Saturday, August 2, 2014

Daily Crime Reports 02-08-2014

ದೈನಂದಿನ ಅಪರಾದ ವರದಿ.

ದಿನಾಂಕ 02.08.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-08-2014 ರಂದು ಪಿರ್ಯಾದಿದಾರರಾದ ಕು. ಆಕಾಂಕ್ಷಿ ಚೌದರಿ ರವರು ಮತ್ತು ಅವರ ತಾಯಿ ಟೂರಿಸ್ಟ್ ಕಾರು ನಂಬ್ರ ಕೆ.. 19.ಸಿ 9388 ರಲ್ಲಿ ಮಂಗಳೂರು ರೈಲ್ವೇ ನಿಲ್ದಾಣದಿಂದ ಉಡುಪಿಗೆ ಪ್ರಯಾಣಿಸುತ್ತಾ ರಾ.ಹೆ 66 ಮೂಲ್ಕಿ ಕೊಲ್ನಾಡ್  ಬಳಿ 09-30 ಗಂಟೆಗೆ  ತಲುಪುತ್ತಿದ್ದಂತೆ ಕಾರು ಚಾಲಕ ಮಳೆಯನ್ನು ನಿರ್ಲಕ್ಷಿಸಿ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ರಸ್ತೆಯಿಂದ ಎಡಕ್ಕೆ ಹೋಗಿ ಮಗುಚಿ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿ, ಪಿರ್ಯಾದಿಯ ತಾಯಿ ಹಾಗೂ ಕಾರು ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಕಾರು ಜಖಂಗೊಳ್ಳಲು ಕಾರಣವಾಗಿರುವುದಾಗಿದೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-07-2014 ರಾತ್ರಿ 10-30 ಗಂಟೆಯಿಂದ ದಿನಾಂಕ 01-08-2014 ಬೆಳಿಗ್ಗೆ 6-00 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಪಿರ್ಯಾದಿದಾರರಾದ ಶ್ರೀ ಸಂದೀಪ್ ಪಿ. ಷಾ ರವರ ಮನೆಯ ಅಡುಗೆ ಕೋಣೆಯ ಹಿಂಭಾಗಿಲಿನಿಂದ ಒಳ ಪ್ರವೇಶಿಸಿ ರೂಮಿನಲ್ಲಿ ಮಲಗಿದ್ದ ಪಿರ್ಯಾದಿದಾರರ ತಾಯಿ ಶ್ರೀಮತಿ ಸುಶೀಲಾ ಪಿ.ಷಾ (75) ರವರಿಗೆ ಯಾವುದೋ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪಿರ್ಯಾದಿಯ ತಾಯಿಯ ಮೈಮೇಲಿದ್ದ ಸುಮಾರು 80 ಗ್ರಾಂ ತೂಕದ ರೂ, 2,15,000/- ಮೌಲ್ಯದ ಚಿನ್ನಾಭರಣ ಹಾಗೂ ಕಪಾಟಿನ ಒಳಗಡೆ ಇರಿಸಿದ್ದ ತಿಜೋರಿ ಹಾಗೂ ಅದರಲ್ಲಿದ್ದ ರೂ, 40,000/- ಮೌಲ್ಯದ ಬೆಳ್ಳಿಯ ಆಭರಣಗಳೊಂದಿಗೆ ಮನೆಯ ಹೊರಗಡೆ ಪಾರ್ಕಿಂಗ್  ಮಾಡಿದ್ದ ರೂ, 1,50,000 ಮೌಲ್ಯದ KA-19-Z-7560 ನೋಂದಾಣಿ ನಂಬ್ರದ ಮಾರುತಿ ಜೆನ್ ಕಾರಿನೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿರುತ್ತಾರೆ.

 

