ದೈನಂದಿನ ಅಪರಾದ ವರದಿ.
ದಿನಾಂಕ 16.10.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 1 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-10-2014 ರಂದು ಬೆಳಿಗ್ಗೆ 9-00 ಗಂಟೆಗೆ ಕುಂಟಿಕಾನದಲ್ಲಿರುವ ಹೂಂಡೈ ಶೋರೂಮ್ ಬಳಿ ರಾ.ಹೆ 66 ರಲ್ಲಿ ಫಿರ್ಯಾದಿದಾರರಾದ ಶ್ರೀ ವಾಸುದೇವ ರವರು ತಾನು ಕೆಲಸ ಮಾಡಿತ್ತಿರುವ ಹೂಂಡೈ ಕಂಪನಿಗೆ ಸರ್ವಿಸ್ ಮಾಡವರೇ ಕೆ ಎ 21 ಎಮ್ 5546 ನೇ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಮೊಬೈಲ್ ಕರೆ ಬಂದಿರುವುದರಿಂದ ಮಾತನಾಡಲು ರಸ್ತೆಯ ಬದಿಗೆ ನಿಲ್ಲಿಸಿದ್ದಾಗ, ಹಿಂದುಗಡೆಯಿಂದ ಕೊಟ್ಟಾರಚೌಕಿ ಕಡೆಯಿಂದ ಕುಂಟಿಕಾನ ಕಡೆಗೆ ಕೆ ಎ 03 ಇಡಿ 5713 ನೇ ನಂಬ್ರದ ಬೈಕನ್ನು ಕೆಲ್ವೀನ್ ಎಂಬವರು ನಿರ್ಲಕ್ಷತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಕಾರಿನ ಹಿಂದುಗಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ ಸೈಕಲ್ ಸಮೇತ ರಸ್ತೆಗೆ ಬಿದ್ದು ಸವಾರರಿಗೆ ಗಾಯವಾಗಿದ್ದು, ಈ ಅಪಘಾತದಿಂದ ವಾಹನಗಳೆರಡೂ ಜಖಂಗೊಂಡಿದ್ದು, ಬೈಕ್ ಸವಾರರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14-10-2014 ರಂದು ಸುಮಾರು 16-30 ಗಂಟೆಗೆ ಮಂಗಳೂರು ನಗರದ ಬಿಕರ್ನಕಟ್ಟೆ ಇನ್ಫೆಂಟ್ ಜೀಸಸ್ ಚರ್ಚ್ ದ್ವಾರದ ಎದುರು ಪಿರ್ಯಾದಿದಾರರಾದ ಶ್ರೀ ರಾಯ್ ನೂರ್ ಬಾಸಿಲ್ ಮೊರಸ್ ರವರು ಅವರ ಬಾಬ್ತು ಕೆಎ-19-ಇ.ಕೆ-4813 ನಂಬ್ರದ ಮೋಟಾರು ಸೈಕಲಿನಲ್ಲಿ ವಾಮಂಜೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದಾಗ ಕೆಎ-19-ಎಂ.