ಪಾಂಡೇಶ್ವರ ಠಾಣಾ ಪೊಲೀಸರಿಂದ ಬೊಲೇರೊ ಜೀಪು ಕಳ್ಳನ ಬಂಧನ
ಮಂಗಳೂರು ನಗರದ ಬಾಬುಗುಡ್ಡೆ ಜಂಕ್ಷನ್ ಕಡೆಯಿಂದ ಮಾರ್ನಮಿಕಟ್ಟೆ ಜಂಕ್ಷನ್ ಕಡೆಗೆ ಹಾದು ಹೋದ ಒಳ ರಸ್ತೆಯಲ್ಲಿರುವ "Premlin" ಎಂಬ ಹೆಸರಿನ ಕಂಪೌಂಡಿನ ಎದುರುಗಡೆ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಅಶೋಕ್ ಲೈಲ್ಯಾಂಡ್ ಕಂಪನಿಗೆ ಸಂಬಂಧಪಟ್ಟ ಕೆಎ 04 ಎಂ.ಎ.7622 ನೊಂದಣಿ ಸಂಖ್ಯೆಯ ಸಿಲ್ವರ್ ಬಣ್ಣದ ಬೊಲೆರೋ ಜೀಪು ದಿನಾಂಕ 30-06-2014 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 01-07-2014ರಂದು ಬೆಳಗ್ಗೆ 09-00 ಗಂಟೆಯ ಮಧ್ಯ ಅವಧಿಯಲ್ಲಿ ಕಳವಾಗಿದ್ದು ಈ ಬಗ್ಗೆ ಹರ್ಷ ಎಸ್. ಎಂ. ಎಂಬವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಕೇಸ್ ದಾಖಲಾಗಿರುತ್ತದೆ.
ದಿನಾಂಕ 06-08-2014ರ ರಂದು ಮಂಗಳೂರು ನಗರದ ಪುರಭವನ ಬಳಿಯಲ್ಲಿರುವ ಗಾಂಧಿ ಪಾರ್ಕ್ ಹತ್ತಿರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇದ್ದ ಈ ಕೆಳಗೆ ಹೆಸರು ವಿಳಾಸ ನಮೂದಿಸಿರುವ ವ್ಯಕ್ತಿಯನ್ನು ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಅನಂತ ಮುರ್ಡೇಶ್ವರ ಇವರು ಅರೆಸ್ಟ್ ಮಾಡಿ ತೀವ್ರವಾಗಿ ಪ್ರಶ್ನಿಸಿದಾಗ ಸದ್ರಿಯಾತನು ತನ್ನ ಸಹಚರನ ಜೊತೆ ಸೇರಿಕೊಂಡು ಬೊಲೆರೋ ವಾಹನವನ್ನು ಕಳವು ಮಾಡಿರುವ ವಿಚಾರವನ್ನು ತಪ್ಪೊಪ್ಪಿಕೊಂಡಿರುತ್ತಾನೆ. ಜೀಪಿನ ಅಂದಾಜು ಮೌಲ್ಯ 197340/- ರೂಪಾಯಿ ಆಗಬಹುದು. ಸದ್ರಿ ಆರೋಪಿತನ ಮೇಲೆ ಈ ಮೊದಲು ಕೂಡ ಬಜಪೆ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ, ಕೊಣಾಜೆ ಪೊಲೀಸ್ ಠಾಣೆ, ಪಣಂಬೂರು ಪೊಲೀಸ್ ಠಾಣೆ, ಮೂಡಬಿದ್ರೆ ಪೊಲೀಸ್ ಠಾಣೆ, ಪಡುಬಿದ್ರೆ ಪೊಲೀಸ್ ಠಾಣೆ, ಮಣಿಪಾಲ ಪೊಲೀಸ್ ಹೀಗೆ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಕೇಸ್ ಗಳು ದಾಖಲಾಗಿರುತ್ತದೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಕೆಲವು ಆರೋಪಿಗಳು ಬಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅವರುಗಳ ದಸ್ತಗಿರಿಗೆ ಕ್ರಮಕೈಗೊಳ್ಳಲಾಗಿದೆ
ಬಂಧಿತನ ವಿವರ
ಹಬೀಬ್ ಹಸನ್, @ ಹಬೀಬ್, ಪ್ರಾಯ 32 ವರ್ಷ, ತಂದೆ-ಬಿ. ಅಹಮ್ಮದ್, ಪ್ಯಾರಡೈಸ್ ಗ್ರೌಂಡ್ ಬಳಿ, ಕೆ. ಇ. ಬಿ. ಹತ್ತಿರ, 7ನೇ ಬ್ಲಾಕ್, ಕೃಷ್ಣಾಪುರ, ಮಂಗಳೂರು ತಾಲೂಕು.
ಹಾಲಿ ವಿಳಾಸ- ಓಲ್ಡ್ ರೈಸ್ ಮಿಲ್ಲ್ ಬಳಿ, ಮಸೀದಿ ಹತ್ತಿರ, ಚೆಂಬುಗುಡ್ಡೆ, ತೊಕ್ಕೊಟ್ಟು ಮಂಗಳೂರು.
ಪತ್ತೆ ಕಾರ್ಯಾಚಾರಣೆ :-
ಮಾನ್ಯ ಆರ್. ಹಿತೇಂದ್ರ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ. ವಿ. ಜಗಧೀಶ್, ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ಇವರ ಮಾರ್ಗದಶನದಲ್ಲಿ ಮಂಗಳೂರು ಪಾಂಡೇಶ್ವರ ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಅನಂತ ಮುರ್ಡೇಶ್ವರ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ಕೇಶವ ಪರಿವಾರ, ವಿಶ್ವನಾಥ, ಗಂಗಾಧರ, ದಾಮೋದರ್, ಸಾಜು ಕೆ. ನಾಯರ್, ಜಯಪ್ರಕಾಶ್, ಪ್ರಕಾಶ್ ನಾಯ್ಕ. ಇವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.
No comments:
Post a Comment