Saturday, October 11, 2014

Daily Crime Reports 11-10-2014

ದೈನಂದಿನ ಅಪರಾದ ವರದಿ.

ದಿನಾಂಕ 11.10.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 10.10.2014 ರಂದು ಪಿರ್ಯಾದಿದಾರರಾದ ಶ್ರೀ ರಾಜೇಂದ್ರ ರವರು ತಾನು ಕೆಲಸ ಮಾಡುತ್ತಿರುವ ಮಂಗಳೂರು ನಗರದ ಓಶಿಯನ್ಪರ್ಲ್ಹೋಟೇಲ್ಗೆ ತೆರಳಲೆಂದು ಪಿ.ವಿ.ಎಸ್ಕಡೆಯಿಂದ ಕೆ.ಎಸ್‌.ಆರ್ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಾ ಸಮಯ ರಾತ್ರಿ 8:25 ಗಂಟೆಗೆ ಓಶಿಯನ್ ಪರ್ಲ್ಹೋಟೇಲ್ಮುಂಭಾಗದ ರಸ್ತೆ ತಲುಪಿದಾಗ,  ಪಿ.ವಿಎಸ್ಕಡೆಯಿಂದ ಕೆ.ಎಸ್‌.ಆರ್ಕಡೆಗೆ ಮೋಟಾರು ಸೈಕಲ್ನಂಬ್ರ ಕೆ.-20-.ಡಿ-8306 ನೇದನ್ನು ಅದರ ಸವಾರನು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರಿಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯ, ಬಲಕಾಲಿನ ಹೆಬ್ಬೆರಳಿನ ಬಳಿ, ತಲೆಗೆ, ಬಲ ಮೊಣಕೈಗೆ ತರಚಿದ ನಮೂನೆಯ ಗಾಯವಾದ್ದವರನ್ನು  ಚಿಕಿತ್ಸೆ ಬಗ್ಗೆ ನಗರದ ಯೆನೆಪೋಯಾ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಂ.ಸಿ ಅತ್ತಾವರ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ. ಪ್ರಕರಣದಲ್ಲಿ ಅಪಘಾತವುಂಟು ಮಾಡಿದ ಮೋಟಾರು ಸೈಕಲ್ ಸವಾರನು ಅಪಘಾತದ ಬಳಿಕ ಮೋಟಾರು ಸೈಕಲನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ.

 

2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.10.2014 ರಂದು ರಾತ್ರಿ 10.15 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಗೀತಾ ಕಾಮತ್ ರವರು ಕುಟುಂಬದೊಂದಿಗೆ ಬೆಂಗಳೂರಿನಲ್ಲಿರುವ ತನ್ನ ಅಣ್ಣನ ಮನೆಗೆ ಹೋಗಿದ್ದು ದಿನಾಂಕ 10-10-2014 ರಂದು ಬೆಳಿಗ್ಗೆ 07-00 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲನ್ನು ಯಾರೋ ಮುರಿದಿರುವುದು ಕಂಡು  ಬಂದಿರುತ್ತದೆ. ನಂತರ ಒಳಗೆ ಹೋಗಿ ಬೆಡ್ರೂಮ್ ನೋಡಿದಾಗ ಕಪಾಟಿನಲ್ಲಿಟ್ಟಿದ್ದ ಕೆಲವೊಂದು ವಸ್ತುಗಳೆಲ್ಲಾ ಕೆಳಗೆ ಬಿದಿದ್ದು ಮತ್ತೆ ಕೆಲವೊಂದು ವಸ್ತುಗಳು ಮಂಚದ ಮೇಲೆ ಬಿದ್ದಿರುವುದು ಕಂಡು ಬರುತ್ತದೆ. ಕಪಾಟನ್ನು ಪರಿಶೀಲಿಸಿದಾಗ ಬೆಡ್ ರೂಮಿನ ಕಪಾಟಿನಲ್ಲಿದ್ದ ಬಂಗಾರದ ಉಂಗುರ, ಬಂಗಾರದ ಕಿವಿಯ ಓಲೆ, ಬೆಳ್ಳಿಯ ಕರಡಿಗೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇವುಗಳ ಒಟ್ಟು ಅಂದಾಜು ಮೌಲ್ಯ 1,14,500 ಆಗಬಹುದು.

 

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-08-2012 ರಿಂದ ದಿನಾಂಕ 23-06-2014 ಮದ್ಯ ಅವಧಿಯಲ್ಲಿ ಮಂಗಳೂರು ನಗರದ ಮಾನಸ ಟವರ್ಸ್ ನಲ್ಲಿರುವ Sky Line Constructions & Housing PVT.LTD ನಲ್ಲಿ Sales Executive  ಆಗಿ ಕೆಲಸ ಮಾಡಿಕೊಂಡಿದ್ದ  ಶ್ರೀರಾಮ ಶೆಟ್ಟಿ ಎಂಬವರು ಸಂಸ್ಥೆಗೆ ಸಂಬಂಧಿಸಿದ ಸುಮಾರು 18,00,000/- ನಗದು ಹಣವನ್ನು ಗ್ರಾಹಕರಿಂದ ಪಡೆದುಕೊಂಡು ಕಂಪೆನಿಗೆ ನೀಡದೇ ದುರುಪಯೋಗ ಪಡಿಸಿ ಕಂಪೆನಿಗೆ ಮೋಸ ಮಾಡಿರುತ್ತಾರೆ ಎಂಬುದಾಗಿ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರಾದ ಶ್ರೀ ಅವಿನಾಶ್ ಪ್ರಭು ರವರು ದೂರು ನೀಡಿರುವುದಾಗಿದೆ.

 

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-10-2014 ರಂದು ಸಮಯ 13-30 ಗಂಟೆಯಿಂದ 15-30 ಗಂಟೆಯ ಮಧ್ಯೆ ಮಂಗಳೂರು ನಗರದ ಲೋವರ್ ಬೆಂದೂರ್ ವೆಲ್ ನಲ್ಲಿರುವ ಸುಂದರ್ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ಫಿರ್ಯಾದಿದಾರರಾದ ಶ್ರೀ ಎಂ. ನಾಗೇಶ್ ರಾವ್ ರವರ 301 ನೇ ಪ್ಲಾಟ್ ಎದುರಿನ ಬಾಗಿಲು ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಪ್ಲಾಟ್ ಬೆಡ್ ರೂಂನ ಕಪಾಟಿನಲ್ಲಿದ್ದ 03 ವಾಚ್ ಗಳನ್ನು ಮತ್ತು 4ಗ್ರಾಂ ತೂಕದ 2 ಉಂಗುರವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತಿನ ಅಂದಾಜು ಮೌಲ್ಯ 24,000/- ಆಗಬಹುದು ಹಾಗೂ ಪಿರ್ಯಾದಿದಾರರ ಪತ್ನಿಯು ಬೆಂಗಳೂರಿಗೆ ಹೋಗಿದ್ದು ಅವರ ಬ್ಯಾಗ್ ಕೂಡಾ ಕಳವಾಗಿದ್ದು ಪತ್ನಿಯು ಬೆಂಗಳೂರಿನಿಂದ ಬಂದನಂತರ ಕಳವಾದ  ಸೊತ್ತಿನ ನಿಖರವಾದ ಬೆಲೆಯನ್ನು ತಿಳಿಸಲಾಗುವುದು ಎಂದು ಪಿರ್ಯಾದಿ ನಿಡಿರುವುದಾಗಿದೆ.

 

