ದೈನಂದಿನ ಅಪರಾದ ವರದಿ.
ದಿನಾಂಕ 24.10.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 1 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 1 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-10-2014 ರಂದು ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ರಮೀಜ್ ರವರು ಮಧ್ಯಾಹ್ನ 12-00 ಗಂಟೆಗೆ ಜೋಕಟ್ಟೆಯಿಂದ ಸುರತ್ಕಲ್ ಕಡೆಗೆ ತನ್ನ ಬಾಬ್ತು ಕೆ ಎ 20 ಎ 7401 ನೇ ನಂಬ್ರದ ಟಾಟಾ ಸುಮೋವನ್ನು ಚಲಾಯಿಸುತ್ತಾ ತೋಕುರು ಮಸೀದಿಯ ಸ್ವಲ್ಪ ಮುಂದಕ್ಕೆ ತಲುಪಿದಾಗ ಕಾನದಿಂದ ಜೋಕಟ್ಟೆ ಕಡೆಗೆ ಕೆ ಎ 19 ಇಕೆ 4115 ನೇ ನಂಬ್ರದ ಆ್ಯಕ್ಟೀವಾ ದ್ವಿಚಕ್ರ ವಾಹನವನ್ನು ಅದರ ಸವಾರ ಅಫ್ರೀದ ಎಂಬವರು ಭರತ್ ಎಂಬ ಸಹಸವಾರನೊಂದಿಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಟಾಟಾ ಸುಮೋಗೆ ಡಿಕ್ಕಿಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಸವಾರ ಅಫ್ರೀದಯವರ ಹಲ್ಲು ಕಿತ್ತು ಹೋಗಿ ಮುಖ, ಸೊಂಟ, ಎರಡೂ ಕಾಲುಗಳಿಗೆ ರಕ್ತ ಗಾಯವಾಗಿದ್ದು, ಸಹಸವಾರ ಭರತ್ ರವರ ಕಾಲಿಗೂ ಗಾಯವಾಗಿದ್ದು ಚಿಕಿತ್ಸೆಗಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಸವಾರ ಅಫ್ರೀದರವರು ಅಪ್ರಾಪ್ತ ವಯಸ್ಕರಾಗಿದ್ದು ವಾಹನ ಚಾಲನಾ ಪರವಾನಿಗೆ ಹೊಂದಿರುವುದಿಲ್ಲ.
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಭರತ್ ಕುಮಾರ್ ಎಂಬವರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಉರ್ವ ಇದರ ಕಾರ್ಯದರ್ಶಿ ಆಗಿದ್ದು ದಿನಾಂಕ 23-10-2014 ರಂದು ಬೆಳಿಗ್ಗೆ 07-00 ಗಂಟೆಗೆ ಮನೆಯಲ್ಲಿದ್ದಾಗ ಸ್ನೇಹಿತನಾದ ಅರುಣ್ ಎಂಬಾತನು ಪೋನ್ ಮಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉರ್ವ ರವರು ಗಣಪತಿ ಪ್ರತಿಷ್ಟಾಪನೆ ಮಾಡುವ ಸ್ಥಳವಾದ ಮಾರಿಗುಡಿ ಬಳಿಯ ಮಂಗಳೂರು ಮಹಾನಗರ ಪಾಲಿಕೆಯ ಬಯಲು ರಂಗ ಮಂಟಪದ ಹತ್ತಿರ ಜನರು ಗುಂಪು ಸೇರಿದ್ದು ಕೂಡಲೇ ಬರುವಂತೆ ತಿಳಿಸಿದ ಮೇರೆಗೆ ಪಿರ್ಯಾದಿಯು ಹೋಗಿ ನೋಡಿದಾಗ ಒಬ್ಬಾತ ವ್ಯಕ್ತಿಯು ತಲೆಯ ಮೇಲೆ ಕಲ್ಲು ಬಿದ್ದಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದು ಸುತ್ತಲೆಲ್ಲಾ ರಕ್ತ ಸೋರಿದ್ದು, ಸದ್ರಿ ವ್ಯಕ್ತಿಯು ನಂದ ಎಂಬಾತನೆಂದು ತಿಳಿದು ಬಂದಿದ್ದು, ಸದ್ರಿ ವ್ಯಕ್ತಿಯು ಶರಾಬು ಕುಡಿಯುವವನಾಗಿದ್ದು ತನ್ನ ಸ್ನೇಹಿತರಾದ ಗಣೇಶ ಮತ್ತು ಐತಪ್ಪ ಎಂಬವರೊಂದಿಗೆ ರಾತ್ರಿ ವೇಳೆಯಲ್ಲಿ ಸದ್ರಿ ರಂಗ ಮಂಟಪದ ದಂಡೆಯಲ್ಲಿ ದಿನಂಪ್ರತಿ ಮಲಗುವವರಾಗಿರುತ್ತಾರೆ. ದಿನಾಂಕ 23-10-2014 ರಂದು 00-30 ರಿಂದ ಬೆಳಿಗ್ಗೆ 05-00 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಸ್ನೇಹಿತರೊಂದಿಗೆ ಅಥವಾ ಅಪರಿಚಿತರೊಂದಿಗೆ ಅಮಲು ಸೇವನೆ ಮಾಡಿದ್ದ ಸಮಯ ನಂದ ಎಂಬವರನ್ನು ಯಾರೋ ದುಷ್ಕರ್ಮಿಗಳು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದಾಗಿದೆ.
3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಇಸಾಕ್ ರವರು ಅಂಗಾರಗುಂಡಿ ಮೊಹಿದ್ದಿನ್ ಜುಮ್ಮಾ ಮಸೀದಿಗೆ ಒಳಪಟ್ಟ ಬೈಕಂಪಾಡಿ ಅಡ್ಕ ದರ್ಗಾದ ವಠಾರದಲ್ಲಿ 8 ವರ್ಷದಿಂದ ಅಂದಿನ ಜಮಾತ್ ಕಮಿಟಿಯ ತೀರ್ಮಾನದಂತೆ ಹೊಟೇಲ್ ಒಂದನ್ನು ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದು ಪಿರ್ಯಾದಿದಾರರು ಜಮಾತ್ ಗೆ ಪಾವತಿಸಬೇಕಾದ ಹೊಟೇಲ್ ನ ಬಾಡಿಗೆ ಹಣವನ್ನು ಕಾಲ ಕಾಲಕ್ಕೆ ಕೊಡುತ್ತಾ ಬಂದಿದ್ದು ದಿನಾಂಕ 07-10-2014 ರಂದು ಮಧ್ಯಾಹ್ನ 15-30 ಗಂಟೆಗೆ ಈಗಿನ ಜಮಾತ್ ಕಮಿಟಿ ಯಾವುದೆ ಮೌಖಿಕ ಮತ್ತು ಲಿಖಿತ ಆದೇಶವನ್ನು ನೀಡದೆ ಪಿರ್ಯಾದಿಯ ಹೊಟೇಲ್ ನ್ನು