Tuesday, August 5, 2014

Daily Crime Reports 05-08-2014

ದೈನಂದಿನ ಅಪರಾದ ವರದಿ.

ದಿನಾಂಕ 05.08.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

4

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

3

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03/08/2014 ರಂದು ರಾತ್ರಿ ಸುಮಾರು 8:30 ಗಂಟೆಗೆ ಮಂಗಳೂರು ನಗರದ ಪಳ್ನೀರ ರಸ್ತೆ ಯುನಿಟಿ ಆಸ್ಪತ್ರೆಯ ಬಳಿ ಸ್ಟೇಟ್ಬ್ಯಾಂಕ್ ಕಡೆಯಿಂದ ಬರುತ್ತಿದ್ದ ಕೆಎ-19-ಎಸಿ-33 ನಂಬ್ರದ ಬಸ್ಸಿನಿಂದ ಉದಯ ಕುಮಾರ್ಶೆಟ್ಟಿ ಎಂಬವರು ಇಳಿಯುತ್ತಿದ್ದಂತೆ ಅದರ ಚಾಲಕ ಮನೋಹರ ಎಂಬಾತನು ಬಸ್ಸನ್ನು ನಿರ್ಲಕ್ಷತನದಿಂದ ವೇಗವಾಗಿ ಮುಂದಕ್ಕೆ ಚಲಿಸಿದ ಪರಿಣಾಮ ಬಸ್ಸಿನ ಎದುರು ಬಾಗಿಲಿನ ಮೂಲಕ ಇಳಿಯುತ್ತಿದ್ದ ಉದಯ ಕುಮಾರ್ ಶೆಟ್ಟಿ ಎಂಬವರು ಕೆಳಗೆ ಬಿದ್ದು, ಬಸ್ಸಿನ ಹಿಂಬದಿ ಟಯರ್ಗೆ ತಾಗಿ ಸೊಂಟದ ಬಳಿ ಹೊಟ್ಟೆಗೆ ಗಂಭೀರ ಸ್ವರೂಪದ ಗಾಯವಾಗಿ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 04.08.2014 ರಂದು ಬೆಳಗ್ಗಿನ ಜಾವ ಸುಮಾರು 3:40 ಗಂಟೆಗೆ ಮೃತಪಟ್ಟಿರುವುದಾಗಿದೆ. 

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಚಿನ್ ರವರ ಅಣ್ಣ ಗುರುರಾಜ್ (28)ರವರು ಕಂಕನಾಡಿ ಗಣೇಶ್ ಮೆಡಿಕಲ್ ಹತ್ತಿರವಿರುವ ಮಾವನ ಅಂಗಡಿಯಲ್ಲಿ ಸಿಯಾಳ ಮಾರುವ ಕೆಲಸ ಮಾಡುತ್ತಿದ್ದು ದಿನಾಂಕ: 30.03.2014 ರಿಂದ ಸುಮಾರು 4 ತಿಂಗಳನಿಂದ  ತನಕ ಮನೆಗೆ ಬಾರದೇ ಸಂಬಂದಿಕರ ಮನೆಗೂ ಹೋಗದೆ ಕಾಣೆಯಾಗಿದ್ದು, ಪಿರ್ಯಾದಿ ಹಾಗೂ ಮನೆಯವರು ಕಾಣೆಯಾದ ಗುರುರಾಜ್ ಬಗ್ಗೆ ಮಂಗಳೂರಿನ ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಹಾಗೂ ಇತರ ಕಡೆಗಳಲ್ಲಿ ತನಕ ಹುಡುಕಾಡಿದ್ದು ಪತ್ತೆಯಾಗದೇ ಇರುವುದಾಗಿದೆ.

