ದೈನಂದಿನ ಅಪರಾದ ವರದಿ.
ದಿನಾಂಕ 07.08.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-08-2014 ರಂದು ಫಿರ್ಯಾದಿದಾರರಾದ ಶ್ರೀ ವಸಂತ ಅಮೀನ್ ರವರು ತನ್ನ ಭಾವ ಪ್ರಮೋದ ತಿಂಗಳಾಯ ರವರ ಬಾಬ್ತು ಕೆಎ-19 ಇಬಿ-2094 ನೇ ನಂಬ್ರದ ದ್ವಿಚಕ್ರ ವಾಹನದಲ್ಲಿ ಸಹಸವಾರರಾಗಿ ಅವರ ಮನೆಗೆ ಚಾ ಕುಡಿಯುವರೇ ಎನ್ ಎಚ್ 66ನ್ನು ದಾಟಿ ಬೈಕಂಪಾಡಿ ಕ್ರಾಸ್ ರಸ್ಥೆಯಿಂದ ಮೀನಕಳಿಯ ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 11:30 ಗಂಟೆಗೆ ಪಣಂಬೂರು ಬೀಚ್ ಕ್ರಾಸ್ ರಸ್ತೆ ಬಳಿಗೆ ತಲುಪಿದಾಗ ಬೈಕಂಪಾಡಿ ಕ್ರಾಸ್ ರಸ್ತೆ ಕಡೆಯಿಂದ ಪಣಂಬೂರು ಬೀಚ್ ಕಡೆಗೆ ಯಾವುದೇ ಸೂಚನೆ ನೀಡದೆ ಕೆಎ-19 ಎಎ- 5005ನೇ ನಂಬ್ರದ ಲಾರಿಯನ್ನು ಅದರ ಚಾಲಕ ಉಮೇಶ್ ರವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಒಮ್ಮೆಲೆ ಏಕಾಏಕಿ ಬಲಕ್ಕೆ ಚಲಾಯಿಸಿದ ಪರಿಣಾಮ ದ್ವಿಚಕ್ರ ವಾಹನಕ್ಕೆಡಿಕ್ಕಿಯಾಗಿ ಫಿರ್ಯಾದಿದಾರರು ವಾಹನದಿಂದ ಎಸೆಯಲ್ಪಟ್ಟು ಪ್ರಮೋದರವರ ಎರಡು ಕಾಲುಗಳಿಗೆ ಗಂಭೀರ ತರದ ಗಾಯವಾಗಿ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ದಾಖಲಾಗಿರುವದಲ್ಲದೆ ವಾಹನ ಕೂಡ ಜಖಂಗೊಂಡಿರುವುದಾಗಿದೆ.
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬೋಜಾ ಪುತ್ರನ್ ರವರ ಮಗ ನಾಗರಾಜನು ಸುಮಾರು 7 ವರ್ಷಗಳಿಂದ ಮೈಂದಗುರಿ ಎಂಬಲ್ಲಿ ತುಳಸಿ ಎಂಬವರ ಮನೆಯಲ್ಲಿ ಬಾಡಿಗೆಗೆ ಇರುವ ಸಚಿನ್ ಎಂಬವರ ರೂಮಿನಲ್ಲಿ ವಾಸಮಾಡಿಕೊಂಡಿದ್ದು ಪಿರ್ಯಾದಿದಾರರು ಅನೇಕ ಬಾರಿ ಆತನಲ್ಲಿ ಮನೆಗೆ ಬರುವಂತೆ ತಿಳಿಸಿದರೂ ಮನೆಗೆ ಬಾರದೇ ಅಲ್ಲಿಯೇ ಇದ್ದು ದಿನಾಂಕ 28-07-2014 ರಂದು ಪಿರ್ಯಾದಿದಾರರ ಮಗಳಾದ ಭಾರತಿ ಪೋನು ಮಾಡಿ ಮಗ ನಾಗರಾಜನು