ದೈನಂದಿನ ಅಪರಾದ ವರದಿ.
ದಿನಾಂಕ 17.08.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 1 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 0 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-08-2014 ರಂದು ಬೆಳಿಗ್ಗೆ 11-30 ಗಂಟೆಗೆ ಶ್ವೇತಾ, ಸದಾಶಿವ ಮತ್ತು ಗಿರೀಶ್ ಉಳ್ಳಾಲ ರವರು ಉರ್ವಸ್ಟೋರ್ ನಲ್ಲಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಕಟ್ಟಡದಲ್ಲಿರುವ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ತನಿಖೆಗಾಗಿ ಕಳುಹಿಸಿದ್ದು, ಅಲ್ಲಿ ಪಿರ್ಯಾದಿದಾರರಾದ ಶ್ರೀ ಎಸ್.ಪಿ. ಆನಂದ ಹಾಗೂ ಶ್ವೇತಾ ಕೂಡಾ ಹಾಜರಾಗಿದ್ದು ತನಿಖೆ ಮುಗಿದ ನಂತರ ಶ್ವೇತಾ ಮತ್ತು ಪಿರ್ಯಾದಿದಾರರು ಕಛೇರಿಯಿಂದ ಕೆಳಗೆ ಇಳಿಯುತ್ತಿದ್ದಾಗ "ಮೂವರು ಅಪರಿಚಿತ ಗೂಂಡಾಗಳು ಪಿರ್ಯಾದಿಯನ್ನು ಸುತ್ತುವರಿದು ಸದಾಶಿವ ಮತ್ತು ಗಿರೀಶ್ ಉಳ್ಳಾಲ ರವರು "ನಿನ್ನ ಕೈ ಕಾಲು ಮುರಿಯಲು ಕಳುಹಿಸಿದ್ದು, ಅವರ ವಿರುದ್ಧ ಭಾರೀ ಪಿತೂರಿ ಮಾಡುತ್ತೀಯ, ನಿನ್ನನ್ನು ಬದುಕಲು ಬಿಡುವುದಿಲ್ಲ ನಿನ್ನ ಹೆಣ ಕೂಡಾ ಸಿಗದ ಹಾಗೆ ಮಾಡುತ್ತೇವೆ ಇನ್ನು ಮುಂದೆ ಸದಾಶಿವ ಮತ್ತು ಗಿರೀಶ್ ಉಳ್ಳಾಲ ವಿರುದ್ಧ ಯಾವುದೇ ದೂರನ್ನು ದಾಖಲಿಸಬಾರದು ಎಚ್ಚರಿಕೆ" ಎಂದು ಪಿರ್ಯಾದಿಯನ್ನು ಬೆದರಿಸಿರುತ್ತಾರೆ. ಈ ಕೃತ್ಯಕ್ಕೆ ಪಿರ್ಯಾದಿದಾರರಿಗೆ ಮತ್ತು ಆರೋಪಿಗಳಾದ ಶ್ವೇತಾ, ಸದಾಶಿವ ಮತ್ತು ಗಿರೀಶ್ ಉಳ್ಳಾಲ ಇವರುಗಳಿಗೆ ಇರುವ ಹಳೆಯ ವೈಷಮ್ಯವೇ ಕಾರಣವಾಗಿರುತ್ತದೆ.
