Saturday, October 25, 2014

Daily Crime Reports 25-10-2014

ದೈನಂದಿನ ಅಪರಾದ ವರದಿ.

ದಿನಾಂಕ 25.10.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-10-2014 ರಂದು ಸುಮಾರು 16-00 ಗಂಟೆಗೆ ಮಂಗಳೂರು ನಗರದ ಕುಂಟಿಕಾನ ಸೈಂಟ್ ಆನ್ಸ್ ಶಾಲೆಯ ಎದುರು ಕೆಎ-19/ಟಿಸಿ-5/2006-07 ನಂಬ್ರದ ಹೊಸ ಕಾರನ್ನು ಅದರ ಚಾಲಕ ದೀಪಕ್ ಎಂಬಾತನು ದೇರೇಬೈಲ್ ಕೊಂಚಾಡಿ ಕಡೆಯಿಂದ ಕುಂಟಿಕಾನ ಕಡೆಗೆ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದುದಾರರಾದ ಶ್ರೀ ಉದಿತ್ (ಪ್ರಾಯ 16 ವರ್ಷ) ರವರಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು, ಅವರ ಬಲಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು .ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸೀತಾರಾಮ ಗೌಡ ರವರ ತಮ್ಮ ಪುರುಷೊತ್ತಮ ನಿಗೆ ಸುಮಾರು 10 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು ಆತನಿಗೆ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಮತ್ತು ಉಡುಪಿಯಲ್ಲಿ ಆರ್ಯುವೇದಿಕ್ ಚಿಕಿತ್ಸೆಯನ್ನು ಕೊಡಿಸುತ್ತಿದ್ದು, ದಿನಾಂಕ 22-10-2014 ರಂದು ಮಂಗಳೂರಿನ ಪಿ.