 

3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರವಿ ಡಿ.ಎನ್. ರವರು ಮಂಗಳೂರು ನಗರದ ಕರಂಗಲ್ಪಾಡಿಯ ಹಾಪ್ಕಾಮ್ಸ್ಎಂಬ ಹೆಸರಿನ ಅಂಗಡಿಯಲ್ಲಿ ತರಕಾರಿ/ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದು, ತನ್ನ ಸ್ನೇಹಿತ ಮಂಗಳೂರಿನ ಶೈಲೇಶ್ ಎಂಬವರ ಬಜಾಜ್ ಸಿ.ಟಿ 100 ಕೆಎ-19-ಎಸ್-3326 ನೇ ಮೊಟಾರು ಸೈಕಲನ್ನು ತನ್ನ ಸ್ವಂತ ಕೆಲಸಕ್ಕೆ ಉಪಯೋಗಿಸುತ್ತಿದ್ದು,  ದಿನಾಂಕ 04-08-2014 ರಂದು ಬೆಳಿಗ್ಗೆ 10:00 ಗಂಟೆಯ ಸಮಯಕ್ಕೆ ಮಂಗಳೂರು ನಗರದ ಕರಂಗಲ್ಪಾಡಿ ಗೋಲ್ಡನ್ ಜಿಮ್ಎದುರುಗಡೆ ರಸ್ತೆ ಬದಿಯಲ್ಲಿ ಫಿರ್ಯಾದಿದಾರರ ಬಾಬ್ತು  ಬಜಾಜ್ ಸಿ.ಟಿ 100 ಮೊಟಾರು ಸೈಕಲನ್ನು  ಪಾರ್ಕ್ ಮಾಡಿ ಉಡುಪಿಗೆ  ಕೆಲಸದ ಬಗ್ಗೆ ಹೋಗಿದ್ದು, ವಾಪಾಸು ಸಂಜೆ ಸುಮಾರು 3-45 ಗಂಟೆಗೆ ಬೈಕ್ ಪಾರ್ಕ್ಮಾಡಿದ್ದ ಸ್ಥಳಕ್ಕೆ ಬಂದು ನೋಡಲಾಗಿ, ಮೊಟಾರು ಸೈಕಲ್  ಕಾಣೆಯಾಗಿದ್ದು,  ಬಳಿಕ ಯಾರಾದರೂ ದೂಡಿಕೊಂಡು ಅಲ್ಲಿ ಎಲ್ಲಿಯಾದರೂ ನಿಲ್ಲಿಸಿರಬಹುದೆಂದು ಸುತ್ತಮುತ್ತಲಿನ ಸ್ಥಳಗಳಲ್ಲಿ  ಹುಡುಕಾಡಿದರೂ ಪತ್ತೆಯಾಗಲಿಲ್ಲ. ಇದನ್ನು ಯಾರೋ ಕಳ್ಳರು ಕಳವು ಮಾಡಿದ್ದಾಗಿದೆ. ಕಳವಾದ ಬಜಾಜ್ ಸಿ.ಟಿ 100 ಮೊಟಾರು ಸೈಕಲ್  ಚಾಸೀಸ್ ನಂಬ್ರ DUFBLC78314 ಇಂಜಿನ್ ನಂಬ್ರ DUMBLC31745 ಮಾದರಿ 2004, ಬಣ್ಣ : ಕಪ್ಪು ಮತ್ತು ಬಿಳಿ ಬೆಲೆ ಅಂದಾಜು ರೂ. 16,000/- ಆಗಬಹುದು.

 

