ಅಂತರ್ ರಾಜ್ಯ ಬೈಕ್ ಚೋರರ ಬಂಧನ
ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 156/2014 ಕಲಂ 379, 411 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾ ಅಪರಾಧ ವಿಭಾಗದ ಪಿಎಸ್ಐ ಎಂ.ಸಿ. ಮದನ್ ರವರು ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ ಬಜಾಜ್ ಸಿ.ಟಿ. 100 ಕೆ.ಎ 19 ಎಸ್-3326, Chasis No-DUFBLC78314, Engine No-DUMBLC31745 ನೇ ಬೈಕಲ್ಲಿ ಬಂದ ವ್ಯಕ್ತಿಗಳನ್ನು ಅನುಮಾನಗೊಂಡು ವಿಚಾರಿಸಿದಾಗ ಸದ್ರಿ ಬೈಕನ್ನು ಕದ್ದು ತಂದಿರುವುದಾಗಿ ತಿಳಿಸಿದಂತೆ ಉತ್ತರ ಠಾಣಾ ಮೊ.ನಂ. 156/14 ರಲ್ಲಿ ದಸ್ತಗಿರಿ ಪಡಿಸಿ, ಬೈಕನ್ನು ಸ್ವಾಧೀನಪಡಿಸಿಕೊಂಡು ವಿಚಾರಣೆ ವೇಳೆ ತಾವು ಕಳೆದ 3 ವರ್ಷಗಳಲ್ಲಿ ಮಂಗಳೂರು, ಪುತ್ತೂರು, ಹೊನ್ನಾವರ, ಕಾಸರಗೋಡು ಪರಿಸರದಲ್ಲಿ ಬೈಕ್ ಕಳವು ಮಾಡಿ ರಹಮ್ಮಾನಿಯ ನಗರದ ಅಬ್ದುಲ್ ಮಜೀದ್ ರವರ ಗುಜರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ. ಆರೋಪಿಗಳಾದ ಮೊಹಮ್ಮದ್ ನೌಶಾದ್ ಎಸ್. ಎಂ. @ ನೌಶು @ ನೌಶಾದ್ ಪ್ರಾಯ 22 ವರ್ಷ, ತಂದೆ ದಿವಂಗತ ಸೈಯದ್ ಎಂ. ಜಮಾಲ್ ವಾಸ: ರಾಜೀವ್ ನಗರ ಕಾಲೋನಿ ಅಂಗನವಾಡಿ ಬಳಿ, ಸೀತಾಂಗೋಳಿ, ಪುತ್ತಿಗೆ ಪಂಚಾಯತ್, ಎಡನಾಡ್ ಅಂಚೆ, ಕುಂಬ್ಲೆ, ಕಾಸರಗೋಡು, ಕೇರಳ , 2) ಮಹಮ್ಮದ್ ಪೈಸಲ್ @ ಪೈಸಲ್ ಪ್ರಾಯ 28 ವರ್ಷ, ತಂದೆ ಬಡುವನ್ ಕುಂಞಿ, ವಾಸ: ಆರಿಕ್ಕಾಡಿ ಕಾಲೋನಿ, ಬಂಬ್ರಾಣ ಗ್ರಾಮ, ಕುಂಬ್ಲೆ ಅಂಚೆ, ಕಾಸರಗೋಡು 3) ಅಬ್ದುಲ್ ಮಜೀದ್ ಎನ್.ಇ ಪ್ರಾಯ 31 ವರ್ಷ, ತಂದೆ ಇಬ್ರಾಹಿಂ ಹಾಜಿ, ವಾಸ :ರಹಮ್ಮಾನಿಯಾ ಮಂಜಿಲ್, ರಹಮ್ಮಾನಿಯಾ ನಗರ, ಆಲಂಬಾಡಿ ಮಿನಿ ಎಸ್ಟೇಟ್ ಚೆಂಗಳ ಪಂಚಾಯತ್, ಕಾಸರಗೋಡು ರವರನ್ನು ದಸ್ತಗಿರಿ ಮಾಡಿ ಅವರಿಂದ ಕಳವುಗೈದ ಮಂಗಳೂರು ದಕ್ಷಿಣ, ಉಳ್ಳಾಲ, ಪುತ್ತೂರು, ಹೊನ್ನಾವರ ನಗರ ಕಾಸರಗೋಡು ಪೊಲೀಸ್ ಠಾಣೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದ ಈ ಕೆಳಕಂಡ 5 ಬೈಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಶಪಡಿಸಿದ ಬೈಕ್‌ಗಳ ವಿವರ
1) KA-21 K-551 ನೇ ನಂಬ್ರದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೊಟಾರು ಸೈಕಲ್-ಒಂದು ಇದರ Chasis-DHVBKD20576 ಮತ್ತು Eng-DJGBJL34769 ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ. 45,000/- ಆಗಬಹುದು.
