ದೈನಂದಿನ ಅಪರಾದ ವರದಿ.
ದಿನಾಂಕ 09.10.2014 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುಬ್ರಮಣ್ಯ ರವರು ತಾನು ಚಲಾಯಿಸುತ್ತಿದ್ದ ಟೆನ್ ವೀಲ್ ಲಾರಿ ನಂಬ್ರ ಕೆ ಎ 30 ಎ 6494 ನೇದನ್ನು ಚಲಾಯಿಸಿಕೊಂಡು ಹುಬ್ಬಳ್ಳಿಯಿಂದ ಹೊರಟು ದಿನಾಂಕ 08-10-2014 ರಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಾ ಬೆಳಿಗ್ಗೆ 08-15 ಗಂಟೆಗೆ ಮೂಲ್ಕಿ ಪಡುಪಣಂಬೂರು ತಲುಪಿದಾಗ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆ ಎ 20 ಡಿ 2542 ನೇ ನಂಬ್ರದ ಕಾರನ್ನು ಅದರ ಚಾಲಕ ವಾಸುದೇವ್ ರಾವ್ ಎಂಬವರು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಕಾರೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಚಾಲಕನ ಹತೋಟಿ ತಪ್ಪಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಲಾರಿಯ ಬಲಭಾಗದ ಹಿಂಬದಿಯ ಟಯರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಚಾಲಕ ವಾಸುದೇವ್ ರಾವ್ ರವರಿಗೆ ತಲೆ ಕೈ ಕಾಲು ಹಾಗೂ ಕಾರಿನಲ್ಲಿದ್ದ ಇನ್ನೊಬ್ಬ ಸಹ ಪ್ರಯಾಣಿಕ ಬೆಂಜಿ ತೋಮಸ್ ಎಂಬವರಿಗೆ ಬಲಗಾಲಿನ ಗಂಟಿನ ಮೂಳೆ ಮುರಿತದ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸೇರಿಸಿರುವುದಾಗಿದೆ.
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-12-2013ರಂದು ಬೆಳಿಗ್ಗೆ 8-45ಗಂಟೆಗೆ ಆರೋಪಿತನು ಕೆ ಎ 21 ಎ 4579ನೇ(ಶ್ರೀ ಮಂಗೇಶ ಲಾರಿ) ಚಾಲಕನಾಗಿದ್ದು, ಮಂಗಳೂರು ಕೇಂದ್ರೀಯ ಉಗ್ರಾಣ ನಿಗಮ ಮಣ್ಣಗುಡ್ಡೆಯಿಂದ ಲಾರಿಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಸುಳ್ಯ ತಾಲೂಕಿನ ಕೆಎಫ್ಸಿಎಸ್ಸಿ ಗೋದಾಮು ಅರಂಬೂರು ಎಂಬಲ್ಲಿಗೆ ಸಾಗಾಟ ಮಾಡುತ್ತಿದ್ದ ಅಕ್ಕಿ ಮೂಟೆಗಳಿಂದ ಒಂದು ಚೀಲ ಅಕ್ಕಿಯನ್ನು ಕಳ್ಳತನ ಮಾಡಿ ಅಂಗಡಿಯಲ್ಲಿಟ್ಟಿರುವುದಾಗಿದೆ. ಕಳ್ಳತನ ಮಾಡಿದ ಅಕ್ಕಿಯ ಮೌಲ್ಯ 500 ರೂ ಆಗಬಹುದು ಈ ಬಗ್ಗೆ ದಿನಾಂಕ 25-12-2013 ರಂದು ಅ ಕ್ರ 297/2013 ಕಲಂ 379 ಐಪಿಸಿಯಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷೀರು ಸ್ಥಳದ ಆದಾರದ ಮೇರೆಗೆ ಕಡತವನ್ನು ಹಸ್ತಾಂತರಿಸಲಾಗಿದೆ.