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸನ್ನಿ ಜೆ. ಡಿ'ಸೋಜಾ ರವರ ಮನೆಯಲ್ಲಿ ತೋಟದ ಕೆಲಸ ಮಾಡುತ್ತಿದ್ದ ವಿಜಯ್ ಬಿಲುಂಗ್ ಮತ್ತು ಬಿಪಿನ್ ಎಂಬವರು ದಿನಾಂಕ 02-08-2014 ರಂದು ಸಂಜೆ ಸಮಯ ಸ್ನೇಹಿತರನ್ನು ಭೇಟಿಯಾಗಲು ರೈಲ್ವೆ ಸ್ಟೇಶನ್ ಗೆ  ಹೋಗುತ್ತೇವೆ ಎಂದು ಹೇಳಿ ಮನೆಯಿಂದ ಹೋದವರು, ಸ್ನೇಹಿತರ ಜೊತೆ ಅತ್ತಾವರದ ಬಾರ್ ಒಂದರಲ್ಲಿ ಕುಡಿದ  ಬಳಿಕ ಹೊರಗೆ ಬಂದು, ವಿಜಯ್  ಬಿಲುಂಗ ರವರನ್ನು ಬಾರ್ ಸ್ವಲ್ಪ ಮುಂದೆ ನಿಲ್ಲಿಸಿ, ಬಿಪಿನ್ ರವರು ಸ್ನೇಹಿತರನ್ನು ಬಿಡಲು ರಾತ್ರಿ ಸುಮಾರು 10-00 ಗಂಟೆಗೆ ರೈಲ್ವೆ ಸ್ಟೇಶನ್ ಗೆ ಹೋಗಿದ್ದು, ವಾಪಾಸ್ ಬಿಪಿನ್ ರವರು ಬರುವಾಗ ವಿಜಯ್ ಬಿಲುಂಗ್ ರವರು ನಿಂತಿದ್ದ ಸ್ಥಳದಲ್ಲಿ ಇಲ್ಲದೇ ಪಿರ್ಯಾದಿದಾರರ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ವಿಜಯ್ ಬಿಲುಂಗ್ ರವರನ್ನು ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಪತ್ತೆಯಾಗದೇ ಇದ್ದುದರಿಂದ ದೂರು ನೀಡಲು ತಡವಾಗಿರುವುದಾಗಿದೆ.

 

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 4-8-2014 ರಂದು ಪಿರ್ಯಾದಿದಾರರಾದ ಶ್ರೀ ಜೆಪಿನ್ ಜಾರ್ಜ್ ರವರು ತನ್ನ ಗೆಳೆಯರಾದ ಬಿಬಿನ್, ವಿಜಯ್, ಆಲ್ಬಿಟೊ ರವರೊಂದಿಗೆ ತನ್ನ ವಾಸ್ತವ್ಯದ ರೂಮ್ ಆದ ವೆಲೆನ್ಸಿಯಾದಲ್ಲಿದ್ದಾಗ, ಸಮಯ ರಾತ್ರಿ 7-30 ಗಂಟೆಗೆ ಪಿರ್ಯಾದಿದಾರರಿಗೆ ಪರಿಚಯದ ಶರತ್, ಅಖಿಲ್, ಬೆನ್ನಿ, ಅಪ್ಜಲ್ ಮತ್ತು ಅವರೊಂದಿಗೆ ಇತರ ಇಬ್ಬರು ಜೊತೆಯಾಗಿ ಅಕ್ರಮ ಕೂಟ ಸೇರಿಕೊಂಡು ಬಂದು ಅವರುಗಳ ಪೈಕಿ ಶರತ್ ಹಾಗೂ ಅಖಿಲ್ ಕೈಯಲ್ಲಿ ಕಬ್ಬಿಣದ ರಾಡ್ ಇದ್ದು, ಇವರೆಲ್ಲರೂ ಜತೆಯಾಗಿ ಪಿರ್ಯಾದಿದಾರರ  ರೂಮಿನೊಳಗೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರನ್ನು ಹಾಗೂ ಅವರ ಗೆಳೆಯರನ್ನು ಹೊರಗೆ ಹೋಗದಂತೆ ತಡೆದು ನಿಲ್ಲಿಸಿ, ಅವರುಗಳ ಪೈಕಿ ಬೆನ್ನಿಯು ಆಲ್ಬಿಟೊ ನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಶರತ್ ಎಂಬಾತನು ತಂದಿದ್ದ ಕಬ್ಬಿಣದ ರಾಡ್ ನಿಂದ ಆಲ್ಬಟೊನಿಗೆ ಹೊಡೆಯಲು ಪ್ರಯತ್ನಿಸಿದಾಗ, ಪಿರ್ಯಾದಿದಾರರು ತಡೆಯಲು ಬಂದಾಗ, ಸದ್ರಿ ರಾಡ್ ನ್ನು ಶರತ್ ನು ಬೀಸಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ತಾಗಿ ರಕ್ತಗಾಯವಾಗಿರುತ್ತದೆ. ಅದೇ ವೇಳೆಗೆ ಪಿರ್ಯಾದಿದಾರರು ಅವರುಗಳಲ್ಲಿ ಇಲ್ಲಿಗೆ ಬಂದು ಯಾಕೆ ಗಲಾಟೆ ಮಾಡುತ್ತೀರಿ, ಇಲ್ಲಿಂದ ಹೋಗಿ ಎಂದು ಹೇಳಿದಾಗ, ಅಖಿಲ್ ನು ತಂದಿದ್ದ ಕಬ್ಬಿಣದ ರಾಡ್ ನಿಂದ ವಿಬಿನ್ ವಿಜಯ್ ಬೆನ್ನಿಗೆ, ಬಲ ಕೈಯ ಭುಜದ ಬಳಿ ಹಲ್ಲೆ ನಡೆಸಿದ್ದು, ಇದರಿಂದ ವಿಜಯ್ ನಿಗೆ ರಕ್ತಗಾಯ ಹಾಗೂ ರಕ್ತ ಹೆಪ್ಪು ಗಟ್ಟಿದ ಗಾಯವಾಗಿರುತ್ತದೆ. ಅಲ್ಲದೇ ಅವರೊಂದಿಗೆ ಬಂದಿದ್ದ  ಇತರ ಇಬ್ಬರು ಆರೋಪಿತರುಗಳು ಬಿಬಿನ್ ಮತ್ತು ಆಲ್ಬಿಟೊ ರವರಿಗೆ ಕೈಯಿಂದ ಮುಖದ ಮೇಲೆ, ಕೆನ್ನೆಗೆ, ಹೊಟ್ಟೆಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಅಲ್ಲದೇ ಶರತನು ಪಿರ್ಯಾದಿದಾರರೊಂದಿಗೆ ಇದ್ದ ಆಲ್ಬಿಟೊ ನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ, ಪಿರ್ಯಾದಿದಾರರಿಗೆ ಹಾಗೂ ಅವರ ಸ್ನೇಹಿತರಿಗೆ ಮಲಯಾಳಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಘಟನೆಗೆ ಪಿರ್ಯಾದಿದಾರರ ರೂಮ್ ಮೇಟ್ ಆದ ಆಲ್ಬಿಟೊ ರವರು ಹುಡುಗಿಯನ್ನು ಲವ್ ಮಾಡುವ ವಿಚಾರದಲ್ಲಿ ರೂಮಿನೊಳಗೆ ಅಕ್ರಮ ಪ್ರವೇಶ ಮಾಡಿ,  ವಿನಾಕಾರಣ ತಗಾದೆ ಎಬ್ಬಿಸಿ ರೀತಿಯಾಗಿ ಹಲ್ಲೆ ನಡೆಸಿರುವುದಕ್ಕೆ ಕಾರಣವಾಗಿರುತ್ತದೆ.

