Saturday, August 30, 2014

Daily Crime Reports 29-08-2014

ದೈನಂದಿನ ಅಪರಾದ ವರದಿ.

ದಿನಾಂಕ 29.08.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-08-2014 ರಂದು ಪಿರ್ಯಾದಿದಾರರಾದ ರೋಸಿಯಾ ಜಾನ್ ಡಿ'ಸಿಲ್ವ ರವರು ತನ್ನ ಬಾಬ್ತು ಕಾರು ನಂಬ್ರ ಕೆ.-19-ಎಂ.ಸಿ-5717 ನೇದನ್ನು ಮಂಗಳೂರು ನಗರದ ಸ್ಟೇಟ್ಬ್ಯಾಂಕ್ಬಸ್ನಿಲ್ದಾಣದಿಂದ ಜ್ಯೋತಿ ಕಡೆಗೆ ಚಲಾಯಿಸುತ್ತಾ, ಸಮಯ ರಾತ್ರಿ 20:00 ಗಂಟೆಗೆ ಕ್ಲಾಕ್ಟವರ್ಸರ್ಕಲ್ಬಳಿ ಬಂದಾಗ, ಬಸ್ನಂಬ್ರ ಕೆ.-19-ಡಿ-2844 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಢು ಬಂದು ಪಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರ ಕಾರು ಜಖಂಗೊಂಡಿರುತ್ತದೆ.  ಘಟನೆಯ ಬಳಿಕ ಸದ್ರಿ ಬಸ್ನಂಬ್ರ ಕೆ.-19-ಡಿ-2844 ನೇದನ್ನು ಅದರ ಚಾಲಕನು ಸ್ಥಳದಲ್ಲಿ ನಿಲ್ಲಿಸದೇ ಬಸ್ಸಿನೊಂದಿಗೆ ಹೊರಟು ಹೋಗಿರುತ್ತಾರೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-08-2014 ರಂದು ಬೆಳ್ಳಿಗ್ಗೆ ಸುಮಾರು 09-05 ಗಂಟೆಗೆ ಸಿ.ಟಿ. ಬಸ್ಸು ರೂಟ್ ನಂ. 51, ಕೆಎ-19-ಎಎ-676 ನೇದರ ಚಾಲಕ ಅಸ್ಪಕ್ ಎಂಬಾತನು ಬಸ್ಸನ್ನು ಬಲ್ಮಠ ಕಡೆಯಿಂದ ಬೆಂದೂರ್ವೆಲ್ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಬಂದು ಮಂಗಳೂರು ನಗರದ ಬೆಂದೂರ್ವೆಲ್ ರಸ್ತೆಯ ಜಂಕ್ಷನ್ ಬಳಿ ಬಸ್ಸು ನಿಲ್ದಾಣದಲ್ಲಿ ನಿಂತುಕೊಂಡಿದ್ದ ಪಿರ್ಯಾದುದಾರರಾದ ಶ್ರೀ ಪ್ರದೀಪ್ ರವರಿಗೆ ಮತ್ತು ತಿಲಕ್ರಾಜ್(19) ಎಂಬಾತನಿಗೆ ಢಿಕ್ಕಿ ಪಡಿಸಿರುವುದಾಗಿದೆ. ಪರಿಣಾಮ ತಿಲಕ್ರಾಜ್‌‌ನು ರಸ್ತೆಗೆ ಬಿದ್ದು, ಆತನ ತಲೆಯ ಮೇಲೆ ಮತ್ತು ದೇಹದ ಮೇಲೆ ಬಸ್ಸಿನ ಟಯರ್ ಹರಿದು ಸ್ಥಳದಲ್ಲಿ ಮೃತಪಟ್ಟಿದ್ದು, ಪಿರ್ಯಾದುದಾರರು ರಸ್ತೆಯ ಬದಿಗೆ ಎಸೆಯಲ್ಪಟ್ಟು ಅವರ ಎಡಕೈ ಮೊಣಗಂಟಿಗೆ ಮತ್ತು ಎಡಕಾಲಿಗೆ ಗುದ್ದಿದ ಗಾಯವಾಗಿರುತ್ತದೆ.

