Thursday, August 14, 2014

Daily Crime Reports 14-08-2014

ದೈನಂದಿನ ಅಪರಾದ ವರದಿ.

ದಿನಾಂಕ 14.08.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜಯಕರ ಶೆಟ್ಟಿ ರವರ ತಮ್ಮನಾದ ದಿನಾಕರ್ ಶೆಟ್ಟಿ ಪ್ರಾಯ 43 ವರ್ಷ ಎಂಬವರು ದಿನಾಂಕ 11-08-2014 ರಂದು 13-20 ಗಂಟೆಗೆ ಪಿರ್ಯಾದಿದಾರರ ಇನ್ನೊಬ್ಬ ತಮ್ಮನಾದ ಸುಂದರ ಎಂಬವರಿಗೆ ಪೋನ್ ಮಾಡಿ 50,000/- (ಐವತ್ತು ಸಾವಿರ) ರೂಪಾಯಿ ಹಣದ ಅವಶ್ಯಕತೆ ಇದೆ ಹಣ ಬೇಕೆಂದು ಕೇಳಿದ್ದು ಅದಕ್ಕೆ ದಿವಸ ನನ್ನ ಹತ್ತಿರ ಹಣ ಇಲ್ಲ ನಾಳೇ ಬಾ ಎಂದು ಹೇಳಿದ್ದು ಅನಂತರ ಅವರು ಕಾಣೆಯಾಗಿರುತ್ತಾರೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  12.08.2014  ರಂದು ಮಂಗಳೂರು  ತಾಲೂಕು ಮೂಡಬಿದ್ರೆ  ಪೇಟೆಯಿಂದ ಪಿರ್ಯಾದಿದಾರರಾದ ಜೋಯ್ ಸ್ಟೇಲ್ ರೆಬೊಲ್ಲೋ ರವರು  ತೋಡಾರು  ಕಡೆಗೆ ಕೆ. 19  ಇಎಲ್  824  ನೇ ಮೋಟಾರು  ಸೈಕಲ್ನಲ್ಲಿ  ರವಿಕಿರಣ್  ಎಂಬವನನ್ನು  ಸಹಸವಾರನಾಗಿ ಕುಲ್ಲಿರಿಸಿಕೊಂಡು  ಹೋಗುತ್ತಾ  ಸಮಯ  ಸುಮಾರು ಸಂಜೆ 5:15  ಗಂಟೆಗೆ ಪಂಚರತ್ನ  ಹೋಟೆಲ್ಮುಂಭಾಗ ಬಂದಾಗ ಎದುರುಗಡೆಯಿಂದ ಅಂದರೆ  ವಿದ್ಯಾಗಿರಿ  ಕಡೆಯಿಂದ- ಮೂಡಬಿದ್ರೆ ಕಡೆಗೆ  ಬಂದ ಕೆ.  19 ಡಿ 6742 ನೇಯ ಆಳ್ವಾಸ್  ಬಸ್ಸಿನ ಚಾಲಕನು ಅತೀ ಸದ್ರಿ  ಬಸ್ಸನ್ನು  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ  ಪಿರ್ಯಾದಿದಾರರ  ಮೋಟಾರು  ಸೈಕಲ್‌‌ಗೆ ಡಿಕ್ಕಿ  ಹೊಡೆದನು.  ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದರಾರು ಹಾಗೂ  ಸಹ ಸವಾರ  ರವಿಕಿರಣ್ಕೂಡ ಡಾಮರು  ರಸ್ತೆಗೆ ಬಿದಿದ್ದು, ನನ್ನ  ಬಲ ಕಾಲಿನ ಮೊಣಗಂಟಿನಿಂದ ಕೆಳಗೆ ರಕ್ತ ಬರುವ ಗಾಯ ಹಾಗೂ  ಬಲ ಕೈಯ  ಮೊಣ ಗಂಟಿಗೆ ಗುದ್ದಿದ ಗಾಯ,  ಹಾಗೂ  ಸಹ ಸವಾರ ರವಿಕಿರಣ್ ಬಲ ಕಣ್ಣಿನ  ಬದಿಗೆ ರಕ್ತ  ಬರುವ ಗಾಯವಾಗಿದ್ದು ,ನಮ್ಮನ್ನು ಮೂಡಬಿದ್ರೆ ಆಳ್ವಾಸ್  ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆಗೆ ಒಳಪಡಿಸಿ ನಂತರ ಮಂಗಳೂರು  ಇಂಡಿಯಾನ ಆಸ್ಪತ್ರೆಗೆ ಹೆಚ್ಚಿನ  ಚಿಕಿತ್ಸೆಗೆ  ಒಳರೋಗಿಯಾಗಿ  ದಾಖಲಿಸಿರುತ್ತಾರೆ

 

3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12.08.2014 ರಂದು ಪಿರ್ಯಾದಿದಾರರಾದ ಶ್ರೀ ಝೂಲ್ಫಿಕರ್ ಅಲಿ ರವರು ತನ್ನ ಬಾಬ್ತು ಕೆಎ-19-ಎಕ್ಸ್‌‌-8302 ನೇ ಮೋಟಾರ್‌‌ ಸೈಕಲ್‌‌ನಲ್ಲಿ   ಅಡ್ಯಾರ್‌‌‌ನಿಂದ  ಶಾರೂಕ್‌‌ ಖಾನ್‌‌‌ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಣ್ಣೂರು ಓವರ್‌‌ಬ್ರಿಡ್ಜ್‌‌ ಬಳಿ ಬಂದು  ಪಿರ್ಯಾಧಿದಾರರ ಸೋದರ ಸಂಬಂಧಿ ಅನ್ವರ್‌‌ ಎಂಬವರೊಡನೆ ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ  ಮೋಟಾರ್‌‌ ಸೈಕಲ್‌‌ ನಿಲ್ಲಿಸಿ ಅನ್ಸಾರ್ನೊಡನೆ ಮಾತನಾಡುತ್ತಿದ್ದ ಸಮಯ ಮಂಗಳೂರು ಕಡೆಯಿಂದ ಕೆಎ-19-ಎಎ-2188 ನೇ ಬಸ್ಸನ್ನು ಅದರ ಚಾಲಕ ಧನಂಜಯ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ ಮುಂದೆ ಹೋಗುತ್ತಿದ್ದ ಒಂದು ಲಾರಿಯನ್ನು ಓವರ್ಟೇಕ್‌‌ ಮಾಡಲು ಪ್ರಯತ್ನಿಸಿ ರಸ್ತೆಯ  ತೀರಾ ಬಲಬದಿಯಲ್ಲಿ ಬಂದು  ಪಿರ್ಯಾಧಿದಾರರು ಮತ್ತು ಶಾರುಕ್ಖಾನ್‌‌  ಕುಳಿತುಕೊಂಡು ಮಾತನಾಡುತ್ತಿದ್ದ ಮೋಟಾರ್‌‌ ಸೈಕಲ್‌‌ಗೆ ಡಿಕ್ಕಿಹೊಡೆದ ಪರಿಣಾಮ ಮೋಟಾರ್‌‌ ಸೈಕಲ್‌‌ ಸಮೀತ ರಸ್ತೆಯ ಎಡಬದಿಗೆ  ಬಿದ್ದು ಪಿರ್ಯಾದಿದಾರರ ಬಲಕಾಲಿನ ಪಾದದ ಬಳಿ ಹಾಗೂ ಮೊಣಗಂಟಿನ ಬಳಿ ಹಾಗೂ ಎರಡೂ ಕೈಗಳಿಗೆ ರಕ್ತ ಬರುವ ಗಾಯ ಹಾಗೂ ತರಚು ಗಾಯಗಳಾಗಿರುತ್ತದೆ ಮತ್ತು  ಶಾರೂಕ್‌‌ ಖಾನ್ಗೆ ಕೋಡಾ ಕೈ ಕಾಲುಗಳಿಗೆ ರಕ್ತಬರುವ ತರಚುಗಾಯಗಳಾಗಿರುತ್ತದೆ ಹಾಗೂ ಬೈಕ್‌‌ ಬೀಳುವ ಸಮಯ ಪಿರ್ಯಾದಿದಾರರ ಜೊತೆ  ಮಾತನಾಡುತ್ತಿದ್ದ ಅನ್ಸಾರ್‌‌ ರವರಿಗೂ ಸಣ್ಣಪುಟ್ಟಗಾಯಗಳಾಗಿರುತ್ತದೆ.

No comments:

Post a Comment