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಶರೀಫ್ ರವರು ಮಂಗಳೂರು ತಾಲೂಕಿನ ಮೊಗರು ಗ್ರಾಮದ ಸಂಕೇಶ ಎಂಬಲ್ಲಿ ವಾಸವಾಗಿದ್ದು, ಪಿರ್ಯಾದಿದಾರರ ಹೆಸರಿನಲ್ಲಿ ಯಾರೋ ಪಾಸ್ ಪೋರ್ಟ್ ನಂಬ್ರ F7191823 ನಂಬ್ರದ ನಕಲಿ ಪಾಸ್ ಪೋರ್ಟನ್ನು ಪಡೆದು, ಪಿರ್ಯಾದಿದಾರರ ಹೆಸರಿನಲ್ಲಿ ಹೊರದೇಶಕ್ಕೆ ಹೋಗಿ ಅಲ್ಲಿ ತುಂಬಾ ಹಣ ವಂಚನೆ ಮಾಡಿದ್ದು, ವಿಚಾರ ಪಿರ್ಯಾದಿದಾರರಿಗೆ ತಿಳಿದು, ಬೆಂಗಳೂರು ಪಾಸ್ ಪೋರ್ಟ್ ಕಛೇರಿಗೆ ಅರ್ಜಿ ಸಲ್ಲಿಸಿ, ಅಲ್ಲಿಂದ ಪಾಸ್ ಪೋರ್ಟ್ ಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆಯಲಾಗಿ, ತಿಳಿದು ಬಂದ ಪ್ರಕಾರ ಯಾರೋ ಅಪರಿಚಿತರು ಪಿರ್ಯಾದಿದಾರರ ಹೆಸರಿನಲ್ಲಿ ಬೇರೆಯವರ ಫೋಟೋ ಹಾಕಿ, ನಕಲಿಯಾಗಿ ದಾಖಲೆ ಸೃಷ್ಠಿಸಿ, ಅದನ್ನು ಉಪಯೋಗಿಸಿ ದಿನಾಂಕ: 17/03/2006 ರಂದು ಪಾಸ್ ಪೋರ್ಟ್ ಪಡೆದು, ಸದ್ರಿ ಪಾಸ್ ಪೋರ್ಟನ್ನು ಅದು ನಕಲಿ ಎಂದು ತಿಳಿದೂ ಅದನ್ನು ಅಸಲಿ ಎಂದು ಉಪಯೋಗಿಸಿ, ಸದ್ರಿ ವ್ಯಕ್ತಿ ತಾನು ಮಹಮ್ಮದ್ ಶರೀಫ್ ಎಂಬುದಾಗಿ ಹೇಳಿ, ಸರಕಾರಕ್ಕೆ ಮತ್ತು ಪಿರ್ಯಾದಿದಾರರಿಗೆ ವಂಚಿಸಿ ಮೋಸ ಮಾಡಿ ಪಾಸ್ ಪೋರ್ಟ್ ಕಾಯಿದೆಗೆ ವಿರುದ್ಧವಾಗಿ ವರ್ತಿಸಿರುವುದಾಗಿದೆ.

