Wednesday, August 20, 2014

Daily Crime Reports 20-08-2014

ದೈನಂದಿನ ಅಪರಾದ ವರದಿ.

ದಿನಾಂಕ 20.08.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.08.2014 ರಂದು ಸಂಜೆ ಸುಮಾರು 4:15 ಗಂಟೆಗೆ ಮಂಗಳೂರು ತಾಲೂಕು, ಬೋಳಿಯಾರು ಗ್ರಾಮದ ಬೊಳಿಯಾರು ಮಸೀದಿ ಬಳಿ ಆರೋಪಿ ರೋಶನ್ವೇಗಸ್ಎಂಬಾತನು ತಾನು ಚಲಾಯಿಸುತ್ತಿದ್ದ ಮೋಟಾರ್ಸೈಕಲ್ಕೆಎ-19ಜೆ-8851 ನೇಯದನ್ನು ಸಜೀಪ ಕಡೆಯಿಂದ ಪಾನೇಲ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಎದುರಿನಿಂದ ಬರುತ್ತಿದ್ದ ಸ್ಕೂಟರ್ನಂಬ್ರ ಕೆಎ-19ಎಸ್‌-8087 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ರಸ್ತೆಗೆ ಎಸೆಯಲ್ಪಟ್ಟು, ಸ್ಕೂಟರ್ಸವಾರ ಅಬೂಬಕ್ಕರ್‌, ಫಿರ್ಯಾದಿದಾರರಾದ ಶ್ರೀ ಡೆರಿಲ್ ಪ್ರಕಾಶ್ ಮತ್ತು ಆರೋಪಿಯು ಗಾಯಗೊಳ್ಳಲು ಕಾರಣರಾಗಿರುತ್ತಾರೆ. ಫಿರ್ಯಾದಿ ಮತ್ತು ಆರೋಪಿಯು ಗಾಯಗೊಂಡು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಮತ್ತು ಸ್ಕೂಟರ್ಸವಾರ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-08-2014 ರಂದು 21-00 ಗಂಟೆಯಿಂದ 19-08-2014 ರಂದು ಬೆಳಿಗ್ಗೆ 9-00 ಗಂಟೆಯ ಮಧ್ಯಾವದಿಯಲ್ಲಿ ಮಂಗಳೂರು ನಗರದ ರಾವ್ & ರಾವ್ ಸರ್ಕಲ್, ಮಿಶನ್ ಸ್ಟ್ರೀಟ್ ರಸ್ತೆಯಲ್ಲಿರುವ ರೀಗಲ್ ಪ್ಲಾಜ್ಹಾದ ನೆಲ ಮಹಡಿಯ ತಳ ಅಂತಸ್ತಿನಲ್ಲಿರುವ ಫಿರ್ಯಾದುದಾರರಾದ ಶ್ರೀ ವಿಕಾಶ್ ಜೈನ್ ರವರ ಬಾಬ್ತು ACME REFRIGERATION ಅಂಗಡಿಗೆ ಸೇರಿದ ಗೋಡೌನ್ ಶಟರ್ ಬೀಗವನ್ನು ಯಾರೋ ಕಳ್ಳರು ಮುರಿದು ಗೋಡೌನ್ ಒಳಗೆ ನುಗ್ಗಿ ರೆಫ್ರಿಜರೇಶನ್ ಮತ್ತು ಏರ್ ಕಂಡೀಷನ್ ಗೆ ಸಂಬಂದಪಟ್ಟ 3130 ರಷ್ಟು BRASS UINION, BRASS NUT, BRASS CUPLING ಇವುಗಳನ್ನು ಮತ್ತು ಸುಮಾರು 15,000 ರಷ್ಟು COPPER CAPILLERY, ELBOW, COLLERS ಇತ್ಯಾದಿ ಸರಿ ಸುಮಾರು 4,75,000/- ಮೌಲ್ಯದ ಬಿಡಿ ಭಾಗಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:  