5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಉಮೇಶ್ ಭಕ್ತರ್ ಎಂಬವರು ಮಂಗಳೂರು ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಸುಮಾರು 8 ವರ್ಷಗಳಿಂದ ಕಟ್ಟು ಹೊರುವ ಕೂಲಿ ಕೆಲಸ ಮಾಡಿಕೊಂಡಿದ್ದು, ಅದರಂತೆ ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಪಿ.ಎಸ್. ಪೂಜಾರಿ ರವರ ಬಾಬ್ತು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಂದಿಗೆ ಪಿರ್ಯಾದಿದಾರರು ಮಾತಾನಾಡಿದ್ದಕ್ಕೆ ಆರೋಪಿಗಳಾದ ಮುಖೇಶ್ ಹಾಗೂ ವಿಜಯ್ ಎಂಬವರುಗಳು ದಿನಾಂಕ 10-10-2014 ರಂದು 20:15 ಗಂಟೆಗೆ ಮಂಗಳೂರು ನಗರದ ಮಾರ್ಕೆಟ್ ರಸ್ತೆಯ ಲಿಂಕಿಂಗ್ ಟವರ್ ಎದುರು ಭಾಗದಲ್ಲಿ ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಪಿರ್ಯಾದಿದಾರರಿಗೆ ಹುಡುಗಿಯ ಜೊತೆ ಮಾತನಾಡಿದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುವುದಾಗಿದೆ.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 9-10-2014 ರಂದು 15-00 ಗಂಟೆಯಿಂದ 19-00 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ನಗರದ ಕಂಕನಾಡಿ ಗ್ರಾಮದ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಎದುರು ಬಸ್ ಸ್ಟಾಪ್ ಹತ್ತಿರದಲ್ಲಿ ಪಿರ್ಯಾದಿದಾರರಾದ ಶ್ರೀ ಎಸ್. ಹಮೀದ್ ರವರ ಬಾಬ್ತು ಕೆಎ 19 ಬಿ 3620 ನೇ ನಂಬ್ರದ, ಚೇಸಿಸ್ ನಂಬ್ರ 24F BME 44391,ಇಂಜಿನ್ ನಂಬ್ರ AEM BME 48089, ರೂಪಾಯಿ 25,000/- ಮೌಲ್ಯದ ಆಟೊ ರಿಕ್ಷಾವನ್ನು ಅದರ ಚಾಲಕ ಇಸ್ಮಾಯಿಲ್ ನಿಲ್ಲಿಸಿದ್ದುದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ನವೀನ್ ಕುಮಾರ್ ಕಟೀಲ್ ರವರು ಹಾಗೂ ಅವರ ಅಕ್ಕ ಮತ್ತು ಅಣ್ಣ ಸೇರಿ ನಡುಗೋಡು ಗ್ರಾಮದ ಉಮ್ಮೆಟ್ಟು ಎಂಬಲ್ಲಿ ಸಾರ್ವಜನಿಕ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿದ ಸಚಿವರಾದ ಶ್ರೀ ಅಭಯಚಂಧ್ರ ಜೈನ್ ರವರಿಗೆ ಶುಭ ಕೋರಿ ಹಾಕಲಾದ ಬ್ಯಾನರ್ ಮೇಲೆ ದಿನಾಂಕ: 08-10-2014 ರಂದು ರಾತ್ರಿ 10-30 ಗಂಟೆಗೆ ಆರೋಪಿತರಾದ ದುರ್ಗಾ ಪ್ರಸಾದ್ ಶೆಟ್ಟಿ, ಅರುಣ್ ಕುಮಾರ್, ಗುರುರಾಜ್ ಮತ್ತು ನಂದಿನಿ ಸಂಘದ ಕೆಲವು ಯುವಕರು ಪದಾರ್ಥವನ್ನು ಚೆಲ್ಲಿ ಪಿರ್ಯಾದಿದಾರರ ಭಾವಚಿತ್ರವಿದ್ದಲ್ಲಿ ಹರಿದು ಹಾಕಿ, ಅವರ ಅಕ್ಕನ ಅಂಗಡಿಯ ಶಟರಿಗೆ ಕಲ್ಲುಗಳನ್ನು ಎಸೆದು, ಕೋಳಿ ಅಂಕಕ್ಕೆ ರೈಡ್ ಮಾಡಿಸಿರುತ್ತಾನೆ ಅವನನ್ನು ಕೊಂದು ಹಾಕಬೇಕು, ಎಂದು ಅವಾಚ್ಯವಾಗಿ ಬೈದಿರುತ್ತಾರೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ರೋನಾಲ್ಡ್ ವೇಗಸ್ ಎಂಬವರು ದಿನಾಂಕ: 06.10.2014 ರಂದು ತನ್ನ ಹೆಂಡತಿ ಹಾಗೂ ಅವರ ಮಗಳಿಗೆ ಹೊಡೆದು ನಂತರ ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಾರದೇ, ಸ್ನೇಹಿತರ ಮನೆಗೂ ಹಾಗೂ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಕಾಣೆಯಾದ ರೋನಾಲ್ಡ್ ವೇಗಸ್ ರವರ ಚಹರೆ: ಹೆಸರು: ರೊನಾಲ್ಡ್ ವೇಗಸ್, ಪ್ರಾಯ: 49 ವರ್ಷ, ಎತ್ತರ : 5.6', ಮೈಕಟ್ಟು: ಸಪೂರ ಶರೀರ, ಬಣ್ಣ : ಗೋದಿ ಮೈಬಣ್ಣ, ಬಟ್ಟೆ : ನೀಲಿ ಬಣ್ಣದ ತುಂಬು ತೋಳಿನ ಶರ್ಟ್‌, ಬ್ಲಾಕ್ ಪ್ಯಾಂಟ್ ಹಾಗೂ ಎಡಕಾಲಿನ ಮೊಣಗಂಟಿನ ಕೆಳಭಾಗದಲ್ಲಿ ಬ್ಯಾಂಡೇಜ್ ಸುತ್ತಿರುತ್ತದೆ.

No comments:

Post a Comment