3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಅನೀಶ್ ಪಿ.ಜೆ. ರವರು ಮಂಗಳೂರಿನ ಪಂಪ್‌ವೆಲ್ ನಲ್ಲಿರುವ ಇಂಡಿಯಾನ ಆಸ್ಪತ್ರೆಯಲ್ಲಿ ಕಾಫಿ ಡೇ ಎಂಬ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು ಉರ್ವಸ್ಟೋರ್ ದಡ್ಡಲ್‌ಕಾಡ್ ನಲ್ಲಿರುವ ಡೆಲ್ಮನ್ ಕಾಂಪ್ಲೇಕ್ಸ್ ನಲ್ಲಿ ವಾಸಮಾಡುತ್ತಿರುವುದಾಗಿದೆ. ಅವರು ತನ್ನ ನಿತ್ಯ ಓಡಾಟಕ್ಕಾಗಿ ಪಂಪ್‌ವೆಲ್ ನಿಂದ ಉರ್ವಸ್ಟೋರ್ ಗೆ ಹೋಗಿ ಬರಲು ಅವರ ಅಣ್ಣ ಜೋಸೆಫ್ ಪಿ.ಜೆ ಎಂಬವರ ಮಾಲಿತ್ವದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರು ಸೈಕಲನ್ನು ಉಪಯೋಗಿಸುತ್ತಿದ್ದರು. ದಿನಾಂಕ 03-10-2014 ರಂದು ಕೆಲಸ ಮುಗಿಸಿ ಅವರು ವಾಸಿಸುತ್ತಿರುವ ಡೆಲ್ಮನ್ ಕಾಂಪ್ಲೇಕ್ಸ್ ಗೆ ರಾತ್ರಿ ಸುಮಾರು 11-00 ಗಂಟೆಗೆ ತಲುಪಿದ್ದು ಮೋಟಾರು ಸೈಕಲನ್ನು ದೈನಂದಿನ ಪಾರ್ಕ್ ಮಾಡುವ ಸ್ಥಳದಲ್ಲಿ ಪಾರ್ಕ್ ಮಾಡಿ ರೂಮಿಗೆ ಹೋಗಿದ್ದು ದಿನಾಂಕ 04-10-2014 ರಂದು ಬೆಳಿಗ್ಗೆ 07-00 ಗಂಟೆಗೆ ಕೆಲಸಕ್ಕೆ ತೆರಳಲು ನನ್ನ ರೂಮಿನಿಂದ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ಮೋಟಾರು ಸೈಕಲ್ ನಿಲ್ಲಿಸಿದ ಸ್ಥಳದಲ್ಲಿರದೇ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07/10/2014 ರಂದು ಸಮಯ ಸಂಜೆ ಸುಮಾರು 19:20 ಗಂಟೆಗೆ ಬಸ್ಸು ನಂಬ್ರ ಕೆ ಎ 19-ಡಿ-9468 ರೂಟ್ ನಂಬ್ರ 4ಇ ಅದರ ಚಾಲಕ ವಿಜಯ ಎಂಬಾತನು ನಂತೂರು ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತ ಶಿವಭಾಗ ಜಂಕ್ಷನ್ ಬಳಿ ರಸ್ತೆ ದಾಟುತ್ತದ್ದ ಫಿರ್ಯಾದುದಾರರಾದ ನೀಲಮ್ಮ ಪಿರೇರಾ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ಬಲ ಕೈಯ ಮೋಣ ಗಂಟಿಗೆ ರಕ್ತಗಾಯವಾಗಿದ್ದು ಸೊಂಟದ ಬಲಬದಿಗೆ ಗುದ್ದಿದ ಗಾಯವಾಗಿರುತ್ತದೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-09-2014 ರಂದು ರಾತ್ರಿ 8-30 ಗಂಟೆಗೆ ಮಂಗಳೂರು ನಗರದ ಬಿಕರ್ನಕಟ್ಟೆಯಲ್ಲಿರುವ ಪಿರ್ಯಾದಿದಾರರಾದ ಶ್ರೀ ಗುಲ್ ನಾಗ್ ಕರಾಮತ್ ರವರ ತಾಯಿಯ ಮನೆಯಲ್ಲಿ ಸಯ್ಯದ್ ರಹೀಂ ಎಂಬವರು