ದೈನಂದಿನ ಅಪರಾದ ವರದಿ.
ದಿನಾಂಕ 21.08.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ-12-08-2014 ರಂದು ಪಿರ್ಯಾದಿದಾರರಾದ ಶ್ರೀ ಸಂತೋಷ್ ಕುಮಾರ್ ರವರು ಬೈಕಂಪಾಡಿ ಮೀನಕಳಿಯಾ ನಿವಾಸಿ ರಮೇಶ್ ಎಂಬುವವರ ಮನೆಯ ಡಿಶ್ ನ ಬಗ್ಗೆ ಕಂಪ್ಲೇಂಟ್ ಕುರಿತು ಹೋಗುತ್ತಿರುವ ಸಮಯ ಮಧ್ಯಾಹ್ನ 3.30 ರ ವೇಳೆ ರೋಡ್ರಿಗಸ್ ಆಟೊ ಸರ್ವಿಸ್ ಕಟ್ಟಡದ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರಿಗೆ ಗುರುತು ಪರಿಚಯದ ಶಾಫಿಕ್ ಮತ್ತು ಜಾಕೀರ್ ಎಂಬುವವರು ಸಿಕ್ಕಿದ್ದು ಅವರ ಪೈಕಿ ಜಾಕೀರ್ ಎಂಬಾತ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಂತರ ಜಾಕೀರ್ ಮತ್ತು ಶಾಫಿಕ್ ಪಿರ್ಯಾದಿದಾರರಿಗೆ ಕೈಗಳಿಂದ ಹೊಡೆದು, ದೂಡಿ ಅಲ್ಲದೇ ಶಾಫಿರ್ ಕಬ್ಬಿಣದ ಸರಳಿನಿಂದ ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ಹೊಡೆದಿದ್ದು, ಆರೋಪಿಗಳು ಪಿರ್ಯಾದಿದಾರರ ನೆರೆಕೆರೆಯವರಾಗಿದುದರಿಂದ ಅವರ ವಿರುದ್ದ ಪ್ರಕರಣ ದಾಖಲಿಸುವುದು ಬೇಡವೆಂದು ಪಿರ್ಯಾದಿದಾರರು ಸುಮ್ಮನಿದ್ದರೂ, ಆರೋಪಿಗಳು ದಿನಾಂಕ 20-08-2014 ರಂದು ಬೆಳಿಗ್ಗೆ 09.00 ಗಂಟೆಗೆ ಬೈಕಂಪಾಡಿಯ ಜಂಕ್ಞನ್ ನಲ್ಲಿ ಪಿರ್ಯಾದಿದಾರರಿಗೆ ಪುನಃ ಸಿಕ್ಕು ಅವರಿಗೆ ಬೆದರಿಕೆ ಒಡ್ಡಿರುತ್ತಾರೆ.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಬೆಂಗಳೂರು ಶಂಕರಾಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊಕದ್ದಮೆ ನಂಬ್ರ 39/2014 ಕಲಂ 41(ಡಿ),102 ಸಿಆರ್ ಪಿಸಿ ಜೊತೆಗೆ 379 ಐಪಿಸಿ ಹಾಗೂ ಮೊಕದ್ದಮೆ ನಂಬ್ರ 43/2014 ಕಲಂ 420 ಐಪಿಸಿ ಪ್ರಕರಣದ ಕಡತವನ್ನು ಪೊಲೀಸ್ ಆಯುಕ್ತರು ಮಂಗಳೂರು ನಗರ ಇಲ್ಲಿಗೆ ಠಾಣಾ ಸರಹದ್ದಿನ ಆಧಾರದಲ್ಲಿ ತನಿಖೆಗೆ ಕಳುಹಿಸಿಕೊಟ್ಟಿದ್ದು ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಆರೋಪಿ ಗಿರೀಶ್ ರೈ ಎಂಬಾತನು ಸ್ಕಾರ್ಪಿಯೋ ಕಾರ್ ನಂಬ್ರ ಕೆಎ-19 ಎನ್-9137ನೇದನ್ನು ಬೆಂಗಳೂರು ಶಂಕರಾಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊ.ನಂ.43/14 ರಲ್ಲಿನ ಪಿರ್ಯಾದಿದಾರರಾದ ಶ್ರೀ ಎಸ್.ಎಂ.