ಎಂ ರಸ್ತೆಯಲ್ಲಿರುವ ಗ್ಲೋಬಲ್ ಕಂಪ್ಯೂಟರ್ ಸರ್ವಿಸಸ್ ನಲ್ಲಿ ಅದರ ಮಾಲಕರು ಅಂಗಡಿಯಲ್ಲಿ ನಡೆಯುವ ಪೂಜೆಯ ಬಗ್ಗೆ ಬರಲು ತಿಳಿಸಿದಂತೆ ಪಿರ್ಯಾದಿದಾರರು ತನ್ನ ತಮ್ಮ ಪುರುಷೋತ್ತಮನನ್ನು ಪೂಜೆಗೆ ಮಂಗಳೂರು ತಾಲ್ಲೂಕು ಮಚ್ಚೂರು ಅಮಚೆ & ಗ್ರಾಮ, ಮಚ್ಚೂರು ಬೆಂಗರೆ ಮನೆಯಿಂದ ಕರೆದುಕೊಂಡು ಬಂದು ಗ್ಲೋಬಲ್ ಕಂಪ್ಯೂಟರ್ ಅಂಗಡಿಯಲ್ಲಿ ಕುಳ್ಳಿರಿಸಿ, ಜೊತೆಯಲ್ಲಿ ಕುಳಿತಿದ್ದು, ಪೂಜೆ ಸಮಯ ಹಲವಾರು ಜನರು ಅಂಗಡಿಯ ಒಳಗೆ ಬಂದು ಸೇರಿದ್ದರು. ಆಗ ಸಮಯ ಸುಮಾರು 11.00 ಗಂಟೆ ಪಿರ್ಯಾದಿದಾರರು ತನ್ನ ತಮ್ಮ ಕುಳಿತಿರುವ ಸ್ಥಳವನ್ನು ನೋಡಿದಾಗ ತಮ್ಮ ಸ್ಥಳಧಲ್ಲಿ ಇಲ್ಲದೇ ಇದ್ದು, ಆಸುಪಾಸಿನ ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ವಿಚಾರಿಸಿದ್ದಲ್ಲಿ ಪತ್ತೆಯಾಗದೇ ಇದ್ದು, ಪುರುಷೊತ್ತಮ ನು ಯಾರ ಸಹಾಯ ಇಲ್ಲದೇ ಏಕಾಂಗಿಯಾಗಿ ಹೊರಗೆ ಹೋದವನಲ್ಲ. ಆತನು ಮಂಗಳೂರಿನ ಆಸ್ಪತ್ರೆಗೆ ಬರಬೇಕಾದಲ್ಲಿ ಮನೆಯವರ ಸಹಕಾರ ಅಗತ್ಯ ಇರುವಷ್ಟು ಮಾನಸಿಕ ಅಸ್ವಸ್ಥನಾಗಿದ್ದು, ಸಂಬಂದಿಕರ ಮನೆಗಳಿಗೆ ಪೋನ್ ಕರೆ ಮಾಡಿ ವಿಚಾರಿಸಿಕೊಂಡಾಗಲು ಆತನ ಇರುವಿಕೆ ಬಗ್ಗೆ ಮಾಹಿತಿ ಲಭ್ಯವಾಗದೇ ಇರುವುದಾಗಿದೆ. ಕಾಣೆಯಾದ ಗಂಡಸಿನ ಚಹರೆ : ಹೆಸರು: ಪುರುಷೊತ್ತಮ ಪ್ರಾಯ  28  ವರ್ಷ    ತಂದೆ  ದಿ ಗಂಗಯ್ಯ ಗೌಡ, ಎತ್ತರ: 5 ಅಡಿ, ಸಪೂರ ಮೈ ಕಟ್ಟು, ಬಿಳಿ ಮೈ ಬಣ್ಣ, ಕಪ್ಪು ತಲೆ ಕೂದಲು , ಮೀಸೆ ಬೋಳಿಸಿರುತ್ತಾನೆ.  ಜಾತಿ: ಕೊಂಕಣಿ , ತಿಳಿದಿರುವ ಬಾಷೆ: ಕನ್ನಡ, ತುಳು, ಕೊಂಕಣಿ ಭಾಷೆ ಮಾತನಾಡುತ್ತಾರೆ, ವಿಧ್ಯಾಭ್ಯಾಸ : 10ನೇ ತರಗತಿ, ಧರಿಸಿದ ಬಟ್ಟೆ:  ಕಪ್ಪು ಬಣ್ಣದ ಪ್ಯಾಂಟ್ , ಕಪ್ಪು ಗೆರೆಗಳಿರುವ  ಬಿಳಿಬಣ್ಣದ ಶರ್ಟ್ , ಕಪ್ಪು ಕಾಲರ್ ಇರುತ್ತದೆ.