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಯ ಜಯಾ ಶೆಟ್ಟಿ ರವರ ಬಾವ ಸುರೇಶ್ ಶೆಟ್ಟಿ 45 ವರ್ಷ ಮಂಗಳೂರು ತಾಲೂಕು ತೋಡಾರ್ ಗ್ರಾಮದ ಪುದ್ದರ್ ಕೋಡಿ ಎಂಬಲಿಂದ ದಿನಾಂಕ 27-08-2014 ರಂದು  ಮಂಗಳೂರಿಗೆ ಸೆಂಟ್ರಿಂಗ್ ಕೆಲಸಕ್ಕೆ ಹೋಗಿ ಬರುವುದಾಗಿದೆ. ಬೆಳಿಗ್ಗೆ 9.00 ಗಂಟೆಗೆ ಪಿರ್ಯಾಧಿದಾರರಿಗೆ ಮತ್ತು ಪತ್ನಿ ಸೀತಾಲಕ್ಷ್ಮಿ ತಿಳಿಸಿ ಹೋದವರು ಈವರೆಗೊ ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ.  

 

4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-08-2014 ರಂದು ರಾತ್ರಿ 8-30 ಗಂಟೆ ಸಮಯಕ್ಕೆ ಗಣೇಶ್ ಪುರ ಕಾಟಿಪಳ್ಳ ಕೈಕಂಬ ದಲ್ಲಿ ಪಿರ್ಯಾದಿದಾರರಾದ ಶ್ರೀ ಕಮಲಾಕ್ಷ ಶೆಟ್ಟಿ ರವರು ಅವರು ನಿರ್ವಾಹಕರಾಗಿ  ಕೆಲಸ ಮಾಡಿಕೊಂಡಿರುವ 15ನೇ ನಂಬ್ರ ಅರಸು ಸಿಟಿ ಬಸ್ಸಿನಲ್ಲಿಂದ ಇಳಿಯುತ್ತಿದ್ದಂತೆ ದಯಾನಂದ @ ದಾಂದು ರವರು ಇತರ 10-15 ಜನರನ್ನು ಜೊತೆಯಲ್ಲಿ ಕರೆದುಕೊಂಡು  ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ದಯಾನಂದ ರವರು ಮರದ ಸೋಂಟೆಯಿಂದ ಪಿರ್ಯಾದಿಯ ಎರಡೂ ಕಾಲಿನ ಮೊಣ ಗಂಟಿಗೆ ಹಾಗೂ ತಲೆಗೆ ಹೊಡೆದಿದ್ದು ಇತರರು ಕೂಡಾ ಕೈಯಿಂದ ಹಾಗೂ ಮರದ ಸೋಂಟೆಗಳಿಂದ ಪಿರ್ಯಾದಿಗೆ ಹೊಡೆದು ತೀವ್ರ ತರಹದ ಮೂಳೆ ಮುರಿತದ ಗಾಯ ಮಾಡಿದ್ದು ಘಟನೆಗೆ ಪಿರ್ಯಾದಿ ಹಾಗೂ ದಯಾನಂದ ರವರ ಅಣ್ಣ ಜಗದೀಶರವರಿಗೆ ದಿನಾಂಕ 26-08-2014 ರಂದು ರಾತ್ರಿ 10-00 ಗಂಟೆ ಸಮಯಕ್ಕೆ ಕೂಳೂರಿನಲ್ಲಿ ಗಲಾಟೆ ಆದ ದ್ವೇಷದಿಂದ ಕೃತ್ಯ ಎಸಗಿರುವುದಾಗಿದೆ.