ಕಾಣೆಯಾದ ಬಗ್ಗೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಮತ್ತು ಮಗಳಾದ ಭಾರತಿಯೂ ಮೈಂದಗುರಿಯಲ್ಲಿರುವ ತುಳಸಿ ರವರ ಮನೆಗೆ ಹೋಗಿ ವಿಚಾರಿಸಿದಾಗ ಅವರ ಮನೆಯಲ್ಲಿದ್ದ ಸಚಿನ್ ರವರು "ದಿನಾಂಕ 25-07-2014 ರಂದು ತಾನು ಮತ್ತು ನಾಗರಾಜ ತನ್ನ ಊರಾದ ಕೇರಳದ ಕೊಲ್ಲಂಗೆ ಹೋಗಿ ವಾಪಾಸು 27-07-2014 ರಂದು ಮಧ್ಯಾಹ್ನ ಮನೆಯಿಂದ ಹೊರಟು ಮಂಗಳೂರಿಗೆ ಟ್ರೈನ್ ಮೂಲಕ ವಾಪಾಸು ಬರುತ್ತಿರುವಾಗ ದಿನಾಂಕ 28-07-2014 ರಂದು ಬೆಳಿಗ್ಗೆ 07-30 ಗಂಟೆಯಿಂದ 8-00 ಗಂಟೆಯ ಒಳಗಡೆ ಕೇರಳ ರಾಜ್ಯದ ಎಲಿಮಲ ರೈಲ್ವೇ ನಿಲ್ದಾಣದಲ್ಲಿ ರೈಲು ನಿಂತಾಗ ಚಾ ಕುಡಿಯಲೆಂದು ತಾನು ಮತ್ತು ನಾಗರಾಜ ಕೆಳಗಿಳಿದು ಚಾ ಕುಡಿದು ನಾನು ರೈಲಿನ ಒಳಗಡೆ ಬಂದು ರೈಲಿನಲ್ಲಿ ತನ್ನ ಸೀಟಿನಲ್ಲಿ ಕುಳಿತಿದ್ದು ನಾವಿಬ್ಬರು ಬೇರೆ ಬೇರೆ ಜಾಗದಲ್ಲಿ ಕುಳಿತಿರುವ ಕಾರಣ ನಾಗರಾಜ ಕೂಡಾ ರೈಲಿನಲ್ಲಿ ಬಂದು ಕುಳಿತರ ಬಹುದೆಂದು ಬಾವಿಸಿ ಸುಮ್ಮನಿದ್ದು ಮಂಗಳೂರಿನ ರೈಲ್ವೇ ನಿಲ್ದಾಣದಕ್ಕೆ ಬಂದು ನೋಡಿದಾಗ ನಾಗರಾಜನು ರೈಲಿನಲ್ಲಿ ಇಲ್ಲದೆ ಕಾಣೆಯಾಗಿರುತ್ತಾನೆ" ಎಂಬುದಾಗಿ ತಿಳಿಸಿದ್ದು ಈ ಬಗ್ಗೆ ಪಿರ್ಯಾದಿದಾರರು ಕೂಡಾ ಎಲ್ಲಾ ಕಡೆ ಹುಡುಕಾಡಿದರು ಈ ವರಗೆ ತನ್ನ ಮಗ ಮನೆಗೂ ಬಾರದೇ ಕೆರಳ ರಾಜ್ಯದ ಎಲಿಮಲ ಎಂಬಲ್ಲಿ ಚಾ ಕುಡಿಯಲು ರೈಲಿನಿಂದ ಇಳಿದವನು ವಾಪಾಸು ರೈಲಿಗೂ ಬಾರದೇ ಕಾಣೆಯಾಗಿರುತ್ತಾನೆ.
3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-08-2014 ರಂದು ಪಿರ್ಯಾದಿದಾರರಾದ ಪುರುಷೋತ್ತಮ್ ಸಾಲ್ಯಾನ್ ರವರು ತೋಕೂರು ರೈಲ್ವೇ ನಿಲ್ದಾಣದಿಂದ ಪಣಂಬೂರು ರೈಲ್ವೇ ಮಾರ್ಗದಲ್ಲಿ ಕರ್ತವ್ಯ ಮುಗಿಸಿಕೊಂಡು ಮದ್ಯಾಹ್ನ 3-00 ಗಂಟೆಗೆ ವಿಶ್ರಾಂತಿಗೆ ಹೋದವರು ದಿನಾಂಕ 06-08-2014 ರಂದು