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-3-2014 ರಂದು ಸಂಜೆ 3:30 ರ ವೇಳೆಗೆ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಪೀರ್ ಸಾಬ್ ರವರು ಚಲಾಯಿಸಿಕೊಂಡು ಬರುತ್ತಿದ್ದ ಮೀನಿನ ಲಾರಿ KA-20-C-9420 ನೇ ದ್ದನ್ನು ಮಂಗಳೂರು ತಾಲೂಕು 62 ನೇ ತೋಕುರು ಗ್ರಾಮದ ಕಾನ - ಜೋಕಟ್ಟೆ ರಸ್ತೆಯ ಎಡ ಭಾಗದ ಬೋರುಗುಡ್ಡೆಯ ಮಣ್ಣಿನ ರಸ್ತೆಯಲ್ಲಿ ನಿಲ್ಲಿಸಿದ್ದ ಸಮಯ ಅಲ್ಲಿಗೆ ಮೋಟಾರ್ ಸೈಕಲ್ ನಲ್ಲಿ ಬಂದಿದ್ದ ತೌಫಿಕ್, ನಿಸಾರ್, ನಿಯಾಜ್ ಮತ್ತು ಸಾನು ಎಂಬುವರುಗಳು ಪಿರ್ಯಾದಿದಾರರಿಗೆ ಹಲ್ಲೆ ಮಾಡಿ ಲಾರಿಯ ಒಳಗಿದ್ದ ರೂ 2,51,000/- ನಗದು ಹಣ ಹಾಗೂ ಪಿರ್ಯಾದಿದಾರರ ಪ್ಯಾಂಟಿನ ಕಿಸೆಯಲ್ಲಿದ್ದ ಪರ್ಸ್ ನೊಳಗಿಟ್ಟಿದ್ದ 16.000/- ನಗದು ಹಣ ಒಟ್ಟು ರೂ 2.67.000/- ನ್ನು ಹಾಗೂ ಪಿರ್ಯಾದಿದಾರರ ಲೈಸೆನ್ಸ್ ,ಕೆನರಾ ಬ್ಯಾಂಕ್ ನ ಎ.ಟಿ.ಎಂ ಕಾರ್ಡ್ ಹಾಗೂ ಮೊಬೈಲ್ ನ ಸಿಮ್ ಕಾರ್ಡ್ ನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-08-2014ರಂದು ಪಿರ್ಯಾದಿದಾರರಾದ ಶ್ರೀ ರವಿಶಂಕರ್ ಸಿ., ಪೊಲೀಸ್ ಉಪ-ನಿರೀಕ್ಷಕರು, ಮಂಗಳೂರು ಪೂರ್ವ ಪೊಲೀಸ್ ಠಾಣೆ ರವರು ಇಲಾಖಾ ವಾಹನ KA 19G 240ನೇದರ ಚಾಲಕ ಪಿ.ಸಿ.2194, ಪಿ.ಸಿ.743, ಪಿ.ಸಿ. 409ನೇಯವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯವನ್ನು ಮಾಡಿಕೊಂಡು ಕದ್ರಿ ಪಾರ್ಕ್ ರಸ್ತೆಯಿಂದ ಪೊಲೀಸ್ ಠಾಣೆಗೆ ಮಧ್ಯಾಹ್ನ 3-15 ಗಂಟೆಗೆ ಬರುತ್ತಿದ್ದಾಗ ಕೆ.ಪಿ.ಟಿ ಕಡೆಯಿಂದ ಒಂದು ಮೋಟಾರು ಸೈಕಲ್ ವೇಗವಾಗಿ ಬರುವುದನ್ನು ಕಂಡು ನಿಲ್ಲಿಸಿ ಮೋಟಾರು ಸೈಕಲನ್ನು ಪರಿಶೀಲಿಸಲಾಗಿ ಕೆಂಪು ಮತ್ತು ಕಪ್ಪು ಬಣ್ಣದಿಂದ ಕೂಡಿದ KA 19 EG 5753ನೇ ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಮೋಟಾರ್ ಸೈಕಲಾಗಿದ್ದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಯಶವಂತ ಪ್ರಾಯ 19 ವರ್ಷ ತಂದೆ: ರಾಜೇಶ, ವಾಸ: ಬಸಲಿಂಗಪ್ಪ ನಗರ ಕಾಲೋನಿ, ಪಚ್ಚನಾಡಿ, ಮಂಗಳೂರು. ಎಂದು ತಿಳಿಸಿದ್ದು ಆತನಲ್ಲಿ ಮೋಟಾರು ಸೈಕಲಿನ ದಾಖಲಾತಿಗಳನ್ನು ಕೇಳಿದಾಗ ಆತನು ತಬ್ಬಿಬ್ಬುಗೊಂಡು ಒಮ್ಮೆಲೆ ಅಲ್ಲಿಂದ ಓಡಿ ಹೋಗುವುದನ್ನು ಕಂಡು ಆತನು ಮೋಟಾರು ಸೈಕಲನ್ನು ಕದ್ದು ತಂದಿರಬಹುದೆಂದು ಪಿರ್ಯಾದಿದಾರರ ಜೊತೆಯಲ್ಲಿದ್ದ ಸಿಬ್ಬಂದಿಗಳು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆ ವ್ಯಕ್ತಿಯು ರಸ್ತೆಯನ್ನು ಕ್ರಾಸ್ ಮಾಡಿ ವೃಂದಾವನ ಹೊಟೇಲಿನ ಸ್ವಲ್ಪ ಮುಂದುಗಡೆ ಬಲಭಾಗದಲ್ಲಿ ಸುಮಾರು 50 ಅಡಿ ಆಳದ ಮರ ಪೊದೆಗಳಿಂದ ಕೂಡಿದ ಜಾಗದಲ್ಲಿ ಹಾರಿ ಓಡಿ ಪರಾರಿಯಾಗಿರುತ್ತಾನೆ. ಸದ್ರಿ ಮೋಟಾರು ಸೈಕಲಿನ ಇಂಜಿನ್ ನ್ಂಬ್ರ ಹಾಗೂ ಚಾಸೀಸ್ ನಂಬ್ರಗಳು ಉಡುಪಿ ಜಿಲ್ಲೆಯ ಕೋಟಾ ಪೊಲಿಸ್ ಠಾಣೆಯಲ್ಲಿ ಕಳವಾದ ಪ್ರಕರಣ ಅ.ಕ್ರ.ನಂಬ್ರ: 144/14 ಕಲಂ: 379 ಐಪಿಸಿ ರಲ್ಲಿ ಕಳವಾದ ಮೋಟಾರು ಸೈಕಲಿನ ಇಂಜಿನ್ ನಂಬ್ರ ಹಾಗೂ ಚಾಸೀಸ್ ನಂಬ್ರ ಒಂದೇ ರೀತಿಯಾಗಿರುವುದಾಗಿ ತಿಳಿದು ಬಂದಿರುವುದರಿಂದ ತಪಾಸಣೆ ಮಾಡುವ ಸಮಯ ಓಡಿ ಹೋದ ವ್ಯಕ್ತಿಯು ಕಳ್ಳತನ ಮಾಡಿಕೊಂಡು ಬಂದಿರಬಹುದೆಂದು ಬಲವಾದ ಸಂಶಯವಿರುತ್ತದೆ.
4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಇಸ್ಮಾಯಿಲ್ ರವರು ಬಂದರಿನ ಉತ್ತರ ದಕ್ಕೆಯಲ್ಲಿ ಫೇರಿ ಕೌಂಟರ್‌ನ ಎದುರು ಸ್ಟೆಷನರಿ ಅಂಗಡಿಯನ್ನು ಹೊಂದಿದ್ದು, ದಿನಾಂಕ 02-08-2014 ರಂದು ಎಂದಿನಂತೆ ರಾತ್ರಿ ಸುಮಾರು 10-20 ಗಂಟೆಗೆ ಬಂದ್ ಮಾಡಿದ್ದು, ದಿನಾಂಕ 03-08-2014 ರಂದು ಬೆಳಿಗ್ಗೆ 06-00 ಗಂಟೆಗೆ ಪಿರ್ಯಾದಿದಾರರ ಪರಿಚಯದವರು ಪೋನ್ ಮಾಡಿ ಅಂಗಡಿಯಲ್ಲಿ ಕಳ್ಳತನವಾಗಿದೆ ಎಂಬುದಾಗಿ ತಿಳಿಸಿದಂತೆ ಬಂದು ನೋಡಿದಾಗ ಯಾರೋ ಕಳ್ಳರು ಅಂಗಡಿಯ ಸೆಂಟರ್ ಲಾಕ್‌ನ್ನು ಬಲಾತ್ಕರವಾಗಿ ಮುರಿದು ಅಂಗಡಿಯ ಒಳಗೆ ಪ್ರವೇಶಿಸಿ ಕೌಂಟರ್ನಲ್ಲಿದ್ದ ಸುಮಾರು 12,000 ರೂ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಅಲ್ಲದೇ ಪಕ್ಕದಲ್ಲಿರುವ ಅಬ್ಬುಸಾಲಿ ಎಂಬವರ ಅಂಗಡಿಯ ಸೆಂಟರ್ ಲಾಕ್ನ್ನು ಮುರಿದು ಅವರ ಅಂಗಡಿಯಲ್ಲಿದ್ದ ಸುಮಾರು 3000/- ನಗದು ಹಣ ಮತ್ತು ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಪೋನ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-08-2014 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಯು.ಬಿ. ವಿಜಯ್ ಕುಮಾರ್ ರವರ ಮೊಬೈಲ್ ನಂಬ್ರಕ್ಕೆ ಯಾರೋ ಅನಾಮದೇಯ ವ್ಯಕ್ತಿಯು ತನ್ನ ಮೊಬೈಲ್ ದೂರವಾಣಿಯಿಂದ ಕರೆ ಮಾಡಿ ನಾವು ಎಸ್ಐಬಿ ಕಾರ್ಡ್ನವರೆಂದು ತಿಳಿಸಿ, ಎಸ್ಬಿಐ ಕ್ರೆಡಿಟ್ ಕಾರ್ಡ್ ಮತ್ತು ಕೆನರ ಬ್ಯಾಂಕ್ ಡೆಬಿಟ್ ಕಾರ್ಡ್‌ನ ನಂಬ್ರ ಮತ್ತು ಅದರ ಪಿನ್ ನಂಬ್ರನ್ನು ಪಿರ್ಯಾದಿದಾರರಿಂದ ಕೇಳಿ ತಿಳಿದುಕೊಂಡು ಅವರ ಖಾತೆಯಲ್ಲಿದ್ದ ಒಟ್ಟು 47,000/- ರೂಪಯಿಯನ್ನು ಯಾರೋ ಡ್ರಾ ಮಾಡಿಕೊಂಡು ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಹಾಜೀರಾ ರವರ ಕಿರಿಯ ಮಗಳಾದ ಶ್ರೀಮತಿ ಅಸ್ಮಾ ಪ್ರಾಯ 20 ವರ್ಷ, ಎಂಬವಳನ್ನು ಮುಲ್ಕಿ ಕದಿಕೆಯ ಮುನೀರ್ ಎಂಬವರಿಗೆ ಸುಮಾರು 7 ತಿಂಗಳ ಮೊದಲು ವಿವಾಹ ಮಾಡಿಕೊಟ್ಟಿದ್ದು, ಆಕೆಯ ಗಂಡನು ರಿಕ್ಷಾ ಚಾಲಕನಾಗಿದ್ದು, ಗಂಡನ ಮನೆಯಲ್ಲಿ ಅತ್ತೆ,ನಾದಿನಿಯರು ನೀಡುವ ತೊಂದರೆಯ ಸಲುವಾಗಿ ದಿನಾಂಕ 15-08-2014 ರಂದು ಮಾತುಕತೆ ಮಾಡುವರೇ ಪಿರ್ಯಾದಿದಾರರು ಹಾಗೂ ಅವರ ಕಡೆಯವರು ಅಸ್ಮಾಳ ಗಂಡನ ಮನೆಗೆ ಹೋಗಿದ್ದು, ಅಲ್ಲಿ ಸೇರಿದವರೆಲ್ಲರೂ, ಅಸ್ಮಾಳ ಗಂಡನ ಬುದ್ದಿ ಒಳ್ಳೆಯದಿಲ್ಲ ಎಂಬ ತೀರ್ಮಾನಕ್ಕೆ ಬಂದು ವಾಪಾಸು ಬಂದಿದ್ದು, ದಿನಾಂಕ 16-08-2014 ರಂದು ಬೆಳಿಗ್ಗೆ 8-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಇನ್ನೋರ್ವ ಮಗಳಾದ ಸೌದ ಬಾನುವಿನ ಮನೆಯಾದ ಎಮ್.ಟಿ.ಎಲ್ಲಾ ಅಪಾರ್ಟ್ ಮೆಂಟ್ ಪಾಂಡೇಶ್ವರದ ಮನೆಯಲ್ಲಿ ಯಾರಿಗೂ ತಿಳಿಸದೇ ಎಲ್ಲಿಗೋ ಹೋಗಿರುತ್ತಾಳೆ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದಲ್ಲಿ ಆಕೆಯ ಪತ್ತೆಯಾಗದೇ ಇರುವುದಾಗಿದೆ.