ಶಾರೀಕ್ ಎಂಬವರನ್ನು ನಂಬಿಸಿ 2014ನೇ ಮಾರ್ಚ್ ತಿಂಗಳಿನಲ್ಲಿ ಸದ್ರಿ ಸ್ಕಾರ್ಪಿಯೋ ವಾಹನವನ್ನು ಪಡೆದುಕೊಂಡು ಸದ್ರಿ ವಾಹನವನ್ನು ಸ್ವಂತಕ್ಕೆ ಉಪಯೋಗಿಸಿ ಪಿರ್ಯಾದಿಗೆ ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-08-2014 ರಂದು ಬೆಳಗ್ಗೆ ಸುಮಾರು 7.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಉಮೇಶ್ ಎನ್. ಅಂಚನ್ ರವರು ಅವರ ಬಾಬ್ತು ಕೆಎ 19 ಡಿ 3067 ನೇ ಟೆಂಪೋವನ್ನು ಕೆಸರುಗದ್ದೆಯಿಂದ ಬೆಳುವಾಯಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಕೆಸರುಗದ್ದೆ ಶಾಲೆಯ ಬಳಿ ತಲುಪಿದಾಗ ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಕೆಎ-25-ಬಿ-7655ನೇ ಬಸ್ಸ್ ನ್ನು ಅದರ ಚಾಲಕ ಸೂರ್ಯಕಾಂತನು ಅತೀ ವೇಗ ಹಾಗೂ ನಿರ್ಲಕ್ಷದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಟೆಂಪೋವಿನ ಎದುರು ಬದಿಗೆ ಜಖಂಗೊಂಡಿರುತ್ತದೆ.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-08-2014 ರಂದು ಬೆಳಿಗ್ಗೆ 09-00 ಗಂಟೆ ಸಮಯಕ್ಕೆ ಮಂಗಳುರು ನಗರದ ಜಪ್ಪು ಎಂಬಲ್ಲಿರುವ ಡಾಕ್ಟರ್ಸ್ ಕ್ವಾಟ್ರರ್ಸ್ ಮತ್ತು ಕಮರ್ಷಿಯಲ್ ಕಾಂಪ್ಲೆಕ್ಸ್ ಎಂಬ ಬಹು ಮಹಡಿ ಕಟ್ಟಡದ 8 ನೇ ಮಹಡಿಯ ಮೇಲೆ ಸೆಂಟ್ರಿಂಗ್ ಕೆಲಸವನ್ನು ಮಾಡುತ್ತಿದ್ದ ಖೈರೂಲ್ ಹಕ್, ಪ್ರಾಯ 19 ವರ್ಷ, ತಂದೆ: ಅಬ್ದುಲ್ ರಫೀಕ್, ವಾಸ: ಬೋರೆಲ್ ಗ್ರಾಮ, ಜಗದೀಶ್ ಪುರ್ ಅಂಚೆ, ಪಶ್ಚಿಮ ಬಂಗಾಳ ಎಂಬವರು ಆಯ ತಪ್ಪಿ ಸುಮಾರು 90 ಅಡಿ ಆಳದ ಲಿಫ್ಟ್ ಫಿಟ್ ನ ಗುಂಡಿಗೆ ಬಿದ್ದು ಗಂಬೀರ ಗಾಯಗೊಂಡು ಮೃತಹೊಂದಿರುವುದಾಗಿದೆ. ಈ ಅವಘಡಕ್ಕೆ ಕಟ್ಟಡದ ಗುತ್ತಿಗೆದಾರರಾದ ಶ್ರೀ ವಿನೋದ್ ಪಿಂಟೊ ಹಾಗೂ ಸಹ ಗುತ್ತಿಗೆದಾರರಾದ ಮೊಹಮ್ಮದ್ ಅನ್ಸಾರ್ ರವರು ಕೆಲಸಗಾರರಿಗೆ ಕೆಲಸ ಮಾಡುತ್ತಿರುವ ಸಮಯ ಸುರಕ್ಷಾ ಕ್ರಮಕ್ಕಾಗಿ ಹೆಲ್ಮೆಟ್, ಸೇಫ್ಟಿ ಬೆಲ್ಟ್ ಗಳನ್ನು ನೀಡದೇ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಲಿಫ್ಟ್ ನ ಫಿಟ್ ಗೆ ಸೇಪ್ಟಿ ನೆಟ್ ನ್ನು ಅಳವಡಿಸದೇ, ನಿರ್ಲಕ್ಷತನವನ್ನು ವಹಿಸಿರುವ ಕಾರಣ 8 ನೇ ಮಹಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೆಲಸಗಾರ ಕೈರೂಲ್ ಹಕ್ ಎಂಬಾತನು ಆಯ ತಪ್ಪಿ ಸುಮಾರು 90 ಅಡಿಯಷ್ಟು ಆಳ ಬಿದ್ದುದರ ಪರಿಣಾಮ ಗಂಬೀರ ಗಾಯಗೊಂಡು ಮೃತಪಡಲು ಕಾರಣರಾಗಿರುತ್ತಾರೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮಂಗಳೂರು ಸಿ.