ಬೆಳಿಗ್ಗೆ 09-40 ಕ್ಕೆ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯದಲ್ಲಿರುವ ಸಮಯ ರೈಲ್ವೇ ಟ್ರಾಕ್ ನ್ನು ಚೆಕ್ ಮಾಡಿ ನೋಡಿದಾಗ ರೈಲ್ವೇ ಟ್ರಾಕಿನ ಜೋಡಣೆಯ ಸುಮಾರು 5000 ರೂ ಮೌಲ್ಯದ 4 ಸೆಟ್ ಫಿಶ್ ಪ್ಲೇಟ್ ಮತ್ತು ಅದರ ನಟ್ಟು ಮತ್ತು ಬೋಲ್ಟ್ ಗಳು ಕಳವಾಗಿದ್ದು. ಇವುಗಳನ್ನು ದಿನಾಂಕ 05-08-2014 ರ 15-00 ಗಂಟೆಯಿಂದ 06-08-2014 ರ ಬೆಳಿಗ್ಗೆ 09-40 ರ ಮದ್ಯ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05-08-2014 ರ ರಾತ್ರಿ 23-00 ಗಂಟೆಯಿಂದ ದಿನಾಂಕ: 06-08-2014 ರ ಬೆಳಿಗ್ಗೆ 07-00 ಗಂಟೆಯ ಮಧ್ಯೆ ಮಂಗಳೂರು ನಗರದ ಕದ್ರಿ ದೇವಸ್ಥಾನ ಹೊಸ ರಸ್ತೆಯ ಮಂಜುಶ್ರೀ ಲೇ-ಔಟ್ ನಲ್ಲಿರುವ ಸಾಯಿ ದೀಪ ಎಂಬ ಪಿರ್ಯಾದಿದಾರರಾದ ಶ್ರೀ ವೆಂಕಟೇಶ್ ಎಂ. ರವರ ವಾಸದ ಮನೆಯ ಎದುರುಗಡೆ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರ ಬಾಬ್ತು ಚಾಸೀಸ್.ನಂ:MA1TB2BSL72G87409, ಇಂಜಿನ್.ನಂ: BS74G42209ರ KA 19Z 3393ನೇ ನೋಂದಣಿ ಸಂಖ್ಯೆಯ, 2007ನೇ ಮೊಡೆಲಿನ ಸಿಲ್ವರ್ ಬಣ್ಣದ ಅಂದಾಜು ಮೌಲ್ಯ 3,75,000/- ರೂ. ಬೆಲೆ ಬಾಳುವ ಮಹೀಂದ್ರ ಕಂಪನಿಯ ಸ್ಕಾರ್ಪಿಯೋ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯ ಮಂಗಳೂರು ನೇದರ ಮುಖ್ಯ ಲಿಪಿಕಾಧಿಕಾರಿಗಳಾದ ಆಶಾ ಕೆ.ಪಿ. ರವರು ನೀಡಿದ ದೂರಿನ ಸಂಕ್ಷೀಪ್ತ ಸಾರಾಂಶವೇನೆಂದರೆ 3 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಮಂಗಳೂರು ನ್ಯಾಯಾಲಯದ ಎಂ.ವಿ.ಸಿ. ನಂ. 