 

3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22/10/2014 ರಂದು 20.30 ಗಂಟೆಗೆ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ನೀರಳಿಕೆ ಎಂಬಲ್ಲಿ ರಸ್ತೆ ಬದಿಯಲ್ಲಿ ಪಿರ್ಯಾದಿದಾರರಾದ ಶ್ರೀ ನಾರಾಯಣ ಗೌಡ ರವರು ನಡೆದುಕೊಂಡು ಹೋಗುತ್ತಿದ್ದಾಗ ಬಜಪೆ ಕಡೆಯಿಂದ ಒಂದು ಮೋಟಾರು ಸೈಕಲ್ ನಂಬ್ರ KA 19 K 6814 ನೇದ್ದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯದಿದಾರರು ರಸ್ತೆಗೆ ಬಿದ್ದು, ಅವರ ಎಡ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-10-2014 ರಂದು ಅನಿಲ್ ನಜರತ್ ಎಂಬವರು ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ಪೆರ್ಮುದೆ ಮೀನು ಮಾರ್ಕೆಟ್ ನಿಂದ ಮೀನು ತೆಗೆದುಕೊಂಡು ನಡೆದುಕೊಂಡು ಬರುತ್ತಿರುವಾಗ ಸಮಯ ಸುಮಾರು 11.15 ಗಂಟೆಗೆ ಬಜಪೆ ಕಡೆಯಿಂದ ಕಟೀಲು ಕಡೆಗೆ ರಿಜ್ಡ್ ಕಾರು ನಂಬ್ರ KA 19 MC 3502 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅನಿಲ್ ನಜರತ್ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು, ಅವರ ತಲೆಗೆ, ಕೈ ಕಾಲಿಗೆ ತೀವೃ ಸ್ವರೂಪದ ಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು .ಜೆ. ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಳು ಅನಿಲ್ ನಜರತ್ ರವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 24-10-2014 ರಂದು 12.15 ಗಂಟೆಗೆ ಮೃತಪಟ್ಟಿರುತ್ತಾರೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23.10.2014 ರಂದು  ಸಂಜೆ 05.05 ಗಂಟೆಗೆ ಕೆಲಸ ಮುಗಿಸಿ ಬಜಾಲ್‌‌‌ ಕುತ್ತಡ್ಕದಿಂದ KA19AB5665 ಬಸ್ಸಿನಲ್ಲಿ ಜಪ್ಪಿನಮೊಗರು ಕಡೆಗೆ ಬರುವರೇ ಹತ್ತಿದ್ದು ಸದ್ರಿ ಬಸ್ಸಿನಲ್ಲಿ ಪಿರ್ಯಾದಿದಾರರಾದ ಭುಜಂಗ ರವರ ನೆರೆಮನೆಯ ದೇವಕಿ ಎಂಬವರು ಕೂಡಾ ಕುಳಿತ್ತಿದ್ದರು, ಸದ್ರಿ ಬಸ್ಸು ಸಂಜೆ ಸುಮಾರು 5.10 ಗಂಟೆ ವೇಳೆಗೆ  ಜಪ್ಪಿನಮೊಗರು ರಿಷಿ ಜನರಲ್‌‌ ಸ್ಟೋರ್ಸ್‌‌ ಬಳಿಯ ಬಸ್ಸು ತಂಗುದಾಣದ ಬಳಿ ನಿಂತಾಗ ಪಿರ್ಯಾದಿದಾರರು ಇಳಿದಿದ್ದು ಅವರ ಹಿಂದಿನಿಂದ ದೇವಕಿಯವರು ಬಸ್ಸಿನಿಂದ ಕೆಳಗೆ ಇಳಿಯುವ ಸಲುವಾಗಿ ಸದ್ರಿ ಬಸ್ಸಿನ ಮುಂಬಾಗಿಲ ಮೆಟ್ಟಲಿನಲ್ಲಿದ್ದಾಗ ಸದ್ರಿ ಬಸ್ಸಿನ ಕಂಡಕ್ಟರ್‌‌ ರಮೇಶ್‌‌‌ ಎಂಬವರು ದೇವಕಿಯವರು ಬಸ್ಸಿನ ಮೆಟ್ಟಿಲಿನಿಂದ ಕೆಳಗಿಳಿಯುತ್ತಿರುವುದನ್ನು ನೋಡಿಯೂ ನಿರ್ಲಕ್ಷ್ಯತನದಿಂದ ಸದ್ರಿ ಬಸ್ಸಿನ ಚಾಲಕನಿಗೆ ಬಸ್ಸನ್ನು  ಚಲಾಯಿಸುವಂತೆ ಸೂಚನೆ ನೀಡಿದ್ದರಿಂದ ಬಸ್ಸುಚಾಲಕ ಅಶ್ವಿನ್‌‌ ಎಂಬವನು ದೇವಕಿಯವರು ಬಸ್ಸಿನ ಮೆಟ್ಟಿಲಿನಿಂದ ಒಂದು ಕಾಲನ್ನು