198-08-2014 ರಂದು ಮಧ್ಯಾಹ್ನ 1-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶಿವರಾಮ ಶೆಟ್ಟಿಯವರ ಅಣ್ಣ ರವೀಂದ್ರ ಶೆಟ್ಟಿಯವರು ಕಾವೂರು-ಬಜಪೆ ಬಸ್ಸು ನಂ: ಕೆಎ 19 ಎಎ  644 ರಲ್ಲಿ ಕಾವೂರಿನಿಂದ ಕರಂಬಾರಿಗೆ ಪ್ರಯಾಣಿಸುತ್ತಾ ಮಂಗಳೂರು ತಾಲೂಕಿನ ಕೆಂಜಾರು ಗ್ರಾಮದ, ಕರಂಬಾರು ಬಸ್ಸು ನಿಲ್ದಾಣದ ಬಳಿ, ಬಸ್ಸು ನಿಂತಾಗ ರವೀಂದ್ರ ಶೆಟ್ಟಿಯವರು ಬಸ್ಸಿನ ಹಿಂದಿನ ಬಾಗಿಲಿನಿಂದ ಇಳಿಯುತ್ತಿದ್ದಂತೇ ಬಸ್ಸು ನಿರ್ವಾಹಕರು ಸರಿಯಾಗಿ ನೋಡದೇ ನಿರ್ಲಕ್ಷ್ಯತನದಿಂದ ಬಸ್ಸನ್ನು ಚಲಾಯಿಸಲು ಒಮ್ಮೆಲೇ ಸೂಚನೆ ನೀಡಿದಾಗ, ಬಸ್ಸು ಚಾಲಕರು ಬಸ್ಸನ್ನು ಒಮ್ಮೆಲೇ ಬಹಳ ಮತ್ತು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ರವೀಂದ್ರ ಶೆಟ್ಟಿಯವರು ಬಸ್ಸಿನಿಂದ ಹೊರಕ್ಕೆ ಬಸ್ಸಿಗೆ ಬಿದ್ದು, ಅವರ ಎಡಭಾಗದ ತಲೆಗೆ, ಮುಖಕ್ಕೆ, ಮೂಗಿಗೆ ಎಡಕೈಯ ಭುಜಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಸ್ಮೃತಿ ಇಲ್ಲದೇ ಇದ್ದ ರವೀಂದ್ರ ಶೆಟ್ಟಿಯವರನ್ನು ಮಂಗಳೂರು ಯೆನಪೋನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುವುದಾಗಿದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಮರಿಯಮ್ಮ ಲಿಸ್ಸಿ ರವರ ಮಗಳು ಕು.ರಿನ್ಸಿ ಮರೀನಾ(15 ವರ್ಷ) ಎಂಬಾಕೆಯು ನೀರುಮಾರ್ಗದಲ್ಲಿರುವ ಪ್ರೆಸಿಡೆನ್ಸಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಪ್ರೊಪಸೆಂಟ್ಕೋಚಿಂಗ್‌‌ ಕ್ಲಾಸ್‌‌ ಬಿಕರ್ನಕಟ್ಟೆಯಲ್ಲಿ  ಸಂಜೆ  5 ಗಂಟೆಯಿಂದ 7 ಗಂಟೆಯ ತನಕ ಟ್ಯೂಷನ್ಗೆ ಹೋಗುತ್ತಿದ್ದು ದಿನಾಂಕ: 18.08.2014 ರಂದು 15.00 ಗಂಟೆಗೆ ರಿನ್ಸಿ ಮರೀನಾಳು ಪಿರ್ಯಾದಿದಾರರಿಗೆ ಫೋನ್‌‌ ಮಾಡಿ ಟ್ಯೂಷನ್ಗೆ  ಹೋಗುತ್ತೇನೆ ಎಂದು ಹೇಳಿ ಹೋದವಳು  ರಾತ್ರಿ 10.45 ಗಂಟೆ ಆದರು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ವಿಚಾರಿಸಿದಲ್ಲಿ  ಆಕೆಯ ಪತ್ತೆಯಾಗದೇ ಇರುವುದಾಗಿದೆ.

No comments:

Post a Comment