1389-20014 ರಲ್ಲಿನ ಫಿಕ್ಸ್ ಡ್ ಡಿಪಾಸಿಟ್ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಬಂದ ಪತ್ರವನ್ನು ಪಿರ್ಯಾದಿದಾರರು ಸ್ವೀಕರಿಸಿಕೊಂಡು ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯ ಮಂಗಳೂರು ರವರ ಗಮನಕ್ಕೆ ತಂದಿದ್ದು, ಸದರಿ ಡಿಪಾಸಿಟ್ ಬಗ್ಗೆ ಪಿರ್ಯಾದಿದಾರರಿಗೆ ನ್ಯಾಯಾಧಿಶರು ಮಾಹಿತಿ ಕೇಳಿ ಆದೇಶಿಸಿದ್ದು, ಪರಿಶೀಲಿಸಲಾಗಿಸದ್ರಿ ಪತ್ರದಲ್ಲಿ "ಹಣಕಾಸು ವಿಭಾಗದ ಶಿರಸ್ತೇದಾರ ರವರು ಪ್ರಕರಣದ ಎಫ್.ಡಿ. ರಶೀದಿ ನಂ. 1369584 (ರೂ. 4,80,543.00) ದಿನಾಂಕ 26-05-2014 ರಂದು ಕಛೇರಿಗೆ ಬಂದಿದ್ದು, ಕಛೇರಿಯ ಎಫ್.ಡಿ. ನೊಂದಣಿ ಸಂಖ್ಯೆ 20:14-15 ದಿನಾಂಕ 26-05-2014 ಎಂದು ನೊಂದಾಗಿದ್ದು, ಸದ್ರಿ ಎಫ್.ಡಿ. ಸಂಬಂಧಿಸಿದಂತೆ ಅವಧಿಪೂರ್ವಕವಾಗಿ ವಿಮಾ ಹಣವನ್ನು ಅರ್ಜಿದಾರರಿಗೆ ಕೊಡಲು ಯಾವುದೇ ಆದೇಶ ನ್ಯಾಯಾಲಯದಿಂದ ದೇನಾ ಬ್ಯಾಂಕ್ ಕಳುಸಿಲ್ಲ" ಎಂಬುದಾಗಿ ವಿವರಣೆ ನೀಡಿದ್ದು, ಪತ್ರದ ಜೊತೆಗೆ ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಎಫ್.ಡಿ. ಹಣವನ್ನು ಅವಧಿಪೂರ್ವ ಬಿಡುಗಡೆ ಮಾಡಲು ಮ್ಯಾನೇಜರ್, ದೇನಾ ಬ್ಯಾಂಕ್ ಇವರಿಗೆ ಕಳುಹಿಸಿದ ಆದೇಶ ನಕಲಿ ಎಂದು, ಅದರಲ್ಲಿರುವ ಸಹಿ ಮೇಲ್ನೋಟಕ್ಕೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪಾಟೀಲ್ ನಾಗಲಿಂಗೇನಗೌಡ (ಎನ್.ಎಸ್. ಪಾಟೀಲ್) ರವರ ಸಹಿ ಅಲ್ಲ ಎಂಬುದಾಗಿ ತಿಳಿದು ಬಂದಿದ್ದು, ಅಲ್ಲದೇ ಪತ್ರದಲ್ಲಿನ ಜಾವಕ ನಂಬ್ರ ಕೂಡಾ ಪಿರ್ಯಾದಿದಾರರ ಕಛೇರಿಯ ಜಾವಕ ನಂಬ್ರಗೆ ಹೊಂದಾಣಿಕೆ ಆಗದೇ ಇದ್ದು, ಸೀಲು ಕೂಡಾ ಕಛೇರಿಯ ಸೀಲು ಆಗಿರದೇ ಇದ್ದು, ದಾಖಲೆಗಳನ್ನು ಪರಿಶೀಲಿಸಿದಾಗ ಅರ್ಜಿದಾರ ದಿನೇಶ್, ತಂದೆ: ಚಿಂಕರ ಇದ್ದು, ಅವರ ಪರ ಎ.ಸಿ. ಜಯರಾಜ್ ವಕೀಲರು ಪ್ರತಿನಿಧಿಸಿರುವುದು ಕಂಡು ಬಂದಿದ್ದು, ಸದ್ರಿ ಎಫ್.