7.ಮಂಗಳೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಎಂ.ನಾರಾಯಣ ಭಟ್ ರವರು ಕುಲಶೇಖರ ಶಿವಪದವಿನಲ್ಲಿರುವ ಶ್ರೀ.ದುರ್ಗಾಪರಮೇಶ್ವರಿ ಪಂಚಮುಖಿ ಮಹಾಗಣಪತಿ ದೇವಸ್ಥಾನದಲ್ಲಿ ಆರ್ಚಕರಾಗಿದ್ದು ದಿನಾಂಕ: 15.08.2014 ರಂದು ಪಿರ್ಯಾದಿದಾರರು ಎಂದಿನಂತೆ ಪೂಜೆ ಪುರಸ್ಕಾರ ಮುಗಿಸಿ ರಾತ್ರಿ 8.00 ಗಂಟೆಗೆ ದೇವಸ್ಥಾನಕ್ಕೆ ಬೀಗ ಹಾಕಿ ಬೀಗದ ಕೀಯನ್ನು ಆಡಳಿತ ಮುಕ್ತೇಸರರಾದ ಸೇಸಪ್ಪ ನವರಲ್ಲಿ ಕೊಟ್ಟಿದ್ದು, ದಿನಾಂಕ: 16.08.2014 ರಂದು 6.00 ಗಂಟೆಗೆ ಪಿರ್ಯಾದಿದಾರರು ಮನೆಯಿಂದ ಹೊರಡುತ್ತಿದ್ದಂತೆ ದೇವಸ್ಥಾನದ ಆಡಳಿತ ಮುಕ್ತೇಸರರು ಫೋನ್ ಮಾಡಿ ದೇವಸ್ಥಾನಕ್ಕೆ ಯಾರೋ ಕಳ್ಳರು ಬಂದಿದ್ದಾರೆ ಬಾಗಿಲು ತೆರೆದುಕೊಂದುಕೊಂಡಿದೆ ಎಂಬುದಾಗಿ ಫೋನ್ ಮೂಲಕ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ದೇವಸ್ಥಾನಕ್ಕೆ ಬಂದು ನೋಡಿದಾಗ ದೇವಸ್ಥಾನದ ಗರ್ಭಗುಡಿ, ಆಫೀಸ್ ಕೋಣೆ, ಮತ್ತು ಪಿರ್ಯಾದಿದಾರರಿಗೆ ಉಳಕೊಳ್ಳಲು ನೀಡಿದ ಕೋಣೆಯ ಹಾಗೂ ಗುರುಪೀಠದ ಬಾಗಿಲುಗಳ ಬೀಗಗಳು ಮುರಿದುಕೊಂಡಿದ್ದು ಗರ್ಭಗುಡಿಯಲ್ಲಿ ನೋಡಿದಾಗ ಶ್ರೀ ದುರ್ಗಾಪರಮೇಶ್ವರಿ ದೇವರ ಕೊರಳಲ್ಲಿದ್ದ ಕರಿಮಣಿ ಸರ ಮತ್ತು ಮೂಗುತಿಗಳು ಕಾಣೆಯಾಗಿದ್ದು ಅದರಲ್ಲಿ ಒಟ್ಟು ಒಂದು ಪವನ್ ಬಂಗಾರವಿದ್ದು ಅದರ ಮೌಲ್ಯ ರೂ 30,000 ಆಗಬಹುದು ಅದೇ ರೀತಿ ಪಿರ್ಯಾಧಿದಾರರ ಕೋಣೆಯಲ್ಲಿ ಸ್ಟೀಲ್ ಕಪಾಟಿನಲ್ಲಿ ಇಟ್ಟಿದ್ದ ಅವರ ಬಾಬ್ತು ನಗದು ರೂ 25,000/- ಮತ್ತು ದೇವಸ್ಥಾನಕ್ಕೆ ಸೇವೆಯ ರೂಪದಲ್ಲಿ ಬಂದ ರೂ 1000/- ಕಳವಾಗಿರುತ್ತದೆ. ದೇವರ ಕರಿಮಣಿ ಸರ ಮತ್ತು ಮೂಗುತಿ ಬಂಗಾರದ್ದಾಗಿದ್ದು ಕರಿಮಣಿ ಸರದಲ್ಲಿ ಅಲ್ಲಲ್ಲಿ ಕಪ್ಪು ಮಣಿ ಮತ್ತು ಬಂಗಾರದ ಗುಂಡುಗಳಿದ್ದು ತಾಳಿ ಕೂಡ ಇರುತ್ತದೆ. ಮೂಗುತಿಯಲ್ಲಿ ಕೆಂಪು ಮತ್ತು ಬಿಳಿ ಬಣ್ಣ ಕಲ್ಲು ಇರುತ್ತದೆ . ಕಳವಾದ ಬಂಗಾರದ ಒಡವೆಗಳ ಮತ್ತು ನಗದು ಹಣದ ಅಂದಾಜು ಮೌಲ್ಯ ಸುಮಾರು ರೂ 56,000/- ಆಗಬಹುದು.
No comments:
Post a Comment