3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-08-2014 ರಂದು ಫಿರ್ಯಾದುದಾರರಾದ ಡಾ. ಗಣೇಶ್ ಕುಮಾರ್ ರವರು ಬೆಳಿಗ್ಗೆ ಸಮಯ ತನ್ನ ಬಾಬ್ತು ಕಾರು ನಂ ಕೆಎ-19-ಎಂ..7795 ನೇದರಲ್ಲಿ ಕುಂಬಳೆ ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಹೋಗಿ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ಸಮಯ ಮಂಗಳೂರಿಗೆ ಬಂದು ಹರ್ಷಾ ಎಲೆಕ್ಟ್ರಿಕಲ್ ಅಂಗಡಿಯಿಂದ ಮೊಬೈಲ್ ಖರೀದಿಸಿ ಬಳಿಕ ಅಲ್ಲಿಂದ ಹೊರಟು ಫಳ್ನೀರ್ ಮಾರ್ಗವಾಗಿ ಜ್ಯೋತಿ ಕಡೆಗೆ ಹೋಗುತ್ತಾ ಸಂಜೆ ಸಮಯ 5 ಗಂಟೆಗೆ ಜ್ಯೋತಿ ನ್ಯಾಷನಲ್ ವೈನ್ ಶಾಪ್ ಬಳಿ ತಲುಪಿದಾಗ ಆಟೋ ರಿಕ್ಷಾ ಕೆಎ-19--3032 ನೇದರ ಚಾಲಕನು ಫಿರ್ಯಾದಿದಾರರನ್ನು ಬೆನ್ನಟ್ಟಿಕೊಂಡು ಬಂದು ಕಾರಿಗೆ ಅಡ್ಡಲಾಗಿ ತಡೆದು ನಿಲ್ಲಿಸಿ ಫಿರ್ಯಾದಿದಾರರನ್ನು ಕಾರಿನಿಂದ ಎಳೆದುಹಾಕಿ ಅವಾಚ್ಯ ಶಬ್ದಗಳಿಂದ ಬೈಯ್ದು ಸ್ಕ್ರೂಡ್ರೈವರ್ ತೋರಿಸಿ ಜೀವಬೆದರಿಕೆ ಒಡ್ಡಿರುವುದಲ್ಲದೇ ಫಿರ್ಯಾದಿದಾರರ ಹೆಂಡತಿ ಶ್ರೀಮತಿ ಅರುಣಾ ಆಟೋ ರಿಕ್ಷಾದಲ್ಲಿದ್ದು, ಅವರೂ ಕೂಡಾ ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ. ತಕ್ಷೀರಿಗೆ ಫಿರ್ಯಾದಿ ಹಾಗೂ ಆರೋಪಿತಳಾಗಿರುವ ಶ್ರೀಮತಿ ಅರುಣಾರವರೊಳಗೆ ಕೌಟುಂಬಿಕ ಸಮಸ್ಯೆಯೇ ಕಾರಣವಾಗಿರುತ್ತದೆ.

 

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮಂಗಳೂರು ತಹಶೀಲ್ದಾರ್ ರವರಾದ ಶ್ರೀ ಕೆ. ಮೋಹನ್ ರಾವ್ ರವರು ಮಾನ್ಯ ಜಿಲ್ಲಾಧಿಕಾರಿಯವರ ಆದೇಶದಂತೆ ಗ್ರಾಮ ಲೆಕ್ಕಿಗರ ನೇರ ನೇಮಕಾತಿಯಂತೆ, ಸುರತ್ಕಲ್ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಿಗರಾಗಿ ನೇಮಕಾತಿ ಆದೇಶವನ್ನು ದಿನಾಂಕ  19-02-2013 ರಂದು ಪಡೆದಿದ್ದು, ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಯವರು ಗ್ರಾಮ ಲೆಕ್ಕಿಗರ ಪಿ.ಯು.ಸಿ. ಪರೀಕ್ಷೆ ಉತ್ತೀರ್ಣರಾದ ಅಂಕಪಟ್ಟಿ ಮತ್ತು ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಮತ್ತು ನೈಜತೆಯ ಬಗ್ಗೆ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ಕಳುಹಿಸಿಕೊಟ್ಟಿದ್ದು, ಸಂತೋಷ್ ಖಾರ್ವಿಯವರು ಸಲ್ಲಿಸಿದ್ದ ಪಿ.ಯು.ಸಿ.ತೇರ್ಗಡೆ ಹೊಂದಿದ್ದ ಅಂಕಪಟ್ಟಿಯು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನೀಡಲಾಗುವ ಅಂಕಪಟ್ಟಿಗೆ ತಾಳೆ ಇರುವುದಿಲ್ಲ. ಪರೀಕ್ಷಾರ್ಥಿ ಗ್ರಾಮ ಲೆಕ್ಕಿಗರಾದ ಸಂತೋಷ್ ಖಾರ್ವಿಯವರು ನೇಮಕಾತಿಗಾಗಿ ನಕಲಿ ಅಂಕಪಟ್ಟಿ ಸಲ್ಲಿಸಿರುವುದರಿಂದ, ಮಾನ್ಯ ಜಿಲ್ಲಾಧಿಕಾರಿಯವರ ನಡಾವಳಿ ಆದೇಶದಂತೆ ಗ್ರಾಮ ಲೆಕ್ಕಿಗರ ಕೆಲಸದಿಂದ ವಜಾಗೊಳಿಸಲಾಗಿರುವುದಾಗಿದೆ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-07-2014 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 01-08-2014 ರಂದು ಬೆಳಿಗ್ಗೆ 6-00 ಗಂಟೆಯ ಮಧ್ಯೆ ಮಂಗಳೂರು ತಾಲೂಕಿನ, ಪೆರ್ಮುದೆ ಗ್ರಾಮದ, ಪೆರ್ಮುದೆಯಲ್ಲಿರು  ಫಿರ್ಯಾದಿದಾರರಾದ ಶ್ರೀ ಯಾದವ್ ಕೊಟ್ಯಾನ್ ರವರ ಮನೆಯಾದ ಕನ್ನಿಕಾ ನಿಲಯದ ಅಂಗಳದಲ್ಲಿರುವ ಫಿರ್ಯಾದಿದಾರರ ಬಾಬ್ತು ಅಣ್ಣಪ್ಪ ಪಂಜುರ್ಲಿ ದೈವದ ಬಾಗಿಲಿನ ಬೀಗದ, ಚಿಲಕದ ಕೊಂಡಿಯನ್ನು ಯಾರೋ ಕಳ್ಳರು ಮುರಿದು ದೈವದ ಗುಡಿಯ ಒಳ ನುಗ್ಗಿ ಪಂಚಲೋಹದಲ್ಲಿ ಬೆಳ್ಳಿಯ ಕವಚವಿರುವ ಹಾಗೂ ಬಂಗಾರದ ನಾಲಗೆ, ಬಂಗಾರದ ಕಣ್ಣು, ಬಂಗಾರದ ಮುಗುಳಿ ಮತ್ತು ವಜ್ರದ ಕಲ್ಲುಗಳಿರುವ  ದೈವದ ಮುಖವಾಡ (ಮೂರ್ತಿ) ಪಂಚಲೋಹದ ಕಡಸಾಲೆ ಮತ್ತು ಗುಡಿಯ ಎದುರುಗಡೆ ಇದ್ದ ಸುಮಾರು 5000 ರೂಪಾಯಿ ಹಣವಿದ್ದ ತಾಮ್ರದ ಕಾಣಿಕೆ ಡಬ್ಬವನ್ನು ಕಳವು ಮಾಡಿಕೊಂಡು ಹೋಗಿದ್ದು, ದೈವದ ಮುಖವಾಡ ಮತ್ತು ಕಡಸಾಲೆಯ ಬೆಲೆಯನ್ನು ಫಿರ್ಯಾದಿದಾರರು ಮುಂದಕ್ಕೆ ತಿಳಿಸುವುದಾಗಿ ಹೇಳಿರುವುದಾಗಿದೆ.