2) KL-14 M-9980 ನೇ ನಂಬ್ರದ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೊಟಾರು ಸೈಕಲ್-ಒಂದು ಇದರ Chasis- MD2DHDHZZUCK09736 ಮತ್ತು Eng-DHGBUK71979 ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ. 45,000/- ಆಗಬಹುದು.
3) ಕೆಂಪು ಬಣ್ಣದ ಹೀರೋ ಹೊಂಡಾ ಪ್ಯಾಶನ್ ಪ್ಲಸ್ ಮೊಟಾರು ಸೈಕಲ್-ಒಂದು ಇದರ ಹಿಂದುಗಡೆ ಹಾಗೂ ಮುಂದುಗಡೆ ಇದ್ದ ನಂಬರ್ ಪ್ಲೇಟ್ ಕಿತ್ತು ತೆಗೆದಿರುವುದು ಕಂಡು ಬರುತ್ತದೆ. ಇದರ Chasis-MBLHA10EL9GB23685 ಮತ್ತು Eng-HA10EB9GBO1754 ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ. 40,000/- ಆಗಬಹುದು.
4) KA-19 EB-9980 ನೇ ನಂಬ್ರದ ಕಪ್ಪು ಬಣ್ಣದ ಹೀರೋ ಹೊಂಡಾ ಸ್ಲೇಂಡರ್ ಮೊಟಾರು ಸೈಕಲ್-ಒಂದು ಇದರ Chasis-MBLHA10EYD9F06586 ಮತ್ತು Eng-HA10EFB9F15985 ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ. 35,000/- ಆಗಬಹುದು.
5) KL-14 ಎಂದು ನಂಬ್ರ ಇರುವ ಕಪ್ಪು ಬಣ್ಣದ ಹೀರೋ ಹೊಂಡಾ ಪ್ಯಾಶನ್ ಪ್ಲಸ್ ಮೊಟಾರು ಸೈಕಲ್-ಒಂದು ಇದರ Chasis - ನಂಬ್ರವನ್ನು ಉಜ್ಚಿ ಅಳಿಸಿ ಹಾಕಿದ ಕುರುಹು ಕಂಡು ಬರುತ್ತದೆ. Eng-07E08M04304 ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ. 35,000/- ಆಗಬಹುದು.
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ ಐ.ಪಿ.ಎಸ್. ಮತ್ತು ಡಿ.ಸಿ.ಪಿ. ಶ್ರೀ ಜಗದೀಶ್ ಹಾಗೂ ಶ್ರೀ ವಿಷ್ಣುವರ್ಧನ್ ರವರ ನಿರ್ಧೇಶನದಲ್ಲಿ ಮಂಗಳೂರು ಕೇಂದ್ರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕೆ. ತಿಲಕ್‌ಶ್ಚಂದ್ರ ರವರ ಮಾರ್ಗದರ್ಶನದಲ್ಲಿ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜುರವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದ್ದು, ಪತ್ತೆ ಕಾರ್ಯಚರಣೆಯಲ್ಲಿ ಕ್ರೈಂ ಪಿಎಸ್ಐ ಎಂ.ಸಿ.ಮದನ್, ಎಎಸ್ ಐ ದಯಾನಂದ ಹಾಗೂ ಹೆಚ್.ಸಿ ಜನಾರ್ಧನ, ಪಿ.ಸಿಗಳಾದ ಮಣಿ ಎಂ. ಎನ್, ಸುಧೀರ್, ಸುಧಾಕರ ಮತ್ತು ಶ್ರೀಶೈಲ ರವರು ಭಾಗವಹಿಸಿರುತ್ತಾರೆ.
No comments:
Post a Comment