ದೈನಂದಿನ ಅಪರಾದ ವರದಿ.
ದಿನಾಂಕ 23.08.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 3 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.08.2014 ರಂದು ಸಮಯ ಸುಮಾರು 14.00 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಶೋಭಾ ರವರು ಊಟ ಮುಗಿಸಿ ತಾನು ಕೆಲಸ ಮಾಡುವ ಹಂಪನಕಟ್ಟೆಯ ಮಾಂಡೋವಿ ಶೋರೂಮ್ ಕಡೆಗೆ ಹೋಗಲು ಹಂಪನಕಟ್ಟೆ ಪೋಲೋ ಸೇಲ್ ಅಂಗಡಿ ಎದುರು ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಜ್ಯೋತಿ ಕಡೆಯಿಂದ ಎ.ಬಿ ಶೆಟ್ಟಿ ಸರ್ಕಲ್ ಕಡೆಗೆ ಸ್ಕೂಟರ್ ನಂಬ್ರ KA19-Y-6274 ನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಿಂತಿದ್ದ ಫಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು, ತಲೆಯ ಹಿಂಭಾಗಕ್ಕೆ ರಕ್ತಗಾಯ, ಎಡಭುಜಕ್ಕೆ ,ಎಡಕಾಲಿನ ಮೊಣಗಂಟಿಗೆ ,ಮತ್ತು ಎದೆಗೆ ಗುದ್ದಿದ ನೋವು ಉಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕೆತ್ಸೆ ಪಡೆದು, ನಂತರ ಹೆಚ್ಚಿನ ಚಿಕೆತ್ಸೆಗಾಗಿ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.08.2014 ರಂದು ಸಮಯ ಸುಮಾರು 11.15 ಗಂಟೆಗೆ ಫಿರ್ಯಾದುದಾರರಾದ ಮಂಜುಳಾ ನಾಯಕ್ ರವರು ತನ್ನ ಅಕ್ಕನ ಬಾಬ್ತು ಸ್ಕೂಟರ್ ನಂಬ್ರ KA19-EG-4617 ನೇದರಲ್ಲಿ ಸವಾರರಾಗಿದ್ದುಕೊಂಡು, ತನ್ನ ನೆರೆಕೆರೆ ನಿವಾಸಿ ರಾಮಕೃಷ್ಣ ಭಟ್ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಜ್ಯೋತಿ ಕಡೆಯಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಬರುವಾಗ, ಹಿಂದುಗಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ನಂಬ್ರ KA19-F-2895 ರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂಧ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟರ್ ನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದುದಾರರ ಬಲಕಾಲಿನ ಮೊಣಗಂಟಿಗೆ ರಕ್ತಗಾಯ, ಎಡಕೈ ಮೊಣಗಂಟಿಗೆ ರಕ್ತಗಾಯ ಹಾಗೂ ಸಹಸವಾರ ರಾಮಕೃಷ್ಣ ಭಟ್ ರವರಿಗೆ ಬಲಕಾಲಿನ ಪಾದದ ಮೇಲಿನ ಗಂಟಿಗೆ ಗುದ್ದಿದ ನೋವು, ಎರಡೂ ಕೈಗಳಿಗೆ ತರಚಿದ ಗಾಯ, ತಲೆಗೆ ಗುದ್ದಿದ ನೋವಾಗಿದ್ದು ಚಿಕೆತ್ಸೆಗಾಗಿ ವಿಜಯ್ ಕ್ಲಿನಿಕ್ ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.08.2014 