 

7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-08-2014 ರಂದು ಕಾಟಿಪಳ್ಳ ಗ್ರಾಮದ ಗಣೇಶಪುರ ದೇವಸ್ಥಾನದ ಬಳಿ ಮೈದಾನದಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದು ಪಿರ್ಯಾದಿದಾರರಾದ ಶ್ರೀ ಅಮರ್ ಸೋನ್ಸ್ ರವರು ಕಾಟಿಪಳ್ಳ 2ನೇ ಬ್ಲಾಕ್ ರಾಕ್ ಜಿಮ್ ಟೀಮ್ ನಲ್ಲಿ ಆಟವಾಡುತ್ತಿದ್ದು, ಪ್ರತಿ ವರ್ಷ ಅದೇ ಟೀಮ್ ಗೆಲ್ಲುತ್ತಿದ್ದುದರಿಂದ ಮತ್ತು ಪಿರ್ಯಾದಿಯು ಉತ್ತಮ ಕಬಡ್ಡಿ ಆಟಗಾರರಾಗಿದ್ದರಿಂದ  ಗಣೇಶಪುರ ಪರಿಸರದ ಟೀಂ ನವರಿಗೆ ಪಿರ್ಯಾದಿದಾರರ ಬಗ್ಗೆ ಹಗೆ ಇದ್ದು ಸಂಜೆ 18-00 ಗಂಟೆಗೆ ಸದ್ರಿ ಮೈದಾನದಲ್ಲಿ ಪಿರ್ಯಾದಿದಾರರ ಟೀಂ ಮತ್ತು ಗಣೇಶಪುರದ ವಿನಾಯಕ ಗಣೇಶ್ಕಟ್ಟೆ ಟೀಂ ಮದ್ಯೆ ಸೆಮಿಪೈನಲ್ ಪಂದ್ಯ ನಡೆಯುತ್ತಿದ್ದು ಪಿರ್ಯಾದಿದಾರರ ಟೀಂ ಹೆಚ್ಚಿನ ಅಂಕಗಳಿಸಿದ್ದರಿಂದ ಜಿತೇಂದ್ರ @ ಜೀತು ಪಿರ್ಯಾದಿದಾರರ ಎದೆಗೆ ತುಳಿದಿದ್ದು ಬಳಿಕ ಹೊರಗಡೆ ಇದ್ದ ಯತೀಶ್ ಬೊಳ್ಳಾಜೆ, ಶರತ್ ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಯತೀಶ್ ಬೊಳ್ಳಾಜೆ ಎಂಬಾತನು ಅಲ್ಲೇ ಇದ್ದ ಟೇಬಲ್ ನಿಂದ ಮುಖಕ್ಕೆ, ಎದೆಗೆ, ಹೊಡೆದಿರುತ್ತಾರೆ. ಹಲ್ಲೆಯಿಂದ ಪಿರ್ಯಾದಿದಾರರ ಎದೆಗೆ, ಮುಖಕ್ಕೆ, ಕಾಲಿಗೆ ನೋವುಂಟಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.08.2014 ರಂದು ರಾತ್ರಿ ಸುಮಾರು 11.30 ಗಂಟೆಯ ವೇಳೆಗೆ ಪಿರ್ಯಾಧಿದಾರರಾದ ಶ್ರೀ ಸಂದೇಶ್ ರವರು ಮತ್ತು ಅವರ ಸ್ನೇಹಿತ ಬೆಂಡ್ರಾಜ ಎಂಬವರು ಆರೋಪಿಯ ಮನೆಗೆ ಮಾತುಕತೆಯಾಡಲು ಹೋಗಿದ್ದು ವೇಳೆ ಅವರುಗಳ ಮದ್ಯೆ ಗಲಾಟೆಯಾಗಿದ್ದು ಬೊಬ್ಬೆ ಕೇಳಿ  ನೆರೆಕರೆಯವರು ಬಂದುದರಿಂದ ಪಿರ್ಯಾಧಿ ಮತ್ತು ಬೆಂಡ್ರಾಜರವರು ಮನೆಯಿಂದ ಹೊರಗಡೆ ಬಂದಾಗ  