ಡಿ-7512 ನಂಬ್ರದ ಕಾರನ್ನು ಅದರ ಚಾಲಕ ಆರೋಪಿ ಮ್ಯಾಕ್ಸಿನ್ ಪಿರೇರಾ ಎಂಬಾತನು ಇನ್‌ಫೆಂಟ್ ಜೀಸಸ್ ದ್ವಾರದ ಕಡೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಮುನ್ನುಗ್ಗಿಸಿ ಪಿರ್ಯಾದಿದಾರರ ಮೋಟಾರು ಸೈಕಲಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರ ಎಡಕೈ ರಿಸ್ಟ್ ಮತ್ತು ತಟ್ಟಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಎಡಕೈ ಮೊಣಗಂಟಿನ ಬಳಿ ಚರ್ಮ ತರಚಿದ ಗಾಯವಾಗಿದ್ದು, ಗಾಯಾಳು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14/10/2014 ರಂದು ಸಂಜೆ 16:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಮೊಹಮ್ಮದ್ ಸಲ್ಮಾನ್ ರವರು ಹಾಗೂ ಅವರ ಮಾವನ ಮಗ ಅಶ್ರಫನೊಂದಿಗೆ ಕೆಎ-19-ಇಜೆ-5158 ರಲ್ಲಿ ಬೈಕಿನಲ್ಲಿ ಸಹ ಸವಾರರಾಗಿ ಹೋಗುತ್ತ ಮಂಗಳಾದೆವಿ ಕಡೆಯಿಂದ ಬೋಳಾರದ ಕಡೆಗೆ ಹೋಗುವ ರಸ್ತೆಯಲ್ಲಿ ಆಶ್ರಫನು ಬೈಕನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೆಪ್ಪು ಎಂಬಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಆಡು ಒಂದನ್ನು ಕಂಡು ಒಮ್ಮಲೆ ಬೈಕಿಗೆ ಬ್ರೆಕ್ ಹಾಕಿದ ಪರಿಣಾಮ ಬೈಕು ಸ್ಕಿಡ್ಡಾಗಿ ರಸ್ತೆಗೆ ಬಿದ್ದು ಫಿರ್ಯಾದುದಾರರ ಬಲಕೈಗೆ ಮೋಣಗಂಟಿನ ಬಳಿ ಮೂಳೆ ಮುರಿತದ ಗಂಭಿರ ಸ್ವರೂಪದ ಗಾಯ ಹಾಗೂ ಸವಾರನಿಗೆ ಸಣ್ಣ ಪುಟ್ಟ ಗುದ್ದಿದ ನೊವು ಉಂಟಾಗಿದ್ದು ಫಿರ್ಯಾದುದಾರರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15/10/2014 ರಂದು ಬೆಳಗ್ಗೆ ಸುಮಾರು 9:00 ಗಂಟೆಗೆ ಮಂಗಳೂರು ನಗರದ ಎ ಬಿ ಶೆಟ್ಟಿ ಸರ್ಕಲನಲ್ಲಿ ಆರ್ ಟಿ ಓ ಕಛೆರಿಯ ಬಳಿ ಕೆ ಎ 19-ಇಜಿ-4016 ನಂಬ್ರದ ಸ್ಕೂಟರ್ ಅನ್ನು ಅದರ ಸವಾರ ದಿವಾಕರ ಎಂಬಾತನು ಹಂಪನಕಟ್ಟೆಯಿಂಧ ಎ ಬಿ ಶೆಟ್ಟಿ ಸರ್ಕಲನ ಸಾರ್ವಜನಿಕ ಕಾಂಕ್ರಿಟ್ ರಸ್ತೆಯಲ್ಲಿ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಗುಡಿಸುತ್ತಿದ್ದ ಪಿರ್ಯಾದುದಾರರಾದ ಶ್ರೀಮತಿ ಗಿರೀಜಮ್ಮಾ ರವರ ಬಲಕಾಲಿನ ಮೊಣ ಗಂಟಿಗೆ ಮತ್ತು ಕೋಲು ಕಾಲಿಗೆ ರಕ್ತ ಗಾಯವಾಗಿರುತ್ತದೆ.
