬಂದಿದ್ದು ಸಮಯ ಸುಮಾರು 16.30 ಗಂಟೆಗೆ ತನ್ನ ಕೆಲಸಕ್ಕೆ ಉಪಯೋಗಿಸಲು ಹಳೆ ಬಟ್ಟೆ ಖರೀದಿಸುವ ಸಲುವಾಗಿ ನಗರದ ಪುರಭವನದ ಗೇಟ್ ಹತ್ತಿರದ ಪುಟ್ ಪಾತ್ ಬಳಿ ಬಂದಿದ್ದು ಆ ಸಮಯ ಅವರ ಪ್ಯಾಂಟಿನ ಹಿಂಬದಿಯ ಬಲಭಾಗದ ಕಿಸೆಯಲ್ಲಿ ಇಟ್ಟಿದ್ದ ಪರ್ಸನ್ನು ಯಾರೋ ಕಳ್ಳರು ಅವರ ಅರಿವಿಗೆ ಬಾರದಂತೆ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಪರ್ಸನಲ್ಲಿ ಸುಮಾರು 8000 ರೂ. ನಗದು ಹಣ ಅವರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಇದ್ದುದಾಗಿದೆ.
12.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಮಡಿ ಮತ್ತು ಉಳಿಯ ಪ್ರದೇಶದಲ್ಲಿ ಆರೋಪಿತರಾದ ಎ.ಕೆ. ಅಶ್ರಫ್, ಎಂ.ಎಸ್. ಶೇಖ್ ಮೋನು ಎಂಬವರು ಆರೋಪಿ ಸೋಮಶೇಖರ್ ಎಂಬವರ ಸರ್ವೇ ನಂ. 114/6 ರಲ್ಲಿ ಪಲ್ಗುಣಿ ನದಿಯಿಂದ ಮರಳನ್ನು ಡ್ರಜ್ಜಿಂಗ್ ಯಂತ್ರದ ಮೂಲಕ ಅಕ್ರಮವಾಗಿ ತೆಗೆದು ಸಾಗಾಣಿಕೆ ಮಾಡಿರುವುದಲ್ಲದೇ, ಸುಮಾರು 185 ಲೋಡುಗಳಷ್ಟು ಸರಕಾರದ ಸೊತ್ತಾದ ಸಾಮಾನ್ಯ ಮರಳನ್ನು ಕಳ್ಳತನ ಮಾಡಿ ಸುತ್ತಲೂ ಸಿಮೆಂಟ್ ಚೀಲಗಳಲ್ಲಿ ಮರಳನ್ನು ತುಂಬಿಸಿ ಅದರ ಮಧ್ಯೆ ಮರಳನ್ನು ಶೇಖರಿಸಿಟ್ಟಿರುವುದು ಕಂಡು ಬಂದಿದ್ದರಿಂದ ಶ್ರೀ ಕೆ.ಎಸ್. ನಾಗೇಂದ್ರಪ್ಪ, ಜಿಯೋಲೋಜಿಕಲ್ ಆಫೀಸರ್, ಮೈನ್ಸ್ & ಜಿಯೋಲೋಜಿಕಲ್ ಡಿಪಾರ್ಟ್ ಮೆಂಟ್, ಫ್ಲೈಯಿಂಗ್ ಸ್ಕ್ವಾಡ್, ಮಂಗಳೂರು ರವರು ದೂರು ನೀಡಿರುವುದಾಗಿದೆ.
13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-10-2014 ರಂದು ಪಿರ್ಯಾದಿದಾರರಾದ ಶ್ರೀ ದೇವರಾಜ್ ರಾವ್ ರವರು ಗಂಜಿಮಠ ನಾರಳ ಎಂಬಲ್ಲಿಂದ ತನ್ನ ತಂದೆಯವರ ವೈಕುಂಟ ಸಮಾರಾಧನೆ ಮುಗಿಸಿ ತನ್ನ ಮನೆಯಾದ ಮಂಜೇಶ್ವರದ ಕಡೆಗೆ ಪಂಪ್‌ವೆಲ್ ನಿಂದ ತನ್ನ ಬಾಬ್ತು ಕಾರು ನಂ ಕೆಎಲ್ 14 ಎನ್ 4486 ರಲ್ಲಿ ಬರುತ್ತಿರುವಾಗ ಸುಮಾರು ಸಂಜೆ 7.30 ಗಂಟೆ ಸಮಯಕ್ಕೆ ತೊಕ್ಕೋಟು ಜಂಕ್ಷನ್ ಯುನಿಟ್ ಹಾಲ್ ಬಳಿ ತಲುಪುವಷ್ಟರಲ್ಲಿ ಒಂದು ಲಾರಿ ನಂ ಕೆಎ 01 ಡಿ 4989 ನೇ ದರ ಅದರ ಚಾಲಕ ಕೃಷ್ಣ ಎಂಬಾತನು ಅಮಲು ಪದಾರ್ಥ ಸೇವಿಸಿ, ತನ್ನ ಬಾಬ್ತು ಲಾರಿಯನ್ನು ಅತೀವೇಗ ಹಾಗೂ ನಿರ್ಲಕ್ಷದಿಂದ ಚಲಾಯಿಸಿ ಪಿರ್ಯಾದಿದಾರ ಚಲಾಯಿಸುತ್ತಿದ್ದ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಢಿಕ್ಕಿಯು ಸಂಪೂರ್ಣ ಭಾಗ ಜಖಂ ಗೊಂಡ್ಡಿದ್ದು , ಕಾರಿನ ಹಿಂಬದಿಯ ಗಾಜು ಕೂಡಾ ಸಂಪೂರ್ಣ ವಾಗಿ ಪುಡಿಯಾಗಿ ಸುಮಾರು ರೂಪಾಯಿ ಒಂದು ಲಕ್ಷಕಿಂತ ಮೇಲ್ಪಟ್ಟು ನಷ್ಟವಾಗಿರುತ್ತದೆ.
No comments:
Post a Comment