ಡಿ. ರಶೀದಿ ಪಿರ್ಯಾದಿದಾರರ ನ್ಯಾಯಾಲಯದ ಭದ್ರಿಕೆಯಲ್ಲೇ ಇರುವುದಾಗಿ, ಇನ್ನು ಎಷ್ಟು ದಾಖಲೆಗಳು ನಕಲಿ ಮಾಡಲಾಗಿದೆ ಪ್ರಸ್ತುತ ತಿಳಿದು ಬಾರದೇ ಇದ್ದು, ತಮ್ಮ ಕಚೇರಿಯ ನ್ಯಾಯಾಧೀಶರ ಸಹಿ, ನ್ಯಾಯಾಲಯದ ಸೀಲ್ ನ್ನು ಎಲ್ಲವನ್ನು ನಕಲಿ(ಪೊರ್ಜರಿ) ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದಿ ನೀಡಿರುವುದಾಗಿದೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮೆರಿಲ್ ರವರು ಬಂದರು ಅಜೀಜುದ್ದೀನ್ ರಸ್ತೆಯಲ್ಲಿರುವ M/s Ludric Agencis ನಲ್ಲಿ ಮೆನೆಜರ್ ಆಗಿದ್ದು, ದಿನಾಂಕ: 05-08-2014 ರಂದು ಬೆಳಗ್ಗೆ 9-00 ಗಂಟೆಗೆ ಅಂಗಡಿ ಬಾಗಿಲು ತೆರೆದಾಗ ಒಳಗಡೆ ಇದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಕಂಡುಬಂದಿರುತ್ತದೆ. ಒಳಗಡೆ ಹೋಗಿ ನೋಡಿದಾಗ ಹಿಂದುಗಡೆಯ ಶಟರ್ ಬಾಗಿಲನ್ನು ಯಾರೋ ಕಳ್ಳರು ಬಲವಂತವಾಗಿ ಹೊಡೆದು ದಾಸ್ತಾನು ಕೋಣೆಯಲ್ಲಿದ್ದ ಬ್ರಾಸ್ [CP] ಫಿಟ್ಟಿಂಗ್ಸ್ ಗಳು ಕಳುವಾಗಿದ್ದು, ಅವರ ಗಮನಕ್ಕೆ ಬಂದಿದ್ದು ಅವರು ಕೂಡಲೇ ಮಾಲಿಕರಿಗೆ ವಿಷಯ ತಿಳಿಸಿರುತ್ತಾರೆ. ಅಂಗಡಿಯ ಮಾಲಿಕರು ಬರಲಿದ್ದುದರಿಂದ ಹಾಗೂ ಅಂಗಡಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ದಿನಾಂಕ 06-08-2014 ರಂದು ದೂರು ನೀಡಿರುವುದಾಗಿದೆ. ಕಳವಾದ ಸೊತ್ತುಗಳ ಟ್ಟು ಅಂದಾಜು ಮೌಲ್ಯ ರೂ 1,48,100.89/- ಆಗಿರುತ್ತದೆ.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06/08/2014 ರಂದು ಮಂಗಳೂರಿನಿಂದ ಗುರುಪುರ –ಕೈಕಂಬ ಕಡೆಗೆ ತನ್ನ ಬಾಬ್ತು ಕೆ.ಎ. 19 ಪಿ. 9338 ನೇ ಆಲ್ಟೋ ಕಾರಿನಲ್ಲಿ ಬರುತ್ತಿರುವಾಗ ಕೆ.ಎ 19 ಎಎ 0656 ನೇ ಪಿಕಪ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓವರಟೇಕ ಮಾಡಿ ಪೊಳಲಿದ್ವಾರದ ಬಳಿ 20:45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಭಾಸ್ಕರ್ ಟಿ. ಮಲ್ಲಿ ರವರ ವಾಹನಕ್ಕೆ ಡಿಕ್ಕಿ ಹೊಡೆದುದರ ಪರಿಣಾಮ ಆಲ್ಟೋಕಾರಿನ ಬಲಬದಿಯ ಕನ್ನಡಿಗೆ ಜಖಂ ಆಗಿದ್ದು ಕಾರಿನಿಂದಿಳಿದು ಕೇಳಲು ಹೋದಾಗ ಪಿಕಪ್ ವಾಹನದ ಚಾಲಕನೂ ಅವಾಚ್ಯ ಶಬ್ದದಿಂದ ಬೈದು ಕಂಪ್ಲೆಂಟ ಕೋಟ್ಟಲ್ಲಿ ನಿನ್ನನ್ನು ಕೊಲ್ಲದೇ ಬಿಡುವದಿಲ್ಲ ಕಾರನ್ನು ಬೆಂಕಿ ಕೊಟ್ಟು ಉರಿಸುತ್ತೇನೆ ಎಂದು ಹೇಳಿದ್ದು ವಾಹನದಲ್ಲಿದ್ದ ದಿನೇಶ ಎಂಬುವರ ಮೇಲೆ ಕೈ ಹಾಕಿ ಹಿಡಿದೆಳೆದಿದ್ದು ಆ ಸಮಯ ಕುತ್ತಿಗೆಯಲ್ಲಿದ್ದ ಚೈನು ಕಾಣೆಯಾಗಿದ್ದು ಅಲ್ಲದೇ ಸುರೇಶ ಪೂಜಾರಿ ಯವರ ಜಾಗದ ದಾಖಲೆ ಪತ್ರ ಮತ್ತು 3 ಬ್ಯಾಂಕಗಳ ಚೆಕ್ ಬುಕ್ ಗಳನ್ನು ತಗೆದುಕೊಂಡು ಹೋಗಿರುವದಾಗಿದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-08-2014 ರಂದು ರಾತ್ರಿ 10-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ದೀಪಕ್ ಕುಮಾರ್ ರವರು ದೇರಳಕಟ್ಟೆ ಕೆಎಸ್ ಹೆಗ್ಡೆ ಸಮೀಪದ ಐಸ್ ಕ್ರೀಂ ಅಂಗಡಿಯನ್ನು ಮುಚ್ಚಿ ಅವರ ಸ್ನೇಹಿತ ಪ್ರಶಾಂತ ನೊಂದಿಗೆ ಬ್ಯಾರೀಸ್ ಬಿಲ್ಡಿಂಗ್ ಬದಿಯಿಂದಾಗಿ ನಡೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದುದಾರರ ಹಿಂದುಗಡೆಯಿಂದ ಮೊ.ಸೈ.ನಂಬ್ರ KA-19-EB-6635 ನ್ನು ಅದರ ಸವಾರನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಒಮ್ಮೆಲೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ಗುದ್ದಿದ ಗಾಯ, ಎಡಭುಜದ ಬಳಿ, ಎರಡೂ ಕೈಯ ಮಣಿಕಟ್ಟಿನ ಬಳಿ, ಗಾಯವಾಗಿತ್ತು ಹಾಗೂ ತಲೆಗೆ ಗಂಬೀರ ಗಾಯವಾದ್ದರಿಂದ ಪಿರ್ಯಾದುದಾರರಿಗೆ ಸೃತಿ ತಪ್ಪಿದ್ದು ಕೂಡಲೇ ಪಿರ್ಯಾದುದಾರರ ಜೊತೆಯಿದ್ದ ಅವರ ಗೆಳೆಯ ಪ್ರಶಾಂತ ರವರು ಕೂಡಲೇ ರೀಕ್ಷಾವೊಂದರಲ್ಲಿ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತವಾಗುವಾಗ ಸಮಯ ಸುಮಾರು ರಾತ್ರಿ 10-15 ಗಂಟೆ ಆಗಬಹುದು.