ಸಿ.ಬಿ.ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ರಾದ ಶ್ರೀ ವೆಲೆಟೈನ್ ಡಿ'ಸೋಜಾ ರವರಿಗೆ ದಿನಾಂಕ 20-08-2014 ರಂದು ಸಂಜೆ 17-00 ಗಂಟೆಗೆ ಮಾನ್ಯ ಪೊಲೀಸ್ ಉಪ ಆಯುಕ್ತರು, [ಕಾ.ಸು.] ರವರು ಮಾಹಿತಿ ನೀಡಿದಂತೆ ಮಂಗಳೂರು ನಗರದ ಗೂಡ್ಸ್ ಶೆಡ್ ರಸ್ತೆಯ ಬದಿಯಲ್ಲಿರುವ ಸಾಯಿ ಓಂ ರಿಕ್ರಿಯೇಷನ್ ಎಂಬಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪಂಚರುಗಳೊಂದಿಗೆ ಸಿ.ಸಿ.ಬಿ.ಘಟಕದ ಪಿ.ಎಸ್.ಐ., ಸಿಬ್ಬಂದಿ ಹಾಗೂ ದಕ್ಷಿಣ ಠಾಣಾ ಪಿ.ಎಸ್.ಐ. ಶರೀಪ್ ರವರುಗಳು ಮಾಹಿತಿ ಬಂದ ಸ್ಥಳಕ್ಕೆ ಸಂಜೆ 17-50 ಗಂಟೆಗೆ ತಲುಪಿ ಕ್ಲಬ್ ನ ಒಳಗಡೆ ಪ್ರವೇಶಿಸುತ್ತಿದ್ದಂತೆ, ಒಂದು ಹಾಲ್ ನಲ್ಲಿ ಹಲವಾರು ಜನರು ಒಂದು ಚಾಪೆಯನ್ನು ಹಾಕಿಕೊಂಡು ಕುಳಿತು ಕೊಂಡಿದ್ದು, ಅವರವರ ಕೈಯಲ್ಲಿ ಹಣವನ್ನು ಹಿಡಿದುಕೊಂಡಿದ್ದರು. ಒಬ್ಬ ವ್ಯಕ್ತಿಯ ಕೈಯಲ್ಲಿ ಇಸ್ಪೀಟು ಎಲೆಗಳನ್ನು ಹಿಡಿದು ಕೊಂಡು ಚಾಪೆಯ ಮೇಲೆ ಹಾಕುತ್ತಿದ್ದನು. ಕುಳಿತವರು ಕೂಡಾ ಅಂದರ್-ಬಾಹರ್ ಎಂದು ಹೇಳುತ್ತಿದ್ದರು. ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಅವರನ್ನು ಸುತ್ತುವರಿದು, ಈ ಆಟವನ್ನು ಯಾರು ನಡೆಸುತ್ತಿದ್ದಾರೆ ಎಂಬುದಾಗಿ ಕೇಳಿದಾಗ, ಶಂಕರ್ ಎಂಬವರು ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಪಿರ್ಯಾದಿದಾರರು ಆಟವನ್ನು ನಡೆಸಲು ಯಾವುದಾದರೂ ಅಧೀಕೃತ ಪರವಾನಿಗೆ ಇದೆಯೇ ಎಂದು ಕೇಳಿದಾಗ, ಇಲ್ಲ ಎಂದು ತಿಳಿಸಿದ ಮೇರೆಗೆ ಒಟ್ಟು ಅಲ್ಲಿ ಹಾಜರಿದ್ದ 19 ಆರೋಪಿಗಳನ್ನು ಹಾಗೂ ಅವರ ಕೈಯಲ್ಲಿ ಜೂಜಾಟಕ್ಕೆ ಪಣವಾಗಿ ಹಿಡಿದು ಕೊಂಡಿದ್ದ ಒಟ್ಟು ಹಣ ರೂಪಾಯಿ 20,390/- ಮತ್ತು ಒಂದು ಚಾಪೆ ಹಾಗೂ 52 ಇಸ್ಪೀಟು ಎಲೆಗಳನ್ನು ಮುಂದಿನ ಕ್ರಮದ ಬಗ್ಗೆ ಪಂಚರುಗಳ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ.
No comments:
Post a Comment