ವೇಳೆ ಆರೋಪಿ ಯಶ್‌‌ಪಾಲ್‌‌ ತಿಳಿಸಿದಂತೆ ನೆರೆಕರೆಯವರು ಪಿರ್ಯಾಧಿ ಮತ್ತು ಬೆಂಡ್ರಾಜನನ್ನು ಹಿಡಿದು ಕೈಯಿಂದ ಹೊಡೆದಿದ್ದು  ವೇಳೆ ಯಶ್ಪಾಲನು ಕಬ್ಬಿಣದ ರಾಡ್‌‌ನಿಂದ ಪಿರ್ಯಾದಿ ಮತ್ತು ಬೆಂಡ್‌‌ರಾಜನಿಗೆ ಹೊಡೆದುದರಿಂದ ಪಿರ್ಯಾಧಿದಾರರ ತಲೆಗೆ, ಮುಖಕ್ಕೆ ಗಾಯವಾಗಿದ್ದು ಬೆಂಡ್ರಾಜನ ಎರಡು ಕೈಗಳಿಗೆ ತೀವ್ರ ಏಟು ಬಿದ್ದಿರುತ್ತದೆ. ಪಿರ್ಯಾಧಿದಾರರು ತನ್ನ ಅಕ್ಕನ ವಿಷಯದಲ್ಲಿ ಮಾತುಕತೆಯಾಡಲು ಹೋದ ದ್ವೇಷದಿಂದ ಆರೋಪಿಯು ತನ್ನ ನೆರೆಕರೆಯವರೊಂದಿಗೆ ಸೇರಿ ತಕ್ಷೀರು ನಡೆಸಿದ್ದಾಗಿರುತ್ತದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.08.2014 ರಂದು ರಾತ್ರಿ 11.30 ಗಂಟೆಯ ವೇಳೆಗೆ ಆರೋಪಿಗಳಾದ ಸಂದೇಶ್ ಮತ್ತು ಬೆಂಡ್ ರಾಜ್ ರವರು ಪಿರ್ಯಾಧಿದಾರರಾದ ಶ್ರೀ ಯಶಪಾಲ್ ರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಆರೋಪಿ ಸಂದೇಶ್ ನು ಪಿರ್ಯಾಧಿದಾರರನ್ನು ಉದ್ದೇಶಿಸಿ ನಿನಗೆ ನನ್ನ ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಲು ಆಗುವುದಿಲ್ಲವಾ ಎಂದು ಕೇಳಿದ್ದಕ್ಕೆ ಪಿರ್ಯಾಧಿದಾರರು ಇದು ನನ್ನ ವೈಯುಕ್ತಿಕ ವಿಷಯ ನನ್ನನ್ನು ಕೇಳಲು ನೀನು ಯಾರು ಎಂದು  ಕೇಳಿದಾಗ ಆರೋಪಿ ಸಂದೇಶನು ಅವಾಚ್ಯ ಶಬ್ದಗಳಿಂದ ಬೈದು ನಾನು ಯಾರೆಂದು ತೋರಿಸಬೇಕೆಂದು ಹೇಳಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾಧಿದಾರರ ಎಡಕೈ ತೋಳಿಗೆ ಮತ್ತು ಬಲಕೈ ಮೊಣಗಂಟಿಗೆ ಕಡಿದು ರಕ್ತಗಾಯಗೊಳಿಸಿದ್ದು ಆರೋಪಿ ಬೆಂಡ್‌‌ರಾಜನು ಮರದ ಸೋಂಟೆಯಿಂದ ಪಿರ್ಯಾದಿದಾರರ ಮನೆಯ ಕಿಟಕಿ ಗಾಜು, ಟಿ.