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-08-2014 ರಂದು ಮಧ್ಯಾಹ್ನ ಸುಮಾರು 2-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ರಿಯಾಜ್ ರವರು ಮನೆಯಿಂದ ಮುಕ್ಕಚೇರಿಗೆ ಬಂದು ಮುಕ್ಕಚೇರಿಯ ಮಸೀದಿಯ ಬಳಿಯಲ್ಲಿ ನಿಂತುಕೊಂಡಿದ್ದಾಗ ಅಲ್ಲಿಗೆ ಸುರ್ಮೆ ಇಮ್ರಾನ್ ,ಧರ್ಮನಗರದ ಅಲ್ತಾಫ್, ಎವೆರೆಸ್ಟ್ ಫಾರೂಕ್, ರವರುಗಳು ಬಂದು ಪಿರ್ಯಾದುದಾರರನ್ನು ಸುರ್ಮೆ ಇಮ್ರಾನ್, ಅಲ್ತಾಫ್ ಎವೆರೆಸ್ಟ್ ಫಾರುಕ್ ರವರುಗಳು ಬಲತ್ಕಾರವಾಗಿ ಮೋಟಾರ್ ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಒಂಭತ್ತುಕೆರೆ ಬಳಿಯಲ್ಲಿರುವ ಮೆರೆಡಿಯನ್ ಕಾಲೇಜಿನ ಬಳಿಯ ಪೊದರು ಗಿಡಗಳ ಬಳಿ ಮೋಟಾರ್ ಬೈಕ್ ನಿಲ್ಲಿಸಿ ಮೋಟಾರ್ ಬೈಕ್ನಿಂದ ಇಳಿಸಿ ಅಲ್ಲಿಯೇ ಪಕ್ಕಕ್ಕೆ ಎಳೆದುಕೊಂಡು ಹೋಗಿ ಪಿರ್ಯಾದುದಾರರಿಗೆ ಸುರ್ಮೊ ಇಮ್ರಾನ್, ಅಲ್ತಾಫ್, ಎವೆರೆಸ್ಟ್ ಫಾರೂಕ್ ರವರುಗಳು ಕೈಯಿಂದ ಹೊಡೆದು ಕಾಲಿನಿಂದ ತುಳಿದರು. ಇದರಿಂದ ಪಿರ್ಯಾದುದಾರರು ಅಲ್ಲಿಯೇ ನೋವಿನಿಂದ ಕೆಳಗಡೆ ಬಿದ್ದಾಗ ಅಲ್ಲಿದ್ದ ಉಳಿದವರು ಅಲ್ತಾಫ್ನಲ್ಲಿ ಕಲ್ಲು ಎತ್ತಿ ಹಾಕಿ ಕೊಲ್ಲುವಂತೆ ತಿಳಿಸಿದಾಗ ಅಲ್ತಾಫ್ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಪಿರ್ಯಾದಿದಾರರ ತಲೆಯ ಮೇಲೆ ಹಾಕಿದಾಗ ಉರುಳಾಡಿ ತಪ್ಪಿಸಿಕೊಂಡಿರುವುದಾಗಿದೆ. ಈ ಸಮಯ ಬೇರೆಯವರು ಬರುತ್ತಿರುವುದನ್ನು ನೋಡಿದವರು ಮುಂದೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಅಲ್ಲಿಂದ ಓಡಿ ಹೋಗಿರುವುದಾಗಿದೆ.
No comments:
Post a Comment