ಆಸ್ತಿಯ ವಿಚಾರದಲ್ಲಿ ಜಗಳ ತೆಗೆದು ಗುಲ್ ನಾಗ್ ಮತ್ತು ಆಕೆಯ ಮಗಳು ಸಾದಿಯಾ ಎಂಬವರಿಗೆ ಬೆಲ್ಟ್ ನಿಂದ ಶರೀರದ ಭಾಗಗಳಿಗೆ ಹೊಡೆದು ಹಲ್ಲೆಗೊಳಿಸಿದ್ದಲ್ಲದೆ , ಅವಾಚ್ಯ ಶಬ್ದದಿಂದ ಬೈದಿರುತ್ತಾರೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:08-10-2014 ರಂದು ಪಿರ್ಯಾದಿದಾರರಾದ ಮಂಗಳೂರು ಪೂರ್ವ ಪೊಲೀಸ್ ನಿರೀಕ್ಷಕರಾದ ಶ್ರೀ ಟಿ.ಡಿ. ನಾಗರಾಜ್ ರವರಿಗೆ ಬಂದ ಖಚಿತ ವರ್ತಮಾನದಂತೆ ಮೇಲಾಧಿಕರಿಗಳ ಅನುಮತಿ ಪಡೆದು ಸಿಬ್ಬಂದಿಗಳು ಹಾಗೂ ಪಂಚರ ಜೊತೆ ಮಂಗಳೂರು ನಗರದ ಬಲ್ಮಠ ನ್ಯೂ ರೋಡ್ ನಲ್ಲಿರುವ ಸ್ಮಾರ್ಟ್ ಟವರ್ಸ್ ನ ನೆಲ ಮಹಡಿಯಲ್ಲಿರುವ ರಿತೇಶ್ ರಿಕ್ರಿಯೇಶನ್ ಕ್ಲಬ್ ಗೆ 19-30 ಗಂಟೆಗೆ ದಾಳಿ ನಡೆಸಿ ಅಲ್ಲಿ ಹಣದ ರೂಪದಲ್ಲಿ ಸದರಿ ಮೌಲ್ಯಕ್ಕೆ ಸಮಾನಾ ಟೋಕನ್ ಗಳನ್ನು ಬಳಸಿ ಪಣವಾಗಿಟ್ಟುಕೊಂಡು ಲೂಡೋ ಜುಗರಾಟ ಹಾಗೂ ಬಾಲ್ ಗೇಮ್ ಜುಗರಾಟ ಆಡುತ್ತಿದ್ದವರನ್ನು ಹಾಗೂ ಆಟವನ್ನಾಡಿಸುತ್ತಿದ್ದ ಮಾಲಕ ಹಾಗೂ ಸಿಬ್ಬಂದಿಗಳನ್ನು ಮತ್ತು ಆಟಕ್ಕೆ ಉಪಯೋಗಿಸಿದ ಲೂಡೋ ಆಟದ ಚಾರ್ಟ್-1, ಲೂಡೋ ಕಾಯಿನ್ -6, ಬಾಲ್ ಗೇಮ್ ನ ಚೆಯರ್, ಸ್ಟ್ರೈಕರ್ -3, ಬಾಲ್ -3 ಹಾಗೂ ನಗದು ರೂಪೈ 15,000/- ಮತ್ತು ಆಟಕ್ಕೆ ಉಪಯೋಗಿಸಿದ ಸದರಿ ಮೌಲ್ಯಕ್ಕೆ ಸಮನಾದ ಕಾಯಿನ್ ಗಳು-102 ನ್ನು ಸ್ವಾಧೀನಕ್ಕೆ ಪಡಕೊಂಡು ಆರೋಪಿಗಳ ವಿರುದ್ದ ಕ್ರಮ ಜರುಗಿಸಿರುವುದಾಗಿದೆ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಚಂದ್ರಹಾಸ ಎಂಬವರು ಮಂಗಳೂರು ತಾಲೂಕು ತೆಂಕಎಡಪದವು ಗ್ರಾಮದ ಕುಂದೋಡಿ ಎಂಬಲ್ಲಿ ತನ್ನ ಬಾಬ್ತು ಮೊಟಾರ್ ಸೈಕಲ್ ನಲ್ಲಿ ದಿನಾಂಕ 07-10-2014ರಂದು ಬೆಳಿಗ್ಗೇ 11:00 ಗಂಟೆಗೆ ರೆಷನ್ ತರಲು ಕುಪ್ಪೆಪದವು ಎಂಬಲ್ಲಿಗೆ ಹೋರಟು ರಸ್ತೆಯಲ್ಲಿ ಬರುವಾಗ ರಸ್ತೇ ಬದಿ ಹಾಕಿದ ಜಲ್ಲಿ ಹಾಗೂ ಹೋಯಿಗೆಯನ್ನು ಯಾರು ರಸ್ತೇಯಲ್ಲಿ ಹಾಕಿದ್ದು ಎಂದು ಕೇಳಿದಾಗ ಆರೋಪಿ ಸಂಜೀವನು ನಾನೇ ಹಾಕಿದ್ದು ' ಈ ದಾದ ಮಲ್ಪುವ' ನಿನ್ನ ಅಮ್ಮನ ಜಾಗನಾ ಎಂದು ತುಳು ಭಾಷೆಯಲ್ಲು ಬೈದಿದ್ದು ಅದನ್ನು ಕೇಳಿದ ಪಿರ್ಯಾದಿಯೂ ಅಲ್ಲಿಂದ ಹೋಗಿ ಸಂಜೆ 15:30ಕ್ಕೇ ವಾಪಸ್ ಮನೆಯ ಕಡೆ ಬರುವಾಗ ಅದೇ ಸ್ಥಳದಲ್ಲಿ ನಿಂತಿದ್ದ ಆರೋಪಿಯೂ ಪಿರ್ಯಾದಿದಾರರ ಬೈಕ್ ಅನ್ನು ತಡೆದು ನಿಲ್ಲಿಸಿ ಕೈ ಯಿಂದ ಹೋಡೆದಿದ್ದು ಅದನ್ನು ನೋಡಿದ ಆರೊಪಿಯ ಹೆಂಡತಿ ಬಿಡಿಸಲು ಬಂದಾಗ ಆಕೆಗೂ ಹೊಡೆದುದಲ್ಲದೆ ಪಿರ್ಯಾದಿದಾರರು ಫೊನ್ ಕರೆಮಾಡಿ ಅವರ ಹೆಂಡತಿಗೆ ವಿಷಯ ತಿಳಿಸಿದ್ದು, ಪಿರ್ಯಾದಿದಾರರ ಹೆಂಡತಿ ಶೋಭಾ ಎಂಬಾಕೆ ಸ್ಥಳಕ್ಕೆ ಬಂದಾಗ ಆರೊಪಿಯೂ ಶೋಭಾಳಲ್ಲಿ ನೀನು ಯಾರು ಕೇಳಲಿಕ್ಕೆ ಎಂದು ಹೇಳಿ ಕೈಯಿಂದ ಹೊಡೆದು , ಕಾಲಿನಿಂದ ತುಳಿದು ನಾಳೆಯಿಂದ ಈ ದಾರಿಯಲ್ಲಿ ಬರುತಿರಲ್ಲ ನಿಮ್ಮಿಬ್ಬರನ್ನು ನೋಡಿಕೋಳ್ಳುತ್ತೆನೆ. ನಿನ್ನ ಗಂಡನನ್ನು ಮೊದಲು ತೆಗೆಯುತ್ತೆನೆ ಆಮೇಲೆ ನಿನಗೆ ಯಾರು ಇದ್ದಾರೆ ಎಂದು ಶೋಭಾಳಿಗೆ ಹೇಳಿ ಜೀವ ಬೇದರಿಕೆ ಹಾಕಿದ್ದು ಚಂದ್ರಹಾಸರಿಗೆ ಕುತ್ತಿಗೆಯ ಬಳಿ ರಕ್ತ ಗಾಯ, ಸೊಂಟಕ್ಕೆ, ಎದೆಗೆ, ಬೇನ್ನಿಗೆ ಗುದ್ದಿದ ಗಾಯ ಮತ್ತು ಶೊಭಾಳಿಗೆ ಎರಡು ಕೈಗಳಿಗೆ ಮತ್ತು ಕುತ್ತಿಗೆಗೆ ತರಚಿದ ಗಾಯವಾಗಿರುತ್ತದೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04. 10.2014 ರಂದು ಬೆಳಿಗ್ಗೆ ಪಿರ್ಯಾಧಿದಾರರಾದ ಶ್ರೀಮತಿ ಮೋಹಿನಿ ರವರ ಗಂಡ ಶ್ರೀಧರ ಪೂಜಾರಿಯವರು ಎಂದಿನಂತೆ ಹೂವನ್ನು ತರಲು ಮನೆಯಿಂದ ಮಂಗಳೂರಿಗೆ ಅವರ ಬಾಬ್ತು KA-19-R-1834 ನೇ ಸ್ಕೂಟರನಲ್ಲಿ ಹೋಗುತ್ತಿದ್ದಾಗ ಬೆಳಿಗ್ಗೆ 8.30 ಗಂಟೆಗೆ ಪಡೀಲ್ - ಅಳಪೆ ಎಂಬಲ್ಲಿಗೆ ತಲುಪಿದಾಗ ಆರೋಪಿ ಇಪ್ತಿಕಾರ ಎಂಬವರು ಅವರ ಬಾಬ್ತು KA-19-W-5917ನೇ ಆಕ್ಟಿವಾ ಹೊಂಡಾ ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ಶ್ರೀಧರ ಪೂಜಾರಿಯವರು ಚಲಾಯಿಸುತ್ತಿದ್ದ ಸ್ಕೂಟರಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಗಂಡ ಸ್ಕೂಟರ ಸಮೇತ ರಸ್ತೆಗೆ ಬಿದ್ದು ಅವರ ಬಲ ಕಣ್ಣಿನ ಮೇಲ್ಬಾಗದಲ್ಲಿ (ಹಣೆಯ ಬಲಭಾಗ) ರಕ್ತಗಾಯ, ಬಲಬದಿಯ ಕಾಲರ್ ಬೋನ್ ಮೂಳೆ ಮುರಿತ, ಬಲಕೈಗೆ, ಸೊಂಟದ ಬಲಭಾಗಕ್ಕೆ, ಮುಖಕ್ಕೆ, ಎರಡು ಕಾಲುಗಳ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಅವರು SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
No comments:
Post a Comment