ರಂದು ಫಿರ್ಯಾದಿದಾರರಾದ ಶ್ರೀ ಅಶ್ವಥ್ ಕೆ. ರವರು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಹೆಚ್-4281 ನೇಯದರಲ್ಲಿ ಸ್ನೇಹಿತ ಶಶಿರಾಜ್ ಎಂಬವರೊಂದಿಗೆ ಮನೆಗೆ ಹೋಗುತ್ತಿರುವಾಗ ರಾತ್ರಿ 9:00 ಗಂಟೆಗೆ ಬಂಟ್ವಾಳ ತಾಲೂಕು, ನರಿಂಗಾನ ಗ್ರಾಮದ, ನೆತ್ತಿಲಪದವು ಜಂಕ್ಷನ್ ತಲುಪುತ್ತಿದ್ದಂತೆಯೇ ಎದುರಿನಿಂದ ಆಟೋರಿಕ್ಷಾ ಒಂದನ್ನು ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆಯುವ ರೀತಿಯಲ್ಲಿ ಬಂದು, ಈ ಬಗ್ಗೆ ಫಿರ್ಯಾದಿದಾರರು ಅವರಲ್ಲಿ ವಿಚಾರಿಸಿದಾಗ ಆರೋಪಿಗಳು ರಿಕ್ಷಾದಿಂದ ಇಳಿದು ಅವರುಗಳ ಪೈಕಿ ಅಲಿ ಎಂಬಾತನು ಕಬ್ಬಿಣದ ರಾಡ್ನಲ್ಲಿ ಫಿರ್ಯಾದಿದಾರರ ಎದೆಗೆ ಹೊಡೆದು ಉಳಿದವರು ಕೈಗಳಿಂದ ಹಲ್ಲೆ ಮಾಡಿದ್ದು ಅಲ್ಲದೇ, ಶಶಿರಾಜ್ನಿಗೆ ಕೂಡ ಕೈಗಳಿಂದ ಹಲ್ಲೆ ನಡೆಸಿದ್ದು ಆ ಸಮಯ ಫಿರ್ಯಾದಿದರರು ಬೊಬ್ಬೆ ಹೊಡೆದಾಗ ಜನರು ಅಲ್ಲಿಗೆ ಬರುವುದನ್ನು ನೋಡಿ ಆರೋಪಿಗಳು "ಈ ವಿಚಾರ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಲ್ಲುತೇವೆಂದು" ಹೇಳಿ ರಿಕ್ಷಾದಲ್ಲಿ ಪರಾರಿಯಾಗಿರುತ್ತಾರೆ. ಫಿರ್ಯಾದಿದಾರರು ಆರೋಪಿಗಳಿಗೆ ಹೆದರಿ ದೂರು ನೀಡದೇ ಇದ್ದು, ದಿನಾಂಕ 19-08-2014 ರಂದು ದಿನ ನೋವು ಉಲ್ಬಣಗೊಂಡಿದ್ದರಿಂದ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿಯೂ, ಶಶಿರಾಜ್ ಹೊರರೋಗಿಯಾಗಿ ದಾಖಲಾಗಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-08-2014ರಂದು ಬೆಳಿಗ್ಗೆ 9-00 ಗಂಟೆಗೆ ಮಂಗಳೂರು ತಾಲೂಕು, ಕೊಣಾಜೆ ಗ್ರಾಮದ ತಿಬ್ಲೆಪದವು ಎಂಬಲ್ಲಿ ಆರೋಪಿಯು ತಾನು ಚಲಾಯಿಸುತ್ತಿದ್ದ ಮೋಟಾರು ಸೈಕಲ್ KA 19 EG 4389ನ್ನು ಅತೀ ವೇಗ ಮತ್ತು ನಿರ್ಲಕ್ಷ್ಯೆತನದಿಂದ ಚಲಾಯಿಸಿ ರಸ್ತೆಗೆ ಬಿದ್ದ ಪರಿಣಾಮ ಸದ್ರಿ ಬೈಕಿನಲ್ಲಿ ಸಹ ಸವಾರನಾಗಿ ಕುಳಿತಿದ್ದ ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ಶೆಟ್ಟಿ ರವರಿಗೆ ಬಲ ಕಾಲಿನ ಮೊಣಗಂಟಿಗೆ, ಬಲ ಕಣ್ಣಿನ ಬಳಿಗೆ ರಕ್ತಗಾಯವಾಗಿರುವುದಲ್ಲದೇ ಬಲ ಕಾಲಿನ ಮೊಣಗಂಟಿಗೆ ಕೂಡ ತೀವ್ರ ಸ್ವರೂಪದ ಗಾಯವುಂಟಾಗಿರುತ್ತದೆ. ಗಾಯಾಳು ಮಂಗಳೂರು ಯೆನೆಪೋಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಿರಾಜ್ ರೆಹಮಾನ್ ರವರು ತನ್ನ ಪರಿಚಯದ ಸಂದೇಶರವರಿಂದ ಸಾಲವಾಗಿ ಪಡೆದಿದ್ದ 8,400/- ರೂಪಾಯಿ ಹಣವನ್ನು ಕೊಡುವಂತೆ ತಣ್ಣೀರುಬಾವಿ ನಿವಾಸಿ ಭರತ ಎಂಬವರು ಪಿರ್ಯಾದಿದಾರರಿಗೆ ಆಗಾಗ ದೂರವಾಣಿ ಕರೆಯನ್ನು ಮಾಡಿ ತಾನು ಸಂದೇಶ ರವರಿಗೆ ಕೊಡ ಬೇಕಾದ ಹಣ 50,000/- ರೂಪಾಯಿ ಹಣವನ್ನು ತನಗೆ ಕೊಡ ಬೇಕಾಗಿ ಬೆದರಿಕೆ ಹಾಕುತ್ತಿದ್ದು ದಿನಾಂಕ 21-08-2014 ರಂದು ಮಧ್ಯಾಹ್ನ 2-27 ಗಂಟೆಗೆ ಪಿರ್ಯಾದಿದಾರರಿಗೆ ಕರೆ ಮಾಡಿ ತನಗೆ 1,00,000/- ರೂಪಾಯಿ ಹಣವನ್ನು ಕೊಡ ಬೇಕು ಇಲ್ಲದಿದ್ದಲಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಪುನಃ ಅದೆ ದಿನ ರಾತ್ರಿ 7-40 ಗಂಟೆಗೆ ಪಿರ್ಯಾದಿದಾರರಿಗೆ ದೂರವಾಣಿ ಕರೆಯನ್ನು ಮಾಡಿ ಹಣದ ವಿಚಾರ ಸರಿ ಪಡಿಸುವ ಬಗ್ಗೆ ಕಸಬಾ ಬೆಂಗ್ರೆಯ ಪುಟ್ ಬಾಲ್ ಮೈದಾನಕ್ಕೆ ಬರುವಂತೆ ಸೂಚಿಸಿದಂತೆ ಪಿರ್ಯಾದಿದಾರರು ಪರಿಚಯದ ಇಸೊದ್ದಿನ್, ಝಾಕೀರ್, ಮತ್ತು ಹಬೀಬ ರವರನ್ನು ಪುಟ್ ಬಾಲ್ ಮೈದಾನಕ್ಕೆ ಕರೆದುಕೊಂಡು ರಾತ್ರಿ 7-55 ಗೆಂಟೆಗೆ ಹೋಗಿದ್ದು ಅಲ್ಲಿ ಭರತ ಹಾಗೂ ಇತರ 3 ಜನರಿದ್ದು ಈ ಫೈಕಿ ಭರತ ರವರ ಪಿರ್ಯಾದಿದಾರರನ್ನು ಉದ್ದೇಶಿಸಿ " ನೀನು ನಮಗೆ ಕೊಡ ಬೇಕಾದ ಹಣವನ್ನು ಕೊಡದೆ ಇದ್ದಲ್ಲಿ ಅದನ್ನು ಯಾವ ರೀತಿ ವಸೂಲು ಮಾಡ ಬೇಕೆಂದು ನನಗೆ ತಿಳಿದಿದೆ" ಎಂದು ಬೆದರಿಕೆ ಹಾಕಿ ಅಲ್ಲಿಯೆ ನಿಂತಿದ್ದ ನೀಲಿ ಬಣ್ಣದ I-20 ಕಾರಿನ ಹಿಂಭಾಗದ ಡಿಕ್ಕಿಯಿಂದ ತಲವಾರನ್ನು ಎಳೆದು ಪಿರ್ಯಾದಿದಾರರಿಗೆ ತೋರಿಸಿ "ನೀನು ಹಣವನ್ನು ಕೊಡದೇ ಇದ್ದಲ್ಲಿ ಕೊಲೆ ಮಾಡುವುದಾಗಿ" ಬೆದರಿಕೆ ಒಡ್ಡಿರುತ್ತಾರೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ಪೂರ್ವ ಪೊಲೀಸ್ ಠಾಣಾ ನಿರೀಕ್ಷಕ ಶ್ರೀ ಟಿ.ಡಿ.ಜಾಗರಾಜ ರವರು ಇಲಾಖಾ ವಾಹನ ನಂಬ್ರ ಕೆಎ-19 ಜಿ-601ನೇದರಲ್ಲಿ ಪಿಸಿ 655 ನೇಯವರ ಜೊತೆ ದಿನಾಂಕ: 22-08-2014 ರಂದು ಸಂಜೆ ಸುಮಾರು 7-45 ಗಂಟೆಗೆ ನಂತೂರು ಶಿವಭಾಗ್ ನಲ್ಲಿ ಗಸ್ತಿನಲ್ಲಿರುವ ಸಮಯ ಮಂಗಳೂರು ನಗರದ ಮಲ್ಲಿಕಟ್ಟೆ ದ್ವಾರದ ಬಳಿ ಯಾರೋ ಕಿಡಿಗೇಡಿಗಳು ಪಟಾಕಿ ಹಚ್ಚಿ ದಾರಿಹೋಕರಿಗೆ, ವಾಹನಗಳಿಗೆ ಮತ್ತು ಅಂಗಡಿಗಳಿಗೆ ಬಂದು ಹೋಗುತ್ತಿರುವ ಗ್ರಾಹಕರಿಗೆ ತೊಂದರೆ ಮಾಡುವ ರೀತಿಯಲ್ಲಿ ರಸ್ತೆಯ ಮಧ್ಯೆ ಅಕ್ರಮ ಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ ಪಟಾಕಿ ಸರವನ್ನು ಹಚ್ಚಿ ಸಂಭ್ರಮಿಸುತ್ತಿದ್ದು, ಇಲಾಖಾ ವಾಹನ ನೋಡಿದ ತಕ್ಷಣ ಓಡಿ ಹೋಗಿದ್ದು, ದಿನಾಂಕ: 22.08.2014 ರಂದು ಕನ್ನಡ ಜ್ಞಾನಪೀಠ ಪುರಷ್ಕೃತ ಶ್ರೀ ಯು.ಆರ್.