 

5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸತೀಶ್ ರವರ ಸಹೋದ್ಯೋಗಿ ವಿನಯ್ ಕುಮಾರ್ ಎಂಬವರ ಬಾಬ್ತು ಯಮಹಾ FZ ನಂಬ್ರ KA 19.EJ 4743ನೇ ದನ್ನು ಪಿರ್ಯಾದಿದಾರರು ದಿನಾಂಕ 12-08-2014 ರಂದು ಬೆಳಿಗ್ಗೆ 08-00 ಗಂಟೆಗೆ ಅವರ ಬಾಡಿಗೆ ಮನೆಯ ಮಾಲಿಕರಾದ ರಾಜುರವರ ಮನೆಯ ಅಂಗಳದಲ್ಲಿ ನಿಲ್ಲಿಸಿ ಕಂಪೆನಿ ಕೆಲಸದ ಬಗ್ಗೆ ರಾಜಸ್ಥಾನಕ್ಕೆ ತೆರಳಿ  ದಿನಾಂಕ 27-08-2014 ರಂದು ವಾಪಾಸು ಬಂದು ನೋಡಿದಾಗ  ಮೋಟಾರು ಸೈಕಲ್ ಇಲ್ಲದೇ ಇದ್ದು ಬಗ್ಗೆ ಮನೆಯ ಮಾಲಿಕರಾದ ರಾಜುರವರಲ್ಲಿ ವಿಚಾರಿಸಲು ಅವರು ತಮಿಳುನಾಡಿಗೆ ಹೊಗಿರುವುದಾಗಿ ಮೋಟಾರು ಸೈಕಲಿನ ಬಗ್ಗೆ ತಿಳಿದಿಲ್ಲವಾಗಿ ನುಡಿದಂತೆ  ಸದ್ರಿ ಮೋಟಾರು ಸೈಕಲನ್ನು ದಿನಾಂಕ 12-08-2014 ಬೆಳಿಗ್ಗೆ 8-00 ಗಂಟೆಯಿಂದ ದಿನಾಂಕ 27-08-2014  ಸಂಜೆ 6-00 ಗಂಟೆ ಮದ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕಳವಾದ ಮೋಟಾರು ಸೈಕಲ್ ಅಂದಾಜು ಮೌಲ್ಯ 60000/- ರೂ ಆಗಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.08.2014 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೊದೀನಬ್ಬಾ ರವರು ತನ್ನ ಬಾಬ್ತು ಆಟೋ ರಿಕ್ಷಾ ಕೆಎ19ಸಿ5984 ನೇದನ್ನು ಚಲಾಯಿಸಿಕೊಂಡು ಮಂಗಳೂರು ಕಡೆಯಿಂದ ಮೂಡುಶೆಡ್ಡೆ ಕಡೆಗೆ ಹೋಗುತ್ತಾ ವಾಮಂಜೂರು ಉಲ್ಲಾಸ್‌‌ಬಾರ್‌‌ ಮುಂಬಾಗ ತಲುಪಿದಾಗ ಮೂಡಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಕೆಎ19ಎಂಬಿ1807 ನೇ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಪಿರ್ಯಾಧಿದಾರರ ಆಟೋ ರಿಕ್ಷಾದ ಮುಂಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ರಿಕ್ಷಾ ಪಲ್ಟಿ ಆಗಿ ಪಿರ್ಯಾಧಿದಾರರು ಡಾಮರು ರಸ್ತೆಯ ಪಕ್ಕದ ಮಣ್ಣು ರಸ್ತೆಗೆ  ಬಿದ್ದು ಅವರ ತಲೆಗೆ ಹಾಗೂ ಕಣ್ಣಿನ ಬಲಭಾಗದ ರೆಪ್ಪೆಯ ಬಳಿ, ಮೂಗಿನ ಬಳಿ, ರಕ್ತಗಾಯ  ಅಲ್ಲದೆ  ಸೊಂಟಕ್ಕೆ  ಹಾಗು ಹೊಟ್ಟೆಗೆ ಗುದ್ದಿದ ನೋವು ಉಂಟಾಗಿ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

No comments:

Post a Comment