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಶರಣಪ್ಪ ರವರು ಟಿಪ್ಪರ್ಲಾರಿ ನಂಬ್ರ ಕೆಎ 19 2014 ರಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 31-7-2014 ರಂದು ಸದ್ರಿ  ಟಿಪ್ಪರ್ಲಾರಿಯನ್ನು ಚಲಾಯಿಸಿಕೊಂಡು ಕಿನ್ನಿಗೋಳಿಗೆ ಹೋಗಿ ವಾಪಾಸು ಕಟೀಲು ರಸ್ತೆಯ ಮುಖಾಂತರ ಮಂಗಳೂರಿಗೆ ಹೋಗುತ್ತಿರುವಾಗ ಮದ್ಯಾಹ್ನ ಸುಮಾರು 2-00 ಗಂಟೆಗೆ ಬಡಗ ಎಕ್ಕಾರು ಗ್ರಾಮದ ದ್ವಾರದ ಬಳಿ ತಲಪುತ್ತಿದ್ದಂತೆ ಮಂಗಳೂರಿನಿಂದ ಕಟೀಲು ಕಡೆಗೆ ಹೋಗುವ ಟಿಪ್ಪರ್ಲಾರಿ ನಂಬ್ರ ಕೆಎ 19 1115 ನೇ ದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಟಿಪ್ಪರ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಟಿಪ್ಪರ್ ಮುಂಭಾಗ ಜಖಂ ಆಗಿದ್ದು, ಎದುರಿನಿಂದ ಬಂದ ಟಿಪ್ಪರ್ಗೂ ಜಖಂ ಉಂಟಾಗಿರುತ್ತದೆ.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-07-2014 ರಂದು ಬೆಳಿಗ್ಗೆ 08.30 ಗಂಟೆಯಿಂದ ಸಾಯಂಕಾಲ 5.00 ಒಳಗೆ ಪಿರ್ಯಾದಿದಾರರಾದ ಶ್ರೀ ರೊನಾಲ್ಡ್ ಗೊಡ್ವಿನ್ ಫರ್ನಾಂಡಿಸ್ ರವರ ಮನೆಯಾದ 3-53(2), ಹುಂಡೆಲ್ ಹೌಸ್, ತೆಂಕ ಎಡಪದವು, ಗಂಜಿಮಠ ಅಂಚೆ, ಮಂಗಳೂರು ತಾಲ್ಲೂಕು ನೇದರಲ್ಲಿ ಯಾರೂ ಇಲ್ಲದ ಸಮಯದಲ್ಲಿ  ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಕಪಾಟಿನ ಒಳಗೆ ಪ್ರವೇಶಿಸಿ ಕಪಾಟಿನ ಒಳಗೆ ಇದ್ದ   1) 24 ಗ್ರಾಮ್ ಚಿನ್ನದ ಕರಿಮಣಿ ಸರ -1, 2) 4 ಗ್ರಾಮ್ ತೂಕದ ಚಿನ್ನದ ಉಂಗುರ 3) ಡಿವಿಡಿ ಪ್ಲೆಯರ್ , 4) ಟಾರ್ಚ್ ಲೈಟ್ 5) ಇಸ್ತ್ರಿ ಪಟ್ಟಿಗೆ ಹಾಗೂ 7500/- ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