ನೆಲಕ್ಕೆ ಇಡುವಷ್ಟರಲ್ಲಿ ಸದ್ರಿ ಬಸ್ಸನ್ನು ದುಡುಕಿನಿಂದ ಮುಂದಕ್ಕೆ ಚಲಾಯಿಸಿದ್ದರಿಂದ ದೇವಕಿಯವರು ರಸ್ತೆಗೆ ಬಿದ್ದು ಸದ್ರಿ ಬಸ್ಸಿನ ಹಿಂಬದಿ ಎಡಬದಿಯ ಚಕ್ರವು ರಸ್ತೆಯಲ್ಲಿ ಬಿದ್ದಿದ್ದ  ದೇವಕಿಯವರ ಮೈಮೇಲೆಯೇ ಹಾದು ಹೋದ ಪರಿಣಾಮ ಅವರ ಕಾಲಿಗೆ, ಬೆನ್ನಿಗೆ  ತೀವ್ರಗಾಯಗಳಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಕುಲಾಸೋ ಆಸ್ಪತ್ರೆಗೆ  ದಾಖಲಿಸಿದ್ದು, ಸದ್ರಿಯವರು ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಸುಮಾರು 9.55 ಗಂಟೆಗೆ  ಮೃತಪಟ್ಟಿರುತ್ತಾರೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14.10.2014 ರಂದು ಬೆಳಿಗ್ಗೆ 9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕಣ್ಣಾ ಮೇಸ್ತ್ರಿ ರವರ ಪರಿಚಯದ  ರಾಜಪ್ಪ ಎಂಬವರು ಹಲ್ಲುನೋವಿಗೆ ಮದ್ದಿಗೆಂದು ಆಸ್ಪತ್ರೆಗೆ ಹೋಗುವರೇ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಫರಂಗಿಪೇಟೆ ಅರ್ಕುಳ ಕಡೆಗೆ ರಾ.ಹೆ 75 ರಸ್ತೆಯನ್ನು ದಾಟುತ್ತಿದ್ದ ಸಮಯ ಬಿ.ಸಿ ರೋಡ್‌‌ ಕಡೆಯಿಂದ ಬಂದ ಯಾವುದೋ ಒಂದು  ವಾಹನವನ್ನು ಅದರ ಚಾಲಕ ಅತೀವೆಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಾಜಪ್ಪ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರ ಕೈಗಳಿಗೆ, ತಲೆಗೆ ಮತ್ತು ಇತರ ಕಡೆಗಳಿಗೆ ಗಂಭೀರಗಾಯವಾಗಿದ್ದು ಸದ್ರಿಯವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದು ಅವರು ಚಿಕಿತ್ಸೆಯಲ್ಲಿದ್ದಂತೆ ಮಧ್ಯಾಹ್ನ ಸುಮಾರು 2.00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿಯೂ, ಅಪಘಾತ ಮಾಡಿದ ವಾಹನವನ್ನು ಅದರ ಚಾಲಕ ನಿಲ್ಲಿಸದೇ ಪರಾರಿಯಾಗಿರುತ್ತಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24.10.2014 ರಂದು ಸಂಜೆ 5.15 ಗಂಟೆ ವೇಳೆಗೆ ಪಿರ್ಯಾಧಿದಾರರಾದ ಶ್ರೀ ಲಕ್ಷ್ಮೀನಾಥ್ ರವರು ತನ್ನ ತಂದೆಯ ಬಾಬ್ತು ಆಲ್ಟೋ ಕಾರು ನಂಬ್ರ ಕೆಎ-05-ಎಂಡಿ-9680 ನೇ ದರಲ್ಲಿ  ಪಡೀಲ್‌‌ ಕಡೆಗೆ ಬಂದು ನಂತರ ಕೆಲಸ ಪೂರೈಸಿ ವಾಪಾಸು ಮನೆ ಕಡೆಗೆ  ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ಕೊಡಕ್ಕಲ್ರೈಲ್ವೇ ಮೇಲ್ಸೇತುವೆ ಬಳಿ  ತಲುಪಿದಾಗ  ಪಿರ್ಯಾದಿದಾರರ ಕಾರಿನ ಹಿಂಬದಿಯಿಂದ ಅಂದರೆ ಪಡೀಲ್‌‌ ಕಡೆಯಿಂದ ಕಣ್ಣೂರು ಕಡೆಗೆ ಟ್ಯಾಂಕರ್‌‌‌ ಲಾರಿ ನಂಬ್ರ ಕೆಎ-19-ಡಿ-216 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಹೊಡೆದ ಪರಿಣಾಮ  ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿರುವುದಾಗಿದೆ.

No comments:

Post a Comment