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪಿ. ಗಣೇಶ್ ರವರು ಕಳೆದ 8 ವರ್ಷಗಳಿಂದ ಮೈದಾನ 4 ನೇ ಕ್ರಾಸ್ ರಸ್ತೆಯಲ್ಲಿರುವ ಸಿಂಗಾಲ ಚೇಂಬರ್ ಕಾಂಪ್ಲೆಕ್ಸ್ ನಲ್ಲಿ ಸೆಕ್ಯುರಿಟಿ ಗಾರ್ಡ ಹಾಗೂ ಸದ್ರಿ ಕಟ್ಟಡದ 3 ನೇ ಮಹಡಿಯಲ್ಲಿರುವ ರೂಂ ಗಳನ್ನು ನೋಡಿಕೊಳ್ಳುವ ಕೆಲಸ ಮಾಡಿಕೊಂಡಿದ್ದು, ದಿನಾಂಕ 12-10-2014 ರಂದು ಬೆಳಗ್ಗೆ ಸುಮಾರು 8 ಗಂಟೆಗೆ ಸುರೇಶ್ ಮತ್ತು ಆತನ ಜೊತೆ ಇಬ್ಬರು ಉಳಕೊಳ್ಳಲು ರೂಂ ಬೇಕೆಂದು ಫಿರ್ಯಾದಿದಾರರ ಪತ್ನಿಯ ಜೊತೆ ಹೇಳಿದಾಗ ಅವಳು ರೂಂ ಇಲ್ಲ ಎಂದು ಹೇಳಿ ಕಳುಹಿಸಿದ್ದು, ಪುನಃ ರಾತ್ರಿ ಇಬ್ಬರು ವ್ಯಕ್ತಿಗಳು ಫಿರ್ಯಾದಿಯಲ್ಲಿ ರೂಂ ಬೇಕೆಂದು ಕೇಳಿದಾಗ ರೂಂ ನಂಬ್ರ 2 ನ್ನು ಅವರಿಗೆ ಕೊಟ್ಟು ಮರುದಿನ ಬೆಳಗ್ಗೆ ಅವರ ಜೊತೆ ಇನ್ನೊಬ್ಬ ಸೇರಿಕೊಂಡು ಉಳಕೊಂಡಿದ್ದು, ಅವರು 3 ಜನ ಶಿವಮೊಗ್ಗದ ಕಡೆಯವರೆಂದು ಜೋತಿಷ್ಯ ಹೇಳುವ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೊಳ್ಳುತ್ತಿದ್ದು, ದಿನಾಂಕ 13-10-2014 ರಂದು ರೂಂ ನಂಬ್ರ 10 ರಲ್ಲಿ ಗದುಗಿನಿಂದ ಬಂದ 4 ಜನರು ಇದ್ದು ಅವರ ಜೊತೆ ಈ 3 ಜನ ಶಿವಮೊಗ್ಗದವರನ್ನು ಉಳಕೊಳ್ಳುವಂತೆ ಹೇಳಿದ್ದು, ದೂರುದಾರರ ಮಕ್ಕಳಿಗೆ ಮಲೇರಿಯಾ ಖಾಯಿಲೆ ನಿಮಿತ್ತ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದರಿಂದ ಅವರ ಆರೈಕೆಯನ್ನು ನೋಡಿ ದಿನಾಂಕ 15-10-2014 ರಂದು ರಾತ್ರಿ ಸುಮಾರು 8:45 ಗಂಟೆಗೆ ಕಾಂಪ್ಲೆಕ್ಸಿಗೆ ಬಂದು ಊಟ ಮಾಡಿ ಕಾಂಪ್ಲೆಕ್ಸಿನ ಕೆಳಗಡೆ ಇರುವ ಅಂಗಡಿಗಳ ಸುತ್ತುಮುತ್ತು ನೋಡಿ ಕಟ್ಟಡದ ಮಧ್ಯೆ ಇರುವ ಜಾಗವನ್ನು ಟಾರ್ಚ್ ಮೂಲಕ ನೋಡಿದಾಗ ಅಲ್ಲಿ ಒಬ್ಬ ವ್ಯಕ್ತಿ ಓಣಿಯಲ್ಲಿ ಬಿದ್ದುದನ್ನು ನೋಡಿ ಈ ವಿಷಯವನ್ನು ಕಟ್ಟಡದ ಮಾಲಕರಾದ ನೀಲೆಶ್ ಸಿಂಗಾಲ ರವರಿಗೆ ಫೋನ್ ಮೂಲಕ ತಿಳಿಸಿದ ಮೇರೆಗೆ ಅವರು ಕೂಡಲೇ ಸ್ಥಳಕ್ಕೆ ಬಂದು ಮೃತ ವ್ಯಕ್ತಿಯನ್ನು