ಜಮಾತ್ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ಮೊಹಮ್ಮದ್ ಚೈಬಾವು, ಕಾರ್ಯದರ್ಶಿ ಸೈದುದ್ದೀನ್, ಜೊತೆ ಕಾರ್ಯದರ್ಶಿ ಸಮೀರ್, ಜಮಾತ್ ಸದಸ್ಯರಾದ ಫೈಝಲ್. ಸಿರಾಜ್. ಅಬ್ದುಲ್ ಖಾದರ್ ಯಾನೆ ಬಾವ, ಅಬ್ದುಲ್ ಖಾದರ್, ಮೊಹಮ್ಮದ್ ಇಮ್ರಾನ್, ಹೈದರ್ ರವರು ಅಕ್ರಮ ಕೂಟ ಸೇರಿ ನಾಶ ಪಡಿಸಿ ಪಿರ್ಯಾದಿಗೆ ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿ ಸುಮಾರು 3 ಲಕ್ಷ ನಷ್ಟ ಉಂಟುಮಾಡಿರುತ್ತಾರೆ. ಕಳೆದ ಡಿಸೆಂಬರ್ ನ ಕಮಿಟಿಯಲ್ಲಿ ಜಮಾತ್ ಚುನಾವಣೆ ನಡೆಯುವ ಸಂಧರ್ಭದಲ್ಲಿ ಪಿರ್ಯಾದಿದಾರರು ಜಮಾತ್ ನ ಬಾಯ್ಲಾದಂತೆ ಚುನಾವಣೆ ನಡೆಯಲಿಲ್ಲ ಎಂದು ನ್ಯಾಯಾಲಯದಲ್ಲಿ ಕೇಸು ದಾಖಲಿಸಿರುವುದರಿಂದ ಎದ್ರಿದಾರರು ಈ ಕೃತ್ಯವನ್ನು ಎಸಗಿರುತ್ತಾರೆ. ಪಿರ್ಯಾದಿದಾರರು ದಿನಾಂಕ 07-10-2014 ರಂದು ಪಣಂಬೂರು ಠಾಣೆಗೆ ದೂರು ನೀಡಿದ್ದು ಆ ದೂರನ್ನು ಎನ್.ಸಿ.ಆರ್ ನಂಬ್ರ 324/1050/2014 ರಲ್ಲಿ ದಾಖಲಿಸಿಕೊಂಡಿದ್ದು ಇದೊಂದು ಅಸಂಜ್ಞೆಯ ಪ್ರಕರಣವಾಗಿದ್ದು ಸಂಜ್ಞೆಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23/10/2014 ರಂದು ಮದ್ಯಾಹ್ನ ಸುಮಾರು 14:30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಸ್ವರೂಪ್ ಕಶ್ಯಪ್ ಡಿ. ರವರು ತನ್ನ ಬಾಬ್ತು ಕಾರು ನಂಬ್ರ KA-19-MB-0843 ನಲ್ಲಿ ಬಂಟ್ಸ್ ಹಾಸ್ಟೆಲ್ ಕಡೆಯಿಂದ ತನ್ನ ಮನೆಯಾದ ಪಡೀಲ್ ಕಡೆಗೆ ಹೋಗುವ ಸಮಯ ಅಂಬೆಡ್ಕರ ವೃತ್ತದ ಬಳಿ ಬಸ್ಸು ನಂಬ್ರ KA-19-C-6615 ನ್ನು ಅದರ ಚಾಲಕ ಚಂದ್ರಶೇಖರ ಶೆಟ್ಟಿಗಾರ ಎಂಬುವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಮಾಡಿರುತ್ತಾರೆ ಇದರಿಂಧ ಕಾರು ಜಖಂಗೊಂಡಿರುತ್ತದೆ ಈ ಬಗ್ಗೆ ಅವರೊಳಗೆ ಮಾತುಕತೆಯಾಗಿರುತ್ತದೆ ಇದರಲ್ಲಿ ಯಾರಿಗೂ ಕೂಡ ಗಾಯವಾಗಿರುವುದಿಲ್ಲ.