ಅನಂತಮೂರ್ತಿ ರವರು ನಿಧನರಾಗಿದ್ದು ಈ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಸುಮಾರು ಐದರಿಂದ ಆರು ಜನ ಪಟಾಕಿ ಹಚ್ಚಿ ಸಮಾನ ದುರುದ್ದೇಶದಿಂದ ಸಂಭ್ರಮಾಚಾರಣೆಯನ್ನು ಮಾಡುತ್ತಿದ್ದ ಬಗ್ಗೆ ತಿಳಿದು ಬಂದಿದ್ದು, ಸದ್ರಿ ಕಿಡಿಗೇಡಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪಿ.ಆರ್. ಕಿಶೋರ್ ರವರ ಸಂಸ್ಥೆಯಾದ ಮಂಗಳೂರು ತಾಲೂಕು ಮೂಡಬಿದ್ರೆ ಬನ್ನಡ್ಕ ಎಂಬಲ್ಲಿರುವ ಎಸ್.ಕೆ.ಎಫ್. ಇಂಡಸ್ಟ್ರಿಯಲ್ ಕಾರ್ಪೊರೇಷನ್ ಎಂಬ ಸಂಸ್ಥೆಯ ಬಾಬ್ತು ಕೊಪ್ಪಳ ಜಿಲ್ಲೆಯ ಏರಿಯಾ ಮ್ಯಾನೇಜರ್ ಶಿವರಾಜ್ ನು ಆಗಿದ್ದು, ದಿನಾಂಕ 06-07-14 ರಿಂದ ಕೆಲಸಕ್ಕೆ ಗೈರು ಹಾಜರಾಗಿದ್ದು, ಹಾಗೂ ಸಂಸ್ಥೆಗೆ ಆತನ ಕಾರ್ಯವ್ಯಾಪ್ತಿಯಿಂದ ಬರಬೇಕಾದ ಹಣವನ್ನು ಸಂಗ್ರಹಿಸುತ್ತಿರುವ ಬಗ್ಗೆ ಪಿರ್ಯಾದಿದಾರರಿಗೆ ಬಂದ ಮಾಹಿತಿ ಮೇರೆಗೆ ಪಿರ್ಯಾದಿದಾರರು ಆತನನ್ನು ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ಮತ್ತು ಹಣ ಸಂಗ್ರಹಿಸಿದ ಬಗ್ಗೆ ವಿಚಾರಿಸಿದ ಕಾರಣ ಆರೋಪಿಯು ಪಿರ್ಯಾದಿದಾರರ ಸಂಸ್ಥೆಯ ಮುಖ್ಯಸ್ಥರಿಗೆ ಮತ್ತು ಮಹಿಳಾ ಸಿಬ್ಬಂದಿಯವರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಿರುವುದಲ್ಲದೇ ದಿನಾಂಕ 20-08-14 ರಂದು ಮಧ್ಯಾಹ್ನ ಸಮಯ ಕೂಡಾ ಮುಖ್ಯಸ್ಥರ ದೂರವಾಣಿಗೆ ಕರೆ ಮಾಡಿದ್ದು, ಅದನ್ನು ಪಿರ್ಯಾದಿದಾರರು ಸ್ವೀಕರಿಸಿದಾಗ ಕೊಲೆ ಬೆದರಿಕೆ ಹಾಕಿರುತ್ತಾನೆ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-08-2014 ರಂದು ಮಧ್ಯಾಹ್ನ 1-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ ಬಡಗುಳಿಪಾಡಿ ಗ್ರಾಮದ, ಗಂಜಿಮಠ ಎಂಬಲ್ಲಿ ಕೈಕಂಬ-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೋ ವಾಹನ ನಂ: ಕೆಎ 19 ಎಂಇ 1692 ನೇದರ ಚಾಲಕ ತನ್ನ ಬಾಬ್ತು ವಾಹನವನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಎದುರಿನಿಂದ ಹೋಗುತ್ತಿದ್ದ ಫಿರ್ಯಾದಿದಾರರಾದ ಶ್ರೀ ಗೋಪಾಲ ಭಂಡಾರಿ ರವರು ಚಲಾಯಿಸುತ್ತಿದ್ದ ಸ್ಕೂಟರ್ ನಂ: ಕೆಎ 19 ಇಕೆ 8864 ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರ ಸವಾರ ಫಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಎಡಕಾಲಿಗೆ ರಕ್ತ ಗಾಯ ಮತ್ತು ಎರಡೂ ಕೈಗಳಿಗೆ ತರಚಿದ ಗಾಯಗಳಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
No comments:
Post a Comment