ನೋಡಿದಾಗ ಮೃತ ವ್ಯಕ್ತಿಯು ರೂಂ ನಂಬ್ರ 10 ರಲ್ಲಿ ಉಳಕೊಂಡಿದ್ದ ಸುರೇಶ್ ಎಂದು ಖಚಿತಪಡಿಸಿಕೊಂಡು, ಮೃತ ಸುರೇಶನ ತಲೆಗೆ ಯಾವುದೋ ಆಯುಧದಿಂದ ಆರೋಫಿಗಳು ಬಲವಾಗಿ ಹೊಡೆದು ಕೊಲೆ ಮಾಡಿ ಪರಾರಿಯಾಗಿರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.10.2014 ರಂದು ರಾತ್ರಿ ಸಮಯ ಮಾರ್ಪಾಡಿ ಗ್ರಾಮದ ಮಸೀದಿ ರಸ್ತೆ ಬಳಿ ಇರುವ ನೆಕ್ಸ್ಟ್ ಶಾಪಿಂಗ್ ಮಹಲ್ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ತಗಡಿನಿಂದ ನಿರ್ಮಿಸಿದ ಕಾರ್ಮಿಕರ ಕೋಣೆಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ರೂಂನಲ್ಲಿದ್ದ ಕಾರ್ಮಿಕರ ಪ್ಯಾಂಟಿನಿಂದ WING M60 ಎಂಬ ಮೊಬೈಲ್ ಹಾಗೂ ಪರ್ಸ್ ಹಾಗೂ ಅದರಲ್ಲಿದ್ದ ಸುಮಾರು 1530 ಕಳವು ಮಾಡಿದ್ದು ಕಳವು ಮಾಡಿದ ಸೊತ್ತಿನ ಒಟ್ಟು ಮೌಲ್ಯ 3530 ಆಗಬಹುದು.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15/10/2014 ರಂದು ಮದ್ಯಾಹ್ನ 2-30 ರ ವೇಳೆಗೆ ಅಡ್ಡೂರಿನ ಮಂಜೊಟ್ಟಿಗೆ ಹೋಗುವ ದಾರಿಯಲ್ಲಿ ವಾಹನ ಸಂಖ್ಯೆ ಕೆ.ಎ 19 ಸಿ 7735 ಮರಳು ಸಾಗಾಣಿಕೆಯ ಟ್ರಕ ಅನಲೋಡ ಮಾಡಿ ಹೋಗುವಾಗ ವಿದ್ಯುತ ಕಂಬಕ್ಕೆ ತಾಗಿಸಿಕೊಂಡು ತಂತಿಯನ್ನು ಎಳೆದುಕೊಂಡು ಹೋಗಿ ಎರಡು ಕಂಬಗಳು ತುಂಡಾಗಿ ಕಂಪನಿಗೆ ಸುಮಾರು ರೂ 20,000/- ಗಳಷ್ಟು ನಷ್ಟವುಂಟಾಗಿರುತ್ತದೆ ಹಾಗೂ ಸ್ಥಳೀಯ ಗ್ರಾಹಕರುಗಳಿಗೆ ವಿದ್ಯುತ ಆಡಚಣೆಯುಂಟಾಗಿರುತ್ತದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 16-4-2012 ರಿಂದ 23-8-2014 ರ ಮದ್ಯಾವಧಿಯಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್, ತೊಕ್ಕೊಟು ಶಾಖೆ ಎಂಬಲ್ಲಿ ಚಿನ್ನಾಭರಣಗಳ ಮೌಲ್ಯ ಮಾಪಕರಾಗಿ ನೇಮಿಸಲ್ಪಟ್ಟ ಸಂದೀಪ್ ಆಚಾರಿಯವರು ಪರಿಶೀಲನೆಯ ಮೇರೆಗೆ ಅಜಿತ್.