 

8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿಶ್ವನಾಥ ಶೆಟ್ಟಿ ರವರು ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ಹಾಲು ಎರೆಯಲು ತನ್ನ ಮನೆಯಾದ ಶಿರ್ತಾಡೆಯಿಂದ ಬಜಪೆ ಮುಂಡಾರು ಕಡೆಗೆ ತನ್ನ ಬಾಬ್ತು  ಕೆಎ 47 ಜೆ 7803 ನೇಯ ಮೋಟಾರು ಸೈಕಲ್ಲಿನಲ್ಲಿ ಹೊರಟು 11-00 ಗಂಟೆಗೆ ಬಡಗುಳಿಪಾಡಿ ಗ್ರಾಮದ ಗಂಜೀಮಠ ಗಾಂಧಿನಗರ ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಅಂದರೆ ಕೈಕಂಬದಿಂದ ಎಡಪದವು ಕಡೆಗೆ ಕೆಎ 19 ಸಿ 8046 ನೇಯ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಮೊಣಕಾಲಿನ ಕೆಳಗೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಎಂ.ಎ. ನಟರಾಜ್ ರವರಿಗೆ ದಿನಾಂಕ 01-08-2014 ರಂದು ಇಡ್ಯಾ ಗ್ರಾಮದ ಸುರತ್ಕಲ್ ಶಾರದಾ ಕಲ್ಯಾಣ ಮಂಟಪದ ಬಳಿ ಇರುವ ಶಾರದಾ ರಿಕ್ರೀಯೇಶನ್ ಕಟ್ಟಡದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಠಾಣಾ ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂಜೆ 16-45 ಗಂಟೆಗೆ ದಾಳಿ ಮಾಡಿದ್ದು ಆಟ ಆಡುತ್ತಿದ್ದ 7-8 ಜನರಲ್ಲಿ ಲ್ಯಾನ್ಸಿ ಡಿ'ಸೋಜಾ, ಅಶೋಕ ಕುಮಾರ್, ದೇವೆಂದ್ರ, ಲೋಕೇಶ್ ಎಂಬ 4 ಜನ ಆರೋಪಿಗಳು ಸಿಕ್ಕಿದ್ದು ಉಳಿದ ಆರೋಪಿಗಳು ಓಡಿ ತಪ್ಪಿಸಿಕೊಂಡಿದ್ದು, ಆರೋಪಿಗಳನ್ನು ಹಾಗೂ ಅಂದರ್ ಬಾಹರ್ ಆಡಲು ಉಪಯೋಗಿಸಿದ 500/- ರೂಪಾಯಿ ಹಣವನ್ನು, 52 ಇಸ್ಪಿಟ್ ಎಲೆಗಳನ್ನು, ರಮಿ ಶೀಟ್ ಬರೆದ ಪುಸ್ತಕ-4, ಟೇಬಲ್-1, ಚೇರ್-4 ಹಾಗೂ ಜುಗಾರಿ ಆಡಲು ಸ್ಥಳಕ್ಕೆ ಬರಲು ಉಪಯೋಗಿಸಿದ ಮೇಲಿನ ವಾಹನವನ್ನು ಮಹಜರು ಮೂಲಕ ಸ್ವಾಧೀನ ಪಡಿಸಿ ಆರೋಪಿಗಳ ವಿರುದ್ದ  ಕ್ರಮ ಕೈಗೊಂಡಿರುವುದಾಗಿದೆ.

No comments:

Post a Comment