ವಿ ಶೋಕೇಸನ್ನು ಪುಡಿಮಾಡಿರುತ್ತಾನೆ, ಪಿರ್ಯಾದಿ ಹಾಗೂ ಅವರ ಪತ್ನಿಗೆ ಇರುವ ಮನಸ್ಥಾಪದ ಕಾರಣ ಪಿರ್ಯಾಧಿದಾರರ ಮೇಲೆ ದ್ವೇಷ ಹಿಡಿದಿದ್ದ ಆರೋಪಿ ಸಂದೇಶನು ತನ್ನ ಸ್ನೇಹಿತನೊಂದಿಗೆ ಬಂದು ತಕ್ಷೀರು ನಡೆಸಿದ್ದಾಗಿದೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04.08.2014 ರಂದು ಪಿರ್ಯಾಧಿದಾರರಾದ ಶ್ರೀ ಪೂವಪ್ಪ ಪೂಜಾರಿ ರವರು ಮತ್ತು ರಾಮ ಮಡಿವಾಳ ಎಂಬವರು ಬೋಂದೆಲ್‌‌ನಲ್ಲಿ ರುವ ವುಡ್‌‌ ವಿಲ್ಲೆ ಎಂಬ ಹೆಸರಿನ ಬಹುಮಹಡಿ ಕಟ್ಟಡದ ಐದನೇ ಮಹಡಿಯ ಹೊರಬದಿಯಲ್ಲಿ ಸಾರಣೆ ಮಾಡಲು ಅನುಕೂಲವಾಗುವಂತೆ ಸ್ಕಪ್‌‌‌ಹೋಲ್ಡಿಂಗ್‌‌ಗಳನ್ನು ಅಳವಡಿಸುತ್ತಿದ್ದಾಗ ಮಧ್ಯಾಹ್ನ 3.15 ಗಂಟೆ ವೇಳೆ ರಾಮ ಮಡಿವಾಲನು ಆಯತಪ್ಪಿ ಕೆಳಗಡೆ ಬಿದ್ದಿದ್ದು ಅವರನ್ನು ಚಿಕಿತ್ಸೆ ಬಗ್ಗೆ .ಜೆ ಆಸ್ಪತ್ರೆಗೆ ಕೊಂಡೊಯ್ದಲ್ಲಿ ವೈದ್ಯರು ರಾಮ ಮಡಿವಾಳನನ್ನು ಪರೀಕ್ಷಿಸಿ ಮೃತಪಟ್ಟದ್ದಾಗಿ ತಿಳಿಸಿರುತ್ತಾರೆ. ಸೈಟ್‌‌ ಇನ್ಚಾರ್ಜ್ಪ್ರವೀಣ್‌‌ ರವರು ಕೆಲಸಗಾರರು ಕೆಲಸ ಮಾಡುವ ವೇಳೆ ನಲಕ್ಕೆ ಬೀಳದಂತೆ ಬಲೆಯನ್ನು ಅಳವಡಿಸದೆ ನಿರ್ಲಕ್ಷ್ಯವಹಿಸಿದ್ದರಿಂದಲೇ  ಘಟನೆ ಸಂಬವಿಸಿರುವುದಾಗಿದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀಮತಿ ಸುಮತಿ ವಿ. ಮತ್ತು ಪ್ರವೀಣ್ ಕುಮಾರ್ ಶೆಟ್ಟಿ ಎಂಬವರು ದಿನಾಂಕ: 25.04.2012 ರಂದು ಮದುವೆಯಾಗಿದ್ದು, ನಂತರ ಮಂಗಳೂರು ನಗರದ ಶಕ್ತಿನಗರದಲ್ಲಿ ಇಬ್ಬರೂ ವಾಸವಾಗಿದ್ದ ವೇಳೆ ಪಿರ್ಯಾದಿದಾರಳ ಗಂಡ ಪ್ರವೀಣ್ ಕುಮಾರ್ ಶೆಟ್ಟಿ ರವರು ಪಿರ್ಯಾಧಿದಾರರಿಗೆ ದೈಹಿಕ ಹಲ್ಲೆ ನಡೆಸಿ ವಿವಾಹ ವಿಚ್ಚೇದನ ನೀಡುವಂತೆ ಪೀಡಿಸಿ ಪಿರ್ಯಾಧಿದಾರಳನ್ನು ಅವರ ಮಾವನ ಮನೆಗೆ ಕಳುಹಿಸಿದ್ದಲ್ಲದೆ ಮೊದಲ ಪತ್ನಿಯಾದ ಪಿರ್ಯಾಧಿದಾರರು ಇರುವಾಗಲೇ ದಿನಾಂಕ:05.06.2014 ರಂದು ಪ್ರಸನ್ನ ಕುಮಾರಿ ಎಂಬವಳನ್ನು ಕಾಸರಗೋಡಿನಲ್ಲಿ ಎರಡನೇ ಮದುವೆಯಾಗಿರುವುದಾಗಿದೆ.