5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.09.2014ರಂದು ಮಧ್ಯಾಹ್ನ ಸುಮಾರು 3.00 ಗಂಟೆಯ ಸಮಯಕ್ಕೆ ಆರೋಪಿಗಳಾದ 1. ಪ್ರಶಾಂತ್ ಬಿ. ರಾವ್ 2. ಬೆಳ್ಳೆ ಅರವಿಂದ ಶರ್ಮ ಎಂವರು ಜೇಸಿಬಿ ಹಿಟಾಚಿ ಯಂತ್ರವನ್ನು ಉಪಯೋಗಿಸಿಕೊಂಡು ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿದಾರರು ಹಾಗೂ ಸಾರ್ವಜನಿಕರು ಸೇರಿ ಘನ ವಾಹನಗಳ ಸುಗಮ ಸಂಚಾರಕ್ಕಾಗಿ ಕಳೆದ 5 ವರ್ಷಗಳ ಹಿಂದೆ ಜಲ್ಲಿಕಲ್ಲು ಹಾಗೂ ಕೆಂಪು ಮಣ್ಣನ್ನು ಹಾಕಿ ಪುನರ್ಚೆತನಗೊಳಿಸಿದ್ದ ರಸ್ತೆಯನ್ನು ಅಗೆದು ಹೊಂಡ ನಿರ್ಮಿಸಿ ನಷ್ಟವುಂಟು ಮಾಡಿರುತ್ತಾರೆ. ಈ ಕೃತ್ಯ ನಡೆಸುತ್ತಿರುವ ಸಮಯ ರಸ್ತೆಯ ಹಕ್ಕುಳ್ಳ ಇತರರು ಆಕ್ಷೇಪಿಸಿದಾಗ ಆರೋಪಿ ಪ್ರಶಾಂತ್ ಬಿ. ರಾವ್ ಎಂಬವರು ಪಿರ್ಯಾಧಿದಾರರನ್ನು ಹಾಗೂ ಇತರರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಕೈಕಾಲು ಮುರಿದು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ, ಆರೋಪಿ ಬೆಳ್ಳೆ ಅರವಿಂದ ಶರ್ಮ ಗೆ ಈ ರೀತಿಯ ಕೃತ್ಯವನ್ನು ನಡೆಸಲು ಆರೋಪಿ ಪ್ರಶಾಂತ್ ಬಿ. ರಾವ್ ಎಂಬವರು ಕುಮ್ಮಕ್ಕನ್ನು ಹಾಗೂ ಸಹಕಾರ ನೀಡಿರುತ್ತಾರೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರು KA-19 C-3080 ನೇ ಆಟೋ ರೀಕ್ಷಾ ಚಾಲಕರಾಗಿ ದುಡಿಯುತ್ತಿದ್ದು ತಮ್ಮ ಸಮಾಜಕ್ಕೆ ಸೇರಿದ ಬಾಲಕರನ್ನು ಪಂಪ್ ವೆಲ್ ಬಳಿ ಇರುವ ಮದರಸಕ್ಕೆ ಮಕ್ಕಳನ್ನು ಸಂಜೆ ಹೊತ್ತಿಗೆ ಕೊಂಡೋಗಿ ವಾಪಾಸು ಕರೆತರುವ ಕೆಲಸಮಾಡುತ್ತಿದ್ದು ಅದರಲ್ಲಿ ಅಶ್ರಫ್ ಎಂಬುವರ ಮೂರು ಜನ ಮಕ್ಕಳು ರಿಕ್ಷಾದಲ್ಲಿ ಇತರ ಮಕ್ಕಳಿಗೆ ತೊಂದರೆ ಕೊಟ್ಟಿರುವುದರಿಂದ ಇತರ ಮಕ್ಕಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಅಶ್ರಫ್ ರ ಮಕ್ಕಳಿಗೆ ಪಿರ್ಯಾದಿದಾರರು ಮದರಸಕ್ಕೆ ಕೊಂಡೋಗಿರುವುದಿಲ್ಲ ಈ ಉದ್ದೇಶವನ್ನಿಟ್ಟುಕೊಂಡು ಆರೋಪಿ ಅಶ್ರಫ್ ರು ದಿನಾಂಕ:23-10-2014 ರಂದು ಸಾಯಂಕಾಲ 18-45 ಗಂಟೆಗೆ ಪಿರ್ಯಾದಿದಾರರು ತನ್ನ ಬಾಬ್ತು ರೀಕ್ಷಾವನ್ನು ಪಂಪ್ ವೆಲ್ ನಿಂದಾಗಿ ತಾರೆತೋಟಕ್ಕೆ ಬರುವಾಗ ರೀಕ್ಷಾವನ್ನು ಅಡ್ಡಗಟ್ಟಿ ಕಾರಿನಿಂದ ಇಳಿದು ಪಿರ್ಯಾದಿಯ ಮೈಮೇಲೆ ಕೈಹಾಕಿ ಕೈಯಿಂದ ಮುಖಕ್ಕೆ ಹಲ್ಲೆನಡೆಸಿ ಅಲ್ಲೆ ಬಿದ್ದಿದ ಮರದ ರೀಪಿನಿಂದ ಹೊಡೆದು ಬೆನ್ನು ಕುತ್ತಿಗೆ ಹಾಗೂ ಎದೆಗೆ ಗುದ್ದಿ ನೋವುಂಟು ಮಾಡಿರುವುದಲ್ಲದೇ ಅವ್ಯಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ನಿನ್ನನ್ನು ದುಡಿಯಲು ಬಿಡುವುದಿಲ್ಲ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಘಟನೆಗೆ ಪಿರ್ಯಾದಿದಾರರು ಆರೋಪಿ ಅಶ್ರಫ್ ರ ಮಕ್ಕಳನ್ನು ಮದರಸಕ್ಕೆ ಕರೆದುಕೊಂಡು ಹೋಗಲಿಲ್ಲ ಎಂಬ ಉದ್ದೇಶದಿಂದ ಈ ಕೃತ್ಯ ನಡೆಸಿರುವುದಾಗಿದೆ.