ಎ. ಶ್ರೀಮತಿ. ಸುಕನ್ಯಾ ರಾವ್, ಚೇತನ್, ನಿಶಾ, ಶ್ರೀಮತಿ. ಸುಲೋಚನಾ, ರೆದೀಶ್ ಬಾಬು, ಧನರಾಜ್, ತುಕರಾಮ, ನಮಿತ್ಕುಮಾರ್, ಯತೀಶ್, ಸುನಿಲ್, ನಿಶಾನ್ ರವರುಗಳು ಚಿನ್ನಾಭರಣಗಳನ್ನು ಅಡವು ಇಟ್ಟು ಒಟ್ಟು ರೂ. 11,97,670-00 ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು, ದಿನಾಂಕ. 18-9-2014 ರಂದು ನಮಿತ್ ಕುಮಾರ್ ರವರು ಸದ್ರಿ ಬ್ಯಾಂಕಿನಿಂದ ಚಿನ್ನಾಭರಣ ಅಡವಿನ ಮೇಲೆ ಸಾಲ ಪಡೆಯಲು ಚಿನ್ನಾಭರಣ ತಂದಿದ್ದನ್ನು ಸಂದೀಪ್ ಆಚಾರಿಯವರು ಪರಿಶೀಲಿಸಿ ಚಿನ್ನಾಭರಣ ಸರಿಯಾಗಿವೆ, ಸಾಲ ಕೊಡಲು ಯೋಗ್ಯವಾಗಿದೆ ಎಂದು ದೃಢೀಕರಿಸಿದ್ದು, ಆದರೆ ಬ್ಯಾಂಕ್ನವರಿಗೆ ಸಂದೇಹ ಉಂಟಾಗಿ ಮತ್ತೊಮ್ಮೆ ವಿಚಾರಿಸಲಾಗಿ ಸದ್ರಿ ಚಿನ್ನಾಭರಣದ ಗುಣಮಟ್ಟ ಸ್ವಲ್ಪ ಕೆಳಸ್ಥರದಲ್ಲಿದೆ ಎಂದು ತಿಳಿಸಿದ್ದು, ನಂತರ ಬ್ಯಾಂಕಿನವರು 12 ಮಂದಿ ಅಡವಿಟ್ಟ ಚಿನ್ನಾಭರಣವನ್ನು ಬೇರೆಯವರಿಂದ ಪರಿಶೀಲಿಸಲಾಗಿ ಸದ್ರಿ ಚಿನ್ನಾಭರಣಗಳು ನಕಲಿಯಾಗಿದ್ದು, ಆರೋಪಿ ಸಂದೀಪ್ ಆಚಾರಿಯವರು ನಂಬಿಕೆ ದ್ರೋಹ ಮಾಡಿದಲ್ಲದೆ, ಆರೋಪಿ ಅಜಿತ್ ಮತ್ತು ಇತರರು ನಕಲಿ ಚಿನ್ನಾಭರಣಗಳನ್ನು ಅಡವು ಇಟ್ಟು ಬ್ಯಾಂಕ್ನಿಂದ ಸಾಲ ಪಡೆದುಕೊಂಡಿರುವುದಾಗಿದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಬ್ದುಲ್ ರೆಹಮಾನ್ ರವರ ತಮ್ಮ ಮಜೀದ್ (30) ಎಂಬಾತನು ದಿನಾಂಕ. 14-10-2014 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಎಂದಿನಂತೆ ಮಂಗಳೂರು ಬಂದರ್ನಲ್ಲಿರುವ ಬದ್ರಿಯ ಸೀ ಫುಡ್ ಕಂಪೆನಿಯಲ್ಲಿ ಒಣಮೀನಿನ ಕೂಲಿ ಕೆಲಸಕ್ಕೆ ಹೋಗುವ ಸಮಯದಲ್ಲಿ ಆತನ ಹೆಂಡತಿ ಫೌಝಿಯ ಳಲ್ಲಿ ಹೇಳಿ ಹೋಗಿರುತ್ತಾನೆ. ಆದರೆ ಆತನು ಕೆಲಸ ಬಿಟ್ಟು ಪ್ರತೀ ದಿನ ಸಂಜೆ 7-00 ಗಂಟೆಯ ಹೊತ್ತಿಗೆ ವಾಪಾಸು ಬರುವುದು ವಾಡಿಕೆಯಾಗಿರುತ್ತದೆ. ಆದರೆ ನಿನ್ನೆ ಮಜೀದನು ಕೆಲಸಕ್ಕೆ ಹೋದವನು ವಾಪಾಸು ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಮಜೀದನು ಕೆಲಸ ಮಾಡುವ ಮಾಲಿಕರಾದ ಫರಂಗಿಪೇಟೆ ವಾಸಿ ಶಬೀರ್ ರವರಿಗೆ ಪೋನ್ ಮಾಡಿ ವಿಚಾರಿಸಿದಾಗ ಆತನು ನಿನ್ನೆ ದಿನ ಕೆಲಸಕ್ಕೆ ಬಂದಿರುವುದಿಲ್ಲ ಎಂದು ತಿಳಿಸಿದರು. ನಂತರ ಸಂಬಂದಿಕರ ಮನೆ, ಸ್ನೇಹಿತರ ಮನೆ, ಹಾಗೂ ಆಸುಪಾಸಿನಲ್ಲಿ ಹುಡುಕಾಡಿದರೂ ಇದುವರೆಗೆ ಆತನು ಪತ್ತೆಯಾಗಿರುವುದಿಲ್ಲ. ಮಜೀದನು ಸುಮಾರು 9 ವರ್ಷಗಳ ಹಿಂದೆ ದುಬಾಯಿಯಲ್ಲಿ ಕೆಲಸಕ್ಕೆ ಹೋದವನು ಅಲ್ಲಿ ಸುಮಾರು 7 ವರ್ಷಗಳ ಕಾಲ ಕೆಲಸವನ್ನು ಮಾಡಿದ್ದು, ಅಲ್ಲಿ ಆತನಿಗೆ ಮಾನಸಿಕ ಖಾಯಿಲೆ ಉಂಟಾದ ಕಾರಣ ಸುಮಾರು 2 ವರ್ಷಗಳ ಹಿಂದೆ ಆತನನ್ನು ಮಂಗಳೂರಿನ ರೂಪ ಬಿಲ್ಡಿಂಗ್ನ ಬಳಿ ಇರುವ ಡಾ: ಶ್ರೀನಿವಾಸ ಭಟ್ ರವರಿಂದ ಔಷಧಿಯನ್ನು ಮಾಡಿಸಲಾಗುತ್ತಿದೆ. ಆದರೆ ಮಜೀದನಿಗೆ ಪೂರ್ತಿ ಗುಣಮುಖವಾಗಿರುವುದಿಲ್ಲ. ಆತನು ಒಂದೊಂದು ಬಾರಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದನು.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.10.2014 ರಂದು ಮಧ್ಯಾಹ್ನ 15.45 ಗಂಟೆಯಿಂದ 15.15 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾಧಿದಾರರಾದ ಎಂ. ರೇಖಾ ರವರು ಅವರ ಬಾಬ್ತು ಮಾರುತಿ ಆಲ್ಟೋ 800 ನೇ ಕೆಎ-19-ಎಂಇ-1725 ನೇ ಕಾರಿನಲ್ಲಿ ಮಂಗಳೂರು ನ್ಯಾಯಾಲಯಕ್ಕೆ ಹೋಗಿ ಕೇಸಿನ ಬಗ್ಗೆ ಹಾಜರಾಗಿ ಕೇಸು ಮುಗಿಸಿಕೊಂಡು ಹಿಂತಿರುಗಿ ಮನೆಗೆ ಬರುವಾಗ ಮನೆಗೆ ಹೋಗುವ ರಸ್ತೆಯಲ್ಲಿ ಕಾಂಕ್ರೇಟ್ ಕೆಲಸ ನಡೆಯುತ್ತಿದ್ದುದರಿಂದ ಅವರ ಬಾಬ್ತು ಕಾರನ್ನು ಸಂಜಯ ನಗರ ಮುಗ್ರೋಡಿ ಎಂಬಲ್ಲಿ ಕಾರ್ಪಾರ್ಕ್ ಮಾಡಿದ್ದು ಸದ್ರಿ ಕಾರಿನಲ್ಲಿ ಪಿರ್ಯಾದಿದಾರರ ಮಾವನ ಮಗನಾದ ವರುಣ ಕುಮಾರನನ್ನು ವಾಹನದಲ್ಲಿಯೇ ಬಿಟ್ಟು ಪಿರ್ಯಾದಿದಾರರು ಮನೆಗೆ ಹೋಗಿದ್ದು ಆಗ ಆರೋಪಿ ಕಿಶೋರ್ ಕುಮಾರ್ ಎಂಬವರು ಬಂದು ಯಾವುದೋ ಉದ್ದೇಶದಿಂದ ಕಾರನ್ನು ತಡೆದು ಅದರಲ್ಲಿದ್ದ ವರುಣಕುಮಾರನಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಕೊಲ್ಲುವುದಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.10.2014 ರಂದು ಪಿರ್ಯಾಧಿದಾರರಾದ ಶ್ರೀ ಬಶೀರ್ ಅಹಮ್ಮದ್ ರವರು ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಮಂಗಳೂರು ಕಡೆ ಬರುತ್ತಾ ಸಂಜೆ ಸುಮಾರು 5.00 ಗಂಟೆ ಸಮಯಕ್ಕೆ ಅಡ್ಯಾರ್ ಹಳೇ ಪೋಸ್ಟ್ ಆಫೀಸ್ ಸಮೀಪ ತಲುಪಿದಾಗ ಪಿರ್ಯಾಧಿದಾರರ ಹಿಂದುಗಡೆಯಿಂದ ಅಂದರೆ ಬಿ.ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ KA-19 MB 1216 ನೇ ನಂಬ್ರದ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಡ್ಯಾರ್ ಸೋಮನಾಥ ಕಟ್ಟೆ ಬಳಿ ಸದ್ರಿ ಕಾರಿನ ಚಾಲಕ ಸಾಜಿ K.V ರವರು ತನ್ನ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿದ್ದ ಒಂದು ಕಲ್ಲಿಗೆ ಡಿಕ್ಕಿ ಹೊಡೆದು ನಂತರ ಕಾರನ್ನು ಮುಂದಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಜೀವಿನಿ ಎಂಬ ಹೆಸರಿನ ಓರ್ವ ವೃದ್ಧ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಮಹಿಳೆಯು ರಸ್ತೆಯ ಬದಿಗೆ ಎಸೆಯಲ್ಪಟ್ಟಿದರಿಂದ ಆಕೆಯ ತಲೆಗೆ ಮತ್ತು ಇತರ ಕಡೆಗಳಿಗೆ ಗಂಭೀರ ಗಾಯ ಹಾಗೂ ಆರೋಪಿ ಕಾರು ಚಾಲಕ ಸಾಜಿ K.V ರವರ ತಲೆಗೆ, ಕೈಗೆ ಗಾಯಗಳಾಗಿದ್ದು ಅವರನ್ನು ಪಿರ್ಯಾದುದಾರರು ಮತ್ತು ಘಟನಾ ಸ್ಥಳದಲ್ಲಿ ಸೇರಿದ ಜನರು ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಗಾಯಾಳು ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಸದ್ರಿ ಮಹಿಳೆಯು ಆಸ್ಪತ್ರೆಗೆ ಕರೆತರುವಾಗಲೇ ಮೃತ ಪಟ್ಟಿದ್ದೆಂದು ತಿಳಿಸಿದ್ದಲ್ಲದೆ ಅಪಘಾತ ಉಂಟು ಮಾಡಿದ ಕಾರು ಚಾಲಕ ಸಾಜಿ K.V ರವರನ್ನು ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ.
No comments:
Post a Comment