 

12.ಮಂಗಳೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕೆ.ಎಸ್. ನಾಗೇಂದ್ರಪ್ಪಾ, ಡೆಪ್ಯೂಟಿ ಡೈರೆಕ್ಟರ್ (ಐಸಿ), ಡಿಪಾಟ್ ಮೆಂಟ್ ಆಫ್ ಮೈನ್ಸ್ & ಜಿಯೋಲಜಿ, ಮಂಗಳೂರು ರವರು ದಿನಾಂಕ 09-07-2014 ರಂದು ಬೆಳಿಗ್ಗೆ 10.00 ಗಂಟೆಗೆ ಬಂಟ್ವಾಳ ತಾಲೂಕು ಬಿ.ಸಿರೋಡ್ಬಳಿ ಬಂಟ್ವಾಳ ತಾಲೂಕು ತಹಶೀಲ್ದಾರರ ಜೊತೆ ಮರಳು ಸಾಗಾಟ ವಾಹನಗಳನ್ನು ಪರಿಶೀಲನೆ ನಡೆಸುವ ಸಮಯ ಅಕ್ರಮವಾಗಿ ಯಾವುದೇ ಪರವಾಣಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ 1) ಕೆಎ-19-ಡಿ-866, 2) ಕೆಎ-19-ಸಿ-6753, 3) ಕೆಎ-21--4007, 4) ಕೆಎ-19-ಡಿ-9169, 5) ಟಿಎನ್‌-41-ಟಿ-4839, 6) ಕೆಎ-41--4109, 7) ಕೆಎ-12--2980 ನೇದನ್ನು ವಶಪಡಿಸಿಕೊಂಡಿದ್ದು ಸದ್ರಿ ವಾಹನದ ಚಾಲಕರು ಮತ್ತು ಮಾಲೀಕರು ಸರ್ಕಾರದ ಸೊತ್ತನ್ನು ಕಳ್ಳತನದಿಂದ ಸಾಗಣಿಕೆ ಮಾಡುತ್ತಿರುವುದಾಗಿದೆ.

No comments:

Post a Comment