7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಕೆ. ರವೀಂದ್ರ ಮೆಡಿಕಲ್ ಡಿಸ್ಟ್ರಿಬ್ಯೂಟರ್ ಕೆಲಸ ಮಾಡುತ್ತಿದ್ದು ಸ್ವಂತ ಅಂಗಡಿಯನ್ನು ನಡೆಸುವ ಉದ್ದೇಶದಿಂದ ಮಂಗಳೂರಿನ ಬಲ್ಷಠ ರಸ್ತೆಯಲ್ಲಿರುವ ರೂಪಾ ಹೊಟೇಲಿನ ಎದುರುಗಡೆ ಇರುವ ಸಿಟಿ ಸೆಂಟರ್‌ನ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿ 130 ಚದರ ಅಡಿ ವಿಸ್ತೀರ್ಣದ ಸ್ಥಳವನ್ನು ಮೂರು ವರ್ಷದ ಮಟ್ಟಿಗೆ ಬಾಡಿಗೆ ರೂಪದಲ್ಲಿ ಸದ್ರಿ ಬಿಲ್ಡಿಂಗ್‌ನ ಮಾಲಕಿಯಾದ ಜ್ಯೋತಿ ವಿಶ್ವನಾಥ್ ರವರಿಂದ ದಿನಾಂಕ: 20-10-2014 ರಂದು ಲೀಸ್ ಅಗ್ರಿಮೆಂಟ್ ಮಾಡಿರುವುದಾಗಿದೆ. ಸದ್ರಿ ಸ್ಥಳದಲ್ಲಿ ಅವರು ಅಲ್ಯುಮಿನಿಯಂ ಫ್ಯಾಬ್ರಿಕೇಶನ್ನಿಂದ ಅಂಗಡಿಯ ಕಟ್ಟಡದ ಮಾಲಕರ ಒಪ್ಪಿಗೆ ಹಾಗೂ ಅಗ್ರಿಮೆಂಟ್ನಂತೆ ಕಟ್ಟಿದ್ದು ದಿನಾಂಕ: 21-10-2014 ರಂದು ಅವರು ಸ್ಥಳದಲ್ಲಿ ಇಲ್ಲದ ವೇಳೆಯಲ್ಲಿ ಅವರ ಅಂಗಡಿಯ ಹಿಂಭಾಗದ ಅಂಗಡಿಯ ಮಾಲಕರಾದ ನಾಗರಾಜ್ ಎಂಬವರು ಎರಡು ಜನರ ಸಹಾಯದಿಂದ ದೂರುದಾರರು ನಿರ್ಮಿಸಿದ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ಗಳನ್ನು ತೆಗೆದು ಪುಡಿ ಮಾಡಿ ನಾಶ ಮಾಡಿದ್ದು ಅವರಿಗೆ ಸುಮಾರು 1,00,000/- ರೂಪಾಯಿ ನಷ್ಟ ಉಂಟು ಮಾಡಿರುವುದಾಗಿದೆ.
No comments:
Post a Comment